ಮನಸ್ಸು ತುಂಬಾ ಬೇಸರದಲ್ಲಿದೆ

1.8

ಇತ್ತಿಚೆಗೆ ಯಾಕೋ ತುಂಬಾ ಬೇಸರವಾಗ್ತಾ ಇದೆ ಯಾಕೆ ಅಂತ ಯೋಚನೆ ಮಾಡ್ತ ಇದ್ದಾಗ ಗೊತ್ತಾಯ್ತು. ಯಾಕೆ ಬೇಸರ ಅಂತಿರಾ ಸಂಪದದ ಕೆಲವು ಗೆಳೆಯರು ನಾಪತ್ತೆಯಾಗಿದ್ದಾರೆ. ಉದಾ: ಅರವಿಂದ್, ಸುಪ್ರಿತ್, ಇಂಚರಾ, ಗೌಡ ಹೀಗೆ ಹಲವಾರು ಜನ ಇದರ ಜೊತೆಗೆ ಅವರ ಬರಹಗಳು ನೋಡಿ ಸಹ ಸಾಕಷ್ಟು ದಿನಗಳಾದವು. ಹೀಗೆ ಸಿಕ್ಕಾಪಟ್ಟೆ ಬೇಸರವಾಗಿ ಸಂಪದದಲ್ಲಿ ಒಂದು ಸುತ್ತು ಹೊಡಿಯೋಣ ಅಂದ್ರೆ ಯಾಕೆ ಬೇಸರ. ನಿಮಗೇನಾದ್ರು ಹೀಗೆ ಅನಿಸ್ತಾ ಇದೆಯಾ????

:( ಬೇಸರದಿಂದ :(
ನಾಗರಾಜ್

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.8 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾಗರಾಜ್,
ಹೀಗೆ ಅನಿಸುವುದು ಸ್ವಾಭಾವಿಕ. ಹೀಗೆ ಒಂದಲ್ಲ ಒಂದು ಸಮಯ ಎಲ್ಲರಿಗೂ ಅನ್ನಿಸುತ್ತದೆ. ಹೇಳಿಕೊಳ್ತಾರೋ ಇಲ್ಲವೋ ಅದು ಬೇರೆ ವಿಷಯ. ಅಲ್ಲದೆ ಎಲ್ಲರ ಕಾರಣಗಳೂ ಬೇರೆ ಬೇರೆ ಇರುತ್ತವೆ.
ನಾವು ಒಂದು ಗುಂಪಿನ ಜನರ ಒಡನಾಟಕ್ಕೆ, ಒಗ್ಗಿಕೊಂಡಿರುತ್ತೇವೆ. ಅವರಿಲ್ಲದಾಗ ಬೇಸರವಾಗುತ್ತದೆ.
ನಾವು ಒಂದು ವರ್ಗದ ಬರಹಗಳಿಗೆ ಒಗ್ಗಿಕೊಂಡಿರುತ್ತೇವೆ. ಅವು ಇಲ್ಲದಾದಾಗ ಬೇಸರವಾಗುತ್ತದೆ.
ಹೀಗೆ, ನಾವು ಯಾವುದೇ ಒಂದು ರೀತಿಯ ಜೀವನ ಶೈಲಿಗೆ, ಓದಿನ ಹವ್ಯಾಸಕ್ಕೆ, ಒಗ್ಗಿಕೊಂಡು, ರೂಡಿಮಾಡಿಸಿಕೊಂಡು ಬಿಟ್ಟರೆ ಈ ರೀತಿಯ ಅನುಭವ ಆಗಿಂದಾಗ್ಗೆ ಆಗುತ್ತಾ ಇರುತ್ತದೆ.
ಮುಕ್ತ ಮನಸ್ಸಿನಿಂದ ಬದುಕುವ ಅಭ್ಯಾಸ ಮಾಡಿಕೊಂಡು ಬಿಡಬೇಕು. ಯಾವುದಕ್ಕೂ ಅಂಟಿಕೊಳ್ಳದೇ ಇರುವ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಈ ಕಷ್ಟ ಇರುವುದಿಲ್ಲ. ನಿರೀಕ್ಷೆಗಳಿದ್ದರೆ ತಾನೆ ಈ ಕಷ್ಟ್? ನಿರೀಕ್ಷೆಗಳೇ ಇಲ್ಲದಿದ್ದರೆ...?
ಇದು ನನ್ನ ಅನಿಸಿಕೆ. ಇತರ ಸಂಪದಿಗರ ಅನಿಸಿಕೆ ಭಿನ್ನವಾಗಿರಲೂಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳಿದ್ದು ನಿಜ ಸಾರ್
ನಮ್ಮದೇ ಆದ ಒಂದು ಗುಂಪಿತ್ತು ಎಲ್ಲರೂ ಸಹ ಈಗ ನಾಪತ್ತೆ ಅದಕ್ಕೆ ಬೇಸರ :(

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಿನದಿನವು ಹಳಸುವುವು, ದಿನದಿನವು ಕೊಳೆಯುವುವು |
ಮನುಜಕುಲದೆಲ್ಲ ಕೃತಿವಿಜಯವಿಭವಗಳು ||
ಅನುದಿನವು ಮತ್ತವನು ತೊಳೆದು ಹೊಸತೆನಿಸುವುದೆ |
ಜನುಮಸಫಲತೆ ನಿನಗೆ -- ಮಂಕುತಿಮ್ಮ ||

(ಸಾಂದರ್ಭಿಕ ಅನಿಸ್ತು ಅದಕ್ಕೆ ಇಲ್ಲಿ ಹಾಕಿದೆ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಚೆನ್ನಾಗಿದೆ ಧನ್ಯವಾದ ಸಾರ್....

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹದಿನೈದು ದಿನ ಇಂಟರ್ನೆಟ್ ಸಂಪರ್ಕ ಕಡಿತಗೊಂಡು ಸಂಪದವನ್ನ ತುಂಬಾ miss ಮಾಡ್ಕೊಂಡೆ, ಬಹುಶಃ ನನ್ನದೂ ನಿಮ್ಮ ಪರಿಸ್ಠಿತಿಯೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೂ ಹಾಗೇ :-( ಒಂದು ವಾರದಿಂದ ಸಂಪದ ಸಂಪರ್ಕ ಇಲ್ಲ. ಕಂಪ್ಯು... ರಿಪೇರಿಗೆ ಹೋಗಿತ್ತು.

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ಜಾಸ್ತಿ ಹತ್ತಿರ ಆದ್ರೆ ಇದೇ ರೀತಿ ಆಗೋದು ;) ಏನ್ ಮಾಡೊದು....

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.