ಇಂದು ಓದಿದ ವಚನ: ಓರಂತಿಪ್ಪುದೆ ಸಮತೆ: ಸಿದ್ಧರಾಮ

5

ಆರು ಜರಿದವರೆನ್ನ ಮನದ ಕಾಳಿಕೆಯಕಳೆದರೆಂಬುದೆ ಸಮತೆ

ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ  ಹಗೆಗಳೆಂಬುದೆ ಸಮತೆ

ಇಂತಿದು ಗುರುಕಾರುಣ್ಯ

ಮನವಚನಕಾಯದಲ್ಲಿ ಅವಿತತವಿಲ್ಲದಿರ್ದಡೆ

ಕಪಿಲಸಿದ್ಧಮಲ್ಲಿಕಾರ್ಜುನಾ ನಿನ್ನವರ ನೀನೆಂಬುದೆ ಸಮತೆ.

[ಕಾಳಿಕೆ-ಕಲ್ಮಶ, ಸ್ತೌತ್ಯ-ಸ್ತುತಿ, ಅವಿತತ-ವಂಚನೆ]

ಯಾರು ಜರಿದರೂ ಅವರು ನನ್ನ ಮನಸ್ಸಿನ ಕಲ್ಮಶ ಕಳೆದರು ಅನ್ನುವುದೇ ಸಮತೆ.. ಯಾರಾದರೂ ಹೊಗಳಿದರೆ ಅವರು ನನ್ನ ಜನ್ಮಾಂತರದ ಹಗೆಗಳೆಂದು ತಿಳಿಯುವುದು ಸಮತೆ. ಹೀಗೆ ಇರುವುದು ಗುರುಕರುಣೆಯಿಂದಷ್ಟೆಸಾಧ್ಯವಾದೀತು. ನಮ್ಮ ಮನಸ್ಸು, ಮಾತು,ದೇಹದಲ್ಲಿ ಸುಳ್ಳು, ವಂಚನೆ ಇರದಿದ್ದರೆ ದೇವರಿಗೆ ಸೇರಿದವರೆಲ್ಲರನ್ನೂ ದೇವರೆಂದೇ ತಿಳಿಯುವುದುಸಮತೆ.

ದೇವರು ಎಲ್ಲೆಡೆಯಲ್ಲೂ ಇದ್ದಾನೆ ಎಂಬುದು ಬಲುಮಟ್ಟಿಗೆ ನಾವು  ಕಲಿತ ಮಾತು, ಹೊರತು ನಮ್ಮ ಅನುಭವವಲ್ಲ.ಅದು ಒಂದು ವೇಳೆ ಅನುಭವವೇ ಆದರೆ, ಆಗ ನಾನು ಮಾತ್ರವಲ್ಲ ಲೋಕದಲ್ಲಿ ಕಾಣುವುದೆಲ್ಲವೂ ದೇವರೇ  ಅನ್ನುವುದು ಅನುಭವವೇ ಆದರೆ, ಆಗ ಪ್ರತ್ಯೇಕತೆಗೆ, ಭೇದಭಾವಕ್ಕೆ  ಅವಕಾಶವೆಲ್ಲಿ? ಸಿದ್ಧರಾಮನ ಸಮತೆಯ  ಕಲ್ಪನೆಯ ಇನ್ನೊಂದು ಮುಖ ಇದು.

ತೆಗಳಿಕೆ, ಹೊಗಳಿಕೆಗಳು ನಮ್ಮನ್ನು ಹಿಗ್ಗಿಸುವುದೂ ಇಲ್ಲ, ಕುಗ್ಗಿಸುವುದೂ ಇಲ್ಲ. ಅವಕ್ಕೆ ನಾವು ತೋರುವ ಪ್ರತಿಕ್ರಿಯೆಗಳು ಮಾತ್ರ ನಮ್ಮವೇ ಹೌದು. ಅಂದಮೇಲೆ ಸಮತೆ ಅನ್ನುವ ಗುಣ ನಮ್ಮೊಳಗೇ ಹುಟ್ಟುವುದು, ಹುಟ್ಟಬೇಕಾದದ್ದು ಎಂದು ಸಿದ್ಧರಾಮ ಹೇಳುತ್ತಿರುವಂತಿದೆ.  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಱಕಾರ ನೋಡಿ.

ಆರು ಜಱಿದವರೆನ್ನ ಮನದ ಕಾಳಿಕೆಯಕಳೆದರೆಂಬುದೆ ಸಮತೆ

ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ ಹಗೆಗಳೆಂಬುದೆ ಸಮತೆ

ಇಂತಿದು ಗುರುಕಾರುಣ್ಯ

ಮನವಚನಕಾಯದಲ್ಲಿ ಅವಿತತವಿಲ್ಲದಿರ್ದಡೆ

ಕಪಿಲಸಿದ್ಧಮಲ್ಲಿಕಾರ್ಜುನಾ ನಿನ್ನವರ ನೀನೆಂಬುದೆ ಸಮತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವಿತತ=ಶ್ರೇಷ್ಠವಲ್ಲದ್ದು, ಕೀೞು, ನೋಡಿ ವಿತತ=ಶ್ರೇಷ್ಠ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವಿತಥ ಅನ್ನುವುದು ಸಂಸ್ಕೃತ ಶಬ್ದ. ಕನ್ನಡದಲ್ಲಿ ಸಿದ್ಧರಾಮ ಅದನ್ನು ಮಹಾಪ್ರಾಣವಿಲ್ಲದೆ ಬಳಸಿದ್ದಾನೆ. ಅವಿತಥ ಅನ್ನುವುದಕ್ಕೆ ಸುಳ್ಳಿಲ್ಲದೆ ಅನ್ನುವ ಅರ್ಥವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ದೊಡ್ಡ ನಿಘಂಟು ಉದಾಹರಣೆಗಳೊಂದಿಗೆ ವಿವರಿಸಿದೆ. ನಿಶಾವಸಾನಸಮಯದೊಳ್ ಕಂಡ ಕನಸುಗವಿತಥಳಪ್ಪುದರಿಂ ಅನ್ನುವ ನಿದರ್ಶನ ನಾಗವರ್ಮನ ಕರ್ನಾಟ ಕಾದಂಬರಿಯ ಉತ್ತರ ಭಾಗದಿಂದ ನೀಡಿದೆ. ಇನ್ನು ಶ್ರೇಷ್ಠವಲ್ಲದ ಅನ್ನುವ ಅರ್ಥ ಚಕ್ರವರ್ತಿಯವರ ಇತ್ತೀಚಿನ ಸಂಸ್ಕೃತ ಕನ್ನಡ ನಿಘಂಟಿನಲ್ಲೂ ಕಾಣಲಿಲ್ಲ. ವಂಚನೆ ಇಲ್ಲದ ಅನ್ನುವ ಅರ್ಥವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ವಚನ ಸಂಗ್ರಹಗಳಲ್ಲಿ, ಸಮಗ್ರ ವಚನ ಸಂಗ್ರಹದ ಕಠಿಣ ಪದಕೋಶಗಳಲ್ಲಿ ನೀಡಿದ್ದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿತತ=ವಿ+ತನ್=ವಿಸ್ತರಿಸು, ಉದಾರವಾಗು, ದೊಡ್ಡದಾಗು, ಶ್ರೇಷ್ಠವಾಗು ಎಂಬರ್ಥ. ವಿತಾನ=ಹರಡುವುದು, ವಿಸ್ತಾರ ನೀವು ಕೇಳಿರಬಹುದು. ಆ ಅರ್ಥದಲ್ಲಿಯೂ ವಿತತ=ಶ್ರೇಷ್ಠ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಮಪದವಾಗಿ ವಿತತ ಅನ್ನುವುದಕ್ಕೆ ’ವೀಣೆ ಮೊದಲಾದ ತಂತೀ ವಾದ್ಯ’ ಅನ್ನುವ ಅರ್ಥವೂ ಇದೆ. ಆದರೆ ಆ ಅರ್ಥವಾಗಲೀ, ಗುಣವಾಚಕವಾಗಿ ’ವಿಸ್ತಾರವಾದ’ ಅನ್ನುವ ಅರ್ಥವಾಗಲೀ ಸಿದ್ಧರಾಮನ ಈ ವಚನಕ್ಕೆ ಹೊಂದಿಕೆಯಾಗುವುದೇ? ದಯವಿಟ್ಟು ಒಮ್ಮೆ ಪರಿಶೀಲಿಸಿ ನೋಡಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.