ಅಮ್ಮ

4.25

ಅಮ್ಮ
 ನೆರಿಗೆ ಲಂಗ ಚಿಮ್ಮಿಸಿಕೊಂಡು
ಓಡಾಡಿಕೊಂಡಿದ್ದ ಸಮಯ,
ವಯಸ್ಸು ತಿಳಿಯುವ ಮೊದಲೇ ,
ಕೊರಳಿಗೆ  ಮೂರು ಗಂಟು,

ಅವಳಿಗೆನಾಗಿತ್ತು ಅಂತ ಮಹಾವಯಸ್ಸು ,
ಆಡಿಸಿ,ಕೂಡಿಸಿ ,ಕಳೆದರೆ ಈಗಿರುವ ನನ್ನ
ವಯಸ್ಸಿಗಿಂತ ಮೂರು ನಾಲಕ್ಕು ವರ್ಷ
ಹೆಚ್ಚು....

ವಿಧಿಗೆ ಅಪ್ಪ ಬಹಳ ಇಷ್ಟವಾಗಿದ್ದ,
ಗೊತ್ತಿಲ್ಲ ಗುರಿಯಿಲ್ಲ ಹೇಳದೆ ಕೇಳದೆ
ಬಾರದ ಲೋಕಕ್ಕೆ ಹೋಗಿಬಿಟ್ಟ.

ಅಮ್ಮನ ಬಗಲಲ್ಲಿ ಎಳೆಯ ಕಂದಮ್ಮಗಳು ....
ಬದುಕೇ ದುಸ್ತರವಾಗಿರುವಾಗ
ಬದುಕಿನ ದಾರಿ ಕಣ್ಣಿಗೆ
ನಿಲುಕದಷ್ಟು ದೂರ.....
ಪಾಪ..ಹೆತ್ತಳು ,ಹೊತ್ತಳು
ನೆತ್ತರ ಸುರಿಸಿ ಬದುಕಿದಳು
ಬದುಕ ಕಲಿಸಿಕೊಟ್ಟಳು.

ನಾವು ನಮ್ಮ ನಮ್ಮ ಗೂಡುಗಳಲ್ಲಿ
ಬೆಚ್ಚಗಿದ್ದೇವೆ... ....
ಅಮ್ಮ ಅದೇ ಹಳೆಯ ರಾಜಿಯಾದರು
ರಾಜಿಯಾಗದ ನೆನಪುಗಳೊಂದಿಗೆ...

ಆದರೂ....ಅವಳ ಸ್ಪರ್ಶದಲ್ಲಿ...
ಸುಕ್ಕುಗಟ್ಟಿದ ನೆರಿಗೆಗಳಲ್ಲಿ....
ಸಾರ್ತಕತೆಯ...ನೆಮ್ಮದಿ

ಪವಿತ್ರ ಪ್ರಶಾಂತ್

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪವಿತ್ರಾರವರೆ, ಸೊಗಸಾದ ಕವನ. ಮೆಚ್ಚಿಗೆಯಾಯಿತು. ನಮಸ್ಕಾರ, ನನ್ನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು.... ಅಮ್ಮ ಎಂಬ ಎರಡು ಅಕ್ಷರಕ್ಕೆ ನನ್ನ ಕವನ ಎಷ್ಟು ನ್ಯಾಯ ಒದಗಿಸಿ ಕೊಟ್ಟಿದೆ ಗೊತ್ತಿಲ್ಲ...ನನ್ನ ಬಾಲಿಶ ಬರಹಗಳಿಗೆ ನಿಮ್ಮ ಪ್ರೋತ್ಸಾಹವಿರಲಿ

ಪವಿತ್ರ ಅವರೇ ಕವನ ಅರ್ಥವತ್ತಾಗಿದೆ ಅಮ್ಮನ ನೆನಪು ತಂದಿತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು.... ಅಮ್ಮ ಎಂಬ ಎರಡು ಅಕ್ಷರಕ್ಕೆ ನನ್ನ ಕವನ ಎಷ್ಟು ನ್ಯಾಯ ಒದಗಿಸಿ ಕೊಟ್ಟಿದೆ ಗೊತ್ತಿಲ್ಲ...ನನ್ನ ಬಾಲಿಶ ಬರಹಗಳಿಗೆ ನಿಮ್ಮ ಪ್ರೋತ್ಸಾಹವಿರಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನೋಜ್ಞ ಕವನ, ಪವಿತ್ರ. ಸಂಪದಕ್ಕೆ ಸುಸ್ವಾಗತ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು.... ಅಮ್ಮ ಎಂಬ ಎರಡು ಅಕ್ಷರಕ್ಕೆ ನನ್ನ ಕವನ ಎಷ್ಟು ನ್ಯಾಯ ಒದಗಿಸಿ ಕೊಟ್ಟಿದೆ ಗೊತ್ತಿಲ್ಲ...ನನ್ನ ಬಾಲಿಶ ಬರಹಗಳಿಗೆ ನಿಮ್ಮ ಪ್ರೋತ್ಸಾಹವಿರಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

........"ಆದರೂ....ಅವಳ ಸ್ಪರ್ಶದಲ್ಲಿ... ಸುಕ್ಕುಗಟ್ಟಿದ ನೆರಿಗೆಗಳಲ್ಲಿ.... ಸಾರ್ತಕತೆಯ...ನೆಮ್ಮದಿ" ಪವಿತ್ರ ಅವರೇ, ಬಹಳ ಭಾವಭರಿತವಾಗಿದೆ ನಿಮ್ಮ ಕವನ, ಕೆಲವೇ ಸಾಲುಗಳಲ್ಲಿ ಅಮ್ಮನ ಜೀವನದ ಸಾರ್ಥಕ್ಯತೆಯನ್ನು ಬಹಳ ಚೆನ್ನಾಗಿ ಬಿಂಬಿಸಿದ್ದೀರಿ. ನನ್ನ ಅಮ್ಮನ ನೆನಪಾಯಿತು. ಅಮ್ಮನ ಮಡಿಲು, ಸ್ಪರ್ಶಕ್ಕಿರುವ ಸಂಜೀವಿನಿ ಶಕ್ತಿ ಬೇರೆಲ್ಲೂ ಕಾಣಸಿಗದು. ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಶ್ಯಾಮಲಾ ಅವರೇ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು.... ಅಮ್ಮ ಎಂಬ ಎರಡು ಅಕ್ಷರಕ್ಕೆ ನನ್ನ ಕವನ ಎಷ್ಟು ನ್ಯಾಯ ಒದಗಿಸಿ ಕೊಟ್ಟಿದೆ ಗೊತ್ತಿಲ್ಲ...ನನ್ನ ಬಾಲಿಶ ಬರಹಗಳಿಗೆ ನಿಮ್ಮ ಪ್ರೋತ್ಸಾಹವಿರಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪವಿ ... ಸೂಪರ್ ಮಾರಾಯ್ತಿ ..ಚೆನ್ನಾಗಿದೆ ... ಸಂಪದ ಕ್ಕೆ ಸ್ವಾಗತ ... ನಿನ್ನ ಎಲ್ಲ ಹಳೆ ಕವನ ಗಳನ್ನೂ ಪೋಸ್ಟ್ ಮಾಡು ...... ಇನ್ನೂ ಬರಿ.......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿದೆ... ಆದ್ರೆ ಅಕ್ಷರಗಳು ತುಂಬಾ ಚಿಕ್ಕದಾಗಿ ಕಾಣಿಸುತ್ತಿದೆ.. ಕಷ್ಟ ಪಟ್ಟು ಓದಬೇಕಾಯಿತು... ಮಂಸೋರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಳ್ ಛಂದ ಬರದೀರಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಏಕೋ ಬೇ೦ದ್ರೆಯವರ ’ಪುಟ್ಟ ವಿಧವೆ’ ನೆನಪಾಯ್ತು.ಮನ ಮಿಡಿಯುವ ಕವನ . ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೊಗಸಾದ ಕವನ ಪವಿತ್ರರವರೆ... ಅಮ್ಮನ ನೆನಪಾಯಿತು. ನನ್ನಿ ವೆ೦ಕಟೇಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪವಿತ್ರ, ಓದುತ್ತಾ ಹೋದಂತೆ ಗಂಟಲಲ್ಲಿ ಏನೋ ಸಿಕ್ಕಿಹಾಕಿಕೊಂಡಂತ ಅನುಭವವಾಯ್ತು... ಉಸಿರು ಸ್ಥಿಮಿತ ತಪ್ಪಿದಂತೆ... ಮೈಯೆಲ್ಲಾ ತಣ್ಣಗಾಗಿ ರೋಮ ರೋಮಗಳು ಎದ್ದು ನಿಂತ ಅನುಭವ... ಅಮ್ಮ ಅನ್ನುವ ಎರಡಕ್ಷರಗಳಲ್ಲಿ ತುಂಬಿರುವ ಅರ್ಥ ಬಹುಷಃ ಬೇರಾವ ಪದಗಳಲ್ಲೂ ತುಂಬಿಲ್ಲ ಅಂತ ಅನಿಸುತ್ತದೆ. ಕೆಲವು ಅನುಭವಗಳು ಅನುಭವಿಸಿದವರಿಗಷ್ಟೇ ಗೊತ್ತು. ಪದಗಳಿಂದ ಎಷ್ಟೇ ಬಣ್ಣಿಸಿದರೂ, ಬಣ್ಣಿಸಲಿನ್ನೂ ಉಳಿದಿರುತ್ತದೆ ಸಾಕಷ್ಟು. ನಿಮ್ಮ ಶೈಲಿ ಇಷ್ಟ ಆಯ್ತು. ನಿಮ್ಮ ಬರಹದಲ್ಲಿ ಮಗುವಿನ ಮನಸ್ಸು ಇದೆಯಾದರೂ, ನಿಮ್ಮ ಪರಿಚಯದಲ್ಲಿ ಹೇಳಿಕೊಂಡಂತೆ ಅದರಲ್ಲಿ ಬಾಲಿಶವಾದ ಅಂಶಗಳು ಕಂಡುಬರಲಿಲ್ಲ. :) - ಆತ್ರಾಡಿ ಸುರೇಶ ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಳ ಛಲೋ ಬರ್ದಿರೀ, ಅಕ್ಷರ ಸ್ವಲ್ಪ ದೊಡ್ಡದಾಗಿ ಮಾಡ್ರೀ.. -ಅಶ್ವಿನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪವಿತ್ರಾರವರೆ ಕವನ ತು೦ಬ ಚೆನ್ನಾಗಿದೆ. ನಾವೆಷ್ಟೇ ತಪ್ಪುಗಳನ್ನು ಮಾಡಿದ್ರು ಅದನ್ನು ತಿದ್ದಿ, ಕ್ಷಮಿಸೋದು 'ಅಮ್ಮ' ಮಾತ್ರ ಅಲ್ವ. 'ನನ್ನಮ್ಮ' ಕೂಡ ತು೦ಬ ಕಷ್ಟ ಪಟ್ಟಿದ್ರು ನಮ್ಮನ್ನು ಸಾಕಿಬೆಳೆಸೋದಕ್ಕೆ. ನನಗೆ ಆ ದಿನಗಳ ನೆನಪಾಯ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕವಿತೆ ಹೊಗಳಲು ನನ್ನ ನಿಘಂಟಿನಲ್ಲಿ ಸಾಕಷ್ಟು ಪದಗಳಿಲ್ಲ. ನಿಮ್ಮ ಪ್ರತಿಭೆಗೆ ನಾನು ಮೂಕವಿಸ್ಮಿತಳು