ಆಮಂತ್ರಣ

0

ಭಾವಾಂತರಂಗದ ಅಲೆಗಳ ನಡುವೆ

ಬಾಳಿನ ಪಯಣದಿ ಒಂಟಿ ಸಾಗುತ್ತಿದ್ದೆ

ಮನದ ಭಾವನಗಳನರಿತು ಜೊತೆಗೂಡಿ

ನಡೆಯಲು "ಪ್ರಭಾ" ಎನ್ನೊಡನೆ ಬರಲಿದ್ದಾಳೆ

ಗುರು ಹಿರಿಯರ ಆಶೀರ್ವಾದದೊಂದಿಗೆ

ಮಂಗಳಕಾರ್ಯ ನೆರವೇರಲಿದೆ

ಕಷ್ಟವೋ, ಸುಖವೋ ಎಲ್ಲವೂ ಜೊತೆ ಜೊತೆಯಲಿ

ಪರಸ್ಪರ ಅರಿತು ಬಾಳನೌಕೆಯನೇರಿ ಸಾಗಲಿದ್ದೇವೆ 

ಸಿಹಿ ಕಹಿಗಳ ಬುತ್ತಿಯ ಹೊತ್ತು

ನನಗೊಂದುತುತ್ತು, ಅವಳಿಗೊಂದು ತುತ್ತು 

ಜೀವನದಿ ಸಮಪಾಲು ಅಕ್ಕರೆಯ ಸಿರಿಬಾಳು 

ಬಾಳನೌಕೆಯಿದು ತೇಲಿಸಾಗಲಿ

ನಿಮ್ಮೆಲ್ಲರ ಹಾರೈಕೆ ನಮ್ಮದಾಗಲಿ

ವಂದನೆಗಳೊಂದಿಗೆ,

ಪ್ರಶಾಂತ ಜಿ ಉರಾಳ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಪಚ್ಚು,ನಿಮ್ಮ ಮು೦ದಿನ ಸಾ೦ಸಾರಿಕ ಜೀವನ ಮಧುರವಾಗಿರಲಿ ಎ೦ಬ ಹಾರೈಕೆ ನನ್ನದು. ನಿಮ್ಮ “ ಪ್ರಭಾ“ ನಿಮ್ಮ ಬಾಳಲ್ಲಿ ಸ೦ಪೂರ್ಣ “ಪ್ರಭೆ“ಯನ್ನು ಬೀರಲೆ೦ಬ ಶುಭಕಾಮನೆಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ನಿಮ್ಮ ಹಾರೈಕೆಗೆ ವಂದನೆಗಳು :) ವಂದನೆಗಳೊಂದಿಗೆ, ಪ್ರಶಾಂತ ಜಿ ಉರಾಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಶಾಂತ್ ಪ್ರಭಾರಿಗೆ ಶುಭಾಶಯಗಳು. ನಿಮ್ಮ ಮುಂದಿನ ಸಾಂಸಾರಿಕ ಜೀವನ ಸುಖಮಯವಾಗಿರಲೆಂದು ಹಾರೈಕೆ. ಅಂಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂಬಿಕಾ ನಿಮ್ಮ ಶುಭಹಾರೈಕೆಗೆ ವಂದನೆಗಳು :) ವಂದನೆಗಳೊಂದಿಗೆ, ಪ್ರಶಾಂತ ಜಿ ಉರಾಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವಾ೦ತರ೦ಗದ "ಪ್ರಶಾ೦ತ" ಅಲೆಗಳ ನಡುವೆ ಬಾಳಿನ ಪಯಣದಿ "ಪ್ರಶಾ೦ತ"ವಾಗಿ ಒ೦ಟಿ ಸಾಗುತ್ತಿದ್ದ ನಿಮ್ಮ ಮನದ "ಪ್ರಶಾ೦ತ" ಭಾವನೆಗಳನ್ನರಿತು ನಿಮ್ಮ ಜೀವನದಿ "ಪ್ರಶಾ೦ತ"ವಾಗಿ ಸಾಗಿ ಬರಲು ಜೊತೆಗೂಡುತ್ತಿರುವ "ಪ್ರಭಾ" ಹಾಗೂ ನೀವು ಕಷ್ಟವೋ ಸುಖವೋ ಎಲ್ಲವನೂ ಜೊತೆ ಜೊತೆಯಲಿ "ಪ್ರಶಾ೦ತ"ವಾಗಿ ಅರಿತು ಆ ಅರಿವಿನ "ಪ್ರಶಾ೦ತ ಪ್ರಭೆ"ಯಲ್ಲಿ ನಿಮ್ಮ ಬಾಳ ನೌಕೆ ಬಹು ದೂರ ಸಾಗಲಿ "ಪ್ರಶಾ೦ತ:ವಾಗಿ, ಆ ದಿವ್ಯ "ಪ್ರಭೆ" ನಿಮ್ಮ ಬಾಳನ್ನು ಬೆಳಗಲಿ ಎ೦ದು ಮನಃಪೂರ್ವಕ ಹಾರೈಕೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಮಂಜು ಅವರಿಗೆ ವಂದನೆಗಳು. ನನ್ನ ಸಾಲುಗಳ ನಡುವೆ ನಾನೇ ಹುದುಗಿದ್ದೆ ಎಂದು ತೋರಿಸಿ ಕೊಟ್ಟಿದ್ದೀರ (:
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮೆಲ್ಲರ ಹಾರೈಕೆ ನಿಮಗೆ ಇದ್ದೇ ಇದೆ. ನಿಮಗೆ ಶುಭವಾಗಲಿ. ಪ್ರಶಾಂತ್ ಮತ್ತು ಪ್ರಭಾ ಬಾಳನೌಕೆಯನ್ನು ಎಲ್ಲಿ ಮತ್ತು ಯಾವಾಗ ಏರಲಿದ್ದಾರೆ ಎಂಬುದು ಆಮಂತ್ರಣದಲ್ಲಿ ಕಾಣ್ತಿಲ್ವಲ್ಲೋ ಪಚ್ಚೂ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಊಟ ಕರ್ಚಾಗ್ಬಹುದು ಅಂತ ಮದುವೆ ಎಲ್ಲಿ ಮತ್ತು ಯಾವಾಗ ಅಂತ ಹಾಕಿಲ್ಲ ಅನ್ಸುತ್ತೆ :~) !!! ನನ್ನ ಹಾರೈಕೆಯೂ ಇದೆ. ಜ್ಞಾನ, ಮೈಸೂರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪು ತಪ್ಪು (: ಆಮಂತ್ರಣ ದಲ್ಲಿ ಪೂರ್ಣ ವಿವರ ಇದೆ. http://sampada.net/b... ದಯವಿಟ್ಟೂ ಒಮ್ಮೆ ಪರಿಶೀಲಿಸಿ. ಹಾರೈಕೆಗೆ ಧನ್ಯವಾದಗಳು (:
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾನಿ ಅಕ್ಕಾ... ನಿಮ್ಮ ಹಾರೈಕೆಗೆ ವಂದನೆಗಳು :) ಮೊದಲೇ ಸಂಪದಿಗರನ್ನ ಆಮಂತ್ರಿಸಿದ್ದೆ (http://sampada.net/b...) ಆದರೆ ಹೆಚ್ಚಾಗಿ ಯಾರ ಗಮನಕ್ಕೂ ಬರಲಿಲ್ಲವೆಂದು ಅನಿಸಿ ಮತ್ತೊಮ್ಮೆ ಆಮಂತ್ರಿಸಿದೆ. (: ವಂದನೆಗಳೊಂದಿಗೆ, ಪ್ರಶಾಂತ ಜಿ ಉರಾಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ರಾಮಾ, ಬೇಸರದ ಮುಖ ಯಾಕೆ? ಸುಮ್ನೆ ತಮಾಷೆಗೆ ಹೇಳಿದೆ ಅಷ್ಟೆ. ಮದ್ವೆಗೆ ಖಂಡಿತ ಬರ್ತೇನೆ ಅಂತ ಹೇಳೋದು ಅಪ್ಪಟ ಸುಳ್ಳಾಗುತ್ತೆ. ಯಶಸ್ವೀ ದಾಂಪತ್ಯಕ್ಕೆ ಮುಂಗಡ ಶುಭಾಶಯಗಳನ್ನು ಇಲ್ಲಿಂದಲೇ ಕೋರುತ್ತೇನೆ. ಮದುಮಗ ಬೇಸರದ ಮುಖದಲ್ಲಿರಬಾರದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಸರದ ಮುಖ ????? ಎಲ್ಲಿದೆ ???? :( - ಇದು ಬೇಸರದ ಮುಖ. ಇದನ್ನ ನಾನು ಎಲ್ಲೂ ಹಾಕಿಲ್ಲ :) (:
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನೋಪ್ಪಾ, ನಾನೊಂಥರಾ ಕಂಪ್ಯೂಟರ್ ಇಲ್ಲಿಟ್ರೇಟ್! ಬೇಸರ ಆಗಿಲ್ಲ ಅಂದಾದರೆ ಸಂತೋಷ. ಆ ಆವರಣ ಚಿಹ್ನೆ ತಿರುಗಿದರೆ ಬೇಸರ ಅಂತಾ ತಪ್ಪು ತಿಳ್ಕೊಂಡಿದ್ದೆ. :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಶಾಂತ್, ನಿಮ್ಮ ವಿವಾಹಕ್ಕೆ ನನ್ನ ಶುಭಾಶಯಗಳು. ಹೊಸ ಜೀವನಕೆ ಕಾಲಿಡುವ ನಿಮಗೆ ನನ್ನ ಬೆಸ್ಟ್ ವಿಷಸ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ತೇಜಸ್ವಿ. ಆದಷ್ಟು ಬೇಗ ನೀವೂ ಖೆಡ್ಡಾಕ್ಕೆ ಬೀಳುವಂತಾಗಲಿ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಜೀವನದಲಿ ನಂಬಿಕೆ ಮುಖ್ಯ ಅದನ್ನು ತಿರಸ್ಕರಿಸದಿರಿ. ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ. ಇಂತಿ ನಿಮ್ಮ ಕಿರು ಕವಿ "ಸಿದ್ದರಾಮ ಏನ್ . ಕೊರಪಳ್ಳಿ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.