ಬೆಂಗಳೂರು ಮಳೆ ಮತ್ತು ಆಟೋ ಸವಾರಿ

0

ಬೆಂಗಳೂರಿಗೆ ಮುಂಗಾರು ಕಾಲಿಟ್ಟಿದೆ. ಮುಂಗಾರು ಕಾಲೂರುವುದೇ ತಡ ಅದೆಷ್ಟೋ ಸಾವು ನೋವುಗಳು ಸಂಭವಿಸಿಯೂ ಆಯ್ತು. ಮಳೆ ಬಂದಾಗ ಯಾತ್ರೆ ಎಷ್ಟು ಕಷ್ಟಕರ ಎಂಬುದನ್ನು ಅನುಭವಿಸುತ್ತಾ ಇದ್ದೇನೆ. ಸೋರುವ ಬಿಎಂಟಿಸಿ ಬಸ್ ಒಂದೆಡೆಯಾದರೆ ರಸ್ತೆಯಲ್ಲಿ ತುಂಬಿ ಹರಿಯುತ್ತಿರುವ ನೀರು ಬೇರೆ. ಏನು ಹೇಳಿದರೂ ಇದು ಮಹಾನಗರವಲ್ಲವೇ? ಆದುದರಿಂದ ರಸ್ತೆಯಲ್ಲೇ ನೀರು ಹರಿಯುವುದು ಸಾಮಾನ್ಯ ಅನ್ನಬಹುದು.

ಮಳೆ 'ಧೋ' ಎಂದು ಸುರಿದರೆ ಸಾಕು ನಮ್ಮ ಆಟೋ ಚಾಲಕರಿಗೆ ಸುಗ್ಗಿಕಾಲ. ನಾವೇನೋ ಮಳೆಯಿಂದ ರಕ್ಷಣೆ ಪಡೆಯಲು ಆಟೋವನ್ನು ಆಶ್ರಯಿಸುತ್ತೇವೆ, ಅವರು ಕೇಳಿದಷ್ಟು ಹಣ ನೀಡಿ ನಮ್ಮ ಯಾತ್ರೆ ಮುಂದುವರಿಸುತ್ತೇವೆ. ಆದರೆ ಅದು ಸುಖವಾಗಿರಬೇಕಲ್ವಾ? ಮಳೆ ಆರಂಭವಾಗಿದ್ದರೂ ಇಲ್ಲಿನ ಆಟೋಗಳಿಗೆ ಟಾರ್ಪೋಲಿನ್ ಇಲ್ಲ. ರಸ್ತೆಯೇ ನೀರಿನಲ್ಲಿ ಮುಳುಗಿರುವಾಗ ಆ ಕಡೆ ಈ ಕಡೆಯಿಂದ ಇನ್ನೊಂದು ವಾಹನ ಚಿಮುಕಿಸುವ ನೀರು ಪ್ರಯಾಣಿಕರನ್ನು ಒದ್ದೆ ಮಾಡಿದರೂ ಪರ್ವಾಗಿಲ್ಲ ಎನ್ನುವ ಆಟೋ ಚಾಲಕರಿವರು.

ಮಡ್್ಗಾರ್ಡ್ ಇಲ್ಲದ ಅದೆಷ್ಟೋ ಆಟೋಗಳನ್ನು ನಾನಿಲ್ಲಿ ಕಂಡಿದ್ದೇನೆ. ಮೀಟರ್ ಹಾಕಲು ಒಲ್ಲದ ಆಟೋ ಡ್ರೈವರ್್ಗಳು ಕೆಲವೊಮ್ಮೆ ಮೀಟರ್ ಹಾಕಿದರೂ ಮೀಟರಂತೂ ಆಟೋಗಿಂತ ಫಾಸ್ಟ್ ಆಗಿ ಓಡುತ್ತಿರುತ್ತದೆ. ಕೆಲವೊಮ್ಮೆ ಆಟೋ ಸಿಕ್ಕದೆ ಪರದಾಡಿ ಆಮೇಲೆ ಆಟೋ ಡ್ರೈವರ್್ಗಳು ಹೇಳಿದ ಹಣಕ್ಕೆ ಒಪ್ಪಿಕೊಂಡು ಮನೆ ಸೇರಿದ್ದೂ ಇದೆ.

ಮೊನ್ನೆ ಇದೇ ತರಹ ಜೋರಾಗಿ ಮಳೆಬಂದಿತ್ತು. ನಾನು ನನ್ನ ಫ್ರೆಂಡ್ ಆಟೋಗಾಗಿ ಕಾಯುತ್ತಿದ್ದೆವು. ಯಾವುದೇ ಆಟೋ ನಾವು ಹೇಳುವ ಬೆಲೆಗೆ ಬರಲೊಪ್ಪಲಿಲ್ಲ. ಅಂತೂ ಇಂತೂ ಮೀಟರ್ ಹಾಕ್ತೇನೆ ಎಂದು ಆಟೋದವ ಒಪ್ಪಿದಾಗ ಅದು ಹತ್ತಿ ಕುಳಿತೆವು. ನೋಡುತ್ತಿದ್ದಂತೆಯೇ ಮೀಟರ್ ಫಾಸ್ಟ್ ಆಗಿ ಓಡುತ್ತಿತ್ತು. ನಮ್ಮ ಮನೆ ತಲುಪಿದ ಕೂಡಲೇ ಇದ್ಯಾಕೆ ಮೀಟರ್ ಈ ತರ ಫಾಸ್ಟ್ ಆಗಿ ಓಡ್ತಾ ಇದೆ. ಇದರಲ್ಲಿಯೂ ನೀವು ಮೋಸ ಮಾಡ್ತಾ ಇದ್ದೀರಾ ಎಂದು ಕೇಳಿಯೇ ಬಿಟ್ಟೆ. ಅವ ಒಮ್ಮೆ ನನ್ನನ್ನು ಮೇಲಿಂದ ಕೆಳಕ್ಕೆ ನೋಡಿ ನಾವು 'ಕರ್ನಾಟಕದ'ವರು ಈ ರೀತಿ ಮೋಸ ಮಾಡುವುದಿಲ್ಲ. ನಿಮಗೇನು ಗೊತ್ತು ಮೀಟರ್ ಕಥೆ ಎಂದು ಹೇಳಿದ. (ನಾವು ಮಲಯಾಳಂಲ್ಲಿ ಮಾತನಾಡುತ್ತಿರುವುದನ್ನು ಕೇಳಿ ಅವನಿಗೆ ನಾವು ಅನ್ಯರಾಜ್ಯದವರು ಅಂತಾ ಗೊತ್ತಾಗಿತ್ತು. ಅದಕ್ಕಾಗಿಯೇ ಈ ಡೈಲಾಗ್ ಹೊಡೆದಿದ್ದ.) ನಾನು ಕೇಳಿದ್ದು ಅಧಿಕಪ್ರಸಂಗವಾಯಿತೇನೋ ಅಂತ ನನಗೆ ಅನಿಸುತ್ತಿತ್ತು. ಆಮೇಲೆ ಅವನ ಜೊತೆ ಚರ್ಚೆಗಿಳಿಯಲು ನನಗಿಷ್ಟವಿರಲಿಲ್ಲ.

ಈ ಆಟೋ ಪ್ರಯಾಣದ ಕಷ್ಟ ನನ್ನಂತೆ ಹಲವರಿಗೂ ಆಗಿರಬಹುದು. ಕೆಲವೊಮ್ಮೆ "ಏ ಆಟೋ ....ಇಂತಾ ಸ್ಥಳಕ್ಕೆ ಬರ್ತೀರೇನೋ" ಎಂದು ಕೇಳಿದರೆ ಸಾಕು. ಆಟೋದವನ ರೇಟ್ ಕೇಳಿದರೆ ನಾವೇನೋ ಅವನಿಂದ ಆಟೋ ಖರೀದಿಗೆ ನಾವು ಬಂದಿದ್ದೇವೆಯೇನೋ ಎಂದು ಅನಿಸಿಬಿಡುತ್ತದೆ. ಅಷ್ಟೊಂದು ದುಬಾರಿ ಹಣ ಕೇಳುತ್ತಿದ್ದರೂ, ಟಾರ್ಪೋಲಿನ್ ಇಲ್ಲದೆ ಸೋರುವ ಈ ಆಟೋದಲ್ಲಿ ಒದ್ದೆಯಾಗಿ ಮನೆ ಸೇರಬೇಕಾದ ಗತಿ ನಮ್ಮದು. ನಮ್ಮೂರಲ್ಲಾದರೆ ಆಟೋದ condition ಚೆಕ್ ಮಾಡಿ Ok. checked ಅಂತಾ ಚೀಟಿ ಅಂಟಿಸ್ತಾರೆ. ಆದ್ರೆ ಕರ್ನಾಟಕದಲ್ಲಿ ಅಂತಾ ವ್ಯವಸ್ಥೆ ಇಲ್ವಾ? ನಮ್ಮ ಮನೆಯಲ್ಲಿರುವ ಆಟೋವನ್ನು ಫುಲ್ ಕಂಡಿಷನ್ ಮಾಡಿಸಿ Ok checkedಅಂತಾ ಚೀಟಿ ಅಂಟಿಸಿ ಅಣ್ಣ ಬಾಡಿಗೆಗಿರಿಸುವುದನ್ನು ನಾನು ನೋಡಿದ್ದೇನೆ. ಮಳೆ ಬಂದಾಗ ಟಾರ್ಪೋಲಿನ್ ಒಂದಿಷ್ಟು ಹರಿದಿದ್ದರೂ ಫೈನ್ ಹಾಕ್ತಾರೆ ಅಂತಾ ಅಣ್ಣ ಹೇಳಿದ್ದು ಕೇಳಿದ್ದೇನೆ. ಇಂತಿರುವಾಗ ಬೆಂಗಳೂರಲ್ಲಿ ಓಡಾಡುವ ಆಟೋಗಳಿಗೆ ಯಾವುದೇ ರೀತಿಯ ನಿಯಮಗಳು ಅನ್ವಯಿಸುವುದಿಲ್ಲವೇ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮ್ಮ ಆಟೋ ಡ್ರೈವರ್ಗಳು ಶ್ರಮಜೀವಿಗಳು. ತಾವು ಪಡುವ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗದಿರುವುದರಿಂದಲೋ, ಕಂಪ್ಯೂಟರ್ ಬಿಟ್ಟು ಯಾವುದೇ ಕೆಲಸ ಗೊತ್ತಿಲ್ಲದ, ಇಂಗ್ಲೀಷ್ ಭಾಷೆಯೊಂದನ್ನೆ ಬಂಡವಾಳವಾಗಿಟ್ಟುಕೊಂಡು ತಮಗಿಂತ ಹೆಚ್ಚು ಗಳಿಸುವ ಜನರನ್ನು ಕಂಡರೆ ಅವರಿಗೆ ಅಸೂಯೆ, ಅಸಮಾಧಾನದಂತಹ ಒಂದು ಭಾವ. ಎಲ್ಲದಕ್ಕೂ ಫ್ರಸ್ಟ್ರೇಟ್ ಆಗುವುದು ನಂತರ ಯಾರ್ಯಾರ ಮೇಲೋ ಸಿಡುಕುವುದು ಬೆಂಗಳೂರಿನಂತಹ ಜಾಗದ ಜನಗಳ ಸಾಮಾನ್ಯ ಲಕ್ಷಣವಾಗಿಬಿಟ್ಟಿದೆ.
ಅಲ್ಲದೇ ನಾವು ಅವರನ್ನು ಕರೆಯುವ, ಆಟೋದವರನ್ನು ಸಂಭೋದಿಸುವ ರೀತಿ ಬದಲಾಗಬೇಕು. ನಾವು ಸ್ವಲ್ಪ ಅವರ ಮನಸ್ಥಿತಿ ಅರ್ಥ ಮಾಡ್ಕೋಬೇಕು. ಈ ವಿಷಯದಲ್ಲಿ ನಾನಿರುವ ಜಾಗದಲ್ಲಿ ಕಲಿತದ್ದು ಬಹಳ ಇದೆ. ಇಲ್ಲಿ ಆಟೋ ಇಲ್ಲ, ಎಲ್ಲಾ ಕಡೆ ಟ್ಯಾಕ್ಸಿ. ಟ್ಯಾಕ್ಸಿ ಕೈ ತೋರಿದರೆ ನಿಲ್ಲುತ್ತಾರೆ, ಕಿರುಚಬೇಕಾಗಿಲ್ಲ. ಟ್ಯಾಕ್ಸಿ ನಿಲ್ಲಿಸಿದ ನಂತರ ಅವರಿಗೆ ನಿಲ್ಲಿಸಿದ್ದಕ್ಕಾಗಿ ಥ್ಯಾಂಕ್ಸ್ ಹೇಳಿ ಮತ್ತೆ ಒಂದು ಹಲೋ ಹೇಳಿ ಮುಂದಿನ ಪ್ರಯಾಣ.
>>>>>ನಮ್ಮೂರಲ್ಲಾದರೆ ಆಟೋದ condition ಚೆಕ್ ಮಾಡಿ Ok. checked ಅಂತಾ ಚೀಟಿ ಅಂಟಿಸ್ತಾರೆ. ಆದ್ರೆ ಕರ್ನಾಟಕದಲ್ಲಿ ಅಂತಾ ವ್ಯವಸ್ಥೆ ಇಲ್ವಾ? ನಮ್ಮ ಮನೆಯಲ್ಲಿರುವ ಆಟೋವನ್ನು ಫುಲ್ ಕಂಡಿಷನ್ ಮಾಡಿಸಿ Ok checkedಅಂತಾ ಚೀಟಿ ಅಂಟಿಸಿ ಅಣ್ಣ ಬಾಡಿಗೆಗಿರಿಸುವುದನ್ನು ನಾನು ನೋಡಿದ್ದೇನೆ. ಮಳೆ ಬಂದಾಗ ಟಾರ್ಪೋಲಿನ್ ಒಂದಿಷ್ಟು ಹರಿದಿದ್ದರೂ ಫೈನ್ ಹಾಕ್ತಾರೆ ಅಂತಾ ಅಣ್ಣ ಹೇಳಿದ್ದು ಕೇಳಿದ್ದೇನೆ. ಇಂತಿರುವಾಗ ಬೆಂಗಳೂರಲ್ಲಿ ಓಡಾಡುವ ಆಟೋಗಳಿಗೆ ಯಾವುದೇ ರೀತಿಯ ನಿಯಮಗಳು ಅನ್ವಯಿಸುವುದಿಲ್ಲವೇ?
>>ಕರ್ನಾಟದಲ್ಲೂ ಎಲ್ಲಾ ರೀತಿ ಕಾನೂನುಗಳಿದೆ. ನಿಮಗೇನಾದರೂ ಸರಿ ಕಂಡಿಲ್ಲವಾದಲ್ಲಿ ಟ್ರಾಫಿಕ್ ಪೋಲಿಸ್ಗೆ ಕಂಪ್ಲೇಂಟ್ ಕೊಡಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್ ಅವರೇ...

ಎಲ್ಲಾ ಆಟೋದವರು ಕೂಡಾ ಶ್ರಮ ಜೀವಿಗಳೇ..ಆದ್ರೆ ಕನಿಷ್ಠ ಬಾಡಿಗೆ ಇರುವ ಸ್ಥಳಕ್ಕೆ ಬರಲೊಲ್ಲದೆ ಹೆಚ್ಚು ಬಾಡಿಗೆ ವಸೂಲಿ ಮಾಡುವ ಇವರ ಬುದ್ದಿಗೆ ಏನು ಹೇಳುತ್ತೀರಿ? ಶಿವಾಜಿನಗರದಿಂದ ಇಂಡಿಯನ್ ಎಕ್ಸ್್ಪ್ರೆಸ್ ಸ್ಟಾಪಿಗೆ ಇರುವುದು ಕನಿಷ್ಠ ಬಾಡಿಗೆ ಅಂದರೆ 14ರೂ. ಆದ್ರೆ ಅವರು 20ರೂ ಕೇಳ್ತಾರೆ. ಮೊದಲ ಬಾರಿ ಬೆಂಗಳೂರಿಗೆ ಬಂದಾಗ ಒಂದು ಸಾರಿ ನಾನು 30ರೂ ತೆತ್ತು ಪ್ರಯಾಣ ಮಾಡಿದ್ದೆ. ಈ ತರಹ ಜನರನ್ನು ಮೋಸ ಮಾಡುವುದು ಸರಿಯೇ?

ಬೆಂಗಳೂರಿನ ಶ್ರೀಮಂತ ವರ್ಗದವರಾದರೆ ಅವರು ಹೇಳುವಷ್ಟು ಬಾಡಿಗೆ ಕೊಟ್ಟು ಯಾತ್ರೆ ಬೆಳೆಸುತ್ತಾರೆ. ಆದರೆ ಮಧ್ಯಮ ವರ್ಗ, ಬಡವರ ಸ್ಥಿತಿಯೇನು? ಬೆಂಗಳೂರಿಗೆ ಹೊಸಬರಾಗಿದ್ದು ಭಾಷೆ ಗೊತ್ತಿಲ್ಲದವರಾಗಿದ್ದರೆ ಅಲ್ಲಿ ಇಲ್ಲಿ ಸುತ್ತು ಹಾಕಿಸಿ ದೊಡ್ಡ ಪ್ರಮಾಣದಲ್ಲಿ ಬಾಡಿಗೆ ವಸೂಲಿ ಮಾಡುವ ಆಟೋದವರ ಬಗ್ಗೆ ಏನೆನ್ನಬೇಕು?

ಮೊದಲನೆಯದಾಗಿ "ಡೋಂಟ್ ಕೇರ್್" ಸಂಸ್ಕೃತಿಯನ್ನು ಅನುಸರಿಸುವ ನಗರವಾಸಿಗಳೇ ಆಟೋದವರ ಈ ಸ್ವಭಾವಕ್ಕೆ ಕಾರಣ. ಏನಿದ್ದರೂ ಯಾರೂ ಹೇಳುವವರಿಲ್ಲ ಕೇಳುವವರಿಲ್ಲ ಇಂತಿರುವಾಗ ಆಟೋದವರ ಈ ಸುಲಿಗೆ ನಿಯಂತ್ರಿಸಲು ಸಾಧ್ಯವಾಗುವುದಾದರೂ ಹೇಗೆ? ಅಲ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೂ ಇಲ್ಲಿ ಇಂತಹ ಅನೆಕ ಅನುಭವಗಳಾಗಿವೆ.. ಇಷ್ಟು ವರ್ಷಗಳ ಬೆಂಗಳೂರಿನ ಜೀವನದಲ್ಲಿ ಯಾವುದೂ ಆಟೋಗಳು ಹೆದರಿಸುವಷ್ಟು ಹೆದರಿಸಿಲ್ಲ. ರಾತ್ರಿ ಒಂದು ಘಂಟೆ ಎರೆಡು ಘಂಟೆಯಲ್ಲಿ ಮೆಜೆಸ್ಟಿಕ್ನಲ್ಲಿ ಸ್ಕೆಚ್ ಮಾಡೋದಿಕ್ಕೆ ಗಲ್ಲಿ ಗಲ್ಲಿ ಅಲೆದಾಡಿದಾಗಲೂ ಹೆದರುತ್ತಿರಲಿಲ್ಲಾ.. ಆದ್ರೆ ಆಟೋ ಹತ್ತಿದರೆ ಮಾತ್ರ ಎದೆ ಡವಡವ ಎಂದು.. ಹೊಡೆದುಕೊಳ್ಳಲಾರಂಭಿಸುತ್ತದೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಗ ಹಾಗೆ ಕಣ್ರೀ ನಮ್ಮ ಗುರು ಆಟೋರಾಜ ಶಂಕರನಾಗ್ ಥರ ಆಟೋ ಚಾಲಕರು ಸಿಗೋಲ್ಲ. ನನಗು ತುಂಬಾ ಸರ್ತಿ ಅನುಭವ ಆಗಿದೆ, ಒಂದೊಂದು ಆಟೋದಲ್ಲಿ ಒಂದೊಂದು ವೇಗದಲ್ಲಿ ಮೀಟರ್ ಓಡುತ್ತೆ.ಎಷ್ಟು ವೇಗವಾಗಿ ಓಡುತ್ತೆ ಅಂದ್ರೆ ಕೂತಿರೋರ ಮೀಟರ್ ಆಫ ಆಗೋಗುತ್ತೆ. :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ರಶ್ಮಿ ರವರೆ ,
ನಾನು ಕಳೆದ ವಾರ ೨ ಬಾರಿ ಆಟೋದವನ ಹತ್ತಿರ ಜಗಳ ಆಡಿದ್ದೇನೆ . ೧೦.೨೦ ಕ್ಕೆ ಡಬಲ್ ಚಾರ್ಜ್ ಕೇಳ್ತಾನೆ , ನಾನ್ ಬಿಡ್ತಿನ , ಆಯಿತು ಅಂತ ಹೇಳಿ ಇಳಿಯೋವಾಗ ನನ್ ವಾಚ್ ತೋರಿಸಿ ಇನ್ನು ೫ ನಿಮಿಷ ಇದೆ ಅಂತ ವಾದ ಮಾಡಿ , ಅದಕ್ಕೆ ಅವನು ಕೂಗಾಡಿ ಕೊನೆಗೆ ಎಷ್ಟು ಆಗಿರುತ್ತೋ ಅಷ್ಟು ಮಾತ್ರ ಕೊಟ್ ಬಂದಿದೀನಿ . :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ ಅವರೇ..
ವೆರಿಗುಡ್. ನಿಮ್ಮಂತವರು ಇದ್ರೆ ಆಟೋದವರಿಗೆ ಬುದ್ದಿ ಕಲಿಸಬಹುದು. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಲವೊಮ್ಮೆ ಒಬ್ಬರೇ ಪ್ರಯಾಣ ಮಾಡುವಾಗ ಈ ತಿರುಗಿ ಬೀಳುವುದು ಸಾಧ್ಯವಾಗದೆ ಇರಬಹುದು .
ಅಲ್ವಾ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೀ ರಶ್ಮಿ ಯವರೇ ಲೇಖನ ತುಂಬಾ ಚೆನ್ನಾಗಿ ಬರೆದಿದ್ದೀರಿ , ಅಂದ ಹಾಗೆ ಎಲ್ಲರಿಗು ಒಂದು ಟೈಮ್ ಅಲ್ವೇನ್ರಿ ಹಾಗೆ ರಿಕ್ಷ ದವರಿಗೆ ಒಂದು ಟೈಮ್ ,.,.,.,.
ಆದರು ಒಂದ್ ವಿಷ್ಯ ಏನಂದ್ರೆ ದುಡ್ಡು ಜಾಸ್ತಿ ಕೊಟ್ರು ಪರವಾಗಿಲ್ಲ ಮನೆ ತಲುಪಬಹುದು, ಆದರೆ ಕೆಲವು ರಾಜ್ಯಗಳಲ್ಲಿ ಚಿಕ್ಕ ಚಿಕ್ಕ ವಿಷಯ ಗಳಿಗೆ ಸ್ಟ್ರೈಕ್ ( ಸಮರಂ) ಮಾಡಿ ಯಾವುದೇ ಕೆಲಸ ನಡೆಯದಂತೆ ಮಾಡಿಬಿಡುತ್ತಾರೆ. ಅದಕ್ಕೆ ಹೋಲಿಸಿದರೆ ಇದು ತೊಂದರೆ ಇಲ್ಲ ಅಲ್ವ ( ಕ್ಷಮಿಸಿ )
ಧನ್ಯವಾದಗಳು .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಸ್ಮಾಯಿಲ್ ಅವರಿಗೆ ಧನ್ಯವಾದಗಳು. ಕೊನೆಗೆ ಕ್ಷಮೆ ಯಾಕೆ ಎಂದು ಗೊತ್ತಾಗಿಲ್ಲ....
ಸ್ಟ್ರೈಕ್ ಬಗ್ಗೆ ಹೇಳುವುದೇನು? ಕೇರಳ ಅದಕ್ಕೆ ಫೇಮಸ್ ಅಲ್ವಾ. ನಾನೂ ವಿದ್ಯಾರ್ಥಿ ದೆಸೆಯಲ್ಲಿ ಹಲವಾರು ಮುಷ್ಕರಗಳಲ್ಲಿ ಪಾಲ್ಗೊಂಡಿದ್ದೇನೆ. ಮುಷ್ಕರ ಮಾಡಿ ಯಾವುದೇ ಕೆಲಸ ನಡೆಯದಂತೆ ಮಾಡುವುದು ಉದ್ದೇಶವಲ್ಲ. ಮುಷ್ಕರ ಮಾಡಿ ಬೇಡಿಕೆಯನ್ನು ಈಡೇರಿಸುವುದು ಇದೇ ಮುಷ್ಕರ ಮಾಡುವುದರ ಉದ್ದೇಶ ಅಲ್ಲವೇನೋ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ, ಕಾಸರಗೋಡು ನಿಜವಾಗಲೂ ಚೆನ್ನಾಗಿದೆ ಅನ್ನಿಸುತ್ತೆ! ನಾನು ಒಮ್ಮೆ ಟ್ರೈನ್ ಲ್ಲಿ ನೋಡಿದ್ದು ಅಷ್ಟೇ. ಆದರೆ, ಆ ಊರಲ್ಲಿ ಇರುವ ಕೌನ್ಸಿಲ್ ನವರು ನಿಜವಾಗಲೂ ಚೆನ್ನಾಗಿರಬೇಕು ಅಥವಾ ಊರ ಜನರೇ ಒಗ್ಗಟ್ಟಾಗಿ ಅಷ್ಟು ಚೆನ್ನಾಗಿರಬೇಕು ಅನ್ನಿಸಿತ್ತು ಅಲ್ಲಿರುವ ಮನೆಗಳನ್ನು ನೋಡಿದಾಗ. ಬಿಲ್ಡಿಂಗ್ ಕಟ್ಟುವ ಮೊದಲು ಪರ್ಮಿಶನ್ ತೆಗೆದುಕೊಂಡು ಎಲ್ಲವನ್ನು ಒಂದಕ್ಕೊಂದು ಹೊದುವಂತೆ ಸುಂದರವಾಗಿ ಕಟ್ಟಿದ್ದು ನೋಡಿದಾಗ, ನನಗೆ ಖುಷಿಯಾಗಿತ್ತು.

>>ನಮ್ಮೂರಲ್ಲಾದರೆ ಆಟೋದ condition ಚೆಕ್ ಮಾಡಿ Ok. checked ಅಂತಾ ಚೀಟಿ ಅಂಟಿಸ್ತಾರೆ. ಆದ್ರೆ ಕರ್ನಾಟಕದಲ್ಲಿ ಅಂತಾ ವ್ಯವಸ್ಥೆ ಇಲ್ವಾ? ನಮ್ಮ ಮನೆಯಲ್ಲಿರುವ ಆಟೋವನ್ನು ಫುಲ್ ಕಂಡಿಷನ್ ಮಾಡಿಸಿ Ok checkedಅಂತಾ ಚೀಟಿ ಅಂಟಿಸಿ ಅಣ್ಣ ಬಾಡಿಗೆಗಿರಿಸುವುದನ್ನು ನಾನು ನೋಡಿದ್ದೇನೆ.

ಎಂದು ನೀವು ಹೇಳಿದ್ದು ಕೇಳಿದಾಗ ಮನಸ್ಸಿಗೆ ಇನ್ನೊ ತಂಪಾಯಿತು. :)

>>ಬೆಂಗಳೂರಲ್ಲಿ ಓಡಾಡುವ ಆಟೋಗಳಿಗೆ ಯಾವುದೇ ರೀತಿಯ ನಿಯಮಗಳು ಅನ್ವಯಿಸುವುದಿಲ್ಲವೇ? ಆಟೂಗಳಿಗೆ ಮಾತ್ರವಲ್ಲ, ರೋಡ್ಗಳಿಗೆ, ಬಿಲ್ಡಿಂಗ್ಗಳಿಗೆ, ಬಸ್ಸು/ಕಾರು/ ಮೋಟಾರು ಚಲಕರುಗಳಿಗೆ ಎಲ್ಲರಿಗೂ ಸರಿಯಾದ ರೂಲ್ ಮಾಡಿ ತಪ್ಪಿದವನಿಗೆ ಹೆವಿ ಫೈನ್ ಹಾಕಿದ್ದರೆ ಚೆನ್ನಾಗಿತ್ತು. ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರು ಯಾರು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವವರು ಯಾರು
ಜೆರ್ರಿ :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಿನ್ನಿ, ನನ್ನ ಊರಿನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದುದಕ್ಕಾಗಿ ಧನ್ಯವಾದಗಳು.

ಬೆಕ್ಕಿನ ಕೊರಳಿಗೆ ಘಂಟೆ ಕಟ್ಟುವರಾರು ಎಂದು ಸುಮ್ಮನೆ ಕುಳಿತರೆ ಹೇಗೆ? ನಾವು ನಮ್ಮಿಂದಾಗುವ ಪ್ರಯತ್ನವನ್ನು ಮಾಡಬೇಕಲ್ವಾ.?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾಪ ತುಂಬಾ ಕಷ್ಟ ಪಟ್ಟಿದೀರ!! ಇದುವರೆಗೂ ತಾವು ಮಾಡಿದ ಪ್ರಯತ್ನಗಳ ಬಗ್ಗೆ ಸ್ವಲ್ಪ ಹೇಳ್ತೀರಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮಾಷೆ ಮಾಡ್ತಾ ಇದ್ದೀರಾ?

ಈ ಬಗ್ಗೆ ಇಲ್ಲಿ ಚರ್ಚೆ ಅನಾವಶ್ಯಕ ಎಂದು ನನ್ನ ಅನಿಸಿಕೆ.

ನಾನು ನಮ್ಮೂರಲ್ಲಿ (ಕಾಸರಗೋಡಿನಲ್ಲಿ)ರುವಾಗ ಅಲ್ಲಿನ ಕೆಲವೊಂದು ಸಮಸ್ಯೆಯ ಬಗ್ಗೆ ನಾಗರಿಕರು ತಿಳಿಯುವಂತೆ ಮಾಡಿದ್ದೇನೆ. ಅಲ್ಲಿನ ಪತ್ರಿಕೆಯೊಂದರಲ್ಲಿ ಬರೆಯತೊಡಗಿದ್ದು ನಾನು ಎಂಟನೇ ತರಗತಿಯಲ್ಲಿರುವಾಗ. ಅದೂ ಮೊದಲ ಬಾರಿ ನಗರದಲ್ಲಿರುವ ಹೈಸ್ಕೂಲ್್ಗೆ ಸೇರಿದಾಗ. ಪತ್ರಿಕೆ ಪುಸ್ತಕ ಮಾರುವ ಅಂಗಡಿಯೊಂದರಲ್ಲಿ ಸೆಕ್ಸ್ ರಿಲೇಟೆಡ್ ಬುಕ್್ಗಳನ್ನು ಹೈಲೈಟ್ ಮಾಡಿ ತೂಗು ಹಾಕಿರುವುದರ ಬಗ್ಗೆ ಬರೆದಿದ್ದೆ. ಈ ಲೇಖನದ ಪರಿಣಾಮ ಇಂತಹ ಪುಸ್ತಕಗಳನ್ನು ಅಂಗಡಿಗಳ ಮುಂದೆ ತೂಗ ಹಾಕಬಾರದೆಂಬ ಆದೇಶ ಜ್ಯಾರಿಯಾಗಿತ್ತು.

ಕಾಲೇಜು ದೆಸೆಯಲ್ಲಿ ಬಸ್ ಕನ್ಸೇಷನ್, ಕಾಸರಗೋಡು ಕನ್ನಡಿಗರ ಪರ ಹೋರಾಟ, ರ್ಯಾಗಿಂಗ್ ಎಲ್ಲಾ ಪಿಗುಡುಗಳ ವಿರುದ್ಧ ದನಿಯೆತ್ತಿದ್ದೇನೆ. ಜಯವೂ ಲಭಿಸಿದೆ. ಅದರಲ್ಲಿ ಸಂತೃಪ್ತಿಯನ್ನೂ ಹೊಂದಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ.
ಆಟೋ ಜನಗಳು ನಮ್ಮಂತೆಯೆ ಹಾಗೂ ಅವರಲ್ಲಿ ಕೆಲವೇ ಕೆಲವರು ಕೆಟ್ಟವರಿರುತ್ತಾರೆ ಎಂದು ನಂಬಿದವ ನಾನು. ಅವರ ಶ್ರಮಜೀವನದ ಬಗ್ಗೆ ನನಗೆ ಬಹಳ ಗೌರವವಿದ್ದು, ಇಲ್ಲಿ ನಿಮ್ಮ ಲೇಖನ ಮತ್ತು ಅದರ ಪ್ರತಿಕ್ರಿಯೆಗಳು ಆಟೊ ಡ್ರೈವರ್ಗಳ ದೂಷಣೆಯನ್ನಷ್ಟೆ ಮಾಡುತ್ತಿದ್ದಾರೆನ್ನಿಸಿ, ಬೇಸರವಾಗಿ ಹಾಗೆ ಬರೆದೆ.
ಇನ್ನು ನೀವು ಮಾಡಿದ ಕೆಲವು ಒಳ್ಳೆಯ ಕೆಲಸಗಳ ಬಗ್ಗೆ ಹೇಳಿದ್ದೀರ. ಖುಷಿಯಾಯ್ತು. ಅದೇ ಕೆಲಸಗಳ ರೀತಿ ಆಟೋಗಳಲ್ಲಿನ ಅವ್ಯವಸ್ಥೆ ಸರಿಪಡಿಸಲು ಸಹಾಯ ಮಾಡಬಹುದಾದ ದಾರಿ ಬಗ್ಗೆ ಚರ್ಚಿಸುವ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಲ್ಲ ವಿನಯಣ್ಣ ಒಂದು ಸಮುದಾಯವೆಂದ ಮೇಲೆ ಯಾರೇ ತಪ್ಪು ಮಾಡಿದರು ಅದು ಆ ವ್ಯಕ್ತಿಗಿಂತ ಆ ಸಮುದಾಯದ ಎಲ್ಲರ ಮೇಲೆ ಹೋಗಿಬಿಡುತ್ತೆ ಅಲ್ವಾ ?

ಗ್ಯಾಸ್ ಬೆಲೆ ಹೆಚ್ಚಾದ ತಕ್ಷಣ ಒಂದಾಗುವ ಇವರು , ಈ ತರಹದ ಘಟನೆಗಳು ನಡೆದಾಗ ಯಾಕೆ ಧ್ವನಿ ಎತ್ತುವುದಿಲ್ಲ ?

ನಿರ್ಧಾರ ಕೈಗೊಳ್ಳುವವರು ನಮ್ಮ ನಾಯಕರೇ ಆದರೂ , ಅದು ಭಾರತದ ನಿರ್ಣಯ ಅಂತ ಯಾಕೆ ಹೇಳ್ತಾರೆ ? ಕಾರಣ ಇದು ಒಂದು ಸಮುದಾಯ , ಹಾಗೆ ಅವರ ಒಳಿತಿಗೆ ಮಾತ್ರ ಬೇಕು , ಪ್ರಯಾಣಿಕರೊಂದಿಗೆ ಹೇಗೆ ಬೇಕಾದರೂ ನಡೆದು ಕೊಳ್ಳಬಹುದು ಅನ್ನೋದು ಎಷ್ಟು ನ್ಯಾಯ ಅಲ್ವಾ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಮಿ, ಬರಿ ಆಟೋದವರನ್ನ ಬಯ್ಯೋರು, ಅವರ ಬಗ್ಗೆ ತಮಾಷೆ ಮಾಡಿ ನಗೋರು, ನಿಮ್ಮ ಕೆಲ್ಸಾನ ಅವರ ಕೆಲಸದ ಜೊತೆ ಹೋಲಿಸಿ ನೋಡಿ ಗೊತ್ತಾಗತ್ತೆ.
ಕರ್ನಾಟಕದ ಆಟೋ ಜನಗಳು ಒಳ್ಳೆಯರಲ್ಲ ಅನ್ನೋಕೆ ಮುಂಚೆ ತಮಿಳ್ನಾಡಲ್ಲಿ ಆಟೋ ಡ್ರೈವರ್ಗಳು ಹೆಂಗಿದಾರೆ ತಿಳ್ಕೊಳ್ಳಿ.
ಸುರಿಯೋ ಮಳೆಲಿ, ಹೊತ್ತಲ್ಲದ ಹೊತ್ತಲ್ಲಿ ಯಾರ್ಯಾರ್ ಕೈಲೋ 'ಏಯ್ ಆಟೋ' ಅಂತೆಲ್ಲ ಕರೆಸ್ಕೊಂಡು ಹೊಟ್ಟೆಪಾಡಿಗೆ ಕಷ್ಟ ಪಡ್ತಾರ್ರಿ ಅವ್ರು.
ಕಂಪ್ಯೂಟರ್ ಮುಂದೆ ಕೂತ್ಕೊಂಡ್ ಬಿಳಿ ಜನಗಳ ' ಸರ್ವಿಸ್' ಅಷ್ಟೇ ಮಾಡೋ ನಮ್ಮ ನಿಮ್ಮಮ್ತೊರ್ಗೆ ಈ ಕಷ್ಟ ಅರ್ಥ ಆಗಲ್ಲ. ಯಾವತ್ತಾದ್ರು ಆಟೋ ಹತ್ತಿದಾಗ ಡ್ರೈವರ್ನ ಮರ್ಯಾದೆ ಕೊಟ್ಟು ಮಾತಾಡ್ಸಿ ಸ್ವಲ್ಪ ಅವನ ನಿತ್ಯದ ಬದುಕು ಬಗ್ಗೆ ವಿಚಾರ್ಸಿ, ಸ್ವಲ್ಪ ತಿಳಿಬೋದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್ ಅವರೇ...

ಕರ್ನಾಟಕದ ಆಟೋ ಜನಗಳು ಒಳ್ಳೆಯರಲ್ಲ ಅಂತಾ ನಾನು ಎಲ್ಲಿಯೂ ಹೇಳಿಲ್ಲ. ನಾನೂ ಒಂದೂವರೆ ವರ್ಷ ತಮಿಳ್ನಾಡಲ್ಲಿ ಕೆಲಸದಲ್ಲಿದ್ದೆ. ನನಗೆ ಅಲ್ಲಿಯ ಆಟೋದವರ ಬಗ್ಗೆ ಗೊತ್ತು. ಕಣ್ಣು ಕೆಂಪಾಗಿಸಿ ದೊಡ್ಡ ಮೀಸೆ ಹೊತ್ತ ಅಲ್ಲಿನ ಆಟೋ ಡ್ರೈವರ್್ಗಳನ್ನು ನೋಡಿದ್ರೇ ಮೈ ಜುಂ ಎನ್ನುತ್ತಿತ್ತು. ಲಗೇಜ್ ಒಂದಿಷ್ಟು ಜಾಸ್ತಿಯಿದೆ ಎಂದು ಹೇಳಿ ಅದೆಷ್ಟೊ ಬಾರಿ ನಾನು ದುಬಾರಿ ದರ ನೀಡಿ ಚೆನ್ನೈಯಲ್ಲಿ ಓಡಾಡಿದ್ದೇನೆ.

ಆಟೋದವರ ಕಷ್ಟ ಪಾಡು ನನಗೂ ಗೊತ್ತು. ಅಂದಹಾಗೆ ನನ್ನ ಅಣ್ಣನೂ ಆಟೋ ಡ್ರೈವರ್. ನನ್ನ ಅದೆಷ್ಟೊ ಸಂಬಂಧಿಕರು ಆಟೋ ಚಾಲನೆ ಮಾಡಿ ಜೀವನ ನಡೆಸುತ್ತಿದ್ದಾರೆ ಅಂದ ಮಾತ್ರಕ್ಕೆ ನಾನು ಆಟೋದವರನ್ನು ಕೀಳಾಗಿ ಪರಿಗಣಿಸಿಲ್ಲ. ಕೀಳು ಭಾವನೆಯಿಂದ ನೋಡಿಯೂ ಇಲ್ಲ. ಮರ್ಯಾದೆ ಕೊಡದೆ ಮಾತನಾಡಿಸಿಯೂ ಇಲ್ಲ. ಆದರೆ ಆಟೋದವರು ನಿಗದಿತ ದರಕ್ಕಿಂತ ಅಧಿಕ ದರ ಸುಲಿಗೆ ಮಾಡುತ್ತಿರುವುದನ್ನು ಇಲ್ಲಿ ಹೇಳಿದ್ದೇನೆ.

ಸ್ವಾಮೀ..
ನಾವೂ ದುಡಿಯುವ ವರ್ಗದವರೇ...ಬಹಳ ಬಡತನದ ಕುಟುಂಬದಲ್ಲೇ ನಾನು ಬೆಳೆದದ್ದು. ನನಗೂ ಹೊಟ್ಟೆಪಾಡು ಏನೆಂದು ಗೊತ್ತು. ನಮ್ಮೂರಲ್ಲಿ ಆಟೋದವರನ್ನು "ರೋಡಿಂಡೆ ಮಕ್ಕಳ್್" ಅಂತಾ ಹೊಗಳುತ್ತಾರೆ ಗೊತ್ತಾ?

ಅವರ ಕಷ್ಟಪಾಡಿಗಾಗಿ ಅವರು ಅಧಿಕ ದರ ವಸೂಲಿ ಮಾಡುತ್ತಾರೆಂದರೆ ಹೇಗೆ? ನಾವು ದುಡಿದ ಹಣ ಇನ್ನೊಬ್ಬರು ಅನ್ಯಾಯವಾಗಿ ಇಸ್ಕೊಳ್ಳುವಾಗ ನಮಗೂ ಸಂಕಟವಾಗುವುದಿಲ್ಲವೇ?
ಮುಲಾಜಿಲ್ಲದೆ ಹೇಳಲಾ..ನನಗಂತೂ ಹಣ ಸುಮ್ಮನೆ ಖರ್ಚು ಮಾಡುವುದಂದರೆ ಹೊಟ್ಟೆ ಉರಿಯುತ್ತದೆ.

ಅಕ್ಕರೆಯಿಂದ,
ರಶ್ಮಿ.ಪೈ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಟೋ ಡ್ರೈವರ್’ಗಳಿಂದ ನನಗಾದ ಎರಡು ಅನುಭವ ಹೇಳಬಯಸುತ್ತೇನೆ.

ಹಿಂದೆ, ಬೆಂಗಳೂರಿಗೊಮ್ಮೆ ಭೇಟಿ ನೀಡಿದ್ದಾಗ ಸಂಜಯನಗರದಿಂದ ಜಯನಗರಕ್ಕೆ ಸಂಸಾರ ಸಮೇತ ಆಟೋದಲ್ಲಿ ಹೋಗುತ್ತಿದ್ದೆ. ಡ್ರೈವರ್ ನಿರರ್ಗಳವಾಗಿ ಸೂರ್ಯನಡಿಯ ಎಲ್ಲ ವಿಷಯ ಮಾತನಾಡುತ್ತ ಹಾಗೇ ಬುಷ್ ಸಾಹೇಬರನ್ನು ಸಿಕ್ಕಾಪಟ್ಟೆ ಬಯ್ಯತೊಡಗಿದ (ಆಗ ಇರಾಕಿನೊಡನೆ ಯುದ್ದ ನೆಡೆಯುತ್ತಿದ್ದ ಸಮಯ). ನಾನೂ ಹೂಗುಟ್ಟ ಹತ್ತಿದ್ದೆ. ಪರಿಚಯವೇ ಇಲ್ಲದವರ ಜೊತೆ ರಾಜಕೀಯ ಮಾತನಾಡುವುದು ಉಚಿತವಲ್ಲ. ವಿಧಾನ ಸೌಧ ಬಳಿ ಬಂದಾಗ ನನ್ನ ಮಗನಿಗೆ ಅದನ್ನು ತೋರಿಸುತ್ತ ವಿವರಿಸುತ್ತಿದ್ದೆ. ಆಟೋದವರು ಬಹಳ ಚಾಲಾಕು. ತಕ್ಷಣವೇ ಕೇಳಿದ ’ಅಮೇರಿಕದಿಂದ ಬಂದಿದ್ದೀರಾ ಸಾರ್’ ಅಂತ. ವಿದೇಶ ಅಂದರೆ ಅಮೇರಿಕ ಮಾತ್ರವೇ ? ಏನೇ ಇರಲಿ ನಂತರ ನೆಡೆದದ್ದೇ ಮಜ. ಏನಂತೀರಾ? ’ಜಯನಗರ ತಲುಪುವವರೆಗೂ ಬುಷ್ ಸಾಹೇಬರನ್ನು ಹೊಗಳಿದ್ದೇ ಹೊಗಳಿದ್ದು’ :-) ನಾನೇನೂ ಹೆಚ್ಚಿಗೆ ದುಡ್ಡು ಕೊಡಲಿಲ್ಲ ಅನ್ನಿ !

ಮತ್ತೊಮ್ಮೆ ವಿಜಯನಗರದಲ್ಲಿ ಆಟೋ ಹತ್ತಿದ್ದೆ. ಎಲ್ಲಿಗೆ ಹೊರಟಿದ್ದೆ ಅಂತ ಈಗ ನೆನಪಿಲ್ಲ. ಡ್ರೈವರ್ ಏನೋ ಆಳವಾಗಿ ಆಲೋಚಿಸುತ್ತ ಗಾಡಿ ಓಡಿಸುತ್ತಿದ್ದ. ಎಲ್ಲೋ ಒಮ್ಮೆ ಹಾದಿ ತಪ್ಪಿ ಸ್ವಲ್ಪ ಸುತ್ತಿ ಬಳಸಿ ನಾನು ತಲುಪಬೇಕಿದ್ದ ಸ್ಥಳ ತಲುಪಿಸಿದ. ದುಡ್ಡು ಕೊಟ್ಟೆ. ಮೀಟರ್’ಗಿಂತ ಐದು ರುಪಾಯಿ ಕಡಿಮೆ ತೆಗೆದುಕೊಂಡು "ಸಾರಿ ಸರ್, ಯಾವುದೋ ಜ್ಞ್ನಾನದಲ್ಲಿ ರೂಟ್ ಮಿಸ್ ಮಾಡಿದೆ" ಅಂತ ಹೊರಟೇ ಹೋಗುವುದೇ ? ನನಗಾದ ಅಚ್ಚರಿಯಿದ ಚೇತರಿಸಿಕೊಳ್ಳಲು ಹಲವು ನಿಮಿಷಗಳೇ ಬೇಕಾದವು. ಇಂತಹವರೂ ಇದ್ದಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಾಯಿ ಇದ್ದವರು ಬದುಕುತ್ತಾರೆ ಎನ್ನುವುದು ಹಳೇ ಗಾದೆ ಮಾತು ಇದೀಗ ಅದನ್ನು ಹಣ ವಿದ್ದವರು ಬದುಕುತ್ತಾರೆ ಎಂದು ಬದಲಾವಣೆ ಮಾಡಬೇಕಿದೆ. ನಿಮ್ಮಂತಹವರ ಅನುಭವ ಹೆಚ್ಚು ಜನರಿಗೆ ಉಂಟಾಗಿದ್ದರೂ ಜನ ಅದರ ವಿರುದ್ಧ ಧ್ವನಿ ಎತ್ತಲಾರದ ಸ್ಥಿತಿ ಮಯಾನಗರಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿದೆಡೆ ಇದೆ ಇದರ ಅಂತ್ಯವನ್ನು ಕಾಲವೇ ನಿರ್ಣಯಿಸಬೇಕಿದೆ ರಶ್ಮಿ..... ಇದು ಕೇವಲ ನಮ್ಮ ರಾಜ್ಯದ ಸ್ಥಿತಿಯಲ್ಲ ದೇಶದ ಎಲ್ಲೆಡೆಯೂ ಇಂತಹ ಸ್ಥಿತಿ ಇದೆ ಎನ್ನುವುದು ನನ್ನ ಅಭಿಪ್ರಾಯ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.