ನನ್ನ ಗೆಳತಿ-೨

0

ಸದಾ ನಗು ನಗುತ್ತಿದ್ದ ನನ್ನ ಗೆಳತಿ ಅಂದು ಬೇಸರದಿಂದ ಮಾತನಾಡುತ್ತಿದ್ದಳು. ಅವಳ ಕಣ್ಣೀರು ಧರೆಗಿಳಿಯುತ್ತಿದ್ದವು. ನಾನು ಅವಳನ್ನು ಕಂಡಿಲ್ಲದಿದ್ದರೂ ನಾನವಳ ಏದುರಿನಲ್ಲೇ ನಿಂತು ಅವಳನ್ನ ಸಾಧಾನಿಸುತ್ತಿರುವಂತೆ ಅನಿಸುತ್ತುತ್ತು.

ನಾನವಳನ್ನ ಕರೆಯುತ್ತಿದ್ದದ್ದೇ ಹಸನ್ಮುಖಿ ಅಂತ. ಆದರೆ ಅಂದು ಅವಳ ಮಂದಹಾಸ, ಲವಲವಿಕೆ ಎಲ್ಲಾ ಮಾಯವಾಗಿತ್ತು. ನೊಂದ ಮನಸ್ಸಿಗೆ ಸಮಾಧಾನ ಹೇಳುವ ಕಲೆಯೂ ನನಗೆ ಕರಗತವಾಗಿರಲಿಲ್ಲ, ಆದರೂ ನನ್ನ ಕೈಲಾದ ಪ್ರಯತ್ನ ಮಾಡೇ ಬಿಡಬೇಕೆಂದುಕೊಂಡೆ. ತನ್ನಲ್ಲಿರುವ ದುಃಖವನ್ನ ಯಾರಾದರೂ ಏತಕ್ಕಾಗಿ ಹಂಚಿಕೊಳ್ಳುತ್ತಾರೆ ? ಸ್ವಲ್ಪವಾದರೂ ಸಮಾಧಾನದ ಮಾತುಗಳನ್ನು ಕೇಳುವುದಕ್ಕಾಗಿ ತಾನೇ ?

ಅಂದು ನಾನು ಕೂಡಾ ನೊಂದಿದ್ದೆ. ನನ್ನ ಅಪ್ಪನ ಅಗಲಿಕೆ ಅಂದು ನನ್ನನ್ನು ಬಹಳವಾಗೇ ಕಾಡುತ್ತಿತ್ತು. ಆದರೂ ಯಾವುದನ್ನೂ ಅವಳಿಗೆ ತಿಳಿಯದಹಾಗೆ ಅವಳನ್ನು ಮಾತನಾಡಿಸಿದ್ದೆ. ಕಾರಣವಿಲ್ಲದೇ ಆಕೆಯ ಪ್ರೇಮಿ ಆಕೆಯನ್ನು ಮರೆತುಬಿಡು ಎಂದದ್ದೇ ಆಕೆಯ ದುಃಖಕ್ಕೆ ಕಾರಣವಾಗಿತ್ತು. ಇನ್ನೂ ಒಬ್ಬರನ್ನೊಬ್ಬರು ಭೇಟಿಕೂಡಾ ಮಾಡಿರಲಿಲ್ಲ, ಕೇವಲ ಆರ್ಕುಟ್ಟಿನ ಮೂಲಕ ಬೆಳೆದ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಆ ಯುವಪ್ರೇಮಿಗಳು ಮುಂದಿನ ದಿನಗಳ ಕನಸನ್ನು ಹೆಣೆಯತೊಡಗಿದ್ದರು. ಇದ್ದಕ್ಕಿದ್ದಂತೆ ಆತನಿಗೆ ಏನಾಯಿತೋ !!! ಅವಳಿಂದ ದೂರ ಹೋಗಲು ಪ್ರಯತ್ನಿಸುತ್ತಿದ್ದ. ಕಾರಣ ಏನೆಂದು ತಿಳಿಯದು... ನಾನಾದರೂ ಕೇಳೋಣವೆಂದರೆ ನಾನು ಅವರಿಬ್ಬರ ಮಧ್ಯ ಮೂರನೆಯವನಾಗುತ್ತೇನೆ, ಅದೂ ಅಲ್ಲದೇ ನಾನು ಆತನಿಗೆ ಅಪರಿಚಿತ.

ಇನ್ನು ನಾನು ಹೋಗಿ ಸಂಧಾನಕಾರ್ಯಕ್ಕೆ ಕೈ ಹಾಕಿದರೆ ಮೊದಲೇ ಕಾರಣವಿಲ್ಲದೇ ದೂರ ಹೊಗಲೆತ್ನಿಸುತ್ತಿದ್ದ ಆತನಿಗೆ ಮತ್ತೊಂದು ಕಾರಣ ಕೊಟ್ಟಂತಾಗುತ್ತದೆಂದು ನಾನು ಆಕೆಗೆ ನನಗೆ ತಿಳಿದಮಟ್ಟಿಗೆ ಧೈರ್ಯ ಹೇಳಿದೆ. ಆದರೂ ಬಿಕ್ಕುತ್ತಲೇ ಆಕೆ ತನ್ನನ್ನು ತಾನು ಸಮಾಧಾನಪಡಿಸಲೆತ್ನಿಸಿದ ಯತ್ನಗಳೆಲ್ಲವೂ ವಿಫಲವಾಯಿತು. ಐದುನಿಮಿಷಗಳ ಮೌನದ ನಂತನ ನಾನು ಮಾತನಾಡಿದೆ. "ನೋಡು, ನೀನು ಏನೂ ತಪ್ಪು ಮಾಡಿಲ್ಲ ಅಂತ ನಿನ್ಗೆ ಗೊತ್ತಲ್ವ ? ಮತ್ತೆ ನಿನ್ನ ಅವ್ನು ಸುಮ್ ಸುಮ್ನೆ ದೂರ ಹೋಗು ಅಂತಾ ಇದಾನೆ ಅಂದ್ರೆ ಅದು ನಿನ್ನ ಒಳ್ಳೇದಕ್ಕೇ ಅಂದ್ಕೊ, ಒಂದುವೇಳೆ ಮದುವೆ ಎಲ್ಲಾ ಆಗಿ ಹೀಗೆ ಮಾಡಿದ್ರೆ ನಿನ್ ಗತಿ ಏನಾಗೋದು ಅಂತ ಯೋಚ್ನೆ ಮಾಡು. ನಿನ್ನ ಅಷ್ಟು ಇಷ್ಟಾಪಡ್ತಾ ಇದ್ದ ಹುಡುಗ ಈ ರೀತಿ ಇದ್ದಕ್ಕಿದ್ದಹಾಗೆ ದೂರಾ ಹೋಗು ಅಂತಾ ಇದಾನೆ ಅಂದ್ರೆ ಏನೋ ಪ್ರಬಲವಾದ ಕಾರಣ ಇರ್ಲೇಬೇಕು, ನಿನ್ನ ಒಳಿತಿಗಾಗಿ ಹೀಗೆ ಮಾಡ್ತಾ ಇರ್ಬಹುದು. ಧೈರ್ಯ ತಂದ್ಕೊ.... ಸಮಾಧಾನ ಮಾಡ್ಕೊ, ನೀನು ಹೀಗೆಲ್ಲಾ ಅಳ್ತಾ ಕೂತ್ರೆ ಮನೆನಲ್ಲಿ ನಿನ್ನ ಸಾಕಿ ಬೆಳೆಸಿದ ಅಪ್ಪ, ಅಮ್ಮ ಕೂಡಾ ನೊಂದ್ಕೊತಾರೆ, ಅವ್ರಿಗೆ ನೋವು ಕೊಡ್ಬೇಡಾ... ನಿನ್ನ ಅವ್ರೆಲ್ಲಾ ತುಂಬಾ ಪ್ರೀತಿ ಮಾಡ್ತಾರೆ ಅಲ್ವಾ" ನಾನು ನನಗೆ ತೋಚಿದ್ದ ರೀತಿ ಅವಳಿಗೆ ಸಮಾಧಾನ ಮಾಡತೊಡಗಿದೆ.

ನಂತರ ನಾನು ನನ್ನದೇ ಮಾತಿನ ಶೈಲಿಯಿಂದ ಆಕೆಯ ಮೊಗದಲ್ಲಿ ತುಸು ಮಂದಹಾಸ ಬರಿಸಿದೆ. ಏನೋ ಒಂದುರೀತಿಯ ಸಮಾಧಾನ !!! :)

ತೀರಾ ವೇದನೆಗೊಳಗಾದ ಮನಸ್ಸಿಗೆ ಒಬ್ಬ ಸ್ನೇಹಿತನಾಗಿ ನಾ ಆಡಿದ ಆ ನಾಲ್ಕು ಮಾತುಗಳು ಬಹುಶಃ ಆಕೆಯ ಗಾಯಗಳಿಗೆ ಲೇಪನವನ್ನ ಹಚ್ಚಿತೇನೋ ಎಂಬ ಅನಿಸಿಕೆ ನನ್ನದು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.