ಹಕ್ಕಿಯು ಹಾರಿದೆ ನೋಡಿದಿರಾ?

0

ದೂರ ಆಗಸದಲ್ಲಿ ಹಾರುತ್ತಿರೋ ಈ ಹಕ್ಕಿಗಳನ್ನ ಕಂಡರೆ ನಿಮಗೆ ಏನನ್ನಿಸ್ತದೆ ಅಂತ ಹೇಳ್ತೀರಾ?

 ಸಂಪದದ ಬಾನಂಗಳದಲ್ಲಿ ಹಾರುತ್ತ ಹಾರುತ್ತಾ, ನಾನೂ ೨ ವರ್ಷ ಕಳೆದದ್ದಾಯಿತು. 

ಸಿಕ್ಕ ಅನೇಕ ಜೊತೆಗಾರರೊಂದಿಗೆ ಬೆರೆತು, ನನ್ನಂತೆ ಯೋಚಿಸುವ ಅನೇಕರ ಒಡನಾಟದೊಂದಿಗೆ ಹೊಸ ವಿಷಯಗಳತ್ತ, ಹೊಸ ದಿಗಂತಗಳತ್ತ ದಿಟ್ಟ ಹೆಜ್ಜೆಯನ್ನೂ ಇಟ್ಟದ್ದಾಯಿತು. ನನ್ನ ಚಿಂತನೆಗೆ, ಬರವಣಿಗೆಗೆ, ನಾನೂ ಮಾಡಬಹುದು ಅಂದುಕೊಂಡ ಕೆಲಸಗಳಿಗೆ ವೇದಿಕೆಯನ್ನ ಒದಗಿಸಿಕೊಟ್ಟ ಸಂಪದದ "ಹರಿ"ಕಾರರಿಗೆ ನನ್ನ ವಂದನೆಗಳು :). 

"ಲಿನಕ್ಸಾಯಣ", "ಕನಸುಗಳ ನನಸಾಗಿಸುತ್ತಾ" ಲೇಖನ ಸರಣಿಗಳು ೩ನೇ ವರ್ಷದಲ್ಲಿ ಇನ್ನೂ ಹೆಚ್ಚಿನ ರಂಗನ್ನ ಸಂಪದಕ್ಕೆ ಒದಗಿಸಲಿಕ್ಕೆ ಸಿದ್ದವಾಗ್ತಿವೆ.  

ನಿಮ್ಮ

ಶಿವು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಶಿವಪ್ರಕಾಶ್ ರವರೇ,

ನೀವು ಕಹಳೆಯಲ್ಲೂ ಕೂಡ ಇದ್ದೀರ ಅಲ್ವ.

ಮೊದಲನೆಯ ಚಿತ್ರ ನೋಡಿ ನನಗೆ ಹಳೆ ಕನ್ನಡ ಹಾಡು ನೆನಪಿಗೆ ಬಂತು "ಹಾರುತ ದೂರ ದೂರ ಮೇಲೇರುವ".
ದೂರ ಹಾರುವ ಹಕ್ಕಿಯ ಹಿಡಿಯಬಲ್ಲರೆ
ಇರಬೇಕು ಹಕ್ಕಿಯಂತೆ ನಾವು ಇದ್ದರೆ

ಇನ್ನು ನೀವು ಎರಡು ವರ್ಷ ಸಂಪದದಲ್ಲಿ ಕಳೆದಿದ್ದೀರ. ನಿಮ್ಮೆಲ್ಲ ಲೇಖನ ಇನ್ನು ಹೆಚ್ಚಲಿ ಎಂದು ಆಶಿಸುವೆ.

ಕಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ನೀವು ಕಹಳೆಯಲ್ಲೂ ಕೂಡ ಇದ್ದೀರ ಅಲ್ವ.

ಹೌದು, ಕಹಳೆಯಲ್ಲಿ ಬಹಳ ವರ್ಷಗಳಿಂದಿದ್ದೇನೆ.

>> ಮೊದಲನೆಯ ಚಿತ್ರ ನೋಡಿ ನನಗೆ ಹಳೆ ಕನ್ನಡ ಹಾಡು ನೆನಪಿಗೆ ಬಂತು "ಹಾರುತ ದೂರ ದೂರ ಮೇಲೇರುವ".
>> ದೂರ ಹಾರುವ ಹಕ್ಕಿಯ ಹಿಡಿಯಬಲ್ಲರೆ
>> ಇರಬೇಕು ಹಕ್ಕಿಯಂತೆ ನಾವು ಇದ್ದರೆ

ಸ್ವಚ್ಚಂದ ಹಾರಟ ಮಾಡಬಹುದಿತ್ತು :)

>>ಇನ್ನು ನೀವು ಎರಡು ವರ್ಷ ಸಂಪದದಲ್ಲಿ ಕಳೆದಿದ್ದೀರ. ನಿಮ್ಮೆಲ್ಲ ಲೇಖನ ಇನ್ನು ಹೆಚ್ಚಲಿ ಎಂದು ಆಶಿಸುವೆ.

ಧನ್ಯವಾದಗಳು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಗೂ ಆ ಹಕ್ಕಿಯಂತೆ ಹಾರುವ ಅವಕಾಶವಿರಬಾರದಿತ್ತಾ ಅನ್ನಿಸಿತು ಶಿವು..... ಈ ಜಗತ್ತನ್ನೆಲ್ಲ ಒಮ್ಮೆ ಸುತ್ತಿ ನೋಡಬಹುದಿತ್ತಲ್ಲಾ ಅನ್ನಿಸಿತು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನುಷ್ಯ ಹಕ್ಕಿಯಂತೆ ಹಾರಬಲ್ಲ, ನೀರಿನಂತೆ ಈಜ ಬಲ್ಲ. ಯಾರೋ ೧೦ - ೧೫ ಸಾವಿರಗಳಿಗೆ ಗ್ಲೈಡರ್ ಗಳನ್ನು ಕೊಳ್ಳೋದು ಸಾಧ್ಯ, ಬೆಂಗಳೂರಿನಲ್ಲೇ ಅಂದಾಂಗಿತ್ತು. ವಿಚಾರಿಸಿ ತಿಳಿಸ್ತೇನೆ ;) ನೋಡುವ ನಾವೂ ಹಾರಲಿಕ್ಕೆ ಸಾಧ್ಯವಾ ಅಂತ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಿವು,
ಈ ಹಕ್ಕಿಗಳ ಗುಂಪನ್ನು ಭಾನುವಾರ ತುಮಕೂರಿನಂದ ಬರುವಾಗ ಸೆರೆಹಿಡಿದಿದ್ದಲ್ವಾ?

ತಲೆಬರಹ ಓದಿ,
"ಹಕ್ಕಿಯು ಹಾರುತಿದೆ,
ದೂರಕೆ ಹಕ್ಕಿಯು ಹಾರುತಿದೆ... "
ಹಾಡು ನೆನಪಾಯ್ತು. (ಯಾವ ಚಿತ್ರ ಅಂತ ನೆನಪಿಲ್ಲ)

>>ಸಂಪದದ ಬಾನಂಗಳದಲ್ಲಿ ಹಾರುತ್ತ ಹಾರುತ್ತಾ, ನಾನೂ ೨ ವರ್ಷ ಕಳೆದದ್ದಾಯಿತು.
ಎರಡನೆಯ ವಾರ್ಷಿಕೋತ್ಸವಕ್ಕೆ ಅಭಿನಂದನೆಗಳು. :)

-ಅನಿಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಅನಿಲ. ಅವತ್ತು ಇನ್ಯಾವ್ದೋ ಹಾಡು ಬಾಯಲ್ಲಿ ಬಂತು. youtube ಚೆಕ್ ಮಾಡ್ತೀನಿ.

ನನಗೂ ಚಿತ್ರದ ಹೆಸರು ನೆನಪಿಗೆ ಬರ್ತಿಲ್ಲ.

ಅಣ್ಣಾವ್ರಿದಾರೆ ಅದ್ರಲ್ಲಿ.

>>ಎರಡನೆಯ ವಾರ್ಷಿಕೋತ್ಸವಕ್ಕೆ ಅಭಿನಂದನೆಗಳು. Smiling

ಧನ್ಯವಾದ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಗಳು ಸೊಗಸಾಗಿವೆ ... ಅಭಿನಂದನೆಗಳು

ಅಂದ ಹಾಗೆ ಆ ಚಿತ್ರ "ಭೂಪತಿ ರಂಗ" ... ಬರೀ ಹೆಸರು ಹೇಳಿದರೆ ಸಾಲದು ಅಂತ ಹಾಡಿನ ವಿಡಿಯೋ ಕೊಂಡಿಯನ್ನೂ ಕಳಿಸಿದ್ದೇನೆ ... ಆನಂದಿಸಿ

http://www.musicplug.in/songs.php?movieid=4381

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕೊಂಡಿಯನ್ನು ಹಂಚಿಕೊಂಡಿದ್ದಕ್ಕೆ:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಿವು
ಹಾರುತ ದೂರಾ ದೂರಾ ..ಸಂಪದ ಆಗಲಿ ಎತ್ತರೆತ್ತರ..ಎಲ್ಲರೂ ಸೇರಿ ಸಂಪದವನ್ನು ಇನ್ನೂ ಸಂಪದ್ಧ್ಬರಿತವಾಗಿ ಮಾಡೋಣ.
ಭೂಷಣ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ :) ಮಾಡ್ಬೇಕಾದದ್ದಿನ್ನೂ ಬಹಳಿದೆ. ಸರಿ ದಾರಿಯ ಕಂಡು, ಸರಿಯಾದ ದಿಕ್ಕಿನೆಡೆ ಸಾಗಲಿ ನಮ್ಮ ಪಯಣ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಸರ್‍,
ಹೆಂಗಿದ್ದೀರಾ?
ಆ ಹಕ್ಕಿ ನೋಡಿದ ಮೇಲೆ.. ಅವುಕ್ಕ ದಿಕ್ಕು ಹೆಂಗ ಗೊತ್ತಾಗುತ್ತ ಅಂತ ವಿಚಾರ ಮಾಡಾಕಹತ್ತಿದ್ಯಾ..

ಒಲುಮೆಯಿಂದ,
ಗಿರೀಶ ರಾಜನಾಳ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಹೆಂಗಿದ್ದೀರಾ?

ಚೆನ್ನಾಗಿದ್ದೀನ್ರಿ. ನೀವ್ ಹ್ಯಾಂಗದೀರಿ?

>> ಆ ಹಕ್ಕಿ ನೋಡಿದ ಮೇಲೆ.. ಅವುಕ್ಕ ದಿಕ್ಕು ಹೆಂಗ ಗೊತ್ತಾಗುತ್ತ ಅಂತ ವಿಚಾರ ಮಾಡಾಕಹತ್ತಿದ್ಯಾ..

ಹ್ಮಾ, ನಾವು ಬೆಂಗಳೂರ್ ಕಡೆ ಹೊಂಟಿದ್ವಿ. ಅವೆಲ್ಲೋ ಬಾಂಬೆ ಕಡೆ ಮುಖ ಮಾಡಿದ್ವು ನೋಡಿ ಮತ್ತ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿರ್ಬಂಧನೆಗಳಿಲ್ಲ ಎಳ್ಳಷ್ಟೂ ನಮ್ಮ ಹಾರಾಟಕೆ
ಇಷ್ಟದಂತೆ ಹಾರಬಹುದು ಆಕಾಶದ ಉದ್ದಗಲಕೆ

ಆದರೂ ನಾವು ನೋಡಿ ಶಿಸ್ತಿನ ಸಿಪಾಯಿಗಳು
ನಿಗದಿತ ಗುಂಪಿನಲೇ ಹಾರುವ ಬಂಧುಗಳು

ನಮಗೆಲ್ಲಿದೆ ಹೇಳಿ ಶಿಸ್ತಿಲ್ಲದೆ ಬದುಕುವ ಭಾಗ್ಯ
ಶಿಸ್ತಿಲ್ಲದ ಜೀವನ ನಿಜದಿ ಮಾನವನ ಸೌಭಾಗ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬಾ, ಶಿಸ್ತಿನ ಸಿಪಾಯಿಗಳ ಬಗ್ಗೆ, ಹಕ್ಕಿಗಳ ಬದುಕಿನ ಸೌಭಾಗ್ಯದ ಬಗ್ಗೆ ಸುಂದರವಾಗಿ ಕವನವನ್ನ ಬರೆದಿದ್ದೀರಿ :)

ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಂಶಿವಪ್ರಕಾಶ್‌, ನಿಮ್ಮ ಲೇಖನದ ಫೊಟೊಗಳನ್ನು ನೋಡಿದಾಗ ಕುವೆಂಪು ಬರೆದ ’ದೇವರು ರುಜು ಮಾಡಿದನು’ ಸಾಲು ನೆನಪಾಯಿತು. ಹಾರುವ ಹಕ್ಕಿಗಳ ಸಾಲನ್ನು, ಆಕಾಶದಲ್ಲಿ ದೇವರು ಮಾಡಿದ ಸಹಿ ಎಂದು ಬಣ್ಣಿಸಿದ್ದಾರೆ ಕುವೆಂಪು. ಎಷ್ಟೊಂದು ಅದ್ಭುತ ಕಲ್ಪನೆ ಅಲ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾ! ಅದ್ಭುತ. ಶಾಲೆಯಲ್ಲಿ ಕನ್ನಡ ಮಾಸ್ತರರು ಅದರ ಬಗ್ಗೆ ಹೇಳ್ತಿದ್ದಿದ್ದೆಲ್ಲಾ ನೆನಪಿಗೆ ಬಂತು ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.