ನನ್ನೊಲುಮೆಯಾ ಸಖೀ...

5

ದೇವ ದೇವರಲಿ ನಮಿಸಿ


ಬೇಡಿಕೆಗಳ ಮಳೆ ಸುರಿಸಿ


ಬಂದೆ ನಾ ನಗು ಮೊಗವನರೆಸಿ


ಹುಡುಕಿದ್ದೆ ನಾನಂದು ಎನ್ನ ಅರಸಿ


 


ಕಂಡಿದ್ದೆ ನಾ ನಂದು


ನಗುಮೊಗದ ಕನಸೊಂದು


ಕನಸಿನಲಿ ನೀ ಬಂದು


ನಿಂತಿದ್ದೆ ನಗು ತಂದು


 


ನಿನ್ನ ಆ ಹೊಳೆವ ಕಣ್ಗಳು


ನಗುವಿನಾ ಅಲೆಗಳು


ಕಣ್ಣಂಚಿನಲಿ ಇದ್ದ ಆ ನಿನ್ನ ಕುಡಿನೋಟ


ಕುಡಿನೋಟದೊಳಗಿದ್ದ ಆ ನಿನ್ನ ತುಂಟಾಟ


 


ಬಾ ಸಖಿ ಸಾಗುವ ಬಾಳ ಬಂಡಿಯಲಿ


ದೂರ, ಬಲುದೂರದಾ ಪಯಣದಲಿ


ನಾ ನಿನ್ನ ಜೊತೆಗಾರ ನೀ ಎನಗೆ ಆಧಾರ


ಪ್ರೀತಿಯದು ಜೊತೆಯಿರಲು ಸುಖಮಯವು ಸಂಸಾರ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಉರಾಳ ರೆ ಚೆನ್ನಾಗಿದೆ ನಿಮ್ಮ ಕವನ , ನಿಮ್ಮ ಸಂಸಾರ ಸುಖಮಯವಾಗಿರಲಿ ಎಂದು ಹಾರೈಸುವೆ. ವಿಶೇಷ ಅಂದ್ರೆ ಜನಾರ್ಧನ್ ಉರಾಳ್ ಅನ್ನೋವ್ರು ನನ್ನ ಬಾಸ್ ಅವರು ನಿಮ್ಮುರಿನವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ , ಕವನ ಮೆಚ್ಚಿದ್ದಕ್ಕಾಗಿ ನನ್ನಿ :) ವಂದನೆಗಳೊಂದಿಗೆ, ಪ್ರಶಾಂತ ಜಿ ಉರಾಳ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.