ಕೃಷ್ಣಸುಂದರಿಯ ಬಳಿಯಲ್ಲಿ

5

ಅವರ ಮನೆಯ ಕಡೆ ಹೆಜ್ಜೆ ಇಡುತ್ತಿದಂತೆಯೇ ನನ್ನ ಕಾಲೆಲ್ಲಾ ಕಣ್ಣಾಗಿತ್ತು. ಒಂದು ರೀತಿಯ ಅಳುಕು, ಭಯ ನನ್ನೆದಯನಾವರಿಸಿತ್ತು. ದಾರಿಯ ಅಕ್ಕ ಪಕ್ಕದ ಪೊದೆಯಲ್ಲಿ ಏನಾದರೂ ಮಿಸುಕಾಡಿದರೂ ಸಾಕು ಅಪ್ರಯತ್ನ ಪೂರ್ವಕವಾಗಿ ಮೈ ರೋಮ ನಿಮಿರಿ, ಭಯದ ರೋಮಾಂಚನವನ್ನುಂಟುಮಾಡಿತ್ತು. ಮನೆಯ ಕದ ತಟ್ಟುತ್ತಿದಂತೆಯೇ ನನ್ನ ಹೃದಯದ ಬಡಿತದ ಸದ್ದೂ ಅದರೊಡನೆ ಮಿಳಿತಗೊಂಡು ತಾಳ ಹಾಕಿದಂತೆ ಭಾಸವಾಯಿತು. ಒಳಗಡೆಯಿಂದ "ಯಾರು" ಎಂಬ ಹೆಂಗಸೊಬ್ಬರ ದನಿಗೆ ಮಾರುತ್ತರ ಕೊಡಲೂ ಬಾಯಿ ಒಣಗಿದಂತಾಗಿತ್ತು. ಆಕೆಯ ಹೆಜ್ಜೆ ಬಾಗಿಲ ಹತ್ತಿರ ಹತ್ತಿರ ಬರುತ್ತಿದ್ದಂತೆ ನನ್ನೊಳಗಿನ ಭಯ ನೂರ್ಮಡಿಸಿತು. ಬಾಗಿಲು ತೆರೆದ ಕೂಡಲೇ ಅದು ನನ್ನ ಮೇಲೆ ನುಗ್ಗಿ ಬಂದರೆ...

ಬಾಗಿಲು ತೆರೆದ ನಂತರ ಕಾಣಿಸಿದ್ದು, ಪ್ರಶ್ನಾರ್ಥಕ ನೋಟ ಬೀರಿದ ಇಳಿ ವಯಸ್ಸಿನ ಹೆಂಗಸನ್ನು. ನನ್ನ ಪರಿಚಯ ಮಾಡಿಕೊಡುತ್ತಾ, "ನಿನ್ನೆ ಫೋನ್ ಮಾಡಿದ್ದೆನಲ್ಲಾ ಬರುತ್ತೇನೆಂದು, ’ಅವರು’ ಇದ್ದಾರ" ಎಂದು ಕೇಳಿದೆ. "ಈಗಷ್ಟೆ ಒಬ್ರು ಫೋನ್ ಮಾಡಿದ್ರು ಇನ್ನೊಂದ್ ಅರ್ಧಗಂಟೇಲಿ ಬರ್ತಾರೆ ಕೂತಿರಿ", ಎಂದು ಒಳಗೆ ಆಹ್ವಾನಿಸಿದರು. "ಸರಿ, ಆದರೆ ನಿನ್ನೆ ಹಿಡಿದ ಕಾಳಿಂಗ ಸರ್ಪ.." ನನ್ನ ಮಾತನ್ನು ತಡೆಹಿಡಿದು ಆಕೆಯೇ ಮುಂದುವರಿಸಿದರು. "ನೀವು ಈಗ ಬಾಗಿಲ ಪಕ್ಕದ ಒಂದು ಗೋಣಿ ಚೀಲದ ಮೇಲೆ ಕೈ ಇಟ್ಟಿದ್ದೀರಲ್ಲ, ಅದ್ರ ಕೆಳಗೆ ಒಂದು ಪಂಜರ ಇದೆ ಅದ್ರೊಳಗೆ ಆರಾಮಾಗಿ ನಿದ್ರೆ ಮಾಡ್ತಾ ಇದೆ" ಎಂದುತ್ತರಿಸಿದರು.

ಒಮ್ಮೆ ಮೈ ಜುಮ್ಮೆಂದರೂ ತೋರಿಸಿಕೊಳ್ಳದೇ, ಗೂಡಿನ ಮೇಲೆ ಹೆದರಿಕೆಯಿಲ್ಲದೇ ಕೈಯಿಟ್ಟು ನಿಂತಿದ್ದ ನನ್ನ ಧೈರ್ಯಕ್ಕೆ ನಾನೇ ಮೆಚ್ಚಿ "ಈಗ ನೋಡಬಹುದಾ" ಕೇಳಿದೆ. "ಹೋ ಬನ್ನಿ", ಎಂದು ಮನೆಯಾಕೆ ಹೊರಗೆ ಕರೆದುಕೊಂಡು ಹೋಗಿ ಗೋಣಿ ಚೀಲವನ್ನು ಎತ್ತಿದಾಗ, ಪಂಜರದೊಳಗೆ ಪಾಪದ ಪ್ರಾಣಿಯಂತೆ ಸುರುಳಿ ಸುತ್ತಿ ಮಲಗಿರುವ ಕಾಳಿಂಗ ಸರ್ಪವನ್ನು ತೋರಿಸಿದರು. ತುದಿ ಮೊದಲು ಗೊತ್ತಾಗದ ನೀಳ ಕಾಯ, ಕಡು ಗಪ್ಪು ಮಿನುಗುವ ಮೈಬಣ್ಣ, ಮಧ್ಯೆ ಮಧ್ಯೆ ಪಟ್ಟೆಗಳು, ಗಮನಿಸಬಹುದಾದ ಉಸಿರಿನ ಏರಿಳಿತ. ಮತ್ತೆ ಮನೆಯೊಳಗೆ ತೆರಳಿ ಸಮಯ ಹೋಗದಿದ್ದುದಕ್ಕೆ ಮನೆಯವರು ಕೊಟ್ಟ ಬಾಳೆ ಹಣ್ಣು, ಕಾಫಿ ಮುಗಿಸುತ್ತಾ ಮಾತನಾಡುತ್ತಾ ಕುಳಿತೆವು.

ಸುಮಾರು ಅರ್ಧ ಗಂಟೆಯ ನಂತರ ನಾವು ಕಾಯಿತ್ತಿದ್ದ ಪ್ರಫುಲ್ಲ ಭಟ್ಟರ ಆಗಮನವಾಯಿತು. ಸುಮಾರು ಅರವತ್ತರ ಆಸು ಪಾಸಿನ ಭಟ್ಟರು, ಕಂಡ ಕೂಡಲೇ ಕೈಕುಲುಕಿ ಮಾತನಾಡಿಸಿ "ತುಂಬಾ ಹೊತ್ತಾಯ್ತೇನೋ ಬಂದಿದ್ದು" ಎಂದರು. ಈವರೆಗೆ ಪೇಪರಿನಲ್ಲಿ ಪ್ರಕಟವಾಗಿದ್ದ ಅವರ ಬಗೆಗಿನ ಲೇಖನಗಳು, ಚಿತ್ರಗಳನ್ನು ತೋರಿಸುತ್ತಾ ತಮ್ಮ ಅನುಭವ ಹಂಚಿಕೊಂಡರು.

ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮನೆ, ತೋಟಕ್ಕೆ ದಾರಿ ತಪ್ಪಿ ಬಂದ ಹಾವುಗಳನ್ನು ಹಿಡಿದು ಅರಣ್ಯ ಪಾಲಕರ ನೆರವಿನೊಂದಿಗೆ ಮತ್ತೆ ಕಾಡಿಗೆ ಬಿಡುವುದು ಇವರ ಹವ್ಯಾಸಗಳಲ್ಲೊಂದು. ಕಳಸದಲ್ಲಿ ಸ್ವಂತ ಮನೆ, ಆದಾಯಕ್ಕೆ ತೋಟ, ಬಾಡಿಗೆ ಮನೆ ಇರುವುದರಿಂದ ಈ ಕಾಯಕವನ್ನು ಯಾವುದೇ ಫಲಾಪೇಕ್ಷೆಯಿಲ್ಲದೇ ಕೆಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. "ಕಾಳಿಂಗ ಸರ್ಪ, ಹೆಬ್ಬಾವು, ಕೊಳಕು ಮಂಡಲ, ನಾಗರ ಹಾವು ಹೀಗೆ ಸುಮಾರು ವರ್ಷಕ್ಕೆ ೨೦೦-೨೫೦ ಹಾವುಗಳಿಗೆ ಮರುನೆಲೆ ಕಾಣಿಸುತ್ತೇನೆ" ಎನ್ನುತ್ತಾರೆ ಭಟ್ಟರು. ತಮ್ಮ ೧೫ನೇ ವರ್ಷದಿಂದ ಸ್ವಯಂ ಪ್ರೇರಣೆಯಿಂದ ಹಾವು ಹಿಡಿಯುವುದನ್ನು ಆಟವಾಗಿಸಿಕೊಂಡ ಭಟ್ಟರು, ಅವುಗಳ ಉಳಿವಿಗಾಗಿ ತಮ್ಮನ್ನು ತೊಡಗಿಸಿಕೊಂಡಿರುವುದು ಸಂತಸದ ವಿಷಯ.

ಕೇವಲ ಹಾವು ಹಿಡಿದು ಕಾಡಿಗೆ ಬಿಡುವುದು ಮಾತ್ರವಲ್ಲ, ಜನರಿಗೆ ಶಾಲಾ ಮಕ್ಕಳಿಗೆ ಹಾವುಗಳ ಬಗ್ಗೆ ಅರಿವು ಮೂಡಿಸುವುದನ್ನೂ ಕೂಡ ಮಾಡುತ್ತಾ ಬಂದಿದ್ದಾರೆ. "ತೀರ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಹಾವು ಮನುಷ್ಯರನ್ನು ಕಡಿಯಬಹುದು. ತಪ್ಪಿಸಿಕೊಳ್ಳಲು ಒಂದು ಚಿಕ್ಕ ಅವಕಾಶ ಸಿಕ್ಕಿದರೂ ಮನುಷ್ಯರಿಂದ ದೂರ ಇರುವುದಕ್ಕೇ ಇಷ್ಟ ಪಡುತ್ತವೆ" ಎನ್ನುತ್ತಾರೆ. ಹಾವುಗಳು ನಮ್ಮ ಸಂಸ್ಕೃತಿ, ದೇವತೆಗಳೊಂದಿಗೆ ಬೆರೆತಿವೆ, ಅವುಗಳನ್ನು ರಕ್ಷಿಸುವುದು ನನ್ನ ಕರ್ತವ್ಯ ಎಂದು ಈ ಕೆಲಸ ಮಾಡುತ್ತೇನಷ್ಟೆ ಅಲ್ಲದೇ ಇದರಿಂದ ನಾನು ಬೇರಾವ ಪ್ರತಿಫಲವನ್ನೂ ಬಯಸುವುದಿಲ್ಲ ಎನ್ನುತ್ತಾರೆ. ಇದುವರೆಗೂ ಇವರು ಹಿಡಿದ ಹಾವುಗಳಲ್ಲಿ ಅತೀ ಉದ್ದದ್ದು, ಕೊಪ್ಪದ ಬಳಿ ಹಿಡಿದ ೧೬ ಅಡಿ ಉದ್ದದ ಕಾಳಿಂಗ ಸರ್ಪವಂತೆ. ಒಂದು ಕೋಲು, ಕೈಗೆ ಗ್ಲೌಸು ಹಾವು ಹಿಡಿದ ನಂತರ ಅದನ್ನು ತುಂಬಿಸಲು ಗೋಣಿ ಚೀಲ ಇವಿಷ್ಟು ಹಾವು ಹಿಡಿಯಲು ಅವರು ಬಳಸುವ ಉಪಕರಣಗಳು. ಗ್ಲೌಸು ಹಾವಿನ ಬಾಯಿಯಿಂದ ಹೊರಬರುವ ವಿಷ ಕೈಯ ಗಾಯಕ್ಕೆ, ಉಗುರಿನ ಸಂದಿಗೆ ಹೋಗಬಾರದೆಂದು ಹಾಕುತ್ತಾರಲ್ಲದೇ, ಅದರಿಂದ ಮತ್ತೇನೂ ಪ್ರಯೋಜನವಿಲ್ಲ ಎನ್ನುತ್ತಾರೆ. ಅಂದಹಾಗೇ ಈ ಹಾವು ಭಟ್ಟರು ಹಿಡಿದ ೧೫೧ನೇ ಕಾಳಿಂಗ ಸರ್ಪವಂತೆ.

ನಾನು ಹೊರಡುವ ಮುಂಚೆ ಭಟ್ಟರು, "ಹಾವನ್ನ ಹೊರಗೆ ತೆಗಿತೀನಿ, ನೊಡ್ಕೊಂಡು ಹೋಗಿ" ಎಂದರು. ಇದುವರೆಗೆ ಬರೀ ಜೂನಲ್ಲಿ ಕಾಳಿಂಗ ಸರ್ಪ ನೋಡಿದ್ದರಿಂದ, ಈ ಅವಕಾಶ ಕಳೆದುಕೊಳ್ಳುವ ಮನಸ್ಸಿರಲಿಲ್ಲ. "ಗೂಡಿಂದ ತೆಗಿಬೇಕಾದ್ರೆ ಅಡ್ಡಿಲ್ಲ, ಮತ್ತೆ ಗೂಡಿಗೆ ಹಾಕಬೇಕಾದಾಗ ಮಾತ್ರ ಅದರ ಬಾಲ ಸ್ವಲ್ಪ ಹಿಡಿದುಕೊಳ್ಳಬೇಕಾಗುತ್ತದೆ", ಎಂದಂದು ನನ್ನ ಪ್ರತಿಕ್ರಿಯೆಗೂ ಕಾಯದೇ ಗೂಡಿನ ಬಾಗಿಲು ತೆರೆದು ಹಾವನ್ನು ಹೊರಗೆ ತೆಗೆದೇ ಬಿಟ್ಟರು. ಛಾಯಾಗ್ರಹಣದ ನಿಯಮ ಎಲ್ಲಾ ಮರೆತು ನನಗೆ ಹೇಗೆ ತೆಗೆಯೋಕೆ ಬರುತ್ತೋ ಅಂತೆಯೇ ಕ್ಯಾಮರಾದಿಂದ ಕ್ಲಿಕ್ಕಿಸತೊಡಗಿದೆ.

ಕಾಳಿಂಗಾಭರಣರಾಗಿ ಭಟ್ಟರು
CSC_6348

ಹಾವಿನ ಕ್ಲೋಸ್-ಅಪ್ ತೆಗೆಯೋಕೆ ಪ್ರಯತ್ನಿಸಿದ್ದು
CSC_6353

ಅಷ್ಟರಲ್ಲೇ ಭಟ್ಟರಿಗೆ ಹಾವು ಹಿಡಿಯಲು ಇನ್ನೊಂದು ಕರೆ ಬಂದುದರಿಂದ, ಹಾವನ್ನು ಮರಳಿ ಗೂಡಿಗೆ ಹಾಕಲು ನಿರ್ಧರಿಸಿದರು. ನನ್ನ ಪುಣ್ಯಕ್ಕೆ ಪಕ್ಕದ ಮನೆಯವರು ಬಂದುದರಿಂದ ಅದರ ಬಾಲ ಹಿಡಿಯುವ ಕಷ್ಟ ತಪ್ಪಿತು. ಅಂದ ಹಾಗೇ ಭಟ್ಟರ ದೂರವಾಣಿ ಸಂಖ್ಯೆ: ೯೪೮ ೦೦೭ ೫೨೦೨.

CSC_6352

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಯಾವನೋ ಕೃಷ್ಣ ಅದ್ಯಾವುದೋ ಸುಂದರಿಯ ಬಳಿ ಇದ್ದಾನೆ ಅಂದ್ಕೊಂಡು ಓದಿದೆ ನೀವೇ ಆ ಕೃಷ್ಣಸುಂದರಿಯ ಬಳಿಗೆ ಹೋಗಿ ಮರಳಿದ್ದೀರಿ ಎಂದು ಓದಿ ನಾ ತಿಳಿದೆ. ಚಿತ್ರ ನೋಡಿದ್ರೇ ನನಗೆ ಭಯ ಆಗುತ್ತೇ ಕಣ್ರೀ... ಇನ್ನು ಹಾದಿಯಲ್ಲಿ ಕಾಲಡಿ ಸಿಕ್ಕಿದ್ರೆ ದೇವರೇ ಗತಿ... - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಯಾವನೋ ಕೃಷ್ಣ ಅದ್ಯಾವುದೋ ಸುಂದರಿಯ ಬಳಿ ಇದ್ದಾನೆ ಅಂದ್ಕೊಂಡು ಓದಿದೆ ನೀವೇ ಆ ಕೃಷ್ಣಸುಂದರಿಯ ಬಳಿಗೆ ಹೋಗಿ ಮರಳಿದ್ದೀರಿ ಎಂದು ಓದಿ ನಾ ತಿಳಿದೆ. ನನ್ನಿ, ಟೈಟಲ್ ಅಂತೆಯೇ ಬದಲಿಸುತ್ತೇನೆ :) ಪ್ರತಿಕ್ರಿಯೆಗೆ ಧನ್ಯವಾದ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರ ನೋಡಿ ದಂಗಾದೆ. ಅದು ಕೃಷ್ಣ ಸುಂದರಿಯೊ ?ಅಥವಾ ಕಳಿಂಗ ಸರ್ಪವೋ ? ಅಬ್ಬಬ್ಬಾ ಅದರ ಬಾಯಿಯನ್ನೊ ನೋಡಿದರೆ ಸಾಕು ತಲ್ಲಣವಾಗುತ್ತದೆ. ಭಟ್ಟರಿಗೆ ಭಯವಿಲ್ಲವೇನೋ ನನಗಂತೂ ತುಂಬಾ ಭಯವಾಯಿತು. ಉತ್ತಮ ಲೇಖನ ಧನ್ಯವಾದಗಳು palachandra ರವರೆ. ವಸಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೃಷ್ಣಸುಂದರಿ ಗುಣವಾಚಕ ಅಷ್ಟೆ.. ಅದು ಕಾಳಿಂಗ ಸರ್ಪಾನೇ.. ಪ್ರತಿಕ್ರಿಯೆಗೆ ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲರೇ, ಒಳ್ಳೆಯ ವ್ಯಕ್ತಿಯ ಪರಿಚಯವನ್ನು ನೀಡಿದ್ದೀರಾ. ಇ೦ಥಹವರೆಷ್ಟೋ ಜನ ಪರಿಚಯಗೊಳ್ಳದೇ ಹಾಗೇ ಉಳಿದು ಬಿಡುತ್ತಾರೆ. ಈ ಸಲದ ನಿಮ್ಮ ಕಳಸದ ಪ್ರವಾಸದ ಸ೦ಪೂರ್ಣ ಪ್ರಯೋಜನವನ್ನು ಪಡೆದಿದ್ದೀರಿ. ಸ೦ತಸವಾಯಿತು. ಚಿತ್ರಗಳೂ ಸು೦ದರವಾಗಿ ಮೂಡಿಬ೦ದಿದೆ. ನಿಮ್ಮ ಫ್ಲಿಕರ್ ನ ಕೊ೦ಡಿ ಒ೦ದ್ಸಲ ನೀಡಿ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನಿ ನಾವಡರೇ.. ನನ್ನ ಫ್ಲಿಕರ್ ಆಲ್ಬಮ್: http://www.flickr.co...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಫ್ಲಿಕರ್ ಚಿತ್ರಗಳು ಒ೦ದಕ್ಕಿ೦ತ ಒ೦ದು ಚೆನ್ನಾಗಿದೆ. ಸಕ್ಕತ್ ಛಾಯಾಗ್ರಾಹಕರು ನೀವು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚಂದ್ರ.. ಕಾಳಿಂಗ ಸರ್ಪದ ಚಿತ್ರ ನೋಡಿಯೇ ಮೈಯೆಲ್ಲಾ ಜುಮ್ಮ ಅಂತು. ಆ ಭಟ್ಟರನ್ನು ನೋಡಿದ್ರಾ.. ಕೈಯಲ್ಲೊಂದು ದೊಡ್ಡ ಬಳ್ಳಿ ಹಿಡಿದಿದ್ದೇನೆನೊ ಎನ್ನುವಂತೆ ಸಹಜವಾಗಿ ಫೋನಲ್ಲಿ ಮಾತಾಡ್ತಾ ಇದಾರೆ!. ನನಗಂತೂ ಹಾವೆಂದರೆ, ಅದರಲ್ಲೂ ಅದರ ಹರಿದಾಟ ನೋಡಿದರೆ ವಿಚಿತ್ರ ಹೆದರಿಕೆ. ಇದನ್ನು ಕೇಳಿದ ಒಬ್ಬರು ಪಿಲಿಕುಳ ಅಥವಾ ಯಾವುದಾದರೂ ಉರಗಧಾಮಕ್ಕೆ ಹೋಗಿ ಬನ್ನಿ ..ತಂತಾನೆ ಹೆದರಿಕೆ ಹೋಗುತ್ತೆ ಎಂದಿದ್ದರು. ಅಲ್ಲಿಗಿನ್ನೂ ಹೋಗಿಲ್ಲ, ಆದರೆ ನನ್ನಲ್ಲಿ ಈಗೀಗ ಸ್ವಲ್ಪ ಸುಧಾರಣೆ ಕಂಡು ಬಂದಿದೆ!:). ಚಿತ್ರಗಳು ತುಂಬಾ ಸಹಜವಾಗಿ ಬಂದಿವೆ. ಅದರಲ್ಲೂ ಬಾಯ್ತೆರದ ಹಾವಿನ ಚಿತ್ರ..ಬಹುಶ: ಈ ಎಲ್ಲ ಚಿತ್ರಗಳನ್ನ ಕೊಲಾಜ್ ಮಾಡಿ, ವಾಲ್ ಪೇಪರ ಮಾಡಿ ಒಂದು ತಿಂಗಳು ಹಾಕಿಟ್ಕೊಂಡ್ರೆ ಎಲ್ರಿಗೂ ಹಾವಿನ ಹೆದರಿಕೆ ಹೋಗುತ್ತೆ ಅಂತ ನನಗನಿಸುತ್ತೆ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಈ ಎಲ್ಲ ಚಿತ್ರಗಳನ್ನ ಕೊಲಾಜ್ ಮಾಡಿ, ವಾಲ್ ಪೇಪರ ಮಾಡಿ ಒಂದು ತಿಂಗಳು ಹಾಕಿಟ್ಕೊಂಡ್ರೆ ಎಲ್ರಿಗೂ ಹಾವಿನ ಹೆದರಿಕೆ ಹೋಗುತ್ತೆ ಅಂತ ನನಗನಿಸುತ್ತೆ ನಿಜಾ ಕಣ್ರೀ, ನಂಗೂ ಒಳ್ಳೇ ಮಾರ್ಕೆಟ್ ಸಿಕ್ಕಿದಹಾಗಾಗುತ್ತೆ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರಿಯೋ ಸುಂದರನೋ... ಒಟ್ಟಾರೆ ಸುಂದರ ಚಿತ್ರಗಳು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೇಳೋಕೆ ಮರ್ತಿದ್ದೆ, ಭಟ್ಟರನ್ನ ಕೇಳಿದೆ.. ಸುಂದರಿ ಅಂದಿದ್ರು.. ಪ್ರತಿಕ್ರಿಯೆಗೆ ನನ್ನಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಧ್ಯ, ನಮ್ಮಾಫೀಸಿನಲ್ಲಿ ಫ್ಲಿಕರ್ ಬ್ಲಾಕು! ಇಲ್ಲಾಂದ್ರೆ ಇದರ ಶೀರ್ಷಿಕೆ ನೋಡಿ, ಪುಟ ತೆಗೆದು, ಈ ಫೋಟೋಗಳೇನಾದ್ರೂ ಕಾಣಿಸಿದ್ರೆ.....! ಬದುಕಿತು ಬಡಜೀವ :) ಭಟ್ಟರು ಮಾಡುತ್ತಿರುವ ಕೆಲಸಕ್ಕೊಂದು ಹೆನ್ನನ್ನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ ಪೋಟೋಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಛೇ! ಚಿತ್ರ ಯಾವ್ದೂ ಕಾಣಿಸಲಿಲ್ವಾ.. ಮೈಲ್ ಮಾಡ್ತೀನಿ ಬಿಡಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಬ್ಬರ್ದಸ್ತ್ ಫೋಟೋ ಜಬ್ಬರ್ದಸ್ತ್ ಲೇಖನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚ೦ದ್ರರವ್ರೆ.....ಉತ್ತಮ ಲೆಖನ...ನಿಮ್ಮ ಕ್ರಿಷ್ಣ ಸು೦ದರಿಯನ್ನ ನೋಡಿ ನನ್ ಗ೦ಟಲ ಪಸೆ ಆರಿಹೋಯಿತು ಕಣ್ರಿ.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚ೦ದ್ರರೆ, ಎಲೆಮರೆಯ ಕಾಯಿಯ೦ತೆ ಉರಗ ಹಾಗೂ ಮಾನವ ಸ೦ತತಿಗೆ ಸೇವೆ ಸಲ್ಲಿಸುತ್ತಿರುವ ಪ್ರಫುಲ್ಲಭಟ್ಟರ ಕಾರ್ಯ ನಿಜಕ್ಕೂ ಶ್ಲಾಘನೀಯ. ನಾವು ಹೊರನಾಡಿಗೆ ಹೋಗುವ ಮುನ್ನ ನಿಮ್ಮ ಲೇಖನ ಬ೦ದಿದ್ದರೆ ನಮಗೂ ಅವರನ್ನು, ಜೊತೆಗೆ ಅವರ ಕೃಷ್ಣಸು೦ದರಿಯನ್ನು, ನೋಡುವ ಅವಕಾಶ ಸಿಗುತ್ತಿತ್ತು. ಇರಲಿ, ಮು೦ದಿನ ಸಲ ಬ೦ದಾಗ ಪ್ರಯತ್ನಿಸುವೆ. ಉತ್ತಮ ಚಿತ್ರ ಸಹಿತ ಲೇಖನಕ್ಕಾಗಿ ಅಭಿನ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದ.. ಅಂದ ಹಾಗೆ ಅವರು ಯಾವುದೇ ಹಾವನ್ನು ಸಾಕುತ್ತಲಿಲ್ಲ.. ಹಿಡಿದ ಒಂದೆರಡು ದಿನಗಳೊಳಗಾಗಿ ಕಾಡಿಗೆ ಬಿಡುತ್ತಾರೆ. ಮುಂದಿನ ಬಾರಿ ಹೊರನಾಡ ಕಡೆ ಹೋದರೆ ಖಂಡಿತಾ ಅವರನ್ನು ಭೇಟಿಯಾಗಿ.. ಹಾಗೆಯೇ ಕಳಸೇಶ್ವರ ದೇವಸ್ಥಾನ ಕೂಡ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯಪ್ಪಾ... ಏನ್ ಗುರೂ ಇದು... ಚಿತ್ರ ನೋಡಿ ಭಯ ಆಗ್ತದಲ್ಲ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾಳಿಂಗ ಸರ್ಪ ಕಣ್ರೀ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಗಳನ್ನು ನೋಡದೆ ಬರಿ ಲೇಖನ ಓದಬೇಕಂದ್ರೆ ..ಆಗ್ತಿಲ್ಲ....:( ಹೆದರಿಕೆ..! ಭಟ್ಟರ ಬಗ್ಗೆ ಓದಬೇಕು..ಬರೀ ಲೇಖನ ಪೋಸ್ಟ್ ಮಾಡಿದ್ರೆ ತುಂಬಾ ಥ್ಯಾಂಕ್ಸ್..:) online Terror ..:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾವು ಏನೂ ಮಾಡೋದಿಲ್ಲ, ಭಟ್ರಿದಾರೆ ಓದಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ ಲೇಖನ ಹಾಗೂ ಚಿತ್ರಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.


ಏನು ಬಣ್ಣರಿ ಈ ಸುಂದರಿಯದು..

ಸೂಪರ್,,ಮನಸೋತೆ ನಾನಿದಕ್ಕೆ..

----------------------------2 hebbavugaLa jote nagaraja !!

ಹಾವು ಎಂದರೆ ನನಗೂ ಸಿಕ್ಕಾಪಟ್ಟೆ ಹೆದರಿಕೆ ಇತ್ತು ..ಯಾಕೆ ಗೊತ್ತಿಲ್ಲ..ಆದರೆ ಒಮ್ಮೆ ಅದನ್ನ ಮುಟ್ಟಿ,ಕೊರಳಿಗೆ ಹಾಕಿಕೊಂಡ ಮೇಲೆ ಸ್ವಲ್ಪ ಹೆದರಿಕೆ ಕಮ್ಮಿ ಆಗಿದೆ..!!ಮೈ ಮೇಲೆ ಅಷ್ಟು ವಜನ್ ಅನಿಸಲ್ಲ..ಮುಟ್ಟಿದರೆ ತುಂಬಾ ಮೃದು ಆಗಿರುತ್ತದೆ..ರಬ್ಬರ್ ಹಾಗೆ..ಕೈಗೆ ಎಣ್ಣೆ ಹಚ್ಚಿ ಯಾವುದೇ ವಸ್ತು ಮುಟ್ಟಿದ ಕೂಡಲೇ ನುಣುಚಿಕೊಂಡ ಹಾಗೆ ಜಾರುತ್ತಿರುತ್ತದೆ..ಬರೋಬ್ಬರಿ ಅದರ ಕುತ್ತಿಗೆಗೆ ಕೈ ಹಿಡಿದರೆ ಕಂಟ್ರೋಲ್ ನಲ್ಲಿ ಇರುತ್ತದೆ..(ಆದರೆ ಇಲ್ಲಿ ಹಾಕಿಕೊಳ್ಳುವಾಗ ತಿಳಿದಿರಲಿಲ್ಲ,ನನ್ನ ಮುಂದೆ ಆ ಹಾವುಗಳನ್ನು ಸಾಕಿದವ ಇದ್ದ ಬಿಡಿ ..)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್.. ನಿಮ್ಮ ಅನುಭವವನ್ನೂ ಜೊತೆಗೆ ಹಂಚಿಕೊಂಡಿದ್ದಕ್ಕೆ.. ನಾನೊಮ್ಮೆ ಊರಲ್ಲಿರಬೇಕಾದ್ರೆ ಯಾವ್ದೋ ಆಟಕ್ಕೆ ಕೋಲನ್ನು ಹುಡುಕುತ್ತಾ ಇದ್ದೆ.. ಸ್ವಲ್ಪ ದೂರದಲ್ಲೇ ಒಂದು ಉದ್ದದ ಕೋಲು ಕಾಣಿಸ್ತು. ತಗೊಂಡು ಬರೋಣ ಅಂತ ಹತ್ರ ಹೋಗಿ ಇನ್ನೆನು ಅದನ್ನ ಎತ್ತಿಕೊಳ್ಳೋಣ ಅಂತ ಹೋದ ಕೂಡ್ಲೇ ಅದು ಚಲಿಸಲಾರಂಭಿಸಿತು! ಆಮೇಲೆ ಗೊತ್ತಾಯ್ತು ಅದು ಕೋಲಲ್ಲ, ನಾಗರ ಹಾವು ಅಂತ! ನಮ್ಮೂರ ಕಡೆ ಮೊದ್ಲು ಸಿಕ್ಕಾಪಟ್ಟೆ ನಾಗರ ಹಾವು.. ಜೊತೆಗೆ ಮುಂಗುಸಿ, ನವಿಲು.. ಮಳೆಗಾಲದಲ್ಲಿ ಗದ್ದೆ ತುಂಬಾ ಕಪ್ಪೆಗಳು.. ಈಗ ಈ ಮೂರು ಕೊಂಡಿ ಕೂಡ ಅಪಾಯದ ಅಂಚಿನಲ್ಲಿವೆ :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೂ ಹಾವು ಹಿಡಿಯುವುದನ್ನು ಕಲಿಯಕ್ಕೆ ತುಂಬಾನೇ ಆಸೆ. ಹಾಗಾಗಿ ಹೆದರಿಕೆ ಇಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಂಗ್ಳೂರಲ್ಲಿ ಅನೀಸ್ ಅವರನ್ನ ಭೇಟಿಯಾದ್ರೆ ಹಾವು ಹಿಡಿಯುವುದನ್ನು ಅವರು ಕಲಿಸಿಕೊಡುತ್ತಾರಂತೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಪಾಲಚಂದ್ರ, ಇಲ್ಲೇ ನಮ್ಮ ಮನೆ ಹತ್ರಾನೇ ಆಗಾಗ್ಗೆ ನೀರು ಹಾವು ನಾಗರಹಾವುಗಳು ಬರ್ತಾನೇ ಇರ್ತವೆ. ನಾನೇ ನನ್ನ ಕಲ್ಪನೆಯ ಮೇರೆಗೆ ಅದನ್ನ ಹಿಡಿಯಕ್ಕೆ ಒಂದಷ್ಟು ಹತಾರಗಳನ್ನ ರೆಡಿ ಮಾಡ್ಕೊಂಡಿದೀನಿ. ಅದಕ್ಕಾಗಿ ಬೆಂಗ್ಳೂರಿಗೆ ಟ್ರೈನಿಂಗ್‍ಗೆ ಬರಕ್ಕಾಗಲ್ಲ. ಅವಕ್ಕೂ ಗೊತ್ತಾಗಿದೆಯೇನೋ ನನ್ನ ಪ್ಲಾನ್, ಹಾಗಾಗಿ ಯಾವ ಹಾವುಗಳೂ ಇತ್ತ ಸುಳಿದಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲ ಅವರೇ, ಸಕತ್ ಧೈರ್ಯ ತೊಗೊಂಡು ಫೋಟೋ ತೆಗೆದಿದ್ದೀರಾ -[ಛಾಯಾಗ್ರಹಣದ ನಿಯಮ ಎಲ್ಲಾ ಮರೆತು] ;) ಹರಿಪ್ರಸಾದ್ ಅವರೂ ಒಂದು ಒಳ್ಳೇ (ಚಿತ್ರ ಒಳ್ಳೇದು ಅಂತ ಓದ್ಕೊಳ್ಳಿ) ಕಾಳಿಂಗಸರ್ಪದ ಚಿತ್ರ ಹಾಕಿದ್ದರು ಅನ್ನಿಸತ್ತೆ. ಕೊನೆ ಚಿತ್ರದಲ್ಲಿ ಭಟ್ರು ಒಂದು ಕೈಯಲ್ಲಿ ಕಾಳಿಂಗನ ಅಲ್ಲಲ್ಲ ಕಾಳಿಂದಿಯ ಕತ್ತು ಹಿಡ್ಕೊಂಡು, ಇನ್ನೊಂದು ಕೈಯಲ್ಲಿ ಸೆಲ್ ಫೋನ್ ಹಿಡಿದು ನಿರಮ್ಮಳವಾಗಿ ಹರಟೆ ಹೊಡೀತಾ ಇರೋದು ನೋಡಿದ್ರೆ, ನಾಗಭೂಷಣನಾದ ಈಶ್ವರನಿಗೇ ಛಾಲೆಂಜ್ ಮಾಡಿದ ಹಾಗಿದೆ :-) ನಿಮ್ಮ, ಅವರ ಇಬ್ರ ಧೈರ್ಯನೂ ಮೆಚ್ಚಬೇಕಾದ್ದೆ. ನಾವು ಮಾತ್ರ ಕಳಸಕ್ಕೆ ಹೋಗಕ್ಕೆ, ಬಳಸಾದರೂ ಸರಿ, ಕೃಷ್ಣಸುಂದರಿ ಇರೋ ಊರು ಬಿಟ್ಟು ಬೇರೆ ದಾರಿ ಹುಡ್ಕ್ಬೇಕಾಗಿದೆ. ನಾವಡರೆ, ನಿಮ್ಮನ್ನೇ ನಂಬಿದ್ದೇವೆ ಸಹಾಯಕ್ಕೆ. ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಲ್ಪ ಹೆದ್ರಿಕೆ ಹೋಯ್ತು ಈಗ :) ಹರಿ ತೆಗೆದ ಚಿತ್ರ ಪುತ್ತೂರಿನ ಐತಾಳರ ಮನೆಯಲ್ಲಿ, ನನಗೂ ಅವರೊಂದಿಗೆ ಹೋಗುವ ಅವಕಾಶ ಇತ್ತು (ನಾನಾಗ ಊರಲ್ಲೇ ಇದ್ದೆ).. ಆದರೂ ಬೇರೆ ಕೆಲಸ ಇದ್ದಿದ್ರಿಂದ ಹೋಗೋಕೆ ಆಗ್ಲಿಲ್ಲ.. ಭಟ್ಟರು ಮನುಷ್ಯರ ಜೊತೆ ಮಾತಾಡಿದ ಹಾಗೇ ಅದ್ರ ಜೊತೆನೂ ಮಾತಾಡ್ತಾರೆ.. ಅದು ಕೊಸರಾಡಿದರೆ ಸುಮ್ನಿರು ಮಾರಾಯ್ತಿ.. etc :) ಹೊರನಾಡ ಕಡೆ ಹೋದ್ರೆ, ಆಗುಂಬೆ ಹತ್ರ ಇರೋ "Whitekar King Cobra Observation camp"ಗೆ ಭೇಟಿ ಕೊಡಿ. ನನ್ನ ಮಿತ್ರ suggest ಮಾಡಿದ್ದು.. ಕಾಳಿಂಗ ಸರ್ಪ, ಅದರ ಗೂಡು, ಮೊಟ್ಟೆ ಎಲ್ಲಾ ತೋರಿಸ್ತಾರಂತೆ.. ಅದೂ ಸಾಕಿದ್ದಲ್ಲ, ಕಾಡಲ್ಲಿ.. ಗೂಡು ಕಟ್ಟಿ ಮೊಟ್ಟೆ ಇಡುವ ಏಕೈಕ ಹಾವು ನಿಮ್ಮಲ್ಲಿ ಆಸಕ್ತಿ ತರಬಹುದು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<. ಕಾಳಿಂಗ ಸರ್ಪ, ಅದರ ಗೂಡು, ಮೊಟ್ಟೆ ಎಲ್ಲಾ ತೋರಿಸ್ತಾರಂತೆ.. ಅದೂ ಸಾಕಿದ್ದಲ್ಲ, ಕಾಡಲ್ಲಿ.. ಗೂಡು ಕಟ್ಟಿ ಮೊಟ್ಟೆ ಇಡುವ ಏಕೈಕ ಹಾವು ನಿಮ್ಮಲ್ಲಿ ಆಸಕ್ತಿ ತರಬಹುದು..>> ಅಯ್ಯಬ್ಬ, ನೀವೂ ಸರಿನೆ, ನನಗೆ ಹಲ್ಲಿ, ಹಾವ್ರಾಣಿ ಅಂದ್ರೇನೆ ಭಯ ಇನ್ನ ಕಾಳಿಂಗ ಸರ್ಪದ ಗೂಡಿನ ಹತ್ರ ಹೋಗೋದೇ? ಗೂಡು ಕಟ್ಟಿ, ಮೊಟ್ಟೆ ಇಟ್ಟು ನೆಮ್ಮದಿಯಾಗಿ ದೂರದ ಕಾಡಿನಲ್ಲಿರಲಿ ಕಾಳಿಂಗ! ನಾನು ನಮ್ಮೂರಲ್ಲಿ ನ್ಯಾಷನಲ್ ಜಿಯಾಗ್ರಫಿ ಚಾನೆಲ್ಲೋ, ನಿಮ್ಮ ಫ್ಲಿಕರ್ರೋ ನೋಡ್ತಾ ಥಣ್ಣಗೆ ಇರ್ತೀನಿ. ನಾವು ೧೯೯೮ನಲ್ಲಿ ಕೊಲ್ಲೂರಿಗೆ ಹೋದಾಗ ಕಾರಿಗೆ ಒಂದು ಕಾಳಿಂಗ ಅಡ್ಡ ಬಂದಿತ್ತು. ಎಲ್ಲ ಕಿಟಕಿ ಭದ್ರವಾಗಿ ಏರಿಸ್ಕೊಂಡು ನಮೋ ನಮೋ ಅಂತಿದ್ವಿ. ಊರು (ಶಿವಮೊಗ್ಗ) ಬಂದರೂ ಕೆಳಗಿಳಿಯಕ್ ಭಯ! ಕಾರ್ ಮೇಲೆ ಏನಾದರೂ ಹತ್ಕೊಂಡ್ ಬಂದಿದ್ರೆ ಅದು ಅಂತ. ನಮ್ ಏರಿಯಾದಲ್ಲಿ ವಿಷಾಕ್ತ ಹಾವುಗಳಿಲ್ವಂತೆ -ಮನೆ ಹತ್ರ ನೀರ್ ಹಾವುಗಳು ಬರತ್ವೆ ಒಂದೊಂದ್ಸಲ. ಲಾನ್ ಮಾಡೋವ್ರ ಕೈಯಲ್ಲಿ ಮೊದಲು ದೂರ ಬಿಡಸ್ತೀನಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಅಯ್ಯಬ್ಬ, ನೀವೂ ಸರಿನೆ, ನನಗೆ ಹಲ್ಲಿ, ಹಾವ್ರಾಣಿ ಅಂದ್ರೇನೆ ಭಯ ಇನ್ನ ಕಾಳಿಂಗ ಸರ್ಪದ ಗೂಡಿನ ಹತ್ರ ಹೋಗೋದೇ?>> ಬೇರೆ ಎಲ್ಲ ವಿಷಯಗಳಲ್ಲಿ ಗಂಡಸರನ್ನ ಹೆದರಿಸೋ ಹೆಂಗಸರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳೋಕ್ಕೆ ದೇವರು ಗಂಡಸರಿಗೆ ಇದೊಂದು ವಿಷಯದಲ್ಲಿ ವರಕೊಟ್ಟಿದಾನಂತೆ. ಹಲ್ಲಿ ಜಿರಳೆ, ಹಾವುರಾಣಿ ಎಲ್ಲ ನೋಡಿ ಹೆಂಗಸರು ಹೆದರಿಕೊಳ್ಳೋ ಹಾಗೆ. :)))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೋ ಹೌದಾ.. ಉರಗೋಫೋಬಿಯಾ :) ಕೆಲವ್ರಿಗೆ ಹೆದ್ರಿಕೆಗಿಂತ ಹೇಸಿಗೆ ಇರುತ್ತೆ ಇವನ್ನು ನೊಡೋಕೆ. ನಂಗೂ ಇಂತದ್ದು ಕೆಲವು ಇವೆ.. ಎತ್ತರ ನೋಡಿದ್ರೆ ಹೆದ್ರಿಕೆ.. ಬೆಟ್ಟ ಹತ್ತಿ ಹತ್ತಿ ಈಗ ಸ್ವಲ್ಪ ಕಮ್ಮಿಯಾಗಿದೆ.. ನೀರೋಫೋಬಿಯಾ.. ಪೂರ್ತಿಯಾಗಿ ಇನ್ನೂ ಹೋಗಿಲ್ಲ.. ರಿವರ್ ರಾಫ್ಟಿಂಗ್ ಮಾಡಿ ನೋಡ್ಬೇಕು ಒಮ್ಮೆ.. ಹಾವು ಸ್ವಲ್ಪ ಭಯ ಇದೆ.. ಹೀಗೆ ನೋಡ್ತಾ ನೋಡ್ತಾ ಹೋಗಬಹುದೇನೋ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಲಚಂದ್ರ ಅವರೆ, ಉತ್ತಮ ಫೋಟೊ ಮತ್ತು ಲೇಖನ, ಉತ್ತಮ ಛಾಯಾಗ್ರಾಹಕ ಮತ್ತು ಬರಹಗಾರರಿಂದ ಮೂಡಿಬಂದಿದೆ. ಚನ್ನಾಗಿದೆ ಎಂದು ಪ್ರತ್ಯೇಕ ಹೇಳಬೇಕಾದುದಿಲ್ಲ. ಹಿಂದೆ ಹಿಂದೆ ನಮ್ಮೂರಿನವರೇ ಆದ ಗಣಪತಿ ಹೆಗಡೆ ಅವರು ಹಾವುಗಳನ್ನು ಹಿಡಿದು ಸಾಕುತ್ತಿದ್ದರು. ಆವರು ಈಗ ಇಲ್ಲ. ಮೈಸೂರಿನ ಸ್ನೇಕ್‌ ಶಾಮ್‌ ವರನ್ನು ಒಮ್ಮೆ ಶಾಲಾ ಮಕ್ಕಳಿಗೆ ಹಾವಿನ ಪ್ರದರ್ಶನ ನೀಡಿ, ಪರಿಚಯಮಾಡಿಸಲು ಸೋಮವಾವ ಪೇಟೆಗೆ ಕರೆಸಿದ್ದೆವು. ಹಾಗೆ ಸಾಗರದ ಎಲ್‌.ಬಿ. ಕಾಲೇಜಿನ ಶೀನಣ್ಣ ಅನೇಕ ಹಾವುಗಳನ್ನು ಹಿಡಿದು ತಂದಿದ್ದು, (ಶೀನಣ್ಣ ಈಗ ಕಾರಣಾಂತರದಿಂದ ಬಿಟ್ಟು ಬಿಟ್ಟಿದ್ದಾರೆ) ಮನ್ಮಥಕುಮಾರ್‌ ಹಾವು ಹಿಡಿದು ತಂದಿದ್ದು ಎಲ್ಲವುಗಳನ್ನು ನೆನಪಿಗೆ ತಂದವು. ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ.. ನನ್ನ ಲೇಖನ ಓದಿ ನಿಮಗೆ ಹಳೇ ನೆನಪು ಬಂದಿದ್ದು ಕೇಳಿ ಖುಷಿಯಾಯ್ತು.. ನೀವು ಈ ಹಿಂದೆ ಹಾಕಿದ ಹಸಿರು ಹಾವನ್ನು ನಾನು ಇದುವರೆಗೆ ನೋಡಲೇ ಇಲ್ಲ... ನೋಡಬೇಕು ಅಂತ ಆಸೆ ಇದೆ.. ಮುಂದೆ ಯಾವಾಗ್ಲಾದ್ರೂ ಕಾಣಲು ಸಿಗಬಹುದೇನೋ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.