ಮುಂದೇನಾಗಬಹುದು ???

0

ಉಸ್ಸಪ್ಪಾಪ್ಪಾಪ್ಪಾ !!!!

ಎಷ್ಟು ಕೆಲಸ ಇತ್ತು ಗೊತ್ತಾ, ಅದರ ಮಧ್ಯ Customer calls ಬೇರೆ !!!

ಯಾಕೋ ಈ ನಡುವೆ ನನ್ಗೆ ಸರಿಯಾಗಿ ಟೈಮ್ ಸಿಕ್ತಾನೇ ಇಲ್ಲ. ಆ ತೊಂದರೆ ಇಂದ ನನ್ನ friends ನ meetಕೂಡಾ ಮಾಡೋಕೆ ಅಗ್ತಾ ಇಲ್ಲ. ಹೀಗೇ ಯೋಚನೆ ಮಾಡ್ತಾ ಇರೋವಾಗ ನನ್ಗನ್ನಿಸ್ತು... ನಾಳೆದಿನ ನಮ್ಗೇನಾದ್ರೂ ಹೆಚ್ಚು ಕಮ್ಮಿ ಆಗಿ ನಾವು ಪರಲೋಕಕ್ಕೆ ಪ್ರಯಾಣ ಬೆಳೆಸಿದ್ರೆ ನಮ್ಮ ಬಗ್ಗೆ ನಮ್ಮ ಗೆಳೆಯರು ಏನಂತ ಮಾತಾಡ್ಕೋಬಹುದು ??? ಕೆಲವರಿಗೆ ಅಯ್ಯೋ ಪಾಪಾ ಅಂತ ಅನ್ನಿಸ್ಬಹುದು, ಮತ್ತೆ ಕೆಲವರ ಓಹೋ ಹೌದಾ ??? ಹೇಗಾಯ್ತಂತೆ ???? ಯಾವಾಗಾ ???? ಅಂತ ರಾಗ ತೆಗೆದು ತಮಗಿಲ್ಲದ ಕಾಳಜಿ ತೋರಿಸಬಹುದು, ಮತ್ತೆ ಕೆಲವರಿಗೆ ನಮ್ಮ ಉಳಿವು, ಅಳಿವಿನ ಸುಳಿವೇ ಇಲ್ಲದೇ ಹೋಗಬಹುದು... ಸುಮಾರು ದಿನಗಳ ನಂತರ ನನ್ನ ಮೊಬೈಲಿನಲ್ಲಿ Store ಆಗಿರುವ ಅವರ ನಂಬರಿನಿಂದ call ಬಂದು ಮೊಬೈಲ್ ರಿಂಗಣಿಸಬಹುದು, ಆನಂತರ ಆ ಕಡೆ ಇರುವ ವ್ಯಕ್ತಿ, ಛೇ !!! ನಂಗೆ ವಿಷ್ಯ ಗೊತ್ತೇ ಇರ್ಲಿಲ್ಲ.... ಅಂತ ಅನ್ನ ಬಹುದು. ಮತ್ತೆ ಕೆಲವರು ನಿಜವಾಗಿಯೂ ದುಃಖ ಪಡಬಹುದು...

ಇನ್ನು ನಮ್ಮ ಕುಟುಂಬದವರಲ್ಲಿ ದುಃಖ ಮಡುಗಟ್ಟಿರಬಹುದು.... ತದ ನಂತರ ನೆಂಟರಿಷ್ಟರಲ್ಲಿ ಕೆಲವರು ಮೊಸಳೇ ಕಣ್ಣೀರು ಇಡುತ್ತಾ Phone ಮಾಡಿ ದುಃಖದಲ್ಲಿರಿವವರನ್ನು ಮತ್ತಷ್ಟು ಅಳುವಂತೆ ಮಾಡಿ ತಾವೂ ದುಃಖಿತರಾಗಿದ್ದೀವಿ ಅಂತ ತೋರ್ಪಡಿಸಬಹುದು... ಕೆಲವರಿಗೆ ನೊಂದವರನ್ನು ಸಮಾಧಾನ ಪಡಿಸಲು ಬಾರದಿದ್ದರೂ, ಮತ್ತಷ್ಟು ಅಳಿಸಿ ಮರೆಯಲೆತ್ನಿಸುತ್ತಿದ್ದ ನೋವನ್ನ ಮತ್ತೆ ಕೆದಕಿ ತಿಳಿಗೊಳ್ಳುತ್ತಿರುವ ಮನವನ್ನ ಕದಡಿ ರಾಡಿ ಎಬ್ಬಿಸಿ ಹೋಗುತ್ತಾರೆ.

ನಮ್ಮ ಬ್ಯಾಂಕಿನ ಅಕೌಂಟುಗಳಲ್ಲಿ ಕೆಲವುದರ ಬಗ್ಗೆ ಮನೆಯವರಿಗೆ ತಿಳಿದಿದ್ದು ಸುಖಾಂತ್ಯ ಪಡೆಯಬಹುದು, ಮತ್ತೆ ಕೆಲವು ಸದ್ದಿಲ್ಲದೇ ಸತ್ತುಹೋಗಬಹುದು... ನಾವು ಉಪಯೋಗಿಸುತ್ತಿದ್ದ ವಸ್ತುಗಳು ಪರರ ಪಾಲಾಗಬಹುದು... ನಮ್ಮ ಬ್ಲಾಗು, ಈ-ಮೈಲ್ ಐಡಿ ಗಳು, ಅದರಲ್ಲಿ ಇರಬಹುದಾದ ವಿಷಯಗಳು ಎಲ್ಲಾ ಯಾರಕೈಗೂ ಸಿಗದೇ ಮುಂದೊಂದುದಿನ ಸರ್ವರ್ ಇಂದ ತೆಗೆಯಲ್ಪಡುತ್ತದೆ. ಇದೆಲ್ಲಾ ಆಗುವುದಂತೂ ಸತ್ಯ. ಏನಾದರೇನು ? ಅದನ್ನೆಲ್ಲಾ ನೋಡುವುದಕ್ಕೆ ನಾವೇ ಅಲ್ಲಿ ಇರುವುದಿಲ್ಲ ಅಲ್ವಾ ??? ಸುಮ್ಮನೇ ಯೋಚನೆ ಏತಕ್ಕೆ ಮಾಡಿ ತಲೆ ಕೆಡಿಸಿ ಇವತ್ತಿನ ದಿನವನ್ನ ಯಾಕೆ ಹಾಳುಮಾಡಿಕೊಳ್ಳುವುದು.... ಅಲ್ವಾ !!!

ಮತ್ತೆ ನೀವು ಈಗ ಕೇಳ್ತೀರಿ, ಯಾಕೆ ಅಷ್ಟೆಲ್ಲಾ ಹೇಳಿದ್ದು, ಬರೆದಿದ್ದು ಅಂತ.... ಸುಮ್ನೆ ಯಾಕೋ ತಲೇಲಿ ಯೋಚ್ನೆ ಬಂತು, ನಿಮ್ಮಲ್ಲಿ ಬೇರೆ ಯಾರಿಗಾದ್ರೂ ಇದೇ ಯೋಚ್ನೆ ಬಂದಿರ್ಬಹುದು, ಆದ್ರೆ ಅದ್ನ ಹೇಳಿರೋದಿಲ್ಲ ಅಷ್ಟೆ.

ಓಟ್ಟಿನಲ್ಲಿ ಎಲ್ಲಾ ಒಳ್ಳೇದಾಗ್ಲಿ ಅಂತ ಮಾತ್ರ ಹಾರೈಸಬಹುದು....

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನನಗೂ ಒಂದಿನ ರಾತ್ರಿ ಮಲಗುವಾಗ ಇದೇ ರೀತಿ ಯೊಚನೆ ಬಂತು... ಅಕಸ್ಮಾತ್ ನಾನೇನಾದ್ರು ಬೆಳಗಾಗುವಷ್ಟ್ರಲ್ಲಿ ಪ್ರಾಣ ಬಿಟ್ಟಿದ್ರೆ, ನನ್ನ ವಸ್ತುಗಳು ಏನ್ ಆಗ್ ಬಹುದು ಅಂತೆಲ್ಲಾ... ನನ್ನ ಅಪ್ಪ ಅಮ್ಮ ಅಳೋದನ್ನು ನೆನೆಸಿಕೊಳೋಕೆ ಆಗದೆ ಮಲ್ಕೊ ಬಿಟ್ಟೆ... ಬೆಳಿಗ್ಗೆ ಎದ್ದು ತುಂಬಾ ಕುಷಿ ಆಯ್ತು ಇನ್ನೂ ಜೀವಂತವಾಗಿದ್ದೇನೆ ಅಂತ... ಸಂತೋಷದಿಂದ ನನ್ನ ಸ್ನೇಹಿತೆಯ ಮದುವೆಗೆ ಹೋಗಲು ತಯಾರಾದೆ.:)

ಆದ್ರೆ ಇದೆಲ್ಲಾ ನಮ್ಮ ಯೋಚನೆ ಅಷ್ಟೆ.. ದೇವರ ಇಚ್ಚೆನೇ ಬೇರೆಯಾಗಿರುತ್ತೆ ಅಲ್ವಾ..??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ನೀತಾ ಅವರಿಗೆ,

ಹೌದು, ಇದೆಲ್ಲಾ ನಮ್ಮ ಮನದ ಭಾವನೆಗಳು, ಆದರೆ ನಾನು ಬರೆದಿರೋ ರೀತಿ ಜನ ಇದ್ದೇ ಇರ್ತಾರೆ. ಇದು ನಾನು ನನ್ನ ಕಣ್ಣಿನಿಂದ ಕಂಡು ಅರಿತುಕೊಂಡ ಸತ್ಯಗಳು. ಇದೇ ಜನವರಿಯಂದು ನಮ್ಮ ತಂದೆ ದೈವಾಧೀನರಾದರು. ಆಗ ನಮ್ಮನ್ನ ನೋಡಿ ಮಾತನಾಡಿಸಲು ಬಂದವರ ವರ್ತನೆಯ ಬಗ್ಗೆ ನಾನು ಇಲ್ಲಿ ಬರೆದಿದ್ದೇನೆ.

ದೇವರು ನಡೆಸಿದಂತೆಯೇ ಎಲ್ಲಾ ನಡೆವುದು... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.