ಇತಿಹಾಸದಲ್ಲೇ ಮೊದಲ ಲಿನಕ್ಸ್ ಪ್ರತಿಮೆ ರಷ್ಯಾದಲ್ಲಿ

5

Tyumen ಲಿನಕ್ಸ್ ಬಳೆಕೆದಾರರ ಸಮುದಾಯ ಲಿನಕ್ಸ್ ನ ಲಾಂಛನ ಪೆಂಗ್ವಿನ್ (Tux) ಇರುವ ಲಿನಕ್ಸ್ ಪ್ರತಿಮೆಯನ್ನು ಅನಾವರಣಗೊಳಿಸಿದೆ. ಈ ಯೋಜನೆಯನ್ನು ಬೆಂಬಲಿಸಿ, ಉಡುಗೆ ನೀಡಿದ್ದು Tyunet ಹೋಸ್ಟಿಂಗ್ ಉದ್ಯಮದ CEO, Sergey V Mikhailov. ಈ ಪ್ರತಿಮೆಯಲ್ಲಿ ಟಕ್ಸ್ ಹದ್ದಿನ ರೆಕ್ಕೆಗಳಿಂದ ಅಲಂಕೃತಗೊಂಡಿದ್ದು, ಲಿನಕ್ಸ್ ನ ಶಕ್ತಿ ಮತ್ತು ಅಪರಿಮಿತ ಸಾಧ್ಯತೆಗಳನ್ನು ಬಿಂಬಿಸುತ್ತದೆ.

ಪೆಂಗ್ವಿನ್ ಹಾರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದು ಯಾರು? ಇಲ್ಲಿದೆ ನೋಡಿ ಉದಾಹರಣೆ! ಪ್ರಕೃತಿ ಅಮ್ಮನಿಂದ ಪಡೆಯದಿದ್ದರೂ, ತನ್ನದೇ ಸ್ವಂತ ರೆಕ್ಕೆಗಳಿಂದ ಈ ಸಣ್ಣ ಹಕ್ಕಿ ಹಾರಿ ತೋರಿಸಿದೆ. ಲಿನಕ್ಸ್ ಅನ್ನು ಇನ್ನೂ ಪ್ರಖ್ಯಾತಗೊಳಿಸಲು ತಾವು ಈ ಯೋಜನೆಗೆ ಕೈ ಹಾಕಿದ್ದಾಗಿ ಸೆರ್ರ್ಜಿ ಹೇಳುತ್ತಾರೆ.

ಸಧ್ಯಕ್ಕೆ ಇದು ವಿಶ್ವದಲ್ಲೇ ಮೊದಲ ಲಿನಕ್ಸ್ ಪ್ರತಿಮೆ.

ಸುದ್ದಿ ಮೂಲ : http://www.tumix.ru/info/news/?news=12058736c ,

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪೆಂಗ್ವಿನ್‌ಗೆ ಹದ್ದಿನ ರೆಕ್ಕೆಯನ್ನು ಕಲ್ಪಿಸಿಕೊಳ್ಳುವುದೇ ವಿಚಿತ್ರ ಅನ್ಸುತ್ತೆ! :-) ಚೆನ್ನಾಗಿದೆ ಪ್ರತಿಮೆಯ ಬಗ್ಗೆ ಮಾಹಿತಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.