ಮತ್ತೆ ಮುಂಗಾರು 

4.25

ನೀ ಬರೆದ ಸಾಲೊಂದು ಕಾಡಿದೆ ಇಂದು

ನೀ ತೊರೆದ ನಗೆಯೊಂದು ಸೆಳೆದಿದೆ ನನ್ನ

ನಾ ಪಡೆದ ಮುತ್ತೊಂದು ಬೇಡಿದೆ ನಿನ್ನ 

ನೋವು ನಲಿವಿನ ನಿನ್ನೆ ಕರೆಯಾಗಿದೆ

ನಾವು ನೆನೆದ ಮುಂಗಾರು ಮತ್ತೆ ಬಂದ ಹಾಗಿದೆ

ಮತ್ತೊಮ್ಮೆ ನಿನ್ನದೇ ನೆನಪಾಗಿದೆ

ನಾವು ಬೇಡಿದ ಮಳೆ ಹನಿಗಳು ತೊಯ್ದಿದೆ ನನ್ನ

ಒಲವಿನ ಬಣ್ಣ ಕಳುವಾಗಿದೆ

ಮಾತು ಮೌನಗಳ ಮಿಂಚಾಗಿದೆ

ಹನಿಗಳು ಕಳೆದ ಮೇಲೂ ನೆನೆಯುವ ಆಸೆಯಾಗಿದೆ

ಕರಗಿ ಹೋದ ಕ್ಷಣವೊಂದು ಸೇರಿದೆ ನನ್ನ

ಸ್ವಲ್ಪ ತಾಳು ನೆನಪಿನ ಪುಟಗಳು ಹಾರಿದೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಪ್ರಸನ್ನರೇ ಚೆಂದದ ಕವನ ಗಮನಿಸಿ ನೀನ್ನ - ನಿನ್ನ ನೀನ್ನದೆ- ನಿನ್ನದೇ ಸೆಲೆದಿದೆ - ಸೆಳೆದಿದೆ ಮೇಲು - ಮೇಲೂ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

thank u..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-);-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.