ವನಸಿರಿ

4

ರವಿ. ಅನಿಲನ - ಮರಗಳ ಮಧ್ಯದಿಂದ ಇಣುಕುತ್ತಿರುವ ರವಿ - ಚಿತ್ರದ ಬಗ್ಗೆ ಬರೆದದ್ದು.

ಬಂಡೀಪುರದ ಗೊಂಡಾರಣ್ಯದಲಿ
ರವಿಯ ರಂಗಿನಾಟ!
ಕಪ್ಪುಬಿಳುಪಿನ ತೆರೆಯ ಸರಿಸೆ, ಕಾಣುವುದು
ಚಿತ್ರವಿಚಿತ್ರ ಲೋಕ!

ಚರಾಚರ ಪಕ್ಷಿ ಸಂಕುಲಗಳ ಜೊತೆ
ವನ್ಯ ಮೃಗಗಳ ವಾಸ
ಜುಳು ಜುಳು ಹರಿವ ನೀರಿನ ಸೆಲೆ
ಅದರೊಡನಾಡು ನೀ ಬೆಳಕಿನಾಟ!

ನಿರ್ಮಲವಾಗಿರುವ ನೀರಲ್ಲೆಸಯಲಿಲ್ಲ ತಾನೆ
ನೀ ಕಲ್ಲು ಚಪ್ಪಡಿಯನ್ನು.
ಖುಷಿಯ ಕೊಟ್ಟರೂ ಹೆದರಿಸುವುದದು
ಬೆಚ್ಚನೆ ಮಲಗಿರುವ ಮೊಸಳೆಯನ್ನು!

ಜೋಕೆ! ವನ್ಯಸಿರಿ ನಿನ್ನ ಕ್ಯಾಮೆರಾದಲ್ಲಿ
ಸೆರೆಯಿಡಿಯಲಿಕ್ಕೆ ಮಾತ್ರ..
ಕಡಿದು ತಂದೆಯೋ ವನವ ಮಾನವ
ಕಾದಿದೆ ನಿನಗೆ ಶಾಪ!

 --

ಚಿತ್ರ - ಅನಿಲ 

 ನಿಮ್ಮ

ಶಿವು

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅನಿಲರ ಚಿತ್ರ ನಿಮ್ಮ ಕವನ, ಎರಡೂ ಚೆನ್ನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರದಲ್ಲಿ ಕಂಡದ್ದನ್ನ ನಿಮ್ಮ ಮುಂದಿಡಲು ಪ್ರಯತ್ನಿಸಿದ್ದೇನಷ್ಟೆ :)

ನಿಮ್ಮ
ಶಿವು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಿವು ಸಾರ್ ತುಂಬಾ ಚೆನ್ನಾಗಿ ಕವನ ಬರ್ದಿದೀರ.. :) ಸೂಪರ್ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.