ನಿನಗಾಗಿ...

0

ಮನಸ್ಸಲ್ಲಿ ಮನಸನಿಟ್ಟು,
ನನ್ನೆದೆಯಲ್ಲಿ ಅಳಿಸಲಾಗದ ಹೆಜ್ಜೆಗುರುತನಿಟ್ಟು
ಎನ್ನೆದೆಯ ಬಡಿತದಲಿ ಅವಳ ಹೆಸರನಿಟ್ಟು
ಮುಗುಳುನಗೆ ನಕ್ಕು ಹೋದವಳು...

ಉರಿಬಿಸಿಲಲಿ ತಂಪನಿಟ್ಟು
ತುಂತುರುಮಳೆಯಲಿ ಪುಳಕವನಿಟ್ಟು
ಮೌನದಲ್ಲೇ ಮಾತನಾಡಿಸಿ ಸಂತಸವ ಕೊಟ್ಟು
ಮತ್ತೆ ಬರುವೆನೆಂದು ಹೇಳಿದವಳು...

ಬೆಳದಿಂಗಳ ರಾತ್ರಿಯಲಿ
ತಾರೆಗಳ ಸಂತೆಯಲಿ
ಚೆಂದಿರನ ನಾಚಿಸುತ್ತಾ
ಬೆಳಕಚೆಲ್ಲಿಬಂದವಳು...

ನೆತ್ತಿಸುಡುವ ಸೂರ್ಯಕಿರಣಗಳ ನಡುವೆ
ದಾಹತುಂಬಿದ ದಾರಿಯಲ್ಲಿ
ತಂಪು ನೆರಳಾಗಿ ಬಂದು
ಅಮೃತ ಸಿಂಚನವನ್ನೆರೆದವಳು...

ಹೊಂಗನಸಿನಲ್ಲಿ ಬಂದು
ಬೆಚ್ಚನೆಯ ಅಪ್ಪುಗೆಯ ಕೊಟ್ಟು
ಸಿಹಿ ಮುತ್ತನಿಟ್ಟವಳು
ನೀ ಹೋದದ್ದಾದರೂ ಎಲ್ಲಿಗೆ ???

ನಿನ್ನ ಅಪ್ಪುಗೆಗಾಗಿ ಕಾದಿರುವ ನನ್ನ ಬಾಹುಗಳು
ನಿನ್ನ ಕೂಗಿ ಕರೆದಿದೆ,
ಬಳಿ ಬಂದು ಒಮ್ಮೆ ಆ ಕಿರುನಗೆಯ ಬೀರು...
ನಿನ್ನ ಕಣ್ಣ ಅಂಚಿನಲಿ ಮಾತನಾಡು...

ನಿಶ್ಯಬ್ಧತುಂಬಿರುವ ಈ ಬಾಳಿನಲಿ
ಸವಿನುಡಿಗಳ ತೋರಣವ ಕಟ್ಟಿ
ಬಾಳಹಾದಿಯಲಿ ಜೊತೆಗೂಡಿ ಸಾಗಲು
ಕನಸಿನಿಂದ ನನಸಾಗಿ ಬಾ...

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಶಾಂತರೇ ಉತ್ತಮ ಕವನ ಅನಿಸಿಕೆಗಳು ಮೊದಲು ಅವಳಿಗಾಗಿ ಇದ್ದುದು ನಂತರ ನಿನಗಾಗಿ ಎಂದಿದೆ ತಲೆಬರಹ "ನಿನಗಾಗಿ" ಎಂದಿದ್ದರೆ ಸೂಕ್ತವಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಗೋಪೀನಾಥರೇ, ತಲೆಬರಹವನ್ನ ಬದಲಾಯಿಸಿದ್ದೇನೆ :) ಕವನ ಮೆಚ್ಚಿದ್ದಕ್ಕಾಗಿ ನನ್ನಿ :) ವಂದನೆಗಳೊಂದಿಗೆ, ಪ್ರಶಾಂತ ಜಿ ಉರಾಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮಣ್ಣಾ..., ವಿರಹ ಜೋರಾಗಿಯೇ ಇದೆ! ಎಲ್ಲ ಸರಿ; ಯಾರವಳು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮಣ್ಣಾ ???? (ತಮ್ಮನೋ ಅಥವಾ ಅಣ್ಣನೋ ಗೊಂದಲವಾಗ್ತಾ ಇದೆ...) ಅದಿರ್ಲಿ :) ಆಕೆನ ಕೆಲ ಸಾಲುಗಳಲ್ಲಿ ವಿವರಿಸೊಕೆ ಕಷ್ಟ, ಆದ್ರೂ ಪ್ರಯತ್ನ ಪಡ್ತೀನಿ... ಅವಳು ನನ್ನವಳು ಬಲು ಚೆಂದದವಳು ಮೋಹಕ ನಗೆ ಬೀರಿ ಸಂತಸವ ತಂದವಳು ಮಧುರ ಮಾತನು ನುಡಿದು ನೋವ ಮರೆಸಿದವಳು ಹೃದಯ ಬಡಿತದಿ ಬೆರೆತು ಉಸಿರಾಗಿ ನಿಂದವಳು ಮುಗ್ದ ಮನಸಿನ ಚಲುವೆ, ಈಕೆ ನನ್ನವಳು ಎನ್ನೆಡೆಗೆ ಪ್ರೀತಿಯ ಧಾರೆ ಹರಿಸಿದವಳು ನನ್ನ ಬಾಳ ಪಯಣದ ಸಹ ಪಯಣಿಗಳು ಬಾಳಬಂಡಿಯ ನೊಗವ ಹೊತ್ತು ಜೊತೆ ಸಾಗುವವಳು :) ವಂದನೆಗಳೊಂದಿಗೆ, ಪ್ರಶಾಂತ ಜಿ ಉರಾಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಮೆಚ್ಚಿದ್ದಕ್ಕೆ ನನ್ನಿ :) -ಪ್ರಶಾಂತ ಜಿ ಉರಾಳ

ಪಚ್ಚು, ಭಾರೀ ದಿನಗಳ ನ೦ತರ ನಿಮ್ಮ ಮುದ್ದಾದ ಕವನವೊ೦ದು ನನ್ನ ಮನಸೆಳೆಯಿತು. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಮೆಚ್ಚಿದ್ದಕ್ಕೆ ನನ್ನಿ :) -ಪ್ರಶಾಂತ ಜಿ ಉರಾಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಚ್ಚು, ಭಾರಿ ದಿನಗಳ ನ೦ತರ ನಿಮ್ಮ ಮುದ್ದಾದ ಕವನವೊ೦ದು ನನ್ನ ಮನಸೆಳೆಯಿತು. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಲು ಬೇಗ ನಿಮ್ಮೀ ಕನಸು ನನಸಾಗಲಿ ಕನಸಿನ ಕನ್ಯೆ ಬಾಳಲ್ಲಿ ಜೊತೆಯಾಗಲಿ - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಮೆಚ್ಚಿದ್ದಕ್ಕೆ ನನ್ನಿ :) -ಪ್ರಶಾಂತ ಜಿ ಉರಾಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಕಲಾಗಿದ್ದುದನ್ನು ತೆಗೆಯಲಾಗಿದೆ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.