ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ

3.4
ತೀವಿ ಕುಳ್ಳಿರ್ದ ಸಭೆ ಈಯಬಲ್ಲುದೆ ದಾನವ
ಸಾವರೆ ಸಂಗ್ರಾಮಕ್ಕೆ ಹೋದವರೆಲ್ಲ
ಇರಿಯಬಲ್ಲರೆ ನೂರಕ್ಕೊಬ್ಬ ಸಹಸ್ರಕ್ಕೊಬ್ಬ
ಹುಣಿಸೆಯ ಹೂವೆಲ್ಲ ಕಾಯಾಗಬಲ್ಲುದೆ ರಾಮನಾಥ
 
[ತೀವಿ-ತುಂಬಿ]
 
ಜೇಡರ ದಾಸಿಮಯ್ಯ ಆದ್ಯ ವಚನಕಾರ. ಬಸವ ಮೊದಲಾದ ಸುಪ್ರಸಿದ್ಧ ಶರಣೆರಲ್ಲರಿಗಿಂತ ಹಿಂದಿನವನು. ಗುಲಬರ್ಗಾ ಜಿಲ್ಲೆಯ ಮುದನೂರು ಈತ ಹುಟ್ಟಿದ ಊರು. ತಂದೆ-ಕಾಮಯ್ಯ, ತಾಯಿ-ಶಂಕರಿ, ಹೆಂಡತಿ-ದುಗ್ಗಳೆ. ನೇಯ್ಗೆಯ ಕಸುಬಿನ ವಚನಕಾರ ಈತ. ರಾಮನಾಥ ಅನ್ನುವುದು ಜೇಡರ ದಾಸಿಮಯ್ಯನ ಅಂಕಿತ. ಈತನ ೧೭೬ ವಚನಗಳು ದೊರೆತಿವೆ.
 
ಸಭೆಯಲ್ಲಿ ಸಾವಿರ ಜನ ಇರಬಹುದು. ಆದರೆ ಅವರೆಲ್ಲರೂ ದಾನಕೊಡುವುದಕ್ಕೆ ಮುಂದೆಬರುವವರಲ್ಲ. ಯುದ್ಧಕ್ಕೆ ಲಕ್ಷ ಜನ ಹೋಗಬಹುದು. ಹಾಗೆ ಹೋದವರೆಲ್ಲ ಸಾಯುವವರಲ್ಲ. ಯುದ್ಧದಲ್ಲಿ ಶತ್ರುವನ್ನು ಇರಿಯಬಲ್ಲವರು ನೂರರಲ್ಲಿಯೋ ಸಾವಿರದಲ್ಲಿಯೋ ಒಬ್ಬರಿದ್ದರೆ ಹೆಚ್ಚು. ಹುಣಿಸೆಯ ಮರದಲ್ಲಿ ಬಿಟ್ಟ ಹೂಗಳೆಲ್ಲ ಹುಣಿಸೆಯ ಕಾಯಿ ಆಗುವುದೇ? ಇದು ಜೇಡರ ದಾಸಿಮಯ್ಯ ಕೇಳುವ ಪ್ರಶ್ನೆ. ಇಲ್ಲ ಅನ್ನುವ ಉತ್ತರ ಕೇಳುವ ಧಾಟಿಯಲ್ಲಿಯೇ ಹೊಳೆಯುತ್ತದೆ.
 
ಹೀಗೆ ದಾನ ನೀಡದ ಜನ, ಯುದ್ಧದಲ್ಲಿ ಸಾಯದ ಸೈನಿಕ, ಶತ್ರವನ್ನು ಕೊಲ್ಲದ ವೀರ ಇವರು ತಿರಸ್ಕಾರಕ್ಕೆ ಅರ್ಹರೇನು? ದಾಸಿಮಯ್ಯನ ಧೋರಣೆ ಹಾಗೆ ಇದ್ದಂತಿಲ್ಲ. ಸಫಲತೆ, ಯಶಸ್ಸು ಇವೇ ಬಲು ದೊಡ್ಡ ಮೌಲ್ಯಗಳು ಎಂಬ ಭ್ರಮೆಗೆ ಸಿಲುಕಿರುವ ಈ ಕಾಲಕ್ಕೆ ಅಗತ್ಯವಾಗಿ ಬೇಕಾದ ಮಾತು ಇಲ್ಲಿದೆ ಎಂದೆನಿಸುತ್ತಿದೆ.
 
ಸಫಲತೆ ಅಪೂರ್ವ. ಹಣ್ಣಾಗದ ಹೂಗಳು, ಕೊಲ್ಲದ, ಸಾಯದ ವೀರರು, ದಾನಕೊಡದೆ ಇರುವ ಸಾವಿರ ಜನ ಇವರೆಲ್ಲ ವ್ಯರ್ಥವೆಂದಲ್ಲ.  ‘ಲೀಲೆಯಲಿ ಯಾವುದೂ ವಿಫಲವಲ್ಲ' ಅನ್ನುವ ಮಾತು ನೆನಪಿಗೆ ಬರುತ್ತಿದೆ. ಅರ್ಥವಿರುವ ಒಂದು ಮಾತಿಗೆ ಅರ್ಥವಿರದ ಸಾವಿರ ಮಾತುಗಳು, ಒಂದು  ಸಫಲತೆಗೆ ಸಾವಿರ ವಿಫಲತೆಗಳು ಇದು ನಿಸರ್ಗದ ನಿಯಮವೇ ಇರಬಹುದು. 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.4 (10 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಸಫಲತೆ, ಯಶಸ್ಸು ಇವೇ ಬಲು ದೊಡ್ಡ ಮೌಲ್ಯಗಳು ಎಂಬ ಭ್ರಮೆಗೆ ಸಿಲುಕಿರುವ ಈ ಕಾಲಕ್ಕೆ ಅಗತ್ಯವಾಗಿ ಬೇಕಾದ ಮಾತು ಇಲ್ಲಿದೆ ಎಂದೆನಿಸುತ್ತಿದೆ.
>>ಲೀಲೆಯಲಿ ಯಾವುದೂ ವಿಫಲವಲ್ಲ'

ಒಳ್ಳೆಯ ವಚನ ಮತ್ತು ವಿಚಾರ.
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲವು ತಪ್ಪೊಪ್ಪು ಮತ್ತು ಱಕಾರ

ತೀವಿ ಕುಳ್ಳಿರ್ದ ಸಭೆ ಈಯಬಲ್ಲುದೆ ದಾನವ
ಸಾವರೆ ಸಂಗ್ರಾಮಕ್ಕೆ ಹೋದವರೆಲ್ಲ
ಇಱಿಯಬಲ್ಲರೆ ನೂಱಕ್ಕೊಬ್ಬ ಸಹಸ್ರಕ್ಕೊಬ್ಬ
ಹುಣಿಸೆಯ ಹೂವೆಲ್ಲ ಕಾಯಾಗಬಲ್ಲುದೆ ರಾಮನಾಥ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪೊಪ್ಪು ಏನು?

'ಱ'ಕಾರ ನಿಮಗೆ ಇಷ್ಟವಾದರೆ ಬಳಸಲಿಕ್ಕೆ ಅಡ್ಡಿಯಿಲ್ಲ. ಆದರೆ ಎಲ್ಲರಿಗೂ ಬಳಸಿ ಎಂದು ಹೇರುವುದು ಸರಿಯಲ್ಲ.
- HPN
ನನ್ನ ಬ್ಲಾಗುಗಳು: [:http://sampada.net/blog/hpn|ಪರಿವೇಶಣ] | [:http://hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಹೇಱುತ್ತಿಲ್ಲ. ಮೂಲತಾಳೆಗಱಿಯಲ್ಲಿರುವುದು ಱ. ಅಲ್ಲದೇ ಱ ಮತ್ತು ರ ಅಕ್ಷರಗಳಲ್ಲಿ ಆ ಕಾಲದಲ್ಲಿ ಅರ್ಥವ್ಯತ್ಯಾಸವಿತ್ತು. ಇನ್ನೊಂದು ತಪ್ಪು ಹಣಿಸೆಹಣ್ಣು. ಅದು ಹುಣಿಸೆಹಣ್ಣು ಆಗಬೇಕು. ಟೀಕಿಸುವ ಮುನ್ನ ಚೆನ್ನಾಗಿ ಕಣ್ಣು ಹಾಯಿಸಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಣಿಸೆ ಅಲ್ಲ. ಹುಣಿಸೆ ಆಗಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಯಾ ಕಾಲಕ್ಕೆ ತಕ್ಕಂತೆ ಇದ್ದದ್ದನ್ನು ಇದ್ದಹಾಗೆ ರಕ್ಷಿಸುವುದು ನಮ್ಮ ಕರ್ತವ್ಯ. ಅಕಸ್ಮಾತ್ ಶಿವಶರಣರು ’ಱ’ ಮತ್ತು ’ರ’ ನಡುವೆ ಅರ್ಥವ್ಯತ್ಯಾಸ ಮಾಡಿಲ್ಲವೆಂದಾದರೆ ನಾನು ಸಂಪದದಲ್ಲಿ ಬರೆಯುವುದನ್ನು ನಿಲ್ಲಿಸುತ್ತೇನೆ. ನಾನು ಹೇೞುತ್ತಿರುವುದು ಸರಿಯಿದ್ದರೆ HPN ಅವರು ಸಂಪದದಲ್ಲಿ ಬರೆಯುವುದನ್ನು ನಿಲ್ಲಿಸಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆರಳಚ್ಚಿನ ದೋಷ, ‘ಹುಣಿಸೆ’ ಅನ್ನುವುದು ‘ಹಣಿಸೆ’ ಯಾಗಿತ್ತು. ತಿದ್ದಿರುವೆ.
ಱ ಮತ್ತು ೞ, ರ ಮತ್ತು ಳ ಗಳ ಬಳಕೆಯಲ್ಲಿ ಅರ್ಥ ವ್ಯತ್ಯಾಸ ಇದೆ. ನಿಜ. ಅವುಗಳ ಬಳಕೆ ತಪ್ಪಿ ಸುಮಾರು ೫೦೦ ವರ್ಷಗಳಾಗಿರುವುದೂ ನಿಜ. ಇಂದಿನ ಓದುಗರನ್ನು ಪ್ರಾಚೀನ ಕೃತಿಗಳತ್ತ ಸೆಳೆಯುವಾಗ ಇಂದಿನ ಬರವಣಿಗೆಯ ಸಂಪ್ರದಾಯವನ್ನೇ ಬಳಸುವುದು ಸೂಕ್ತ. ಇಂದಿನ ಬಳಕೆಯಲ್ಲಿಲ್ಲದ ಅಕ್ಷರಗಳು ಸಾಲಿಗೊಂದೆರಡರಂತೆ ಕಂಡು ಓದುಗರು ವಿಮುಖರಾಗುವುದು ಬೇಡ, ಅಲ್ಲವೇ? ಇನ್ನು ಮುಂದೆ ಅರ್ಥ ವಿವರಣೆ ನೀಡುವಾಗ ಮಾತ್ರ ಆಯಾ ಪದಗಳಲ್ಲಿರುವ ಱ ಮತ್ತು ೞ ಗಳನ್ನು ಬಳಸೋಣ, ಪಠ್ಯದಲ್ಲಿ ಸುಗಮ ಓದಿಗೆಂದು ಇಂದಿನ ಸಂಪ್ರದಾಯವನ್ನೇ ಪಾಲಿಸೋಣ. ಇಂಗ್ಲಿಷಿನಲ್ಲಿ ಕೂಡ this, that ಗಳಲ್ಲಿರುವ th ಧ್ವನಿಗೆ ಪ್ರತ್ಯೇಕವಾದ ಎರಡು ಲಿಪಿ ಸಂಕೇತಗಳೇ ಇದ್ದವು. ಈಗ ಮುದ್ರಿತವಾಗುವ ಯಾವ ಪ್ರಾಚೀನ ಕೃತಿಯ ಮುದ್ರಣದಲ್ಲೂ ಆ ಲಿಪಿ ಸಂಕೇತ ಕಾಣುವುದಿಲ್ಲ. ಅವು ಇರುವ ಪುಸ್ತಕ ಬೇಕೆಂದರೆ ನಿಧಿಗೆ ಸಂಶೋಧನೆ ನಡೆಸಿದಂತೆ ನಡೆಸಬೇಕು! ಬದಲಾದ ಲಿಪಿಯನ್ನು, ಜನ ಬಳಸುವ ಲಿಪಿಯನ್ನು ಬಳಸಬೇಕೆನ್ನುವುದು ನನ್ನ ನಂಬಿಕೆ.
ಅಲ್ಲದೆ ನೋಡಿ, ವಚನವೊಂದು ನಮಗೆ ಹೇಳುವ ಅರ್ಥ ಮುಖ್ಯವಾಗಬೇಕೇ ಹೊರತು ಕೇವಲ ಸಂಕೇತಗಳ ರೂಪ ಲಕ್ಷಣಗಳಲ್ಲ ಅಲ್ಲವೇ! ಅರ್ಥದ ಅನ್ವೇಷಣೆಯಲ್ಲಿ ಸೋಲು-ಗೆಲುವುಗಳ ಮಾತಿಲ್ಲ. ಅದೇ ಇಂದಿನ ವಚನ. ನೋಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಱಕಾರ ಬೞಕೆ ತಪ್ಪಿ ಸುಮಾರು ೩೦೦-೪೦೦ ವರ್ಷಗಳಷ್ಟೇ. ೞಕಾರ ಬೞಕೆ ತಪ್ಪಿ ಸುಮಾರು ೮೦೦ ವರ್ಷಗಳು ಸಂದಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್ , ಸರ್ಯಾಗಿ ಹೇಳಿದಿರಿ..

ಶಬ್ದ ಮುಖ್ಯವಲ್ಲ ; ಅರ್ಥ ಮುಖ್ಯವೆಂದು ತಥಾಗತನು ಹೇಳಿದನು
:)

--------ಇಲ್ಲಿ ನಾನು ದುಡುಕಿ ಬರೆದ ಸಾಲುಗಳನ್ನು ತೆಗೆದು ಹಾಕಿದ್ದೀನಿ---

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲಿ ಸಮಸ್ಯೆಯಿರುವುದು ಇದ್ದದ್ದನ್ನು ಇದ್ದಹಾಗೆ ಹೇೞಿ ಎಂದು. ಱ ಮತ್ತು ೞ ಜನಸಾಮಾನ್ಯರಲ್ಲಿ ಸಂಪೂರ್ಣವಾಗಿ ಮಱೆಯಾಗಿಲ್ಲ. ಭಾಷಾದೃಷ್ಟಿಯಿಂದಲೂ ವಿಷಯವನ್ನು ವಿಚಾರಿಸಬೇಕಾಗುತ್ತದೆ. ಶಿವಶರಣರ ಹಾಗೂ ನಡುಗನ್ನಡಕಾಲಕ್ಕೆ ’ಱ’ ವ್ಯಾಪಕವಾಗಿ ಬೞಕೆಯಲ್ಲಿತ್ತು. ಕನಿಷ್ಠಪಕ್ಷ ಶಿವಶರಣರು ಕನ್ನಡ ಬೞಸಿದಂತೆ ವಚನಗಳನ್ನುದಾಹರಿಸಿ. ನಿಮ್ಮ ಟೀಕೆ ಟಿಪ್ಪಣಿಯಲ್ಲಿ ಱ ಮತ್ತು ೞ ಬಿಟ್ಟುಬಿಡಿ. ನಿಮಗೆ ಱ ಮತ್ತು ರ ಹಾಗೂ ೞ ಮತ್ತು ಳ ಅರ್ಥ ಮಾಡಿಕೊಳ್ಲಲು ಕಷ್ಟವಾಗುವುದಾದರೆ ಅರ್ಥ ನೋಡಿ ನಿಘಂಟು ನೋಡಿ ಯಥಾವತ್ ರೂಪ ಕಾಪಾಡಿ. ಮೂಲಾರ್ಥದೊಡನೆ ಶಿವಶರಣರು ಬೞಸಿದ ಕನ್ನಡವನ್ನೇ ಬೞಸಿ. ಕಟುವಾಗಿ ಟೀಕಿಸಿದ್ದರೆ ಕ್ಷಮಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.