raghava ರವರ ಬ್ಲಾಗ್

2004 ರಿಂದ 2009 ವರೆಗಿನ ಕರ್ನಾಟಕ ಸಿ ಇ ಟಿ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಕೀಲಿ.

ಸಿಈಟಿ ಸೀಸನ್ನು. ಎರ್ಡ್ನೇ ಪೀವೀಸಿ ಪರೀಕ್ಷೆ ಮುಗ್ಸಿ ರಾಮಾ ಕ್ರಿಷ್ಣಾ ಅನ್ನೋದ್ರೊಳ್ಗೆ ಬಂದು ಧುಮ್ಕತ್ತೆ ಸೀಈಟಿ ಪೆಡಂಭೂತ. ವರ್ಷ್ಗಟ್ಲೆ ತಯಾರಿ ಮಾಡ್ಕೊಂಡು ಊಟ/ನಿದ್ದೆ/ಹರ್ಟೆ ಬಿಟ್ಕೊಂಡು ಓದಿರ್ತವೆ ನಮ್ ಹುಡುಗ್ರು/ಹುಡ್ಗೀರು ಎಲ್ವೂ. ಹಳೇ ವರ್ಷದ್ದು ಸೀಈಟಿ ಪತ್ರಿಕೆಗಳ್ನ ಅಭ್ಯಾಸ ಮಾಡೋದು ಅನಾದಿಕಾಲದಿಂದ್ಲೂ ಅನೂಚಾನವಾಗಿ ನಡ್ಕೊಂಡ್ಬಂದಿರೋ ಪದ್ಧತಿಗಳಲ್ಲೊಂದು. ಈ ಸಾರೀನೂ ಮಾಡ್ಲಿ, ಅದ್ಕೆ ಅನ್ಕೂಲ ಆಗ್ಲೀಂತ ಕೆಳ್ಗಿರೋ ಸ್ನಿಪ್ಪೆಟ್ಟು ಗೀಚ್ದೆ. ನಮ್ಮ ಘನ ಸರ್ಕಾರದ ಶಿಕ್ಷಣ ಇಲಾಖೆಯ ಅಂಗವಾದ ಸಾಮಾನ್ಯ ಪರೀಕ್ಷಾ ವಿಭಾಗದ ಜಾಲತಾಣದಿಂದ ಗಣಿತ, ಭೌತಶಾಸ್ತ್ರ,ರಸಾಯನಶಾಸ್ತ್ರ,ಜೀವಶಾಸ್ತ್ರದ ವಿಷಯಗಳ 2004ರಿಂದ 2009 ವರೆಗಿನ ಪ್ರಶ್ನೆಪತ್ರಿಕೆ ಮತ್ತವುಗಳ ಉತ್ತರಕೀಲಿಯನ್ನು ಕೆಳಗಿಳಿಸುವ ಕೆಲಸವನ್ನು ಇದು ಮಾಡತ್ತೆ. ಸರಳವಾಗಿದೆ. linux ಬಳ್ಸೋರು ಮಾತ್ರ ಬಳಸಬಹುದು.

\rm -rf raw_page
wget -c http://kea.kar.nic.in/qepaper.htm -O raw_page
for n in `grep -w href raw_page | awk -F"href=\"" '{print $2}'|awk -F\" '{print $1}'`
do
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಂತಪ್ಪೋ ಬಂತೂ, ಗೂಗಲ್ ಬಜ್ಜು!

ನಾನು ಬಜ್ಜಾಯ್ತು ನೀವು?! :P

/* ಹತ್ಪದದ್ಲಿಮಿಟ್ಟು ಮೀರೋಕ್ಕೆ. ಒಂದು. ಎರ್ಡು. ಮೂರು. ನಾಕು. ಇನ್ಸಾಕು */

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪವರ್ಕಟ್ಟು, ಸೂಪರ್ಪವರ್ರು, ಮೀಡಿಯಾಕ್ರಿಟಿ ಜಾತ್ರೆ.

"ಇಂದಿನ ಪೀಳಿಗೆಯವರು ಕೆಲ್ಸಾ ಹುಡ್ಕೋದಲ್ಲಾ , ಕೆಲ್ಸಾ ಕೊಡೋರಾಗ್ಬೇಕು. ನಮ್ಮಿಂಡಿಯಾ ದೇಶ ಸ್ವಾವಲಂಬನೆ ಸಾಧಿಸಬೇಕು. ನೀವೆಲ್ರೂ ಆಂತ್ರಪ್ರೆನ್ಯೂರ್ಗಳಾಗಿ. ಟೆಕ್ನಾಲಜಿ ಸಂಸ್ಥೆಗಳನ್ನು ಶುರುಮಾಡಿ. ನಾವು ಸಹಾಯ ಮಾಡ್ತೀವಿ!" ಅನ್ನೋ ಥರದ ಭಾಷ್ಣ ಕೇಳಿ ಯಾವನಾದ್ರೂ ಧೈರ್ಯ ಮಾಡಿ ವ್ಯವಹಾರ ಶುರು ಮಾಡ್ದಾಂತಿಟ್ಕೋಳಿ, ____ಮೋಚ್ಕೊಂಡು ಚಾಪೆ ಸುತ್ಕೊಂಢೋಗ್ತಾನೆ ಎರ್ಡ್ಮೂರ್ತಿಂಗ್ಳಲ್ಲೇ. ಯಾಕೆ? ಈಗಿನ ಟೆಕ್ನಾಲಜಿ ಉದ್ಯಮಗಳಿಗೆ ಮುಖ್ಯವಾಗಿ ಬೇಕಿರೋದು ವಿದ್ಯುತ್ತು. ದರಿದ್ರಾ ಇದನ್ನೇ ಸರಿಯಾಗಿ ಸರಬರಾಜು ಮಾಡೋಕ್ಕೆ ಹರಿಯೋಲ್ಲ, ಇನ್ನಿನ್ನೇನು ಬೇರೆ ಸಹಾಯ-ಸಾಮಗ್ರಿ ಕೊಟ್ಟಿದ್ದಾರು! ದಿನಕ್ಕೆ ಸಮಾ ಎಂಟ್ಗಂಟೆ ಪವರ್ಕಟ್ಟು. ರಾತ್ರಿ ಹತ್ರಿಂದ ಹನ್ನೊಂದಕ್ಕೂ ಪವರ್ಕಟ್ಟು! ಆಹಾ! ದಕ್ಷಿಣ ಕೊರಿಯಾ, ಫ್ರಾನ್ಸು, ಇಸ್ರೇಲು ಇಷ್ಟಿಷ್ಟೇ ಇವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕ್ಯಾಲೆಂಡರ್ರು

ಏನ್ಬರ್ಲೀ ಬಿಡ್ಲೀ ಈ ಹೊಸ ವರ್ಷ ಬಂದೇಬರತ್ತೆ. ಸರಿ, ಅದ್ಕೆ ನಾವೆಂತ ಮಾಡ್ಬೇಕು? ಸಾಧಾರಣ್ವಾಗಿ ಕ್ಯಾಲೆಂಡ್ರು (ದಿನ್ಸೂಚಿ) ಬದ್ಲಾಯ್ಸ್ತಾರೆ. ಇಲ್ಲಿ ನೋಡಿ, ಬೆಂಗಳೂರಿಗ/ಕನ್ನಡಿಗರಾದ ಅರುಣ್ ಹೊರತಂದಿರೋ ಕ್ಯಾಲೆಂಡರ್ರು.[ಗ್ಯಾಲರಿ ]

ಒಂದು ಪ್ರತಿ ಬೇಕಿದ್ದಲ್ಲಿ ಅಲ್ಲೇ ಕೊಟ್ಟಿರುವ ಮಿಂಚೆ ವಿಳಾಸಕ್ಕೆ ಬರೆಯಿರಿ. :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಿತ್ರೋಖಿನ್ ಆರ್ಕೈವ್, ಒಂದು ಕುತೂಹಲಕಾರಿ ವಿಷಯ

ಮಿತ್ರೋಖಿನ್ ಆರ್ಕೈವ್. ಇದು ಒಂದೈವರ್ಷದ್ ಕೆಳಗೆ ಪುಸ್ತಕವಾಗಿ ಪ್ರಕಟವಾದಾಗ ಪಾರ್ಲಿಮೆಂಟಲ್ಲಿ ಸಮಾ ಚರ್ಚೆ ಎದ್ದಿತ್ತು. (ಆಮೇಲ್ಮಾಮೂಲಿ ಕತೆ, ಎಲ್ಲಾ ಟುಸ್ಸು)

ಮೊನ್ನೆ ಈ ಸಂಗತಿಯ ಬಗ್ಗೆ ಇನ್ನೊಂದು ಕೋನದಿಂದ ಯೋಚಿಸಿದ ಬರಹ ಸಿಕ್ಕಿತು. ಹಂಚ್ಕೊಳೋಣ ಅನ್ಸ್ತು, ಅದ್ಕೆ ಹಾಕ್ದೆ.

ಇನ್ನೂ ಕುತೂಹಲ ಇದ್ದಲ್ಲಿ ಇಲ್ಲಿ ಚಿಟುಕಿ ;)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - raghava ರವರ ಬ್ಲಾಗ್