ಸಂಪದ ಏನು ಮಾಡಬಹುದು

0

ಗೆಳೆಯರೆ, ಸಂಪದ ಒಂದು ಕುತೂಹಲಕಾರಿ ಪ್ರಯತ್ನ. ಇದು ಕೇವಲ ಸಾಹಿತ್ಯಕ್ಕೆ ಎಂದು ಲಿಮಿಟ್ ಆಗುವ ಬದಲು ಕನ್ನಡ, ಕನ್ನಡದ ಬದುಕು, ಭಾಷೆ, ಅಷ್ಟೇ ಯಾಕೆ, ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಕನ್ನಡದ ಮುಖಾಂತರ ತಿಳಿಯುವ ತಿಳಿಸುವ ತಾಣ ಆಗಬೇಕು. ಪ್ರಶ್ನೆ ಉತ್ತರದಂಥ ಒಂದು ಮೂಲೆ ಇಲ್ಲಿ ಆದರೆ ಎಷ್ಟು ಚೆನ್ನ. ಈ ಸೈಟಿನ ನೋಡುಗ/ಓದುಗರು ಕೇಳುವ ಪ್ರಶ್ನೆಗಳು ಮತ್ತು ಅವುಗಳಿಗೆ ಒಂದಲ್ಲ ಹಲವು ಉತ್ತರಗಳು ಸಿಗುವಂತಾದರೆ ದಿನವೂ ಹೊಸತು ಇರುವಂತಾಗುತ್ತದೆ. ಬರೆಯುವ ತೊಡಕು: ಇನ್ನೊಂದು ಉಪಯುಕ್ತ ಶೀರ್ಷಿಕೆ ಆಗಬಹುದು. ಬಹಳ ಜನ ಬರೆಯುವ ಬಗ್ಗೆ ಏನೇನೋ ತೊಂದರೆಗಳನ್ನು ಎದುರಿಸುತ್ತಾರೆ. ಅವುಗಳನ್ನು ಇಲ್ಲಿ ಹಂಚಿಕೊಂಡು ನಮ್ಮ ಸಂಪದ ಸಂಪದ್ಭರಿತವಾಗುವಂತೆ ಮಾಡಬಹುದು. ಈ ವಿಳಾಸ: ಕನ್ನದದ ಜನರ ಕುತೂಹಲ ತಣಿಸುವಂಥ, ಉಪಯುಕ್ತವಾದ ಈ ತಾಣಗಳ ವಿಳಾಸಗಳನ್ನು ಪೋಸ್ಟ ಮಾಡಬಹುದು. ಇದನ್ನು ಓದಿ: ಓದುಗ/ನೋಡುಗರು ಇತರ ಸಹ ಜಾಲಿಗರಿಗೆ ಸೂಚಿಸಬಯಸುವ ಓದು ಸಾಮಗ್ರಿಗಳು ಉಪಯುಕ್ತವಾಗುತ್ತವೆ ಏನು ಬೇಕು: ಸಂಪದದಲ್ಲಿರಬೇಕಾದ ಸಂಗತಿಗಳ ಬಗ್ಗೆ ಬಯಕೆ ಪಟ್ಟಿ, ವಿಷ್ ಲಿಸ್ಟ್, ಅನ್ನುತ್ತಾರಲ್ಲ ಅದು ಇದ್ದರೆ ಚೆನ್ನ.

ಏನನ್ನಿಸುತ್ತದೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಒ.ಎನ್.ಎಲ್.ಸ್ವಾಮಿಯವರಿಗೆ,

ನಿಮ್ಮ ಅನಿಸಿಕೆಗಳು ಬಹಳ ಸರಿಯಾಗಿವೆ.ನನಗೆ ಇನ್ನೂ ತಿಳಿಯದ ಸಂಗತಿಯೆಂದರೆ, ಸಂಪದದಲ್ಲಿ ಗಂಭೀರವಾಗಿ ಓದುವವರ ಸಂಖ್ಯೆ ತೀರಾ ಕಡಿಮೆಯೆಂದು ನನ್ನ ಅಭಿಮತ. ಇನ್ನು ಸ್ಪಂದಿಸುವವರು ಬೆರಳೆಣಕೆ. ಒಪ್ತೀರ ! ನಾನೂ ತಪ್ಪಿರುವ ಸಾಧ್ಯತೆಗಳಿವೆ.

ಸಾಹಿತ್ಯ, ಬದುಕು,ಜಗತ್ತಿನ ಯಾವುದೆ ಪ್ರಕರಣಕ್ಕೆ ನಮ್ಮ ಸ್ಪಂದನೆ ಆಗಬೇಕು. ಯಾವಾಗ. ಇದು ಪ್ರಶ್ನೆ !

ಸದ್ಯ "ಕನ್ನಡ ಭಾಶಾಪಂಡಿತರ ಹಾವಳಿ" ಸದ್ಯಕ್ಕೆ ಬ್ಯಾಡ ಮಾರಾಯ್ರೆ ! ಪದ, ತತ್ಸಮವೋ ತದ್ಭವವೋ, ಅಥವ ಇದು ಕನ್ನಡವೇ... ಅನ್ನುವ ಗೊಂದಲದಲ್ಲೇ ತಮ್ಮ 'ಪಾಂಡಿತ್ಯ ಪ್ರದರ್ಶನ ಮಾಡುವ ಸರ್ಕಸ್' ಇನ್ನು ಸಾಕು !

ಓದುಗರ ಬಯಕೆ ಪಟ್ಟಿ ಸರಿಯಾಗಿದೆ ! ಇದು ಖಂಡಿತ ಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote=venkatesh] ಸಂಪದದಲ್ಲಿ ಗಂಭೀರವಾಗಿ ಓದುವವರ ಸಂಖ್ಯೆ ತೀರಾ ಕಡಿಮೆಯೆಂದು ನನ್ನ ಅಭಿಮತ. ಇನ್ನು ಸ್ಪಂದಿಸುವವರು ಬೆರಳೆಣಕೆ. ಒಪ್ತೀರ ! ನಾನೂ ತಪ್ಪಿರುವ ಸಾಧ್ಯತೆಗಳಿವೆ.
[/quote]

Statisticsನಂತೆ, ಹೋದ ತಿಂಗಳು ಶೇಖಡಾ 22,228- ಪ್ರತಿನಿತ್ಯ ಬಂದು ಹೋದವರ ಸಂಖ್ಯೆ (daily avg. 22,228 visitors). ಓದಿದ ಒಟ್ಟು ಪುಟಗಳ ಸಂಖ್ಯೆ - 6,89,080 (ನವೆಂಬರಿನಲ್ಲಿ ಇದು ಸುಮಾರು ಒಂದು ಮಿಲ್ಲಿಯನ್ ಮುಟ್ಟಿತ್ತು). ಈ ಅಂಕಿ ಅಂಶ ಪ್ಲಾನೆಟ್ ಕನ್ನಡವನ್ನು ಹೊರತುಪಡಿಸಿ.

ಹೆಚ್ಚಿನ ಕುತೂಹಲವಿದ್ದವರಿಗೆ ಕೆಳಗಿನ ಲಿಂಕುಗಳು:
* [:http://sampada.net/image/2701]
* [:http://sampada.net/image/2703]

(btw, ಓ ಎಲ್ ಎನ್ ರವರ ಈ ಪಟ್ಟಿ ಒಂದು ವರ್ಷ ಐದು ತಿಂಗಳು ಹಿಂದೆ ಬರೆದದ್ದು)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅಂಕಿ -ಅಂಶಗಳಿಗೆ ಧನ್ಯವಾದಗಳು. ಸಂಪದದ ದಾಖಲೆಗಳು ನಿಜಕ್ಕೂ ಅಭಿನಂದನಾರ್ಹ ! ಅದರಲ್ಲಿ ಎರಡು ಮಾತಿಲ್ಲ ! ನಾನು ಹೇಳುತ್ತಿರುವುದು, ಸೀರಿಯಸ್ ಓದುಗರನ್ನು ಕುರಿತು. ಬರಿ ಪ್ರತಿನಿತ್ಯ ಬಂದು ಹೋಗುವವರನ್ನಲ್ಲ. ಮತ್ತು ಸುಮ್ಮನೆ ಪುಟಗಳನ್ನು ತಿರುವುಹಾಕುವುವರನ್ನನ್ನೂ ಅಲ್ಲ. ಆದರೆ ಅದಕ್ಕೆ ಸ್ಪಂದಿಸುವರನ್ನು. ಅಷ್ಟೆ. ಇದು ಸೀಮಿತವಾಗಿರಲಿ. ನಾನೂ ಇದಕ್ಕೆ ಹೊರತಾಗಿಲ್ಲ ! ನಾನು ಯರನ್ನೂ ದೂಶಿಸುತ್ತಿಲ್ಲ !

ಧನ್ಯವಾದಗಳು.

ವೆಂ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತು ಒಪ್ಪುವಂತಾದ್ದೆ - ಅದನ್ನು ಅನುಮೋದಿಸಿಯೇ ಅಂಕಿ ಅಂಶಗಳಿಗೆ ಕನ್ನಡಿ ಹಿಡಿದದ್ದು.

ಕನ್ನಡಿಗರಲ್ಲಿ ಹೆಚ್ಚು ಜನ ಓದ್ತಾರೆ, ಪುಟಗಳನ್ನು ತಿರುವು ಹಾಕಿ ನೋಡ್ತಾರೆ ಆದರೆ ಭಾಗವಹಿಸುವುದರಲ್ಲಿ *ಬಹಳ ಹಿಂದೆ* ಎಂಬುದು ತಿಳಿದ ವಿಷಯವೇ. :)

ಈ ವಿಷಯವಾಗಿ ಇಸ್ಮಾಯಿಲ್ ಬಹಳ ಹಿಂದೆ [:http://sampada.net/blog/ismail/05/09/2005/288|ಕನ್ನಡಿಗರ ಅತಿ ದೊಡ್ಡ ಸಮಸ್ಯೆ] ಎಂಬ ಲೇಖನ ಬರೆದಿದ್ದರು ಕೂಡ.

ಬದಲಾವಣೆಯಾಗುತ್ತಿದೆ ಎಂದು ನಂಬುತ್ತೇನೆ. ಆದರೆ ಬದಲಾವಣೆ ನಿಧಾನ - ಏನೂ ಮಾಡಲಾಗದು. ಪ್ರತಿಯೊಬ್ಬರೂ conscious ಆಗಿ ಭಾಗವಹಿಸಿದರೆ ಮಾತ್ರ ಬದಲಾವಣೆ ಕ್ಷಿಪ್ರ ಗತಿಯಲ್ಲಿ ಸಾಧ್ಯ.

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿ ಸಾರ್,

ನಿಧಾನವಾಗಿ ಪರಿವರ್ತನೆ ಆಗಬಹುದು. ಇಸ್ಮೈಲ್ ರ ವಿಚಾರ ಓದಿದೆ.
ಮತ್ತೊಮ್ಮೆ ಕೆಳಗೆ ಕಂಡ ಅಂಕೆ- ಸಂಖ್ಯೆ ಗಳು ಸ್ವಲ್ಪ 'ಮುದ' ನೀಡುವುದು ಸಮಾಧಾನಕರವಾದ ಸಂಗತಿ !

೧,೬೬೦ ಸದಸ್ಯರು.
೮೩೧ ಲೇಖನಗಳು
೮೨೧ ಬ್ಲಾಗ್ ಗಳು
೨೯೧ ಚರ್ಚೆಯ ತಂತುಗಳು
೩,೮೪೫ ಪ್ರತಿಕ್ರಿಯೆಗಳು - ಒಳ್ಳೆಯ ಸಾಧನೆ !

ಒಹ್ ! ಉತ್ತಮ ಸಾಧನೆ ! ! ತ್ವರೆ ಬೇಡ- ಆಗಲಿ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೇನೂ ಬಹಳ ಹಳೆಯ ಸದಸ್ಯನಲ್ಲ ಹೀಗೇ ಅಂತ ಹೇಳೋಕೆ! ಆದರೆ ನನ್ನ ಅಭಿಪ್ರಾಯದಲ್ಲಿ ಈ ಸಮಸ್ಯೆ ಕೇವಲ ಸಂಪದದ್ದಲ್ಲ. ಕನ್ನಡದ ಬಗ್ಗೆ ಯಾವುದೇ ಯೋಜನೆ ತೆಗೆದುಕೊಂಡರೂ (ಸಾಹಿತ್ಯ ಇರಬಹುದು, ಸಂಘಟನೆ ಇರಬಹುದು ಇತ್ಯಾದಿ ಇತ್ಯಾದಿ) ಈ ಸಮಸ್ಯೆ ಎದುರಾಗುತ್ತೆ ಅಲ್ಲವೇ?

ಆದರೆ ಎಷ್ಟೇ ಮನಸ್ಸಿದ್ದರೂ ಕೆಲವೊಮ್ಮೆ ದಿನನಿತ್ಯದ "ಬಿಡುವಿರದ ದುಡಿತದಲ್ಲಿ ಹವ್ಯಾಸದ ಬೆಡಗು ಬಲಿಯಾಗಿಬಿಡುತ್ತದೆ" Cry

ನನಗನ್ನಿಸೋದು ಇಷ್ಟೇ. ನಮಗೆ ತೋಚಿದ ರೀತಿ ನಾವು ಬದಲಾವಣೆಯ ಹರಿಕಾರರಾಗೋಣ (agents of change). ಪ್ರತಿಯೊಬ್ಬರೂ ಹೀಗೆ ಯೋಚಿಸಿದಲ್ಲಿ ಎಲ್ಲವೂ ಸರಿಹೋಗಬಹುದು ಅಲ್ವಾ?.

- ಶ್ಯಾಮ್ ಕಿಶೋರ್ (http://manada-maatu.blogspot.com/index.html)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.