ಮಣ್ಣಲ್ಲಿ ಮಣ್ಣಾಗುವ ತನಕ

4.5

ಇಂದು ಹುಟ್ಟಿ ನಾಳೆಮಣ್ಣಾಗುವ ಈ ಜೀವಕೆ
ಏನೆಲ್ಲಾ ಬೇಕು

ಮಣ್ಣಲ್ಲಿ ಮಣ್ಣಾಗುವ ತನಕ ಈ ಜೀವ ಹಪಹಪಿಸುತ್ತಾ ಇರುತ್ತದೆ
ಒಬ್ಬ ಒಳ್ಳೆಯ ವ್ಯಕ್ತಿಯ್ಯಾಗುವಾಸೆ
ಒಂದು ಸುಂದರ ಸಮಾಜ ಕಟ್ಟುವಾಸೆ
ಒಂದು ಸುಂದರ ಸಮಾಜದೊಂದಿಗೆ ಬೆರೆಯುವಾಸೆ
ನಮ್ಮ ಅನುಭವವನ್ನು ಇನ್ನೊಬ್ಬರ ಹತ್ತಿರ ಹೇಳ ಬೇಕೆನ್ನುವಾಸೆ
ನಮ್ಮ ಭಾವನೆಗಳನ್ನು ಬೇರೊಬ್ಬರ ಹತ್ತಿರ ಹೇಳಿಕೊಳ್ಳ ಬೇಕೆನ್ನುವಾಸೆ

ಎಲ್ಲವು ಮಣ್ಣಲ್ಲಿ ಮಣ್ಣಾಗುವ ತನಕ
ಚಿತೆಯಲ್ಲಿ ಸುಟ್ಟು ಭಸ್ಮವಾಗುವತನಕ

ಯಾರದೋ ನೀರೀಕ್ಷೆಗಾಗಿ ಕಾಯುತ್ತಿರುವ ನಾವು
ಯಾರದೋ ಭರವಸೆಗಾಗಿ ದಾರಿನೋಡುವ ನಾವು
ಯಾರದೋ ದುಃಖಕ್ಕೆ ಸ್ವಾಂತ್ವನ ಹೇಳುವ ನಾವು

ಎಲ್ಲವು ಮಣ್ಣಲ್ಲಿ ಮಣ್ಣಾಗುವ ತನಕ
ಚಿತೆಯಲ್ಲಿ ಸುಟ್ಟು ಭಸ್ಮವಾಗುವತನಕ

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ ಪವನ್ ರವರೇ ಜೀವನ ಎನ್ನುವುದು ಇಷ್ಟೆ ತಾನೇ ಆದರೆ ನಿರೀಕ್ಷೆ, ಕಾತರ, ಛಲ, ಹೊರಾಟ ಇವುಗಳು ಬದುಕಿನಲ್ಲಿ ಬಂದಾಗ ಮಾತ್ರ ಬದುಕಿನಲ್ಲಿ ಇಂದು ಕಳೆ ಬರುತ್ತದೆ ಬದುಕಬೇಕು ಮತ್ತು ಹೇಗೆ ಬದುಕಬೇಕು ಎಂಬ ದಾರಿ ತೋರಿಸುತ್ತದೆ. ನಿಮ್ಮ ಕವನ ಚೆನ್ನಾಗಿದೆ ಮುಂದುವರಿಸಿ ಧನ್ಯವಾದಗಳು ನಿಮ್ಮ ಕವನಕ್ಕೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಿಮ್ಮ ಪ್ರತಿಕ್ರೀಯೆಗೆ, ಹೀಗೆ ಪ್ರತಿಕ್ರೀಯಿಸುತ್ತಾಯಿರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿದೆ...

ನಿನ್ನೆ ಹುಟ್ಟಿ ನಾಳೆ
ಮಣ್ಣಲ್ಲಿ ಮಣ್ಣಾಗುವ ತನಕ
ಈ ಜೀವ ಹಪಹಪಿಸುವ ತವಕ|

ಒಳ್ಳೆಯವನಾಗುವಾಸೆ
ಸುಂದರ ಸಮಾಜ ಕಟ್ಟುವಾಸೆ
ಎಲ್ಲರೊಂದಿಗೆ ಬೆರೆಯುವಾಸೆ
ಅನುಭವವ ಹೇಳುವಾಸೆ
ಭಾವನೆಗಳ ಹಂಚಿಕೊಳ್ಳುವಾಸೆ|

ಎಲ್ಲವು ಮಣ್ಣಲ್ಲಿ ಮಣ್ಣಾಗುವ ತನಕ
ಚಿತೆಯಲ್ಲಿ ಸುಟ್ಟು ಭಸ್ಮವಾಗುವತನಕ

ಕಾಯುತಿರುವೆವು ಯಾರದೋ ನೀರೀಕ್ಷೆಗಾಗಿ|
ಕಾಯುತಿರುವೆವು ಯಾರದೋ ಭರವಸೆಯ ನುಡಿಗಾಗಿ|
ಕಾಯುತಿರುವೆವು ಯಾರದೋ ಸಾಂತ್ವನ ನುಡಿಗಾಗಿ|

ಎಲ್ಲವು ಮಣ್ಣಲ್ಲಿ ಮಣ್ಣಾಗುವ ತನಕ
ಚಿತೆಯಲ್ಲಿ ಸುಟ್ಟು ಭಸ್ಮವಾಗುವತನಕ
-------------------------------------------------
ಪವನ್,
ನಿಮ್ಮ ಕವನದ ಕೆಲವು ಪದಗಳ ಕಿತ್ತು ಹಾಕಿರುವೆ, ಪ್ರಾಸಕ್ಕೆ ಸರಿ ಹೊಂದಲೆಂದು.ಎಷ್ಟೊಂದು ಪದಗಳು ಕಡಿಮೆಯಾಯ್ತು ನೋಡಿ, ಅಂತೆಯೇ ಭಾವವೂ ಬತ್ತಿಲ್ಲವೆಂದುಕೊಳ್ಳುವೆ.
ನಿನ್ನೆ ಹುಟ್ಟಿ ಇಂದು ಬದುಕಿ ನಾಳೆ ಸಾಯುವ ಈ ಜೀವಕೆ ಅದೆಷ್ಟು ಆಸೆ,ದುರಾಸೆ,ಅಹಂಕಾರ? ಎನ್ನುವ ನಿಮ್ಮ ಕವನದ ವಸ್ತು ಹಿತವಾಗಿದೆ. ಆದರೆ ಜೀವನವೇ ಹಾಗೆ.
ಅಂತೂ ಕವನ ಬರೆಯುವುದ ಮುಂದುವರೆಸಿ, ನಿಮ್ಮ ಕವನದ ಕಸಿ ಮಾಡಲು ನಾನಾರು? ಎಂದು ನಿಮಗನ್ನಿಸಿದರೆ ಮುಂದೆ ಅಂತಾ ದುಸ್ಸಾಹಸ ಮಾಡುವುದಿಲ್ಲ. ಆಯ್ತಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ನಿಮ್ಮ ಪ್ರತಿಕ್ರೀಯೆಗೆ, ಹೀಗೆ ಪ್ರತಿಕ್ರೀಯಿಸುತ್ತಾಯಿರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಣ್ಣಲ್ಲಿ ಮಣ್ಣಾಗುವ ತನಕವೇ ಎಲ್ಲರದೂ ಜೀವನ
ಮಣ್ಣಾಗುವ ಯೋಚನೆಯೊಂದೇ ಸದಾ ಕಾಲ
ಇದ್ದೊಡೆ ಜೀವನದಲಿ ಜೀವ ಇರದು ಆದೀತು ವನ

>>ಯಾರದೋ ನೀರೀಕ್ಷೆಗಾಗಿ ಕಾಯುತ್ತಿರುವ ನಾವು<<
ಯಾರದೋ ನಿರೀಕ್ಷೆಯಲ್ಲಿ ಕಾಯುತ್ತಿರುವ ನಾವು ಅನ್ನುವುದು ಸೂಕ್ತವೆನಿಸೀತು, ಅಲ್ಲವೇ?
ನಿರೀಕ್ಷೆಗಾಗಿ ಕಾಯುವುದಿಲ್ಲ. ಯಾರಿಗಾಗಿಯೋ ಕಾಯುತ್ತೇವೆ. ಅಲ್ಲಿ ಯಾರದೋ ನಿರೀಕ್ಷೆ ಇರುತ್ತದೆ.

ಕವನ ಬರೆಯುವುದು ಹೇಗೆ ಇಷ್ಟವೋ ಓದುವುದೂ ಅಷ್ಟೇ ಇಷ್ಟ ನನಗೆ.
ಹೀಗೆ ಬರೆಯುತ್ತಿರಿ. ಪ್ರತಿಕ್ರಿಯಿಸುತ್ತ ಇರುತ್ತೇನೆ ಅನಿಸಿದಂತೆ ನನಗೆ