ಸಂಪದ ಬಗ್ಗೆ ಸುಧಾದಲ್ಲಿ ನನ್ನ ಲೇಖನ

0
ಸ್ನೇಹಿತರೆ, ಸುಧಾ ವಾರಪತ್ರಿಕೆಯಲ್ಲಿ ಸಂಪದದ ಬಗ್ಗೆ ನನ್ನ ಲೇಖನ ಹೋದ ವಾರ ಪ್ರಕಟವಾಗಿತ್ತು. ಅವುಗಳನ್ನು ಸ್ಕಾನ್ ಮಾಡಿ ನನ್ನ ತಾಣದಲ್ಲಿ ಸೇರಿಸಿದ್ದೇನೆ. ಅವುಗಳನ್ನು ಇಲ್ಲಿ ಓದಬಹುದು -[http://www.vishvakan...|ಪುಟ-೧] ಮತ್ತು [http://www.vishvakan...|ಪುಟ-೨]. ನಾಡಿಗರೆ, ನೀವು ಈ ಚಿತ್ರಗಳನ್ನು ಸಂಪದ ತಾಣಕ್ಕೆ ಪ್ರತಿ ಮಾಡಿಕೊಂಡು ಅವುಗಳನ್ನು ಶಾಶ್ವತವಾಗಿ ಇಲ್ಲಿಯೇ ಇಟ್ಟುಕೊಳ್ಳಬಹುದು. ನಮ್ಮ ಬಗ್ಗೆ ಮಾಧ್ಯಮದಲ್ಲಿ ಎಂಬ ಒಂದು ಹೊಸ ಕೊಂಡಿ ಸೇರಿಸಿ. ಇಂದು ಬೆಳಿಗ್ಗೆ ಕಥೆಗಾರ ವಸುಧೇಂದ್ರ ಅವರು ಫೋನಾಯಿಸಿದ್ದರು. ಅವರು ಫೋನು ಮಾಡಿದ್ದು ಇಂದು ಮಾರಕಟ್ಟೆಗೆ ಬಂದಿರುವ ಸುಧಾದಲ್ಲಿ ಗೂಗ್ಗ್ ಅರ್ಥ್ ಬಗ್ಗೆ ಪ್ರಕಟವಾಗಿರುವ ನನ್ನ ಲೇಖನ ಚೆನ್ನಾಗಿದೆ ಎಂದು ಹೇಳಲು. (ಅಂದ ಹಾಗೆ ಇಲ್ಲಿ ಎಷ್ಟು ಜನ ನನ್ನ ಈ ಲೇಖನ (ಗೂಗ್ಲ್ ಅರ್ಥ್‌ ಬಗ್ಗೆ) ಓದಿದ್ದೀರಾ? ಓದಿದ್ದರೆ ಏನನ್ನಿಸಿತು?) ಹೀಗೆ ಮಾತನಾಡುತ್ತಿದ್ದಾಗ ಸಂಪದ ತಾಣ ನೋಡಿದ್ದೀರಾ ಎಂದು ಕೇಳಿದೆ. ನೋಡಿದ್ದೇನೆ. ಅದರ ಬಗ್ಗೆ ಸುಧಾದಲ್ಲಿ ಬಂದ ನಿಮ್ಮ ಲೇಖನವನ್ನೂ ಓದಿದ್ದೇನೆ ಎಂದರು. ಸಂಪದ ನಿಜಕ್ಕೂ ಚೆನ್ನಾಗಿದೆ. ಕನ್ನಡಕ್ಕೆ ನಿಜವಾಗಿಯೂ ಇಂತಹದೊಂದು ತಾಣದ ಅಗ್ಯವಿತ್ತು. ಅದು ಈಗ ಕೂಡಿ ಬಂದಿದೆ ಎಂದರು. ಸಾಧ್ಯವಾದಾಗ ನಾನೂ ಅಲ್ಲಿ ಒಂದಿಷ್ಟು ಲೇಖನ ಸೇರಿಸುತ್ತೇನೆ ಎಂದಿದ್ದಾರೆ. ಕಾದು ನೋಡೋಣ. ಸಿಗೋಣ, ಪವನಜ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮ್ಮ ಗೂಗಲ್ ಅರ್ಥ್ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸಂಪದದ ಪರಿಚಯ ಲೇಖನ ಕೂಡಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದರ ಬಗ್ಗೆ ಕೇಳಿದ್ದೆ ಆದರೆ ಈಗ ಓದಲು ಸಾದ್ಯ ವಾಯಿತು, ತುಂಬಾ ಧನ್ಯವಾದಗಳು! ನಿಮ್ಮ ಗೂಗಲ್ ಉದಾಹರಣೆ ಮಳೆ ಹೊಡದಂಗಿತ್ತು! ಒಂದು consolation ವಿಷಯ ಏನೆಂದರೆ atleast bendre kannada ಹುಡುಕಿದರೆ ಗೂಗಲ್ ಸರಿಯಾದ ಉತ್ತರಗಳನ್ನು ನೀಡುತ್ತದೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

tumba chennagittu. computainalli earth site tegedu nodidevu.entha lekhanagalu agaga bareyuttiri.namma taleyoo sudhariseetu
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.