nkumar ರವರ ಬ್ಲಾಗ್

ಹೀರೆಕಾಯಿ ಬಜ್ಜಿ

ನನ್ನ ಅಚ್ಚು ಮೆಚ್ಚಿನ ಬಜ್ಜಿ ಇದು :-). ಇದನ್ನು ಅನ್ನಕ್ಕೆ ಮಾತ್ರವಲ್ಲದೆ, ದೋಸೆ, ಇಡ್ಲಿ ಮತ್ತು ಚಪಾತಿ ಜೊತೆ ಕೂಡ ಬಳಸಬಹುದು. ಇದನ್ನು ತಯಾರಿಸುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ನಾನು ಮಾಡುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ [ಅಮ್ಮ ಹೇಳಿಕೊಟ್ಟಿದ್ದು :-)].

ಬೇಕಾಗುವ ಸಾಮಾಗ್ರಿಗಳು:

೧) ಹೀರೆಕಾಯಿ - ೧ ಸಾಕು

೨) ತುರಿದ ತೆಂಗಿನಕಾಯಿ (ಬೇಕಾಗುವಷ್ಟು), ಒಣ ಹುಣಸೆ ಹಣ್ಣು, ಸಣ್ಣ ಬೆಲ್ಲದ ತುಂಡು, ಚಿಟಿಕೆ ಅರಶಿನ ಪುಡಿ

೩) ಒಗ್ಗರಣೆ ಸಾಮಾನುಗಳು (ಘಾಟಿ ಮೆಣಸು, ಕೊತ್ತಂಬರಿ, ಉದ್ದಿನ ಬೇಳೆ)

೪) ತೆಂಗಿನೆಣ್ಣೆ

೫) ೧ ಹಸಿಮೆಣಸು, ಸ್ವಲ್ಪ ಕರಿಬೇವು ಸೊಪ್ಪು

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ - ‍ಮಧೂರು

ಕೇರಳ ರಾಜ್ಯದ ಕಾಸರಗೋಡುವಿನಿಂದ ಈಶಾನ್ಯಕ್ಕೆ ೭ ಕಿ.ಮೀ ದೂರದಲ್ಲಿರುವ ಕ್ಷೇತ್ರ ಮಧೂರು. ಇಲ್ಲಿ ಶ್ರೀಮದನಂತೇಶ್ವರನು ಪ್ರತಿಷ್ಠೆಗೊಂಡು ಪೂಜಿಸಲ್ಪಡುತ್ತಿರುವನಾದರೂ, ಗೋಡೆಯಲ್ಲಿ ಮೂಡಿಬಂದ ಶ್ರೀ ವಿನಾಯಕನೇ ಪ್ರಸಿದ್ಧನು. ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತಿರುವ ಕ್ಷೇತ್ರ. ಸ್ವಲ್ಪ ದೂರದಲ್ಲಿ ಕಾಣಿಸುವ ಬೆಟ್ಟಗಳು ಅದರ ತಪ್ಪಲಲ್ಲಿ ಇರುವ ತೆಂಗು-ಅಡಿಕೆ ತೋಟಗಳು ಕ್ಷೇತ್ರಕ್ಕೆ ಮೆರುಗನ್ನು ನೀಡುತ್ತದೆ. ದೇವಸ್ಥಾನದ ಮುಂಭಾಗದಲ್ಲಿ ಮಧುವಾಹಿನಿ ಹೊಳೆ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತದೆ. ಪೂರ್ವಾಭಿಮುಖವಾಗಿ ಗಜಪೃಷ್ಠಾಕಾರದ ಮೂರು ಅಂತಸ್ತಿನಲ್ಲಿ ಇರುವುದು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನ. ಮೇಲಿನ ಎರಡು ಅಂತಸ್ತುಗಳಿಗೆ ತಾಮ್ರದ ಮತ್ತು ಕೆಳಗಿನ ಅಂತಸ್ತಿಗೆ ಹಂಚಿನ ಹೊದಿಕೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಮಳೆಗಾಲಕ್ಕೊಂದು ಕರಾವಳಿಯ ಕಷಾಯ

 ಮಳೆಗಾಲವೆಂದರೆ ಕರಾವಳಿಯಲ್ಲಿ ಅನೇಕ ರೋಗಗಳ ಆಗಮನ ಕೂಡ. ರೋಗ ಅಂದರೆ ವಿಚಿತ್ರರೋಗಗಳಲ್ಲ, ಬದಲಾಗಿ ಶೀತ, ಕೆಮ್ಮು, ವಾತ, ಪಿತ್ತ ಮುಂತಾದವು. ಇದಕ್ಕೆ ಕರಾವಳಿಯವರು ಕಂಡುಕೊಂಡ ಪರಿಹಾರ ಕಾಲಕಾಲಕ್ಕೆ ಕೆಲವನ್ನು ಸೇವಿಸದೇ ಇರುವುದು. ಉದಾಹರಣೆಗೆ: ಆಷಾಡ ಮಾಸದ ಮಳೆ ಮತ್ತು ಚಳಿ ಸಮಯದಲ್ಲಿ ಮೊಸರು ಸೇವಿಸದೇ ಇರುವುದು, ಕೆಲವೊಮ್ಮೆ ಬೇಳೆ ಸೇವಿಸದೇ ಇರುವುದು ಮುಂತಾದವು. ಹಿಂದಿನ ಕಾಲದಲ್ಲಿ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಇಂತಹ ವೃತಗಳನ್ನು ಆಚರಣೆಗೆ ತಂದಿದ್ದಾರೆ. ಮತ್ತೊಂದು ಪರಿಹಾರ ಎಂದರೆ ಮನೆಯಲ್ಲೇ ತಯಾರಿಸಿದ ಕೊತ್ತಂಬರಿ-ಜೀರಿಗೆ ಕಷಾಯ. ಇದು ದೇಹವನ್ನು ತಂಪಾಗಿಡುತ್ತಲ್ಲದೇ, ಶೀತ-ಕೆಮ್ಮಿನಿಂದಲೂ ದೂರವಿಡುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ದೇವಿ ದರ್ಶನಮ್

ಕೆಲಸದ ಒತ್ತಡದ ಮಧ್ಯೆಯೂ ವಾರಾಂತ್ಯದಲ್ಲಿ ಸ್ವಲ್ಪ ಬಿಡುವು ಸಿಕ್ಕಿತು. ಅಂದು ಒಂದೆರಡು ಕ್ಯಾಸೆಟ್ ಹಾಡುಗಳನ್ನು ಡಿಜಿಟೈಸ್ ಮಾಡುವ ಕಾರ್ಯ ಕೈಗೊಂಡೆ. ಉಬುಂಟುವಿನಲ್ಲಿ ಸೌಂಡ್ ಕೇಳಿಸುತ್ತಿರಲಿಲ್ಲ. ಕೆಲವು ಸಿಸ್ಟಮ್‍ಗಳಿಗೆ ಸ್ವಲ್ಪ ಟ್ವೀಕ್ ಮಾಡಬೇಕಂತೆ. ಅಂತರ್ಜಾಲದಲ್ಲಿದ್ದ ಕೆಲವು ಸೂಚನೆಗಳನ್ನು ಪಾಲಿಸಿ ಉಬುಂಟುವಿನಲ್ಲಿ ಶಬ್ದ ಬರಿಸಿದ್ದಾಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಫೆಡೋರ-೧೧: ಇಂಸ್ಟಾಲರ್ ತೊಂದರೆಗಳು

ನಿನ್ನೆ ಹೊಸತಾಗಿ ಫೆಡೋರಾ-೧೧ ಸ್ಥಾಪಿಸಲು ಹೋದಾಗ, ಪಾರ್ಟಿಶನ್ ಮಾಡುವ ಸಮಯದಲ್ಲಿ "PartitionException" ಬಂತು.

"This may be bug in installer. Report to Redhat bugsite" ಅಂತ ಸೂಚನೆ ನೀಡಿತು. ನಾನು ಈ ಕೆಳಕಂಡ ಆಪ್ಶನ್ ಪ್ರಯತ್ನಿಸಿ ನೋಡಿದೆ.

1) Delete existing linux system and create default layout
2) Use free spcae and create default layout
3) Create custom layout

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - nkumar ರವರ ಬ್ಲಾಗ್