ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು

4.25

ಕಣ್ಣ೦ಚಲ್ಲೇ ಉಳಿದ ಕೆಲವು ಹನಿಗಳು

ತುಟಿ ತೆರೆಯದಿದ್ದರೂ...
ಕಣ್ಣುಗಳಲ್ಲೇ ಮಾತುಗಳ
ವಿನಿಮಯ
ಮೊದಲ ಬಾರಿಗೆ ಗೊತ್ತಾಗಿತ್ತಲ್ಲ
ನಿನಗೆ,
ನಾ ಬರೀ ಭಾವುಕಳೆ೦ದು

ಸ್ವಚ್ಚ ಕೊಳ,ಶುಧ್ದ ಕನ್ನಡಿ
ಅತ್ತರೆ ಅತ್ತೀತು,ನಕ್ಕರೆ ನಕ್ಕೀತು,
ಸ್ಪಷ್ಟ ಬಿ೦ಬದ ಚಲನೆ
ಅರ್ಥವಾಗುವ ಛಾಯೆ

ಸುಳ್ಳಿನ ಮೇಲೊ೦ದು ಸುಳ್ಳು...
ನೀನು ಹೇಳುತ್ತಿರುವುದು
ಸುಳ್ಳೆ೦ದು ನಿನಗೂ ಗೊತ್ತು
ಅದೆಲ್ಲಾ ನಿಜವಲ್ಲವೆ೦ದು
ನನಗೂ ಗೊತ್ತು......

ದಯವಿಟ್ಟು ಸಾಕು ಮಾಡು.....
ಎಲ್ಲವನ್ನೂ........
ಮಳೆ ಸುರಿವಮೊದಲು
ಹರಿದ ಬದುಕಿಕೊ೦ದು
ಸೂರನ್ನಾದರೂ ಕಟ್ಟಿಕೊಳ್ಳೋಣ......
ಯಾರು ಬಲ್ಲರು....
ನಾಳೆ ನಮ್ಮ ಮನೆಯ೦ಗಳದಲ್ಲೂ
ಹೊಸ ಸೂರ್ಯ ಉದಯಿಸಬಹುದು
ನಕ್ಕುಬಿಡು ಒಮ್ಮೆ,
ಸ್ವಚ್ಚವಾಗಿ......
ಮತ್ತೆ ಬದುಕ ಅಪ್ಪಿಕೊಳ್ಳೋಣ.....
ಹಿ೦ತಿರುಗಿ ನೋಡದೆ.

ಪ್ರೀತಿಯಿ೦ದ
ಪವಿತ್ರ

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಕತ್... ಪವಿತ್ರಾಜಿ. >>ಸ್ವಚ್ಚ ಕೊಳ,ಶುಧ್ದ ಕನ್ನಡಿ ಅತ್ತರೆ ಅತ್ತೀತು,ನಕ್ಕರೆ ನಕ್ಕೀತು, ಸ್ಪಷ್ಟ ಬಿ೦ಬದ ಚಲನೆ ಅರ್ಥವಾಗುವ ಛಾಯೆ<< ಇಷ್ಟವಾಯಿತು. ನಮಸ್ಕಾರಗಳೊ೦ದಿಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ್ದಕ್ಕೆ ಧನ್ಯವಾದಗಳು ಸರ್..........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೂ ಇದೇ ಸಾಲುಗಳನ್ನ ಪದೇ ಪದೇ ಓದಿದೆ... ಎಡ್ಡೆ ಉಂಡು ಪದ :) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ್ದಕ್ಕೆ ಧನ್ಯವಾದಗಳು......ಶಫಿ.....ದಾನಿ ತೆಲಿಪ್ಪುನಿ......?ಪದ ಆತ್ ಕರಾಬ್ ಉ೦ಡೇ...... :) :) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಳ್ಳನೊಂದಿಗೂ ಹೊಂದಾಣಿಕೆಯ ಮಾತು ತೆರೆದ ಮನದಿಂದ ಹೊಸ ಮುಂಜಾವಿನ ಮಾತು ಅಸಹಾಯಕತೆಯಲ್ಲೂ ಆಶಾವಾದದ ಮಾತು ಚೆನ್ನಾಗಿ ಬರೆದಿದ್ದೀರಿ. ತಪ್ಪೊಪ್ಪು: <<ತುಟಿ ತೆರೆಯದಿದ್ದರು...>> ತುಟಿ ತೆರೆಯದಿದ್ದರೂ <<ಸೂರನ್ನಾದರು ಕಟ್ಟಿಕೊಳ್ಳೋಣ......>> ಸೂರನ್ನಾದರೂ ಕಟ್ಟಿಕೊಳ್ಳೋಣ...... - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಸರ್ ತಪ್ಪಾಗಿದೆ.......ಪೋಸ್ಟ್ ಮಾಡೋ ಮು೦ಚೆ ಮತ್ತೊಮ್ಮೆ ಪರಿಶೀಲಿಸಿಲ್ಲ........ಪರಿಶೀಲಿಸುವುದು ಕೂಡ ಯಾಕೋ ಬೇಡವೆನ್ನಿಸಿತ್ತು......ಸತ್ಯವೆ೦ದರೆ ಕೆಲವೊ೦ದು ಶಬ್ದಗಳು....ಸರಿಯಾದ ಒತ್ತಕ್ಷರಗಳು ನ೦ಗೆ ತು೦ಬಾ ಸ೦ದೇಹ...ಇಡೀ..ಸ೦ಪದ ಜಾಲಾಡ ಬೇಕಾಗುತ್ತದೆ.....ಕನ್ನಡದಲ್ಲಿ ಬರಹ ಪ್ಯಾಡ್ನಲ್ಲಿ.....ಟ್ಯಪ್ ಮಾಡುವುದೇ ನ೦ಗೇ ಭಯ೦ಕರ ಹೆದರಿಕೆ.....ಇತ್ತೀಚೆಗೆ.....ಬರೀ ಸ೦ಪದದ ಬರಹಗಳನ್ನು ಮಾತ್ರ ಓದುವುದಾಗಿದೆ...... ಧನ್ಯವಾದಗಳು.....ತಪ್ಪುಗಳನ್ನ ಒಪ್ಪವಾಗಿಸಿಕೊಟ್ಟಿದ್ದಕ್ಕೆ.......ಮತ್ತು ಕವನ ಮೆಚ್ಚಿದ್ದಕ್ಕೆ........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಪ್ಪಿಸಿರುವ ತಪ್ಪುಗಳನ್ನು ಇನ್ನಾದರೂ ದಯವಿಟ್ಟು ಸರಿಪಡಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೋ ಹೊಳಿಲೇ ಇಲ್ಲ ಸರ್...........ಕ್ಷಮಿಸಿ...... ಸರಿ ಮಾಡ್ತೀನಿ.........ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿನ್ನ ಮಾತುಗಳ ಹಿಂದಿನ ಮೌನ ಅರ್ಥವಾಗುತ್ತಿದೆ ಈಗ ಅದಕ್ಕೆಂದೇ ಎರಡು ದಿನಗಳ ದಟ್ಟ ದುಃಖದ ನಿನ್ನ ದಿನಗಳನ್ನು ನಗುವಿನಲ್ಲಿ ಮುಳುಗಿಸಿ ಮರೆಸಿದ್ದು ಕವಿತೆಗಳು ಚೆನ್ನಾಗಿವೆ ಪವಿತ್ರ. ಹನಿಗಳು ಕಣ್ಣಂಚಿನಲ್ಲೇ ಉಳಿಯಲಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿದ್ದಕ್ಕೆ ಧನ್ಯವಾದಗಳು ಇಲ್ಲ ಸ೦ತೋಷ್.......ಹನಿ ಕಣ್ಣ೦ಚಿ೦ದ ಹೊರ ಬ೦ದಿದ್ದರೆ ಸ್ವಲ್ಪ ನಿರಾಳ ಆಗಬಹುದೇನೊ.........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆದರೆ ಹನಿಗಳನ್ನು ಕಣ್ಣಂಚಿನಲ್ಲಿ ಇಟ್ಟುಕೊಳ್ಳುವುದರಿಂದ ಮನಸ್ಸು ಗಟ್ಟಿಯಾಗತ್ತೆ ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪವಿತ್ರ ಅವರೇ ತುಂಬಾ ದಿನಗಳ ನಂತರ ಮತ್ತೆ ದರ್ಶಿಸಿದಿರಿ ಸಂಪದ, ಇದು ಹೃದಯದ ಹೊಂದಾಣಿಕೆ, ಮನಸ್ಸಿಗೇನು ಈಗಂತೂ ಎಲ್ಲವೂ ಪರಿಚಿತ ಉತ್ತಮ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು......ಸರ್......ಸ೦ಪದ ಓದದ ದಿನವೇ ಇಲ್ಲ....ಆದರೆ....ಬರಹಗಳಿಗೆ....ಪ್ರತಿಕ್ರೀಯಿಸುತ್ತಿರಲಿಲ್ಲ ಅಷ್ಟೆ.....ಕನ್ನಡ ಅಚ್ಚೊತ್ತಲು ನನಗೆ ತು೦ಬಾ ಸಮಯ ಬೇಕು......ಅದಕ್ಕೆ ಕೆಲವೊಮ್ಮೆ ಸುಮ್ಮನಾಗಿ ಬಿಡುತ್ತೇನೆ.......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು.. ಉತ್ತಮ ಹನಿಗಳಿಗಾಗಿ.. ಕಣ್ಣಂಚಿನಿಂದ ಸಂಪದದ ಅಂಚಿಗೆ ತಂದದಕ್ಕಾಗಿ.. ನಿಮ್ಮೊಲವಿನ, ಸತ್ಯ..:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅಮೂಲ್ಯ ಪ್ರತಿಕ್ರೀಯೆಗೆ ಧನ್ಯವಾದಗಳು ಸತ್ಯ ರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪವಿತ್ರಾರವರೆ, ಚಂದದ ಕವನ. <<ಯಾರು ಬಲ್ಲರು.... ನಾಳೆ ನಮ್ಮ ಮನೆಯ೦ಗಳದಲ್ಲೂ ಹೊಸ ಸೂರ್ಯ ಉದಯಿಸಬಹುದು>> ಈ ಸಾಲುಗಳು ಹೆಚ್ಚು ನೆನಪಿಸುವಂತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಷ್ಟಾದರೆ ಸಾಕು ನಾನು ಸರ್ ನಾನು ಧನ್ಯ.......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ಯಾ... ಎಡ್ಡೆ ಉಂಡುಯೆ... ಅಂಚ ದಾಯೆ ಪನ್ಪರ್ :( ನಿಜ ಹೇಳಿದ್ರೆ... copy paste ಮಡಲೂ ಉದಾಸೀನದವ, ಅಲ್ಲೇ ನಾವುಡರ ಪ್ರತಿಕ್ರಿಯೆಯಡಿ ಬರೆದುಬಿಟ್ಟಿದ್ದಾನಂತ ನೀವು ಹೇಳಬಹುದೇನೋ ಅಂತನಿಸಿತು.... ಆ ನಗು ಅರಿವಿಲ್ಲದೇ ಸ್ಮೈಲಿಯಾಗಿ ಟೈಪಾಗಿ ಹೋಯಿತು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.