ಕನಸುಗಳ ನನಸಾಗಿಸುತ್ತ - ೫ - ಪರೀಕ್ಷೆಗಳ ಅವಾಂತರ

0

ಭಾನುವಾರ ನನ್ನ ಎಂ.ಬಿ.ಎ ಪರೀಕ್ಷೆಯೊಂದಿತ್ತು. ಬೆಳಗ್ಗೆ ಒಂದು ಪೇಪರ್, ಮಧ್ಯಾನ್ಹ ಮತ್ತೊಂದು. ಯಾಕೋ ಅದನ್ನ ಬರೀಲಿಕ್ಕೆ ಸ್ವಲ್ಪ ಮನಸ್ಸಿರಲೇ ಇಲ್ಲ. ಓದ್ಲಿಕ್ಕಾಗಿದ್ದು ಸ್ವಲ್ಪಾನೇ ಬಿಡಿ. ಕೆಲಸ ಮಾಡ್ಕೊಂಡು ಎಕ್ಸಾಮು ಇತ್ಯಾದಿ ಅಂತ ಇಟ್ಟು ಕೊಳ್ಳಲಿಕ್ಕೇ ಆಗಲ್ಲ. ಅದ್ರಲ್ಲೂ ಐ.ಟಿ ಕಂಪನಿಗಳಲ್ಲಿ ನಿಮಗೆ ಫ್ಲೆಕ್ಸಿ ಟೈಮಿಂಗ್ಸ್ ಇದೆ ಅಂತಂದ್ರೆ ನಿಮಗೆ ನಿಮ್ಮದೇ ಆದ ಟೈಮ್ ಇಲ್ಲ ಅಂತ್ಲೆ.

ಪರೀಕ್ಷೆಗೆ ರಜಾ ತಗೋಳೋದನ್ನ ಇತ್ತೀಚೆಗೆ ರೂಡಿಸ್ಕೊಂಡಿದೀನಿ. ಮೊದಲು ಅದೆಲ್ಲ ಆಗ್ತಿರಲಿಲ್ಲ (ಕಾರಣಗಳಿವೆ ;) ಕಂಪನಿ ನಲ್ಲಿ ಸೀನಿಯರ್ ಎಂಪ್ಲಾಯಿ ಆದಷ್ಟು ಈ ತರ ತೊಂದರಗಳು ಸಾಮಾನ್ಯ. ಎಂ.ಎನ್ಸಿ ಅಲ್ಲಪ್ಪಾ ಇನ್ನೂ ಉದಯೋನ್ಮುಕ ಅನ್ನಿಸ್ಕೊಳ್ಳೋ ಲೋ/ಮಿಡ್ ಲೆವೆಲ್ ಕಂಪನಿಗಳಲ್ಲಿ).  ಅದರ ಜೊತೆಗೆ ನನ್ನ ಲೀವ್ ಅಪ್ಲಿಕೇಶನ್ ಅಂದ್ರೆ ನನ್ನ ಬಾಸ್ ಗೆ ತಾತ್ಸಾರ. ಅದು ಅವರ್ಗೆ ಕಾಣಿಸೋದೇ ಇಲ್ಲ. ಅವರ್ನ ಬಿಟ್ರೆ ಅದನ್ನ ನೋಡ್ಲಿಕ್ಕೂ ನಮ್ಮ ಕಂಪನಿನಲ್ಲಿ ಯಾರೋ ಇಲ್ಲ. ಇರಲಿ, ನಾನೇ ರಜಾ ತಗೊಂಡೆ (ಎರಡು ದಿನದ ಬದಲು ಒಂದು ದಿನ :(, ಇನ್ಯಾವ್ದೋ ಕೆಲ್ಸ ಬೇರೆ ಬಂದಿತ್ತು ಶುಕ್ರವಾರ).

ಓದ್ಲಿಕ್ಕೆ ಶುರುಮಾಡಿದ್ದು ಶನಿವಾರ ಬೆಳಗ್ಗೆ ಕೊಂಚ, ಮಧ್ಯಾನ ಎಲ್ಲ ಬಿಡಿ, ಸ್ವಲ್ಪ ಸಿತ್ತಿದ್ದಾಯ್ತು. ಸಂಜೆ ಹರಿ ಮನೆಯಲ್ಲಿ ಓದ್ತಾ ಕುಂತಿದ್ದಾಗ "ನೇಮಿಚಂದ್ರ" ಬಂದಿದ್ರು... (ಸರ್ಪ್ರೈಸ್! ಇದರ ಬಗ್ಗೆ ಇನ್ನೊಂದು ಆರ್ಟಿಕಲ್ ಇದೆ. ಓದಿ ನೋಡಿ.). ಅವರ ಜೊತೆ ಸ್ವಲ್ಪ ಗ್ನು/ಲಿನಕ್ಸ್, ಕಂಪ್ಯೂಟರ್ ಅಂತ ಸ್ವಲ್ಪ ಹೊತ್ತು ಹರಟಿದ್ದಾಯ್ತು. ಅವರ್ಗೆ ನನ್ನ ಎಕ್ಸಾಮ್ ಇರೋದು ಗೊತ್ತಾದಾಗ ಹೋಗಿ ಓದ್ಕೋ ಅಂದ್ರು, ನಾನಾಗ್ಲೇ ಅದನ್ನ ಮಾಡ್ತಿದ್ದಿನಿ ಅಂತ ಕಂಪ್ಯೂಟರ್ ಪರದೆ ತೋರಿಸ್ದೆ. ಅದಕ್ಕೂ ಇದಕ್ಕೂ ಎನ್ಸಂಬಂದ ಅಂತ ಅವರು ಇಣುಕಿ ನೋಡಿದಾಗ ಕಂಡದ್ದು ನನ್ನ ಎಂ.ಬಿ.ಎ ಸಿಲಬಸ್ ಸಿ.ಬಿ.ಟಿ (ಕಂಪ್ಯೂಟರ್ ಬೇಸ್ಡ್ ಟ್ರೈನಿಂಗ್ ಮಟೀರಿಯಲ್). ಸರಿಹೋಯ್ತು ಅಂದ ಅವ್ರು, ತಮ್ಮ ಮಗಳನ್ನ ಎಕ್ಸಾಮ್ ಸಮಯದಲ್ಲಿ ಗದರಿ "ರೋಮ್ಗೆ ಹೋಗಿ ಓದ್ಕೋ" ಅಂತ ಹೇಳ್ತಿದ್ದಿದ್ದನ್ನು ನೆನಪಿಸಿಕೊಂಡರು.. 

ಅವರು ಮನೆಗೆ ಹೊರಟ ನಂತರ ಓದ್ಬೇಕು ಅಂತ  ವಾಪಸ್ ಬಂದ್ರೆ, ಕೆಲಸ ನನಗಾಗಿ ಕಾದಿತ್ತು. ನನ್ನ ಕ್ಲೈಂಟ್ ಒಬ್ಬನ ಸರ್ವರ್ ನಲ್ಲಿ ಸ್ವಲ್ಪ ಪ್ರಾಬ್ಲಂ. ಅದನ್ನ ಆಗ್ಲೇ ಫಾಲೋ ಮಾಡ್ತಿದ್ದೆ. ಆದ್ರೆ ಏನೋ ವರಿ. ಅದು ಸರಿ ಹೋಗೋವರ್ಗು. ಅದಕ್ಕೆ ಅಂತ್ಲೇ ಮುಂದಿನ ೨-೩ ಘಂಟೆ. ಸರಿ ಓದೋದೇನ್ ಬಂತು. ಮನೆಗೆ ಹೋಗಿ ಓದ್ತೀನಿ ಸ್ವಲ್ಪ, ಇವತ್ತು ಇನ್ನೇನು ಓದ್ಲಿಕ್ಕಾಗಲ್ಲ ಅನ್ನೋ ಆಷ್ಟರಲ್ಲಿ ಘಂಟೆ ೧೨:೪೫ ಆಗಿತ್ತು (ಮಧ್ಯರಾತ್ರಿ). ಮನೆಗೆ ಬಂದು ಸ್ವಲ್ಪ ಇದ್ದದ್ದನ್ನ ತಿಂದು ಓದ್ಲಿಕ್ಕೆ ಕುಳಿತೆ, ಯಾವಾಗ ಮಲಗಿದೆನೋ ಗೊತ್ತಿಲ್ಲ. ಎದ್ದಿದ್ದು ಬಳಗ್ಗೆ ೮:೪೫ ಕ್ಕೆ. ೯:೩೦ ಗೆ ಕೋರಮಂಗಲದಲ್ಲಿರ ಬೇಕಾಗಿತ್ತು ಎಕ್ಸಾಮ್ ಬರೀಲಿಕ್ಕೆ. ಪಟ್ ಅಂತ ತಯಾರಾಗಿ ಹೇಗೋ ಸೇರಿದ್ದಾಯ್ತು ಸ್ವಲ್ಪ ಫಾಸ್ಟಾಗೆ ಡ್ರೈವ್ ಮಾಡ್ತೆ ಅಂತನ್ನಿ. 

ಅಲ್ಲಿ ೩೦ ನಿಮ್ಷ ಇರತ್ತೆ ಎಕ್ಸ್ಟ್ರಾ ಟ್ರೈಮು ಎಕ್ಸಾಮ್ ಬರೀಯೋಕ್ ಮುಂಚೆ. ಅಲ್ಲಾದ್ರೂ ಕೂತು ಸ್ವಲ್ಪ ಸಮರಿ ಅದು ಇದು ಓದ್ಕೋ ಬಹುದು. "ಯುದ್ದ ಕಾಲೇ ಶಸ್ತ್ರಾಭ್ಯಾಸಂ"  ಅಂತಾರಲ್ಲ ಹಾಗೆ. ಅದನ್ನೂ ಮಾಡ್ಲಿಲ್ಲ. ಹೋಗಿ ಕೂತೆ. 

ಎಕ್ಸಾಮ್ ಸಬ್ಜೆಕ್ಟ್ ಅಂದ್ರಾ? "ಆರ್ಗನೈಸೇಷನಲ್ ಬಿಹೇವಿಯರ್" (Organizational Behavior)

ಹ್ಹ ಹ್ಹ ಹ್ಹ.. ಕೆಲವು ಸಲ ಎಕ್ಸಾಮ್ಗಳು ನನಗೆ ನಗೋ ಹಂಗೆ ಮಾಡ್ತಾವೆ. ಯಾವತ್ತೂ ನಾನು ಎಕ್ಸಾಮ್ ಅಂತ ಅಷ್ಟು ತಲೆ ಕೆಡಿಸ್ಕೊಂಡಿದ್ದೇ ಇಲ್ಲ. ಹೈಸ್ಕೂಲ್ ವರ್ಗೂ ಅಂತ ಚಾಲೆಂಜ್ ಬಂದಿರಲಿಲ್ಲ. ಪಿ.ಯು ಅಂತ ಬಂದಾಗ್ಲೇ ಇಂಗ್ಲೀಷ ಮೀಡಿಯಮ್ಗೆ ಸೇರಿದಾಗ ಅಲ್ಲಿನ ಹುಡುಗರ ದಿಮಾಕಿನಿಂದಾಗ ನೋಟ್ಸ್ ಇತ್ಯಾದಿ ಸಿಗದೆ ಸ್ವಲ್ಪ ತೊಂದರೆ ಆದದ್ದಿದ್ದೆ (ನನಗೆ ಆರೋಗ್ಯ ಸರಿ ಇಲ್ಲದೆ ಇದ್ದಾಗಿನ ನೋಟ್ಸ್ ಅಷ್ಟೆ. ಅದೂ ಕಾಲೇಜ್ ಶುರುವಾಗೋ ಹೊಸತರಲ್ಲಿ). ಆಗ ಎಕ್ಸಾಮ್ ಅಂದ್ರೆ ತಲೆ ನೋವು. ಓದ್ಲಿಕ್ಕೆ ಬೇಕಿದ್ದ ಪುಸ್ತಕಗಳು ಸಿಗ್ತಿರಲಿಲ್ಲ, ಇಲ್ಲ ಹೇಳಿದ್ ನಲ್ಲ ಈ ಹುಡುಗರ "attitude". ಎನಿ ವೇ. ಅವರ ಅಹಂ ಮುರೀಲಿಕ್ಕೆ ೬ ತಿಂಗಳು ಬೇಕಾಯ್ತು. ಅವರ ನೋಟ್ಸ್ ಇಲ್ಲದೆ ಫಸ್ಟ ಕ್ಲಾಸ್ ಬರೋವರ್ಗು ಸ್ವಲ್ಪ ಕಷ್ಟ ಆಯ್ತು. ಆಮೇಲೆ ನನಗೆ ಅವರ ಸಹಾಯ ಏನೋ ಬೇಕಾಗಿರ್ಲಿಲ್ಲ. ಎಲ್ಲ ಕ್ಲಾಸೂ ಅಟೆಂಡ್ ಮಾಡ್ತಿದ್ರಿಂದ ನೋಟ್ಸ್ ಜೊತೆ, ಅಲ್ಲೇ ಕೆಲ ಮಟ್ಟಿಗೆ ವಿಷಯಗಳು ತಲೇಲಿ ರೆಜಿಸ್ಟರ್ ಆಗ್ಬಿಡ್ತಿದ್ವು ಬಿಡಿ. ಮುಂದೆ ಎಕ್ಸಾಮ್ ಬರೆಯೋದು ಸುಲಭ ಆಯ್ತು.

ಪಿ.ಯು ಮುಗಿದ್ಮೇಲೆ ಬರೀ ಕಂಪ್ಯೂಟರ್ ವಿಷಯಗಳನ್ನ ಮಾತ್ರ ಓದಬೇಕು  ಅಂತಿದ್ದ ನನಗೆ ಅಲ್ಲಿ ಎಲ್ಲ ಪ್ರಾಕ್ಟಿಕಲ್ ಆಗಿದ್ರಿಂದ ಎಕ್ಸಾಮ್ ಬರೆಯೋದು ಸರ್ಟಿಫಿಕೇಶನ್ಗಳನ್ನು ಮುಗಿಸೋದು ಕಷ್ಟ ಅನ್ನಿಸ್ಲೇ ಇಲ್ಲ. ಆದ್ರೆ...

ಈ ಎಂ.ಬಿ.ಎ ಇದೆಯಲ್ಲ. ಇದರ ಎಕ್ಸಾಮ್ ಗಳು ಸ್ವಲ್ಪ ಓಲ್ಡ್ ಫ್ಯಾಶನ್ ನವು ಅನ್ನಿಸ್ತವೆ. ಹೇಳ್ಬೇಕು ಅಂದ್ರೆ ಅದರಿಂದಾನೇ ಸ್ವಲ್ಪ ಇಂಟರೆಸ್ಟ್ ಕೂಡ ಕಳ್ಕೊಂಡ್ ಬಿಟ್ಟಿದ್ದೇನೆ.ಕಳೆದ ಪರೀಕ್ಷೆಯಲ್ಲಿ ಕೇಳಿದ ಕೆಲ ಪ್ರಶ್ನೆಗಳು ಯಾವುದಕ್ಕೂ ಸಂಭಂದವೇ ಇಲ್ಲದವು. ಪ್ರಾಕ್ಟಿಕಲ್ ಆಗಿ ವಿಷಯಗಳನ್ನ ನೋಡಿ ಅಳೆಯುವ ನನಗೆ ಈ ಪ್ರಶ್ನೆಗಳು ಬೇಕೆ ಇರಲಿಲ್ಲ ಅನ್ನಿಸ್ತು. ನನಗೆ ಆ ಪ್ರಶ್ನೆಗಳಿಗೆ ಉತ್ತರಿಸಲಿಕ್ಕೆ ಕಷ್ಟ ಆಗ್ಲಿಲ್ಲ, ಆದ್ರೆ ಇಂಟರ್ನೆಟ್, ಐ.ಟಿ, ಕಂಪ್ಯೂಟರ್ ಅನ್ನೋದನ್ನೇ ನೋಡ್ದಿರೋ ಎಂ.ಬಿ.ಎ ಕ್ಯಾಂಡಿಡೆಟ್ ಗಳ ಬಗ್ಗೆ ಚಿಂತೆ ಆಯ್ತು. ಅವರಿಗೆ ಡೆಲ್ ಯಾವ ರೀತಿಯ ಚಾಟ್ ಅಪ್ಲಿಕೇಶನ್ ಉಪಯೋಗಿಸುತ್ತೆ ಅಂತ ಹೇಗೆ ಗೊತ್ತಿರಬೇಕು. ಕೆಲ ಕಂಪನಿಗಳ ಹೆಸರನ್ನೇ ನಾವು ಕೇಳಿರೋದಿಲ್ಲ. ಅದನ್ನ ಕೇಳಿರ್ಬೇಕು ಅಂತ(ಪುಸ್ತಕದಲ್ಲೂ ಕೊಡದಂತಹವು)ಯಾಕೆ ಪೋರ್ಸ್ ಮಾಡ್ಬೇಕು? ಇತ್ಯಾದಿ ಪ್ರಶ್ನೆಗಳು ನನ್ನ ತಲೇಲಿ.

ನನ್ನ ಕೆಲ ಕೆಲಸಗಳು ಮ್ಯಾನೇಜರಿಯಲ್ ಆಗಿರೋದ್ರಿಂದ ಎಂ.ಬಿ.ಎ ಗೆ ಓದಿ ಅದರ ಪರಿಕ್ಷೆಯ  ಪ್ರಶ್ನೆಗಳನ್ನು ಅರ್ಥ ಮಾಡ್ಕೊಳ್ಳಿಕ್ಕೆ ಕಷ್ಟ ಏನೂ ಆಗ್ತಿಲ್ಲ. ಯಾಕಂದ್ರೆ ಓದಿದ್ದುನ್ನೆಲ್ಲ ನನ್ನ ವರ್ಕ್ ಎನ್ವಿರಾನ್ಮೆಂಟ್ ಗೆ ಅಪ್ಲೈಮಾಡಿಯೋ,ಇಲ್ಲ ಕಂಪೇರ್ ಮಾಡಿಯೋ ನೋಡೋದ್ರಿಂದ ಸುಲಭವಾಗಿ ಸಬ್ಜೆಕ್ಟ್ ಗಳು ಅರ್ಥ ಆಗ್ತವೆ. ಪ್ರಾಕ್ಟಿಕಲ್ ಆಗಿ ವಿಷಯಗಳನ್ನು ನೋಡಿದಾಗ ಅವು  ಸುಲಭವಾಗಿ ಅರ್ಥ ಆಗುತ್ವೆ.

ಎಕ್ಸಾಮ್ ಇದ್ದದ್ದು "ಆಬ್ಜೆಕ್ಟೀವ್ ಟೈಪ್" ಅಂದ್ರೆ ೫ ಉತ್ತರದಲ್ಲಿ ಒಂದನ್ನ ಸರಿ ಅಂತ ಬರೆದು ಬರೋದು. ಡೈಸ್ ತಗೊಂಡೋಗಿ ಬರೆದು ಬರಬಹುದು ಅಂದ್ರಾ? ಸೂಪರ್ ನೀವು. ನನಗೆ ಅದನ್ನ ಮಾಡ್ಲಿಕ್ಕೆ, ಅಥವಾ ಇನ್ನೂ ಮಾಡಿ ಅಭ್ಯಾಸ ಇಲ್ಲ. ಮುಂದೊಮ್ಮೆ ಟ್ರೈ ಮಾಡ್ತೇನೆ. ಇಂತ ಎಕ್ಸಾಮ್ ಗೆ ಓದೋದ್ ಬೇರೆ ಬೇಕಾ ಅನ್ಬೋದೇನೋ ನೀವು (ಹರಿ ಕಾಲೆಳದದ್ದೂ ಹೀಗೇನೆ ;))..

ಉತ್ತರ ಹ್ಯಾಗೆ ಬರೆದೆನೋ ರಿಸಲ್ಟ್ ಬಂದ್ಮೇಲೆ ಗೊತ್ತಾಗತ್ತೆ. ಈಗ ನನಗೆ ಗೊತ್ತಿರೋದು ಇಷ್ಟೆ. ಆಲ್ಲಿ ಅವರು ಕೊಟ್ಟ ಪ್ರಶ್ನೆಗಳಂತೂ ಅರ್ಥ ಆದ್ವು. ಎಕ್ಸಾಮ್ ಮುಗಿದ ಮರು ಕ್ಷಣದಿಂದ ಮಾತಾಡ್ಲಿಕ್ಕೆ ಶುರುಮಾಡಿದ್ದು ಬರೀ "Organizational Behavior"  ಸುತ್ತ ಮುತ್ತ..

ಮುಂದಿನವಾರ ಮತ್ತೆರಡು ಎಕ್ಸಾಮ್ (ಹೌದು ಒಂದೇ ದಿನದಲ್ಲಿ ಬೆಳಗ್ಗೆ ಒಂದು, ಮಧ್ಯಾನ್ಹ ಒಂದು).. ಓದ್ಲಿಕ್ಕೆ ಈಗ್ಲೇ ಶುರು ಮಾಡ್ಬೇಕು ಇಲಾಂದ್ರೆ ಸ್ವಲ್ಪ ಕಷ್ಟ ಆಗಬಹುದು. "ಬಿಸನೆಸ್ ಎಕನಾಮಿಕ್ಸ್"  -- ನಂಬರ್ಗಳು ನನಗೆ ತಲೆ ಕೆಡಿಸ್ತವೆ. ಕೆಲವು ಸಲ!

ನನ್ನ ಎಕ್ಸಾಮ್ ಅವಾಂತರ ಇಲ್ಲಿಗೇ ಮುಗೀಲಿಲ್ಲ. ಕನಸುಗಳ ನನಸಾಗಿಸುತ್ತ ಹೇಳ್ತಾ ಹೇಳ್ತಾ ಇನ್ನೂ ಕೆಲ ವಿಷಯಗಳನ್ನ ಬರೀತೀನಿ.

ಪರೀಕ್ಷೆಗಳು ಅಂದ್ರೆ ನಿಮಗಿಷ್ಟಾನಾ?.. ಬರೆದು ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

>>ಪರೀಕ್ಷೆಗಳು ಅಂದ್ರೆ ನಿಮಗಿಷ್ಟಾನಾ?
(ವಿದ್ಯಾರ್ಥಿಗಳಿಗೆ) ಪರೀಕ್ಷೆ ಅಂದರೆ ನನಗೆ ಕಷ್ಟ- ಉತ್ತರ ಪತ್ರಿಕೆ ತಿದ್ದಬೇಕಲ್ಲ! :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತೊಂದರೆ ತೆಗೆದುಕೊಳ್ಳದೇ ತೂಕ ನೋಡಿ ಅಂಕ ಹಾಕಿ!! :P

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ! :) ಅದಕ್ಕೊಂದು ಪರಿಹಾರವಿದೆ... ಮೂಡಲ್ ಬಳಸಿ (Moodle) ಎಕ್ಸಾಮ್ ಎಲ್ಲ ಆನ್ಲೈನ್ ಮಾಡ್ಬಿಡಿ. ವಿಧ್ಯಾರ್ಥಿಗಳಿಗೂ ತಕ್ಷಣ ರಿಸಲ್ಟ್ ಸಿಕ್ಬಿಡತ್ತೆ.

ನನಗೆ ಪರೀಕ್ಷೆಗಳನ್ನ ರೆಡಿ ಮಾಡ್ಬೇಕು ಅಂದ್ರೆ ತುಂಬಾ ಇಷ್ಟ. ;) ಪ್ರಶ್ನೆಗಳನ್ನ ತಿರುವಿ ಕೇಳೋದು ಸಿಸ್ಟಂ ಅಡ್ಮಿನ್ಗಳಿಗೆ ಎಲ್ಲಿಲ್ಲದ ಖುಷಿ ಕೇಳತ್ತೆ. ಇಂಟರ್ವ್ಯೂ ಮಾಡ್ಬೇಕಾದ್ರಂತೂ ನಮ್ಮ ಪ್ರಶ್ನೆಗಳು ಕೆಲವು ಭಾರಿ ಘಟಾನುಘಟಿಗಳನ್ನೂ ಇಕ್ಕಟ್ಟಿಗೆ ಸಿಲಿಕಿಸೋದಿದೆ.

ಈಗ ಹೊಸ Evaluation process ತಯಾರು ಮಾಡ್ತಿದ್ದೇನೆ ಕಂಪೆನಿಗೆ, ಪ್ರತಿದಿನ ನನ್ನ ಎಕ್ಸಾಮ್ ನೆನಪಾಗತ್ತೆ. ಹೊಸ ಪ್ರಶ್ನೆಗಳನ್ನು ಬರೀಬೇಕಾದಾಗ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಪಿ.ಯು ಅಂತ ಬಂದಾಗ್ಲೇ ಇಂಗ್ಲೀಷ ಮೀಡಿಯಮ್ಗೆ ಸೇರಿದಾಗ ಅಲ್ಲಿನ ಹುಡುಗರ ದಿಮಾಕಿನಿಂದಾಗ ನೋಟ್ಸ್ ಇತ್ಯಾದಿ ಸಿಗದೆ ಸ್ವಲ್ಪ ತೊಂದರೆ ಆದದ್ದಿದ್ದೆ ........ ಆಗ ಎಕ್ಸಾಮ್ ಅಂದ್ರೆ ತಲೆ ನೋವು. ಓದ್ಲಿಕ್ಕೆ ಬೇಕಿದ್ದ ಪುಸ್ತಕಗಳು ಸಿಗ್ತಿರಲಿಲ್ಲ, ಇಲ್ಲ ಹೇಳಿದ್ ನಲ್ಲ ಈ ಹುಡುಗರ "attitude" [/quote]

ಈ ಅನುಭವ ನನಗೂ ಆಗಿದೆ! ಆಗ ನೋಟ್ಸ್ ಕೊಡ್ತಿಯ, ಬರಕೊಂಡು ವಾಪಸ್ ಕೊಟ್ಬಿಡ್ತಿನಿ ಅಂತ ಕೇಳಕ್ಕೂ ಬರದು ಇಂಗ್ಲಿಷ್ನಲ್ಲಿ, ಈಗ ಬೆಳಗಾದ್ರೆ ರಾತ್ರಿ ಮಲಗೋವರೆಗೂ (೩ ವರ್ಷದ ಚಟಾಕಿನ ಜೊತೇನೂ) ಬರೀ ಅಮೆರಿಕನಿಂಗ್ಲಿಷ್ನಲ್ಲೇ ವಟವಟ :D ಇಷ್ಟ್ ಇಂಗ್ಲಿಷ್ ಆಗ ಬಂದಿದ್ದಿದ್ರೆ?!

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹು! ಏನಾದ್ರೂ ತಪ್ಪಾಗಿ Pranounce ಮಾಡಿದ್ರಂತೂ ಮುಗಿದೇ ಹೊಯ್ತು! ನಗೋರು ಹುಚ್ಚರ ತರಾ.. (ಹುಡ್ಗೀರೂ ಸೇರ್ಕಂಡು ;)) ಸರಿ ಮಾಡೋ ಗೋಜಿಗಂತೂ ಯಾರೂ ಹೋಗ್ತಿರಲಿಲ್ಲ. ಅವರ ಬೇಳೆಕಾಳು ಆಮೇಲ್ ಗೊತ್ತಾಯ್ತ್ ಬಿಡಿ...

ಇಷ್ಟಾದ್ರೂ ಇಂಗ್ಲೀಷ್ ಆಗ ಬಂದಿದ್ರೆ... ;) ವಾವ್! ಸ್ವಲ್ಪ ಯೋಚನೆ ಮಾಡ್ಬೇಕು, ಯಾರ್ ಯಾರನ್ನ ಯಾವ್ ತರ ವಿಚಾರಿಸ್ಕೋ ಬಹುದಿತ್ತು ಅಂತ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಪರೀಕ್ಷೆಗೆ, ೫ ನಿಮಿಷವಿರುವಾಗ ಹೋಗುತ್ತಿದ್ದೆ. ಇಲ್ಲವಾದರೆ ಸ್ನೇಹಿತರು ಅದು ಬರುತ್ತೇನೊ, ಇದು ಬರುತ್ತೇನೊ ಅಂತ ಹೆದರಿಸುತ್ತಿದ್ದರು. ಕೆಲವರು ಔಟ್ ಆಫ್ ಸಿಲ್ಲಬಸ್ ಪ್ರಶ್ನೆಗಳನ್ನು ಕೇಳಿ ದಂಗುಬಡಿಸುತ್ತಿದ್ದರು (ಹೆದರಿಸಲೆಂದೆ ಕೇಳುತ್ತಿದ್ದರು) :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರೀಕ್ಷೆ ಅ೦ದ್ರೆ ನ೦ಗ೦ತೂ ತು೦ಬಾ ಇಷ್ಟ, ನನ್ನ ನೆನಪಿನ ಶಕ್ತಿ ಟೆಸ್ಟ್ ಮಾಡ್ಕೋಳೋಕೆ! ನಿಮಗೂ ಗೊತ್ತು, ಪರೀಕ್ಷೆಗೆ ಓದೋದೇ ಬೇರೆ, ತಿಳ್ಕೊಳೋಕೆ ಓದೋದೇ ಬೇರೆ!
ಈಗ ಬಹುತೇಕ ಎಲ್ಲ ಪರೀಕ್ಷೆಗಳು objective type ಆಗಿರೋದು, ಇನ್ನ ಸುಲಭ ಆಗೋಯ್ತು ಕೆಲಸ. ಅದರಲ್ಲೂ OB ಅಂಥ ವಿಷಯಗಳು ಸ್ವಲ್ಪ ಥಿಯರಿ + ಕಾಮನ್ ಸೆನ್ಸ್ = ಸುಲಭ. ಆದ್ರೆ ಬಿಸಿನೆಸ್ ಲಾ (ಬರೀ ಥಿಯರಿ), ಎಕನಾಮಿಕ್ಸ್ (ಫುಲ್ ಪ್ರಾಕ್ಟಿಸ್) ಆ ಥರ ಇರಲ್ಲ ಶಿವು ಅವರೇ, ರಜ ಹಾಕಿ ಓದ್ಕೋಳಿ. All the Best.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಿವು
ಪರೀಕ್ಷೆ ಅಂದ್ರೆ ನಂಗೆ ತಲೆ ನೋವು
ಒಂದು ಹಂತಕ್ಕೆ ಬಂದಮೇಲೆ ಪರೀಕ್ಷೆ ಅಂದ್ರೆ ಅದೇ ಪೇಪರ್ ನಲ್ಲಿ ಬರೆಯೋ ಹಾಗಿರಬಾರದು . ಎಲ್ಲವನ್ನೂ ಸಿಸ್ಟಮ್ ನಲ್ಲಿ ಟೈಪ್ ಮಾಡೋ ಹಾಗೆ ಇರಬೇಕು
ಇದನ್ನ ಯಾಕೆ ಹೇಳ್ತಾ ಇದ್ದೀನಿ ಅಂದ್ರೆ ನನ್ನಾ ಬರವಣಿಗೆ(ಹ್ಯಾಂಡರೈಟಿಂಗ್) ಚೂರು ಚೆನ್ನಾಗಿಲ್ಲ. ನಾನೇನೆ ಬರೀಲಿ ಮೌಲ್ಯಮಾಪಕರಿಗೆ ಅರ್ಥಾನೆ ಆಗಲ್ಲ ಅನ್ಸುತ್ತೆ.
ಅದಕ್ಕೆ ಹಾಗೆ ಹೇಳಿದ್ದು
ಎನಿ ಹೌ ಇನ್ನುಳಿದ ಪರೀಕ್ಷೇನೂ ಚೆನ್ನಾಗಿ ಮಾಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರೀಕ್ಷೆಗಳಂದರೆ ನನಗಲರ್ಜಿ...
ನಿಮಗೆ ಶುಭ ಹಾರೈಕೆಗಳು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರೀಕ್ಷೆಗಳಲ್ಲಿ ನಂಗಿಷ್ಟ್ವಾಗಿದ್ದದ್ದು ಕ್ಲಾಸ್ XII ನದ್ದು. ಫಿಸಿಕ್ಸಿಗಂತೂ ಸಿಕ್ಕಾಬಟ್ಟೆ ಮಜಾ ಬಂದಿಟ್ಟು. ಓದಿದ್ದು ಸೀಬಿಯೆಸ್ಸೀಲಿ, ಅಲ್ಲಿನ್ಪರೀಕ್ಷೇಲಿ ಒಳ್ಳೇ ಪ್ರಶ್ನೆಗಳ್ನ ಕೇಳೋರು. :)

ಬಿ ಇ ಗೆ ಸೇರಿದ್ದಾಗ ಮೊದ್ಲ್ನೇ ಸೆಮಿಸ್ಟರ್ಪರೀಕ್ಷೇಗೇ ಹೆಚ್ಚೂಕಡ್ಮೆ ವಿಟೀಯು ಹಣೆಬರಾ ಗೊತ್ತಾದ್ಹಾಗಾಯ್ತು ... ಆಮೇಲಿಂದಾ ಎಲ್ಲಾನು ಬರೀ ರೋದ್ನೆ, ಸೆಮಿಸ್ಟ್ರಿಗೊಂದ್ಸಾರಿ ಕಾಟಾಚಾರದ್ಪರೀಕ್ಷೆ ಅನ್ನೋ ಆಚರಣೆ ಆಗೋಯ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.