ಪತ್ರೊಡೆ

4.75

ಕೆಸು Araceae ವಂಶಕ್ಕೆ ಸೇರಿದ, ಏಷಿಯಾದ ಜವುಗು ಪ್ರದೇಶಗಳಲ್ಲಿ ಕಂಡು ಬರುವ, ಏಕದಳ ಸಸ್ಯ. ಎಲೆಗಳು ಹೃದಯಾಕಾರದಲ್ಲಿ ಇದ್ದು, ಎಲೆಯ ಮೇಲ್ಮೈ ತೈಲ ಸವರಿದಂತೆ ನುಣುಪಾಗಿದ್ದು, ನೀರಿನ ಹನಿ ಜಾರುವಂತಿರುತ್ತದೆ. ನೆಲದೊಳಗೆ ಹುದುಗಿರುವ ಗಡ್ಡೆ, ನೆಲದ ಮಟ್ಟದಿಂದಲೇ ಕವಲೊಡೆದ ಮೃದುವಾದ ಕಾಂಡ, ಕಾಂಡಕ್ಕೊಂದೇ ಎಲೆ ಈ ಗಿಡದ ಸಾಮಾನ್ಯ ರೂಪ.

ಕೆಸುವಿನಲ್ಲೇ ಹಲವು ಪ್ರಭೇದಗಳಿದ್ದರೂ ನಮ್ಮ ಪ್ರಯೋಜನ ದೃಷ್ಟಿಯಿಂದ ಬೆಳಿ ಕೆಸು, ಕರಿ ಕೆಸು, ಮರ ಕೆಸು ಈ ಹೆಸರುಗಳನ್ನಷ್ಟೇ ತಿಳಿದುಕೊಂಡರೆ ಸಾಕು. ಬಿಳಿ ಕೆಸು ತಿಳಿ ಹಸುರು ಬಣ್ಣದ ಕಾಂಡ ಮತ್ತು ಎಲೆಯಂಚು ಹೊಂದಿದ್ದರೆ, ಕರಿ ಕೆಸು ಕಡು ಕಪ್ಪು ಬಣ್ಣವನ್ನು ಹೋಲುವ ಕಾಂಡ, ಎಲೆಯಂಚು ಹೊಂದಿದೆ. ಮರದ ಮೇಲೆ ಆರ್ಕಿಡ್ನಂತೆ ಬೆಳೆಯುವುದು ಮರ ಕೆಸು. ಉಡುಪಿ, ದ.ಕ.ಗಳಲ್ಲಿ ತಯಾರಿಸುವ ಪತ್ರೊಡೆಗೆ ಇವೇ ಎಲೆಗಳನ್ನು ಅನಾದಿ ಕಾಲದಿಂದ ಬಳಸಿಕೊಂಡು ಬರುತ್ತಿದ್ದಾರೆ. ಗುಜರಾತಲ್ಲೂ ಈ ಬಗೆಯ ಖಾದ್ಯ ಮಾಡಿ ಅದಕ್ಕೆ "ಪಾತ್ರ" ಎಂಬ ಹೆಸರನ್ನು ಇಟ್ಟಿದ್ದಾರಾದರೂ, ಎರಡರ ರುಚಿಯನ್ನೂ ಸವಿದ ನನ್ನ ನಾಲಿಗೆ ನಿಶ್ಪಕ್ಷಪಾತಿಯಾಗಿ ಪತ್ರೊಡೆಯತ್ತ ಒಲವು ತೋರಿಸಿದ್ದರಿಂದ "ಪಾತ್ರ"ವನ್ನು ಕಡೆಗಾಣಿಸಲಾಗಿದೆ. ಮೇಲೆ ತಿಳಿಸಿದ ಎಲೆಗಳನ್ನು ರುಚಿಯ ದೃಷ್ಟಿಯಿಂದ, ಮೃದುತ್ವದ ದೃಷ್ಟಿಯಿಂದ ಸಮೀಕರಣದಲ್ಲಿ ಹೀಗೆ ವಿವರಿಸಬಹುದು: ಬಿಳಿ ಕೆಸು < ಕರಿ ಕೆಸು < ಮರ ಕೆಸು.

ಪತ್ರೊಡೆಯಲ್ಲಿ ಎರಡು ವಿಧಗಳುಂಟು, ಮೊದಲನೆಯದು ದೋಸೆ ಕಲ್ ಪತ್ರೊಡೆ, ಎರಡನೆಯದು ಪತ್ರೊಡೆ. ಇವೆರಡನ್ನೂ ಮಾಡುವ ವಿಧಾನವನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ.

ದೋಸೆ ಕಲ್ ಪತ್ರೊಡೆ:
೧. ದೋಸೆ ಮೊದಲಾದ ತಿಂಡಿಗೆ ಬಳಸುವ ಅಕ್ಕಿಯನ್ನು ಎರಡು ಘಂಟೆಗಳಷ್ಟು ಕಾಲ ನೀರಿನಲ್ಲಿ ನೆನೆಹಾಕಿ.
೨. ತೋಟಕ್ಕೆ ತೆರಳಿ ಕೆಸುವಿನ ಎಲೆಯನ್ನಾಯ್ದುಕೊಂಡು ಬನ್ನಿ. ಎಲೆ ತೀರ ಬಲಿತದ್ದಾಗಿರಬಾರದು. ಸ್ವಲ್ಪ ಎಳೆಯ ಎಲೆಯಾದರೆ ಚೆನ್ನಾಗಿ ಬೇಯುವುದೂ ಅಲ್ಲದೇ, ತಿಂದ ನಂತರ ಬಾಯಿ ತುರಿಕೆಯಾಗುವ ಸಂಭವವೂ ಕಡಿಮೆ.
೩. ಎಲೆಯನ್ನು ಚೆನ್ನಾಗಿ ತೊಳೆದು, ದಂಟನ್ನು ಎಲೆಯಿಂದ ಬೇರ್ಪಡಿಸಬೇಕು. ಎಲೆಯ ಕೆಳಭಾಗದಲ್ಲಿರುವ ದಂಟುಗಳನ್ನೂ ಕೂಡ ಇದೇ ರೀತಿ ಬೇರ್ಪಡಿಸಬೇಕು.
೪. ಸುಮಾರು ಒಂದು ಕಡಿಯಷ್ಟು ತೆಂಗಿನ ತುರಿಯನ್ನು ತಯಾರಿಸಿಕೊಳ್ಳಬೇಕು.
೫. ನೆನೆಸಿದ ಅಕ್ಕಿ, ತೆಂಗಿನ ತುರಿ, ೨ ಚಮಚದಷ್ಟು ಜೀರಿಗೆ, ೨ ಚಮಚದಷ್ಟು ಕೊತ್ತುಂಬರಿ ಬೀಜ, ಒಂದು ಚಮಚ ಅರಶಿನ, ೧೦ ಒಣ ಮೆಣಸಿನ ಕಾಯಿ, ಸ್ವಲ್ಪ ಹುಣಸೇ ಹಣ್ಣನ್ನು ದೋಸೆಯ ಹಿಟ್ಟಿನ ಹದಕ್ಕೆ ಅರೆದುಕೊಳ್ಳಬೇಕು. ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
೬. ಕೆಸುವಿನ ಎಲೆಯ ಹಿಂಭಾಗಕ್ಕೆ ಹದವಾಗಿ ಈ ಮಿಶ್ರಣವನ್ನು ಹಚ್ಚುತ್ತಾ, ಮಡಿಸುತ್ತಾ, ಸುರುಳಿಯಾಗಿ ಸುತ್ತಬೇಕು.

೭. ಗಾಲಿಗಳಂತೆ ಇವನ್ನು ಕತ್ತರಿಸಿ ಇಟ್ಟುಕೊಳ್ಳಬೇಕು.

೮. ಹದವಾದ ಬೆಂಕಿ ಹೊತ್ತಿಸಿ ಒಲೆ ಮೇಲಿಟ್ಟ ದೋಸೆ ಕಾವಲಿಗೆ ಎಣ್ಣೆ ಹಚ್ಚಿ, ಈ ಗಾಲಿಗಳನ್ನು ಒಂದೊಂದಾಗಿ ಮೇಲೆ ತಿಳಿಸಿದ ಮಿಶ್ರಣದಲ್ಲಿ ಅದ್ದಿ ಕಾವಲಿ ಮೇಲಿಡಬೇಕು. ಕಾವು ಜಾಸ್ತಿಯಿರುವ ಮಧ್ಯ ಭಾಗ ಬೇಗನೆ ಕರಟಿ ಹೋಗುವ ಸಂಭವ ಇರುವುದರಿಂದ, ಕಾವಲಿ ಮೇಲೆ ಗಾಲಿಗಳನ್ನು ಇಡುವಾಗ ಹೊರವರ್ತುಲದಿಂದ ಆರಂಭಿಸಬೇಕು.
೯. ಕಾವಲಿಗೆ ಎಣ್ಣೆ ಹಚ್ಚುವಾಗ ಬೇರೆ ಎಣ್ಣೆಯನ್ನು ಬಳಸಿದರೂ, ತೆಗೆಯುವ ಕೊಂಚ ಮೊದಲು ತೆಂಗಿನೆಣ್ಣೆ ಹಾಕುವುದು ಸೂಕ್ತ.

೧೦. ಹದವಾಗಿ ಬೀಳುತ್ತಿರುವ ಮಳೆಯ ತಾಳದೊಂದಿಗೆ, ಕೆಂಪಗೆ ಕಾದ, ಬಿಸಿ ಬಿಸಿಯಾದ ದೋಸೆ ಕಲ್ ಪತ್ರೊಡೆ ಅವರ್ಣನೀಯವಾದ ಅನುಭವವನ್ನು ಒದಗಿಸುವುದು.

ಪತ್ರೋಡೆ:
"ದೋಸೆ ಕಲ್ ಪತ್ರೊಡೆ"ಮಾಡುವ ವಿಧಾನದ ೬ನೇ ಹಂತದವರೆಗೆ ಅನುಸರಿಸಿ(ಎಲೆಗೆ ಹಿಟ್ಟು ಹಚ್ಚುವ ಮೊದಲು, ಹಿಟ್ಟಿಗೆ ಸ್ವಲ್ಪ ಬೆಲ್ಲ ಬೆರಸಬೇಕು)
೭. ಸುರುಳಿಯ ಮುಂಭಾಗಕ್ಕೂ ಮಿಶ್ರಣವನ್ನು ಸವರಿ, ಇಡ್ಲಿ ಬೇಯಿಸುವಂತೆ ಇಡ್ಲಿ ಅಟ್ಟದಲ್ಲಿ ಬೇಯಿಸಬೇಕು.
೮. ಬಿಸಿ ಬಿಸಿಯಾದ ಪತ್ರೊಡೆಯನ್ನು ಬೆಕ್ಕಿನ ಮಂಡೆಗಾತ್ರದ ಬೆಣ್ಣೆಯೊಂದಿಗೋ ಅಥವಾ ತೆಂಗಿನೆಣ್ಣೆ ಸವರಿಯೋ ತಿನ್ನಬಹುದು.
೯. ಹೆಚ್ಚಿಗೆ ಉಳಿದಿದ್ದನ್ನು ಮರುದಿನ ಚಿಕ್ಕದಾಗಿ ಕತ್ತರಿಸಿ, ಸಾಸಿವೆ, ಕರಿ ಬೇವು, ಒಣ ಮೆಣಸಿನ ಒಗ್ಗರಣೆಯೊಂದಿಗೆ ತುರಿದ ಕಾಯಿ ಸೇರಿಸಿ ಹುರಿದು, ಸಕ್ಕರೆಯನ್ನು ಉದುರಿಸಿ ತಿಂದರೆ ಇನ್ನೊಂದು ಬಗೆಯ ಸುಖ ಪ್ರಾಪ್ತಿಯಾಗುವುದು.

ಈ ಮೇಲಿನ ಎರಡೂ ವಿಧಗಳು ಕೆಲವೊಮ್ಮೆ ನಾಲಗೆ, ಗಂಟಲು ತುರಿಕೆ ಉಂಟು ಮಾಡುವ ಸಂದರ್ಭ ಇರುವುದರಿಂದ, ಇದರ ಶಮನಕ್ಕಾಗಿ ಹುಣಸೇ ಹಣ್ಣು, ಬೆಲ್ಲ ಬಳಿಯಲ್ಲಿಟ್ಟುಕೊಳ್ಳುವುದು ಉತ್ತಮ. ಹೆಚ್ಚಾಗಿ ಸುಳ್ಳು ಹೇಳುವ ಅಭ್ಯಾಸ ಇರುವವರಿಗೆ ತುರಿಕೆ ಜಾಸ್ತಿ ಅಂತ ನನ್ನ ಅಮ್ಮ ಹೇಳುತ್ತಾಳಾದ್ದರಿಂದ, ಸಹಜವೆಂಬಂತೆ ಜೀವಮಾನದಲ್ಲಿ ನನಗೆ ಒಮ್ಮೆಯೂ ಪತ್ರೊಡೆ ತಿಂದು ತುರಿಕೆ ಬಂದದ್ದಿಲ್ಲ.

ಬಣ್ಣ ಬಣ್ಣದ ಕೆಸು ನೋಡಲು ಅಂದವಾಗಿರುವುದಾದರೂ ತಿನ್ನಲು ಯೋಗ್ಯವಲ್ಲ.

ನಿಮ್ಮ ಮನೆ ಅಥವಾ ಪಕ್ಕದ ಮನೆ ತೋಟದಲ್ಲಿ ಕೆಸು ಇಲ್ಲವಾದಲ್ಲಿ, ದೋಸೆ ಕಲ್ ಪತ್ರೊಡೆಯ ಹಿಟ್ಟನ್ನು ಉಪಯೋಗಿಸಿ ಹೀರೆಕಾಯಿ, ಬದನೇಕಾಯಿ, ಬಾಳೆಕಾಯಿ, ಮೆಂತೆ, ಬಸಳೆ ಇನ್ನಿತರ ಸೊಪ್ಪು, ಹೆಬ್ಬಲಸು ಇತ್ಯಾದಿಗಳಲ್ಯಾವುದನ್ನಾದರೂ ಬಳಸಿ ಚಟ್ಟಿ ಮಾಡಬಹುದು.

ಕೆಸುವಿನ ಉಪಯೋಗ ಬರೀ ಪತ್ರೊಡೆಗೆ ಮೀಸಲು ಎಂದು ನೀವು ತಿಳಿಯಬೇಕಾಗಿಲ್ಲ. ಅದರ ಎಲೆಯ ಚಟ್ನಿಯನ್ನೂ, ದಂಟಿನ ಹುಳಿಯನ್ನೂ, ಗಡ್ಡೆಯ ಹಪ್ಪಳವನ್ನೂ ಮಾಡಬಹುದು. ಎಲ್ಲವನ್ನೂ ಒಮ್ಮೆಲೇ ಪ್ರಯೋಗಿಸಿ ನಿಮಗೆ ಅಜೀರ್ಣವಾಗುವ ಸಂಭವ ಇರುವುದರಿಂದ ಅವನ್ನು ಮುಂದಿನ ತರಗತಿಯಲ್ಲಿ ನೋಡೋಣ.

ಚಿತ್ರ ಕೃಪೆ: ಪಾಲ

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸರ್
ಪತ್ರೊಡೆ ಮಾಡುವ ವಿಧಾನ ನನಗೆ ಗೊತ್ತಿರಲಿಲ್ಲ..
ಆದ್ರೆ ತಿಂದು ಗೊತ್ತಿತ್ತು..

ಕಾವಲಿಯ ಮೇಲೆ ಕಾಯಿಸಿ ಆದಮೇಲೆ ಅದನ್ನ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೊಂದು ಸ್ವಲ್ಪ ಒಗ್ಗರಣೆ, ಕಡಲೆಕಾಯಿ ಬೀಜ ಹಾಕಿ ಪತ್ರೊಡೆ ಪಲ್ಯ ಅಂತ ಅಮ್ಮ ಕೊಡ್ತಾರೆ.. ಅದೂ ಕೂಡ ಸಕ್ಕತ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೇಡಂ,
ಪತ್ರೊಡೆ ಪಲ್ಯದ ಬಗ್ಗೆ ತಿಳಿಸಿದ್ದಕ್ಕೆ ನನ್ನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚಂದ್ರ,
ಒಳ್ಳೆಯ ತಿಂಡಿಯನ್ನು ನೆನಪಿಸಿದಿರಿ.
ತಿನ್ನಬೇಕೆನಿಸುತಿದೆ...
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸು,
ಇನ್ನೇನ್ ಮಳೆಗಾಲ ಬಂತಲ್ಲ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ,
ಊರಲ್ಲಿ ಅಮ್ಮ ಪತ್ರೊಡೆ ಮಾಡ್ತಿರೋ ಚಿತ್ರ ಸೆರೆಹಿಡಿದ ಹಾಗೆದೆ?

ನಮ್ಮ ಮನೆಯಲ್ಲೂ ಅಮ್ಮ ಆಗಾಗ ಪತ್ರೊಡೆ ಮಾಡ್ತಿರ್ತಾರೆ. ಎದುರು ಮನೆಯಲ್ಲಿ ಇದರ ಗಿಡ ಬೆಳೆಸ್ತಿದ್ದಾರೆ. ಅಗಾಗ ಅವರನ್ನು ಕೇಳಿ ಎಲೆಗಳನ್ನು ಕಿತ್ಕೊಂದು ಪತ್ರೊಡೆ ಮಾಡ್ಕೊಂಡ್ ತಿನ್ತೀವಿ.
ವಾರಾಂತ್ಯ ಮತ್ತೆ ಮಾಡಿಸ್ಕಂಡ್ ತಿನ್ಬೇಕು ಅನ್ನಿಸ್ತಿದೆ.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನಿಲ್,
ಸಿಕ್ಕಾಪಟ್ಟೆ ತಿಂದೆ ಊರಲ್ಲಿ ಮೊನ್ನೆ. ನಿಮ್ಮನೇಲೂ ಗಿಡ ನೆಡೋ ಪ್ರಯತ್ನ ಮಾಡಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹು, ಈಗ ಸದ್ಯಕ್ಕೆ ನಮ್ಮ ಮನೆಯ ಮುಂದೆ ಹೊಂಗೆ ಮರವಿದೆ.

-ಅನಿಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ತಿಳಿದುಕೊಂದರೆ ಸಾಕು>>
ಅದು ತಿಳಿದುಕೊಂಡರೆ ಅಗಬೇಕಲ್ವಾ ಪಾಲಣ್ಣ.
<< ಸಹಜವೆಂಬಂತೆ ಜೀವಮಾನದಲ್ಲಿ ನನಗೆ ಒಮ್ಮೆಯೂ ಪತ್ರೊಡೆ ತಿಂದು ತುರಿಕೆ ಬಂದದ್ದಿಲ್ಲ.>>
ಯಾಕಣ್ಣ ಮತ್ತೆ ಸುಳ್ಳು ಹೇಳುತ್ತಿದ್ದಿರಿ ,ಹಿ ಹೀ ಹಿ .
ಪತ್ರೊಡೆ ಬಿಸಿ ಬಿಸಿ ಆಗಿ ಇರುವಾಗ ಕತ್ತರಿಸದೆ ಬೆಣ್ಣೆ ಜೊತೆ ತಿಂದರೆ ಅದರ ರುಚಿಯೇ ಬೇರೆ ಪಾಲಣ್ಣ .
ನಮ್ಮ ಕಡೆ ಹೆಚ್ಚಾಗಿ ಮರ ಕೆಸು ಉಪಯೋಗಿಸುತ್ತಾರೆ , ಅದಿಲ್ಲದಿದ್ದರೆ ಮಕ್ಕಳ ಕೆಸು (ನಮ್ ಕಡೆ ಹೀಗೆ ಕರಿತಾರೆ )

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್,
ಹೂ ಕಣೋ, "ತಿಳಿದುಕೊಂದರೆ" ಬದಲಾಯಿಸ್ತೀನಿ :)
>>ಯಾಕಣ್ಣ ಮತ್ತೆ ಸುಳ್ಳು ಹೇಳುತ್ತಿದ್ದಿರಿ ,ಹಿ ಹೀ ಹಿ
:)
>>ಪತ್ರೊಡೆ ಬಿಸಿ ಬಿಸಿ ಆಗಿ ಇರುವಾಗ ಕತ್ತರಿಸದೆ ಬೆಣ್ಣೆ ಜೊತೆ ತಿಂದರೆ ಅದರ ರುಚಿಯೇ ಬೇರೆ ಪಾಲಣ್ಣ
ಹುಂ ನಂಗೂ ಇದೇ ಇಷ್ಟ
ಕರೆಕ್ಟು ನಿಂ ಕಡೆ ಮರ್ಕೆಸು ಜಾಸ್ತಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನ್ ಈ ಪತ್ರೊಡೆ ಬಗ್ಗೆ ಯಾವಾಗ್ಲೂ ಬರೀ ಓದೋದೇ ಆಯ್ತು ತಿನ್ನೋ ಭಾಗ್ಯ ಯಾವಾಗ ಬರುತ್ತೋ ನೋಡ್ಬೇಕು.. :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಸೋರೆಯವರೆ ನಮ್ಮ ಮನೆಗೆ ಬನ್ನಿ.. ಮಾಡಿ ಕೊಡುವ.. :)
ಆದರೆ ನಮ್ಮ ಮನೆಯಲ್ಲಿ ಕೆಸುವಿನ ಎಲೆಯನ್ನು ಹೆಚ್ಚಿ ಅದನ್ನು ಆ ಹಿಟ್ಟಿನೊಂದಿಗೆ ಬೆರೆಸಿ ಬಾಳೆ ಎಲೆಯಲ್ಲಿ ಮಡಚಿಟ್ಟು ಮಾಡುತ್ತಾರೆ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಆಹ್ವಾನಕ್ಕೆ ನನ್ನೀ..
ಖಂಡಿತ ಬರೋಣವಂತೆ... ನಿಮ್ಮ ವಿಳಾಸ ಕೊಡಿ.. ಸಂಪದದಲ್ಲಿರೋ ನನ್ನಂತ ಸಮಾನಮನಸ್ಕರ ಪತ್ರೊಡೆ ಪ್ರೇಮಿಗಳ ಜೊತೆ ಹಾಜರಾಗುತ್ತೀವಿ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇರೆ ಪ್ರಾಸೆಸ್ಸು,, ಆದ್ರೂ ಕತ್ತರಿಸಿದ್ದಕ್ಕಿಂತ ಪತ್ರೊಡೆ ಉಜ್ಜೆನೇ ಚೆನ್ನ ಅಲ್ವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಣ್ಣ ಈ ಕನ್ನಡ ಕಾದಂಬರಿ , ಹಳೆ ಹಾಡುಗಳು , ಭಾವ ಗೀತೆಗಳು ಎಲ್ಲವನ್ನು ಎಲ್ಲಿಂದ ಇಳಿಸಿಕೊಳ್ಳಬಹುದು ಅಂತ ಏನಾದ್ರು ಗೊತ್ತ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚಂದ್ರ,

ಒಳ್ಳೆಯ ಮಾಹಿತಿ, ಚಿತ್ರದ ಸಮೇತ.

ಒಂದು ಅನುಮಾನ. ನಿಮ್ಮ ಕಡೆಯ ಪತ್ರೊಡೆಗೆ ಬೆಲ್ಲ ಹಾಕುವ ಪದ್ದತಿ ಇಲ್ಲವೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಂಜಿತ್,
ನನ್ನಿ, ದೋಸೆ ಕಲ್ ಪತ್ರೊಡೆಗೆ ಇಲ್ಲ, ಪತ್ರೊಡೆಗೆ ಹಾಕ್ತಾರೆ - ಅದರ ವಿವರಣೆಯಲ್ಲಿ ಬೆಲ್ಲದ ಪ್ರಸ್ತಾಪ ಇದೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನ್ ಪತ್ರೊಡೆ ನೋಡೂ ಇರಲಿಲ್ಲ, ತಿಂದೂ ಇಲ್ಲ :(
ಬೆಂಗಳೂರಿನಲ್ಲಿ ಯಾವ ಹೋಟೇಲ್ನಲ್ಲಿ ಸಿಗುತ್ತೆ ಅಂತ ತಿಳಿಸಿ ಯಾರಾದ್ರು ಪುಣ್ಯ ಕಟ್ಕೊಳ್ರಪ್ಪ. ಪಾಲರವರು ಕಲರ್ ಕಲರ್ ಫೋಟೋ ಹಾಕ್ಬಿಟ್ಟು ಹೊಟ್ಟೆ ಉರಿಸ್ತಿದಾರೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಬಸವನಗುಡಿ ಸುತ್ತ ಮುತ್ತ ಇರುವುದಾದರೆ ಅಲ್ಲಿ " ಹಳ್ಳಿ ತಿಂಡಿ " ಅಂತ ಒಂದು ಹೋಟೆಲ್ ಇದೆ ಅಲ್ಲಿ ಸಿಗಬಹುದು (ಆದ್ರೆ ನಮ್ ಮಲ್ನಾಡು ರುಚಿ ಸಿಗುತ್ತೆ ಅಂತ ಖಾತ್ರಿ ಕೊಡಲಾರೆ ), ಹಾಗೆಯೇ ಮಲ್ಲೇಶ್ವರಂ ಹತ್ರ ಕೂಡ ಏನೋ ಹಳ್ಳಿ ಮನೆ ಅಂತ ಒಂದು ಹೋಟೆಲ್ ಇರ್ಬೇಕು , ಸರಿಯಾಗಿ ಗೊತ್ತಿಲ್ಲ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೇಮಾ,
ನನಗೆ ತಿಳಿದಮಟ್ಟಿಗೆ ಇದನ್ನು ಹೆಚ್ಚಾಗಿ ಮಲೆನಾಡಿನಲ್ಲಿ ಸಾರಸ್ವತರು ಮಾಡುತ್ತಾರೆ. ತುಂಬಾ ರುಚಿಯಾದ ತಿಂಡಿ. ಮಳೆಗಾಲದಲ್ಲಿ ಇದರ ತಯಾರಿ ಹೆಚ್ಚಾಗಿ ಮಾಡುತ್ತಾರೆ. ಬೆಂಗಳೂರಿನಲ್ಲಿ ಅದೂ ಹೋಟೆಲ್ ಗಳಲ್ಲಿ ನಿಮಗೆ ಇದು ಮರೀಚಿಕೆ. ಬೆಂಗಳೂರಲ್ಲಿ ನಿಮಗೆ ಯಾರಾದರೂ ಸಾರಸ್ವತ ಸ್ನೇಹಿತರಿದ್ದರೆ ಸಿಗುವ ಸಾಧ್ಯತೆ ಹೆಚ್ಚು. ಅದೂ ಅಲ್ಲದೆ ಅಲ್ಲಿ ಕೆಸುವಿನ ಎಲೆ ಸಿಗಬೇಕಲ್ಲ? ನಾನು ಒಮ್ಮೆ ನನ್ನ ಕಾಲೇಜಿನ ಎನ್, ಎಸ್, ಎಸ್. ಕ್ಯಾಂಪ್‌ಗೆ ಹೋದಾಗ ಒಂದೆರಡು ಗಿಡಗಳನ್ನು ತಂದು ಮನೆಯಲ್ಲಿ ಹಾಕಿಕೊಂಡಿದ್ದೇನೆ. ಬೇಸಿಗೆಯಲ್ಲಿ ಒಣಗಿ ಕಣ್ಣಿಗೆ ಕಾಣದಂತಾದರೂ ಮಳೆಗಾಲದಲ್ಲಿ ಚಿಗುರಿ ಎಲೆಬಿಟ್ಟು ನಮ್ಮ ಬಾಯಚಪಲ ತೀರಿಸುತ್ತದೆ. ಮರಗೆಸ ಬಳಸಿದರೆ ಬಾಯಿ ತುರಿಸುವುದಿಲ್ಲ. ಮತ್ತೆ ಪತ್ರೊಡೆ ಅನ್ನುವುದಕ್ಕಿಂತ ಪತ್ರಡೆ ಅನ್ನುವುದು ಸರಿಯೇನೋ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನನಗೆ ತಿಳಿದಮಟ್ಟಿಗೆ ಇದನ್ನು ಹೆಚ್ಚಾಗಿ ಮಲೆನಾಡಿನಲ್ಲಿ ಸಾರಸ್ವತರು ಮಾಡುತ್ತಾರೆ
ತಪ್ಪು ನಂಬಿಕೆ :)
>>ಮತ್ತೆ ಪತ್ರೊಡೆ ಅನ್ನುವುದಕ್ಕಿಂತ ಪತ್ರಡೆ ಅನ್ನುವುದು ಸರಿಯೇನೋ!
ಯಾಕೋ, http://en.wikipedia.org/wiki/Patrode

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಗಲಲ್ಲಿ ಸೂರ್ಯ ಮರೆಯಾಗಬಹುದು ಬೆಳಕಲ್ಲ,
ಪತ್ರೊಡೆಯ ಸ್ಪೆಲಿಂಗ್ ಬದಲಾಗಬಹುದು ರುಚಿಯಲ್ಲ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದೇಕೋ ಎಲ್ಲರು ಅದರ ಬಗ್ಗೆ ವಿವರಿಸಿ ಇನ್ನಷ್ಟು ಬಾಯಲ್ಲಿ ನೀರೂರಿಸುತ್ತಿದ್ದೀರಿ :) .
ರಮೇಶ್ ಈ ಸಲ ಮಳೆಗಾಲದಲ್ಲಿ ನಿಮ್ಮ ಪತ್ರೊಡೆಯ ಎಲೆ ಚಿಗುರಿ, ನೀವು ಮಾಡಿ ತಿಂದು ನನಗೂ ಮಿಗುವ ಸಣ್ಣ ಅವಕಾಶವಿದ್ದರೆ ಹೇಳಿ, ನೀವು ಹೇಳಿದ ಸಮಯಕ್ಕೆ ಸರಿಯಾಗಿ ನಿಮ್ಮ ಮನೆ ಮುಂದೆ ಹಾಜರ್ ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಂಗ್ಳೂರ್ ಮನೇಲಿ ಈ ಸೊಪ್ಪಿದ್ದಿದ್ರೆ ಮುಂದಿನ ಸಂಪದ ಮೀಟಿಗೆ ನಾನೇ ಮಾಡ್ಕೊಂಡ್ ಬರ್ತಾ ಇದ್ದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತ ಬನ್ನಿ, ಅತಿಥಿಸತ್ಕಾರಕ್ಕೆ ನಾವು ತಿಂದು ಮಿಕ್ಕಿದ್ದು ನಿಮಗಲ್ಲ. ನಿಮಗಾಗಿ ಮಿಕ್ಕಿದ್ದು ನಮಗೆ. ಜೊತೆಯಲ್ಲಿ ಇಲ್ಲಿ ಎಲೆ ಬೆಳೆಯದವರಿಗೂ ದಕ್ಷಿಣಕನ್ನಡದಿಂದ ಬರುವ ಬಸ್ಸುಗಳಲ್ಲಿ ತರುವ ಮರಗೆಸದ ಎಲೆಗಳ ಕಟ್ಟು ಸುಲಭವಾಗಿ ತರಕಾರಿ ಅಂಗಡಿಗಳಲ್ಲಿ ಸಿಗುತ್ತದೆ. ಆದ್ದರಿಂದ ಈ ಮಳೆಗಾಲದಲ್ಲಿ ನಮ್ಮ ಆಹ್ವಾನಕ್ಕೆ ಕಾಯದೆ ಸೀದಾ ತೀರ್ಥಹಳ್ಳಿ ಬಸ್ ಹಿಡಿದು ಬನ್ನಿ. ನೀವು ತಿಂದಷ್ಟು ಪತ್ರಡೆ ಒದಗಿಸೋಣವಂತೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೇಮಾ,
ನನಗೆ ತಿಳಿದಮಟ್ಟಿಗೆ ಇದನ್ನು ಹೆಚ್ಚಾಗಿ ಮಲೆನಾಡಿನಲ್ಲಿ ಸಾರಸ್ವತರು ಮಾಡುತ್ತಾರೆ. ತುಂಬಾ ರುಚಿಯಾದ ತಿಂಡಿ. ಮಳೆಗಾಲದಲ್ಲಿ ಇದರ ತಯಾರಿ ಹೆಚ್ಚಾಗಿ ಮಾಡುತ್ತಾರೆ. ಬೆಂಗಳೂರಿನಲ್ಲಿ ಅದೂ ಹೋಟೆಲ್ ಗಳಲ್ಲಿ ನಿಮಗೆ ಇದು ಮರೀಚಿಕೆ. ಬೆಂಗಳೂರಲ್ಲಿ ನಿಮಗೆ ಯಾರಾದರೂ ಸಾರಸ್ವತ ಸ್ನೇಹಿತರಿದ್ದರೆ ಸಿಗುವ ಸಾಧ್ಯತೆ ಹೆಚ್ಚು. ಅದೂ ಅಲ್ಲದೆ ಅಲ್ಲಿ ಕೆಸುವಿನ ಎಲೆ ಸಿಗಬೇಕಲ್ಲ? ನಾನು ಒಮ್ಮೆ ನನ್ನ ಕಾಲೇಜಿನ ಎನ್, ಎಸ್, ಎಸ್. ಕ್ಯಾಂಪ್‌ಗೆ ಹೋದಾಗ ಒಂದೆರಡು ಗಿಡಗಳನ್ನು ತಂದು ಮನೆಯಲ್ಲಿ ಹಾಕಿಕೊಂಡಿದ್ದೇನೆ. ಬೇಸಿಗೆಯಲ್ಲಿ ಒಣಗಿ ಕಣ್ಣಿಗೆ ಕಾಣದಂತಾದರೂ ಮಳೆಗಾಲದಲ್ಲಿ ಚಿಗುರಿ ಎಲೆಬಿಟ್ಟು ನಮ್ಮ ಬಾಯಚಪಲ ತೀರಿಸುತ್ತದೆ. ಮರಗೆಸ ಬಳಸಿದರೆ ಬಾಯಿ ತುರಿಸುವುದಿಲ್ಲ. ಮತ್ತೆ ಪತ್ರೊಡೆ ಅನ್ನುವುದಕ್ಕಿಂತ ಪತ್ರಡೆ ಅನ್ನುವುದು ಸರಿಯೇನೋ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ಪತ್ರೊಡೆ ಅಷ್ಟು ಇಷ್ಟ ಇಲ್ಲ. ಅದಿಕ್ಕೆ ಮನೆಯಲ್ಲಿ ತುಂಬಾ ಎಲೆಗಳಿದ್ದರೂ ಮಾಡುವುದು ಕಡಿಮೆ. ಮಾಡಿದರೆ ಸ್ವಲ್ಪ ತಿನ್ನುತ್ತೇನೆ ಅದು ಬೆಣ್ಣೆ ಇಲ್ಲ ತುಪ್ಪದ ಜೊತೆಗೆ. ಒಮ್ಮೆ ತುರಿಸಿಕೊಂಡಿದ್ದೇನೆ. ಪತ್ರೊಡೆ ದೋಸೆ ತರ, ಮಂಗಳೂರು ಮಟ್ಟಿ-ಗುಳ್ಳ ದೋಸೆ ಮಾಡುತ್ತಾರೆ. ಇದೇ ಮಸಾಲೆ ಆದರೆ ಎಲೆ ಬದಲು ಮಟ್ಟಿ-ಗುಳ್ಳ. ತುಂಬಾ ಇಷ್ಟ ನನಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಮಂಗಳೂರು ಮಟ್ಟಿ-ಗುಳ್ಳ ದೋಸೆ ಮಾಡುತ್ತಾರೆ
ಇದಕ್ಕೆ ಚಟ್ಟಿ ಅಂತಾರೆ ನಂ ಕಡೆ, ಹೀರೆಕಾಯಿ ಚಟ್ಟಿ ನನಗೆ ತುಂಬಾ ಇಷ್ಟ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಣ್ಣ....ಚಿತ್ರ ಸಮೇತ ಕೆಸುವಿನ ಪತ್ರೊಡೆ ಮಾಡುವುದನ್ನು ಹೇಳಿಕೊಟ್ಟಿರುವುದಕ್ಕೆ ಧನ್ಯವಾದಗಳು. ಆದರೆ ನಾವು ಬಯಲುಸೀಮೆಯ ಜನ ಅದರ ಬಗ್ಗೆ ಕೇಳಿರುತ್ತೇವೆಯೇ ಹೊರತು.....
ತಿನ್ನೋದಿರಲಿ ಕೆಸುವಿನ ಎಲೆ ಹೇಗಿರುತ್ತೆ ಎಂದೇ ತಿಳಿದಿಲ್ಲ.... ನಮ್ಮ ಕಡೆಯೂ ಇದು ದೊರೆಯುವುದೇ ಮಾಹಿತಿ ನೀಡಿ. ಮಲೆನಾಡಿನ ಕಥೆ-ಕಾದಂಬರಿಗಳಲ್ಲಂತೂ ಪತ್ರೊಡೆಯ ಹೆಸರು ಸಾಮಾನ್ಯ. ಕೆಸುವಿನೆಲೆ ಸಿಗುವುದಿದ್ದರೆ ನಾನು ಒಂದು ಕೈ ನೋಡಿಯೇ ಬಿಡುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪ,
ಬಯಲು ಸೀಮೇಲಿ ಇದು ಕಡಿಮೆ ಅಂತಾನೇ ಹೇಳಬಹುದು.. ಆದ್ರೂ ನೀವೊಮ್ಮೆ ಕರಾವಳಿ ಅಥವಾ ಮಲೆನಾಡಿನ ಕಡೆ ಬಂದ್ರೆ ಇದರ ಗಡ್ಡೆ ತಗೊಂಡ್ ಹೋಗಿ,, ಯಾವಾಗ್ಲು ನೀರಿನ ತೇವಾಂಶ ಮತ್ತೆ ನೆರಳಿರೋ ಕಡೆ ನೆಡಿ.

ಅಲ್ಲಿವರೆಗೂ ಇದೇ ಹಿಟ್ಟಿಗೆ ಬೇರೆ ಸೊಪ್ಪು ಕತ್ತರಿಸಿ ದೋಸೆ ತರ ಮಾಡಿ ಸೂಪರಾಗಿರುತ್ತೆ.. ಇಲ್ಲಾಂದ್ರೆ ಹೀರೆಕಾಯಿ, ಬದನೇ ಕಾಯಿ, ಬಾಳೇ ಕಾಯಿನ ಗಾಲಿ ತರ ಆದ್ರೆ ತೆಳ್ಳಗೆ ಹೆಚ್ಚಿಕೊಂಡು "ದೋಸೆ ಕಲ್ ಪತ್ರೊಡೆ" ತರಾನೇ ಕಾವ್ಲಿ ಮೇಲಿಡಿ,, ತುಂಬಾ ಚೆನ್ನಾಗಿರುತ್ತೆ.

ಕೆಸುವಿನ ಇನ್ನಷ್ಟು ಚಿತ್ರ ಇಲ್ಲಿದೆ, ಮನೆ ಪಕ್ಕ ಎಲ್ಲಾದರೂ ಇದ್ರೆ ಗುರುತಿಸೋಕೆ ಸಹಾಯ ಆಗಬಹುದು: http://gardencore.blogspot.com/2009/03/gabi-colocasiodeae.html

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು.
ಖಂಡಿತ ಪ್ರಯತ್ನಿಸುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಮನೆಯಲ್ಲಿ ಪತ್ರೋಡೆ ಮಾಡುವಾಗ ಎಲೆಯನ್ನು ಹಚ್ಚಿ ಹಿಟ್ಟಿನೊಂದಿಗೆ ಬೆರೆಸಿ ಬಾಳೆಲೆಯಲ್ಲಿ ಮಡಚಿಟ್ಟು ಬೇಯಿಸುತ್ತಾರೆ. ನಂತರ ಅದಕ್ಕೆ ಪುಡಿ ಮಾಡಿ ಒಗ್ಗರಣೆ ಹಾಕಿದರೆ ತುಂಬಾ ಟೇಸ್ಟ್. ಇದನ್ನು ಖಾರವಾಗಿ ಕೂಡಾ ಮಾಡಬಹುದು. ಬೆಲ್ಲ ಹಾಕಿ ಸಿಹಿಯಾಗಿ ಕೂಡಾ ಮಾಡಬಹುದು.
ಪತ್ರೋಡೆ ತಿನ್ನಲು ಆಗ್ರಹವಿರುವವರು ಬನ್ನಿ ನಮ್ಮ ಕಾಸರಗೋಡಿಗೆ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಎಲೆಯನ್ನು ಹಚ್ಚಿ
ಎಲೆ ಹೆಚ್ಚಿನಾ? ದಿವ್ಯಾ ಮನೇಲೂ ಹೀಗೇ ಮಾಡೋದಂತೆ,, ನೋಡೋಕೆ ಏನೇನಿದೆ ಕಾಸರಗೋಡಲ್ಲಿ? ನೀವು ಬೆಂಗಳೂರಲ್ಲಿದ್ದು ಕಾಸರಗೋಡಿಗೆ ಹೋಗಿ ಅನ್ಬಹುದಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು.. ಎಲೆಯನ್ನು ಹೆಚ್ಚಿ ಎಂದಾಗಬೇಕಿತ್ತು. ಕ್ಷಮೆಯಿರಲಿ

ಬೆಂಗ್ಳೂರಲ್ಲಿ ಪತ್ರೋಡೆ ಮಾಡಿ ಕೊಡೋಕೆ ನನ್ನಿಂದ ಆಗಲ್ಲ. ಅದಕ್ಕೆ ಹೇಳಿದೆ ನಮ್ಮೂರಿಗೆ ಬನ್ನಿ ಎಂದು. ನೋಡೋಕೆ ಏನೇನಿದೆ ಅಂತಾ ಕೇಳ್ಬೇಡಿ ಮಾರಾಯ್ರೆ....ಅಲ್ಲಿ ಏನೆಲ್ಲಾ ಇದೆ ಅಂತಾ ಹೇಳುತ್ತಾ ಹೋದರೆ ದೊಡ್ಡ ಲೇಖನವೇ ಆಗಬಹುದು.:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್!
ಬಾಯಲ್ಲಿ ನೀರೂರುತ್ತಿದೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ,
ಈದಿನ ಸಂಪದದಲ್ಲಿ- 'ಪತ್ರೋday'!!

ನಿಮ್ಮ ಪತ್ರೊಡೆ ಚಿತ್ರಗಳನ್ನು ನೋಡಿ, ಹಳ್ಳಿಮನೆ, ಪೇಟೆಮನೆ, ಮಂಗಳೂರು ಸ್ಟೋರ್‌ಗಳಲ್ಲಿ ಪತ್ರೋಡೆ ಡಿಮಾಂಡ್ ಜಾಸ್ತಿಯಾಗುವುದು.

>>ಈ ಮೇಲಿನ ಎರಡೂ ವಿಧಗಳು ಕೆಲವೊಮ್ಮೆ ನಾಲಗೆ, ಗಂಟಲು ತುರಿಕೆ ಉಂಟು ಮಾಡುವ ಸಂದರ್ಭ ಇರುವುದರಿಂದ,
-ಗಂಟಲು ತುರಿಕೆ ಬಗ್ಗೆ ಗೊತ್ತಿಲ್ಲದವರು ಒಮ್ಮೆ ಪತ್ರೊಡೆ ತಿಂದರೆ ಜೀವಮಾನ ಪರ್ಯಂತ ನೆನಪಿರುತ್ತದೆ. (ನನಗೂ ತುರಿಕೆ ಬಂದದ್ದಿಲ್ಲ :) )

>>ಬೆಕ್ಕಿನ ಮಂಡೆ ಗಾತ್ರದ ಬೆಣ್ಣೆ- ಅಬ್ಬಾ.. ಅಳತೆ ಚೆನ್ನಾಗಿದೆ. :)
ಮ್ಮ್‌ಮ್ಮ್‌ಮ್ಮ್..

-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನಿಮ್ಮ ಪತ್ರೊಡೆ ಚಿತ್ರಗಳನ್ನು ನೋಡಿ, ಹಳ್ಳಿಮನೆ, ಪೇಟೆಮನೆ, ಮಂಗಳೂರು ಸ್ಟೋರ್‌ಗಳಲ್ಲಿ ಪತ್ರೋಡೆ ಡಿಮಾಂಡ್ ಜಾಸ್ತಿಯಾಗುವುದು.
ಛೇ ಮೊದ್ಲೆ ಹೇಳಿದ್ರೆ, ಸ್ವಲ್ಪ ದುಡ್ಡಾದ್ರೂ ತಗೋಬೋದಿತ್ತು :)

ನನ್ನಿ ಗಣೇಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚಂದ್ರ ಅವರೇ,

ಪತ್ರೊಡೆ ಚಿತ್ರಗಳು, ಲೇಖನ ಎಲ್ಲವೂ ಬಹಳ ಚೆನ್ನಾಗಿವೆ. ನಾನು ಇದುವರೆಗೂ ಪತ್ರೊಡೆ ತಿಂದಿಲ್ಲ. ಬೆಂಗಳೂರಲ್ಲಿ ನನ್ನ ತಂಗಿ ಮನೆಯಲ್ಲಿ ಈಗ ಕೆಸುವಿನ ಗಿಡ ಬೆಳ್ಸಿದಾಳಂತೆ, ಅಲ್ಲಿ ಹೋದಾಗ ಮಾಡಿ(ಸಿ?) ತಿನ್ನಬೇಕು.

ಒಂದು ವಿಷಯ ಹೇಳಲೇಬೇಕು ಅಂತ ಅನ್ನಿಸ್ತಾ ಇದೆ. ಇಂಡಿಯಾದಲ್ಲಿ ಸಾಧಾರಣ ಎಲ್ಲರ ಮನೆಯಲ್ಲೂ ದಿನಪತ್ರಿಕೆಗಳ್ನ ಹಸಿಯಾದ, ಒಣಗಿದ ಆಹಾರ ಸಾಮಗ್ರಿ ಇಡಲು ಉಪಯೋಗಿಸ್ತಾರೆ. ಆದ್ರೆ ಇದು ಖಂಡಿತ ಒಳ್ಳೇದಲ್ಲ. ಮುಂದುವರಿದ ದೇಶಗಳಲ್ಲಿ newsprint ink ನಲ್ಲಿ ಸೀಸ ಹಾಗೂ ಕ್ರೋಮಿಯಂ ಬಳಕೆ ನಿಷೇಧಿಸಿದ್ದಾರೆ. ಭಾರತದಲ್ಲಿ ಅಷ್ಟು ಕಟ್ನಿಟ್ಟಾದ ನಿಯಮಗಳು ಇನ್ನೂ ಬಂದಂತಿಲ್ಲ. ಹೀಗಾಗಿ ದಿನಪತ್ರಿಕೆಗಳಿಂದ ಜನರ ಮೈಯಲ್ಲಿ ನಿಧಾನ ವಿಷ ಏರ್ತಾ ಇರತ್ತೆ. ಹೆಚ್ಚಿನ ವಿವರಗಳಿಗೆ ಈ ಬ್ಲಾಗನ್ನ
ನೋಡಿ. ಅಡಿಗೆಮನೆಯಲ್ಲಿ ದಿನಪತ್ರಿಕೆ ಬಳಕೆ ಆದಷ್ಟು ಕಡಿಮೆ ಮಾಡಿ ಅಂತ ದಯವಿಟ್ಟು ಎಲ್ಲರಿಗೂ ಹೇಳಿ.

ಹಾಗೆ ಹೀರೆಕಾಯಿ ಚಟ್ಟಿ ಮಾಡುವ ವಿಧಾನವನ್ನೂ ದಯವಿಟ್ಟು ಬರೆಯುವಂಥವರಾಗಿ. ಅದನ್ನು ನಾನು ಇಲ್ಲೇ ಟ್ರೈ ಮಾಡಬಹುದು :)

ಧನ್ಯವಾದ,
ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ಶಾಮಲಾ ಅವರೇ,
ಪೇಪರ್ ವಿಚಾರ ಗೊತ್ತಿರ್ಲಿಲ್ಲ, ನನ್ನ ಅಜ್ಜಿ ಇರ್ಬೇಕಾದ್ರೆ ಅವ್ರು ಬಾಳೆ ಎಲೆ ಅಥವಾ ದೊಡ್ಡ ಕೆಸುವಿನ ಎಲೆ ತಗೊಂಡು ಅದ್ರ ಮೇಲೆ ಹಚ್ತಾ ಇದ್ರು(ಪೇಪರೂ ಇರ್ಲಿಲ್ಲ ಆವಾಗ) . ಹೇಳ್ತೀನಿ ಮನೇಲಿ ಪೇಪರ್ ಉಪಯೋಗಿಸದಿದ್ದಂತೆ.. ಮತ್ತೆ ನಾನೂನು ಉಪಯೋಗಿಸೋದು ನಿಲ್ಲಿಸ್ತೀನಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೀರೆಕಾಯಿ ಚಟ್ಟಿಗೆ ದೋಸೆ ಕಲ್ ಪತ್ರೊಡೆ ಹಿಟ್ಟಿನ ತರಾನೇ ಹಿಟ್ಟು ಮಾಡ್ಕೊಬೇಕು. ಹೀರೆಕಾಯಿ ಸಿಪ್ಪೆ ಸ್ವಲ್ಪ ತೆಗೆದು (ಮುಳ್ ತರ ಇರತ್ತಲ್ಲ ಅದನ್ನ ಮಾತ್ರ ತೆಗೆದ್ರೆ ಸಾಕು), ತೆಳು ಗಾಲಿಗಳ ತರ ಹೆಚ್ಚಿಕೊಳ್ಳ ಬೇಕು. ಹಿಟ್ಟಿಗೆ ಅದ್ದಿ ಇವನ್ನ ಕಾವ್ಲಿಗೆ ಇಟ್ರೆ ಆಯ್ತು. ಹೀರೆಕಾಯಿ ಸಿಪ್ಪೆ ಬಿಸಾಕದೇ ಅದನ್ನ ಬೇಯಿಸಿ ಚಟ್ನಿ ಮಾಡಬಹುದು :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಪೇಪರ್ ವಿಚಾರ ಗೊತ್ತಿರ್ಲಿಲ್ಲ, ನನ್ನ ಅಜ್ಜಿ ಇರ್ಬೇಕಾದ್ರೆ ಅವ್ರು ಬಾಳೆ ಎಲೆ ಅಥವಾ ದೊಡ್ಡ ಕೆಸುವಿನ ಎಲೆ ತಗೊಂಡು ಅದ್ರ ಮೇಲೆ ಹಚ್ತಾ ಇದ್ರು(ಪೇಪರೂ ಇರ್ಲಿಲ್ಲ ಆವಾಗ) >>

ಬೆಸ್ಟ್ ಪ್ರಾಕ್ಟೀಸ್!! ಅಜ್ಜಿಗಳಿಗೆ ಸಕತ್ ತಲೆ ಇತ್ತು. ನನ್ನಜ್ಜಿನೂ ಈಗಲೂ ಎಲೆ ಮೇಲೇ ಊಟ ಮಾಡೋದು, ತರಕಾರಿ ಹೆಚ್ಚೋದು, ಕಾಯಿ ತುರಿಯೋದು ಎಲ್ಲ. ಅಪರೂಪಕ್ಕೆ ಬೆಳ್ಳಿ ತಟ್ಟೇಲಿ ಊಟ, ಎಲೆ ಸಿಕ್ದಿದ್ರೆ!
ಅಂದ ಹಾಗೆ ಶುಚಿಯಾದ ಪ್ಲಾಸ್ಟಿಕ್ ಹಾಳೆ ಪರವಾ ಇಲ್ಲ ಅಥವಾ wax sheet (ಅಡಿಗೇಗೆ ಬಳಸೋದು) ಆದ್ರೆ ಇನ್ನ ಉತ್ತಮ. ಏನೇ ಅಂದ್ರೂ ಬಾಳೆ ಎಲೆ ಸಮಾನ ಇಲ್ಲ!

ಹೀರೆಕಾಯಿ ಚಟ್ಟಿ ಬಾಯಲ್ಲಿ ನೀರೂರಿಸ್ತಾ ಇದೆ, ಹೀರೆಕಾಯಿ ಬಜ್ಜಿ ಮಾತ್ರ ಗೊತ್ತಿತ್ತು ನಂಗೆ, ಆದ್ರೆ ಕ್ಯಾಲೋರಿ ಲೆಕ್ಕದಲ್ಲಿ ಚಟ್ಟಿ ಇನ್ನೂ ಆರೋಗ್ಯಕರವಾಗಿ ಕಾಣ್ತಾ ಇದೆ. ಆಗಲೇ ಹೋಗಿ ಅಕ್ಕಿ ರೆಡಿ ಇಟ್ಬಂದೆ, ಬೆಳಿಗ್ಗೆ ಎದ್ದ ತಕ್ಷಣ ನೆನಸೋದೆ :)

ವಿ. ಸೂ. : ಕ್ರೋಮಿಯಂ ನ ಕ್ಯಾಡ್ಮಿಯಂ ಅಂತ ಓದ್ಕೊಳ್ಳಿ!

ಧನ್ಯವಾದ,
ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರುಳಿ ಸುತ್ತಿದ ಪತ್ರೊಡೆಯನ್ನು ಹಬೆಯಲ್ಲಿಬೇಯಿಸಿ, ತಣ್ಣಗಾದ ಬಳಿಕ ಗಾಲಿಯಂತೆ ಕತ್ತರಿಸಿ ತೆಂಗಿನೆಣ್ಣೆ ಸವರಿದ ಕಾವಲಿಯಲ್ಲಿ ಕಾಯಿಸಿ ತಿಂದರೆ ಅದರ ರುಚಿಯೇ ಬೇರೆ.
ಪತ್ರೊಡೆಯನ್ನು ಸಂಪದಿಗರಿಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮನಿಸಿಕೆಗೆ ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೆ ಒಂದು ಬಗೆ:

ಒಗ್ಗರಣೆಯಲ್ಲಿ ಕೊಚ್ಚಿದ ನೀರುಳ್ಳಿ ಧಾರಾಳವಾಗಿ ಹಾಕಿ ಆಮೇಲೆ, ಕತ್ತರಿಸಿದ ಪತ್ರೊಡೆ ಹಾಕಿ , ಚೆನ್ನಾಗಿ ತೆಂಗಿನ ತೂರಿ ಸೇರಿಸಿ, ಕೈಯಾಡಿಸಿ, ತಟ್ಟೆಗೆ ಹಾಕಿ ಮೇಲೊಂದು ದೊಡ್ಡ ಬೆಣ್ಣೆ ಮುದ್ದೆ ಹಾಕಿ ತಿನ್ನಿ
ಆಹಾ, ಏನು ರುಚಿ !!!

ಮತ್ತೆ , ಮುಂಬಯಿಯಲ್ಲಿ ಪತ್ರೋದೆಯನ್ನು ಹೆಚ್ಚಿಕೊಂಡು ಎಣ್ಣೆಯಲ್ಲಿ ಕರಿಯುತ್ತಾರೆ. ಇdu ಕೂಡ ಚೆನ್ನಾಗಿರುತ್ತದೆ.

ನಾರಾಯಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪತ್ರೊಡೆಯ ಇನ್ನೊಂದು ಬಗೆ ಪರಿಚಯಿಸಿದ್ದಕ್ಕೆ ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.