ಕಿರಿ ಕಿರಿ .......ಕವನಗಳು

5

  ಸಾಕೇ.....ಬೇಕೆ

  ಸಾಕು ...ಎಂದರೆ  ಸಾಕೇ?

  ಬೇಕು  ....ಎಂದರೆ  ಬೇಕೇ ?

  ಸಾಕು ಎಂದರೆ ಸಾಕಾಗುವದಿಲ್ಲ!

  ಬೇಕು  ಎಂದರೆ  ಬೇಕಾಗುವದಿಲ್ಲ

  ನನ್ನ  ಈ  ಕಿರು ಕವನ ಓದಿ...

  ಸಾಕು....... ಬೇಕಾಯಿತಲ್ಲ !

  ಓಡಿ.....ಓಡಿ...!

  ಓಡಿ ಓಡಿ ಓಡಿ..

  ಗಾಡಿ ಬಂತು ಓಡಿ

  ಎಲ್ಲೂ ನಿಲ್ಲ ಬೇಡಿ

  ನಿಂತರೆ ಬದುಕು ರಾಡಿ

....................(ಮುಂದುವರಿಯುವದು)- ಇದು ನಾನು ತಾಯಿ ಉದರದಲ್ಲಿದ್ದಾಗ  ನೆನಪಿಸಿಕೊಂಡು ಎಲ್.ಕೆ.ಜಿ.ಯಲ್ಲಿರುವಾಗ ಬರೆದದ್ದು.

  ಒಂದು ...ಎರಡು

  ಒಂದು ಎರಡು

  ಮೂರು ನಾಲ್ಕು

  ಎಣಿಸಲು ಬರದು

  ಇಷ್ಟೇ ಸಾಕು

  ''''''''''''''''''''''''''''''''''''''''''''''( ಯು.ಕೇ.ಜಿ.ಯಲ್ಲಿ ನಮ್ಮ  ಟೀಚರ್   ನನಗೆ ಹೆದರಿಸಿ ಹೊಡೆದು  ಬರೆಸಿದ ಕವನ)

  (  ದಯವಿಟ್ಟು ಸಂಪದಿಗರು  ನನ್ನ  ಕವನಗಳಿಗೆ  ಹೆಚ್ಚು  ಪ್ರತಿಕ್ರೀಯೆ ನೀಡಿದರೆ ನನ್ನಲ್ಲಿ ಅಡಗಿ ಹೊಂಚು ಹಾಕಿ ಕುಳಿತಿರುವ     ಕವಿಶಕ್ತಿ ಹುಚ್ಚೆಬ್ಬಿಸಿ ಕುಣಿಸಬಹುದು  ದಯಮಾಡಿ ಸಹಕರಿಸಿ )

   ವಿಶೇಷ ಸೂಚನೆ: ಅತಿ ಹೆಚ್ಚು ಪ್ರತಿಕ್ರೀಯೆ ನೀಡಿದವರಿಗೆ ನಿಮ್ಮ  ಒಂದು ಜನ್ಮಕ್ಕೆ ಸಾಕಾಗುವಷ್ಟು ಇಂತಹ 1000 ಕಿರು ಕವನಗಳ ಸಂಕಲನ ಉಚಿತವಾಗಿ ಮನೆಗೆ ತಲುಪಿಸಲಾಗುವದು  -ಎಚ್ಚರ!

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೂಪರ್ ಆಗಿದೆ.ದಯವಿಟ್ಟು ತಮ್ಮ ವಿಳಾಸ ನೀಡಿ ತಮ್ಮ ಮುಖದರ್ಶನ ಭಾಗ್ಯ ನೀಡಿ ತಂದೆ !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನರನಮನಿ ಅವ್ರೆ, ನಿಮ್ಮ ಹುಚ್ಚೆದ್ದಿರುವ ಕವಿಶಕ್ತಿ ಅದ್ಭುತವಾಗಿದೆ.. :D :D
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗಾಗಲೇ ಎಷ್ಟೋ ಜನರ ಕವಿಶಕ್ತಿ ಹುಚ್ಚೆದ್ದು ಕುಣಿಯುತ್ತಾ ಇದೆ, ನೀವೂ ಅದರಲ್ಲಿ ಭಾಗಿಯಾಗಬೇಕೆಂದಿದ್ದೀರಾ? ಬರೆಯಿರಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನೇ ಆಗ್ಲಿ ಗುರೂ... ಈ ಕವನ ಸಂಕಲನಗಳನ್ನು ನೋಡಿ... ಸಕ್ಕತ್ ನಕ್ಕಿದಿನಿ ಒಬ್ಬೊಬ್ಬನೇ ಇವತ್ತು, ಅದರಲ್ಲೂ ನಮ್ ಸಿದ್ರಾಮಣ್ಣ ಸೂಪರ್... ಧನ್ಯವಾದಗಳು... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ಅಭಿನವ ಅಭಿಮನ್ಯು ಅವರೇ, <<...................(ಮುಂದುವರಿಯುವದು)- ಇದು ನಾನು ತಾಯಿ ಉದರದಲ್ಲಿದ್ದಾಗ ನೆನಪಿಸಿಕೊಂಡು ಎಲ್.ಕೆ.ಜಿ.ಯಲ್ಲಿರುವಾಗ ಬರೆದದ್ದು.>> ಈ ಸಾಲನ್ನ ಓದಿ, ಸಿಕ್ಕಾಪಟ್ಟೆ ನಗು ಬಂದು ಬಿಸಿಬಿಸಿ ಟೀ ಕೈ ಮೇಲೆ ಚೆಲ್ಕೊಂಡೆ. ಆದರೆ ದಯಮಾಡಿ ಕವನ ಸಂಕಲನ ಮಾತ್ರ ನನಗೆ ಕಳಿಸಬೇಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಶಾಮಲಾ. ಆದರೂ..........ಗೌರವಪೂರ್ವಕವಾಗಿ ಒಂದು ಪ್ರತಿ ಕಳಿಸದಿದ್ದರೆ ಹೇಗೆ? ನನಗೆ ತುಂಬಾ ಮುಜುಗರವಾಗುತ್ತೆ.

ಚೆನ್ನಾಗಿದೆ ಚುಟುಕು :-) ಸಿದ್ರಾಮಣ್ಣ ಸಾಲಿಯೊಳಗ ಇದ್ದಾಗ ಬರೀಲಿಕತ್ರು,ನೀವು ಎಲ್.ಕೆ.ಜಿ.ಯಲ್ಲಿ ಅನ್ಲಿಕತ್ತೀರಿ.. ಅವರು ಅತಿರಥ ಆದ್ರೆ ನೀವು ಮಹಾರಥರು,ಪ್ರಚಂಡ ಚುಟುಕು ಬರೆಯುವವರು ಅಂದ ಹಾಗಾತು.. ಸಿದ್ರಾಮಣ್ಣ ಕಾಂಪಿಟಿಶನ್ ಚಾಲೂ ಆಗೇದಣ್ಣ.. ಬರಿ ಬರಿ ಬರಿ ಹೀಗೆ ಬರೀತಾ ಇರಿ.. ಚುಟುಕುಗಳ ದಾಖಲೆ ಮುರಿ ಚುಟುಕು ಸಾಮ್ರಾಟನಾಗಿ ಮೆರಿ :-))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾಂತರವರೆ. ಧನ್ಯವಾದಗಳು.ನಿಮ್ಮ ಕವನಗಳು ತುಂಬಾ.... ಚೆನ್ನಾಗಿದೆ.ಇದರ ಗುಟ್ಟು.......?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲೇ ಬೆಳಬೆಳಗ್ಗೆ ತಿಂಡಿ ಚಿತ್ರಾನ್ನ, ಆಫೀಸಲ್ಲಿ ಕೆಲಸ ಕೈಕೊಟ್ಟು ತಲೆ ಚಿತ್ರಾನ್ನ.. ಮಧ್ಯಾಹ್ನಕ್ಕೆ ಇದುವೆ ಸಾಕು ಬಿಡಿ, ಮೃಷ್ಟಾನ್ನ.. :-) ಜೈ ಸಂಬುಲಿಂಗ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಬುಲಿಂಗನಿಗೆ ಶರಣು....!ಅಂದ ಹಾಗೆ ನಿಮಗೆ ಕವನ ಸಂಕಲನದ ಪ್ರತಿ ಕಳಿಸಬೇಕೆಂದಿರುವೆ ಇಲ್ಲ ಅನ್ನಬೇಡಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರೆ...!!! ನೆನ್ನೆ ಒಂದು... ಇವತ್ ಮತ್ತೊಂದು... :) :) :) ಎಲ್ಲೋ ಕೇಳಿದ ಮತ್ತೊಂದು ಕವಿತೆ.... ಹುಲಿ ಬಂತು ಹುಲಿ ಹುಲಿ..... ಬಂತು ಹುಲಿ ಮನೆ ತುಂಬಾ ಇಲಿ ಹಿಡಿವುದನ್ನು ಕಲಿ ಹಿಡಿವುದನ್ನು.... ನೀ ಕಲಿ ಹಿಡಿದ್ ಹಿಡಿದು ನಲಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದೇನೇ ಆಗ್ಲಿ, ಈ ಸಿದ್ರಾಮ ಅದೆಷ್ಟೋ ಹೊಸ ಹೊಸ "ಕಿರುಕವಿ"ಗಳ ಒಳಗಿದ್ದ "ಕಲೆ"ಯನ್ನು ಜಾಗೃತಗೊಳಿಸಿ, ಅವರೆಲ್ಲರೂ, ತಮ್ಮ ಪ್ರಾಸಬದ್ದ ಚುಟುಕ, ಕವಿತೆ, ಕಿರಿ ಕಿರಿ ಕವನಗಳಿಂದ, ಈ ಸಂಪದದಂಗಳವನ್ನು ತುಂಬಿಸಿಬಿಡುವಂತೆ ಮಾಡಿದ್ದಾರೆ. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಸಿದ್ರಾಮರ ಹೆಸರನ್ನು ಶಿಫಾರಸ್ಸು ಮಾಡದೇ ಇದ್ದರೆ, ನಮಗೇ (ಸಂಪದಿಗರಿಗೇ) ಅವಮಾನ! ಇಂದಿನ ದಿನವಿನ್ನು ಹೇಗಿರುತ್ತೋ... ಎಂಬ ಕುತೂಹಲದೊಂದಿಗೆ... - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂದಿನ ದಿನ ಶುಭದಿನ ನಾಳೆ ಎನ್ನುವದು ಕಠಿಣ. ಪ್ರತಿಕ್ರೀಯಿಸಿದ ಬೆನ್ನು ತಟ್ಟಿ ಹರಸಿದ ಎಲ್ಲ ಸಂಪದರಿಗೆ ನನ್ನ ಕೋಟಿ ನಮಸ್ಕಾರಗಳು . ಬೆಳೆಯುತ್ತಿರುವ ಕವಿಗಳ ಬೆಳೆಸಿ ಎಂದು ವಿನಂತಿ. ಇದರ ಮುಂದಿನ ಕಂತು ಸದ್ಯದಲ್ಲಿಯೆ ನಿಮ್ಮ ಮನಸ್ಸಿಗೆ ಲಗ್ಗೆ ಇಡಲಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

//ಬೆಳೆಯುತ್ತಿರುವ ಕವಿಗಳ ಹರಸಿ ಬೆಳೆಸಿ ಎಂದು ವಿನಂತಿ. ನನ್ನ ಅಭಿಮತವಿದೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕೌಶಿಕ್ ರವರೆ ಅಂದ ಹಾಗೆ ದಯವಿಟ್ಟು ವಿಶೇಷ ಸೂಚನೆ ಗಮನಿಸಿ. ವಿಳಾಸ ನೀಡಿದರೆ..............................!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ.... :) ನಿಮ್ಮ ಮನಸ್ಸಿನಲ್ಲಿ ಹುಚ್ಚೆದ್ಧು ಕುಣಿಯುವ ಕವಿಯ ಕವನಗಳ ಸಾಲುಗಳನ್ನು ಇಲ್ಲೇ ಕಣ್ತುಂಬಿಕೊಂಡು ಆಸ್ವಾದಿಸುವೆ, ಆನಂದಿಸುವೆ... ದಯವಿಟ್ಟು 1000 ಕಿರು ಕವನಗಳ ಮನೆಗೆ ಕಳಿಸುವ ಎಚ್ಚರಿಕೆ ಕೊಡಬೇಡಿ... ಭಯ ಆಗ್ತದೆ... :-()
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಸಿದ್ದೇನೆ ಬೆಳೆಯುವುದು ಅವರವರಿಗೇ ಬಿಟ್ಟ ವಿಚಾರ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಸಿ ಗುರುವೇ ಹರಸಿ, ಕವಿಗಳೆಲ್ಲ ಕರೆಸಿ ಕವನಗಳ ಮಳೆ ಸುರಿಸಿ ಕಾವ್ಯ ಬೆಳೆಸಿ ಕಣ್ಣೀರು ಉಳಿಸಿ.. ಉಳಿಸಿ....ಉಳಿಸಿ.... ಬೆಳೆಸಿ ( ಕ್ಷಮೆಯಿರಲಿ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಿಗರ ಗತಿ ಹರೋಹರ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರ ಹರ ಮಹಾದೇವ.....ಶಂಭೋ! ಎಲ್ಲಿರುವೆ ತಂದೆ. ದಯವಿಟ್ಟು ವಿಳಾಸ ಕೊಡ್ತೀರಾ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.