ಸಂಪದಕ್ಕೆ ಗುಡ್ ಬೈ..

0

ಪ್ರೀತಿಯ ಸಂಪದಿಗರೇ..

ಈವರೆಗೆ ನೀವು ನನಗೆ ನೀಡಿದ ಪ್ರೋತ್ಸಾಹ, ಮೆಚ್ಚುಗೆಗಳಿಗೆ ಧನ್ಯವಾದಗಳು.

ಸದ್ಯ ನನಗೆ ಬರೆಯಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ನನ್ನ ಭಾವನೆಗಳೇ ಖಾಲಿಯಾಗಿದೆ. ಭಾವನೆಗಳೇ ಇಲ್ಲದಿರುವಾಗ
ಬರೆಯಲು ಹೇಗೆ ಸಾಧ್ಯ?

ಎನಿದ್ದರೂ ಸಂಪದದೊಂದಿಗಿನ ನಂಟು ಇದ್ದೇ ಇರುವುದು.. ಹೆಚ್ಚಿಗೇನು ಹೇಳುವುದಿಲ್ಲ

ಅಕ್ಕರೆಯಿಂದ,
ರಶ್ಮಿ. ಪೈ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಭಾವನೆಗಳು ಖಾಲಿಯಾಗಿವೆ??
ಏನ್ರಿ ತಮಾಶೆ?
ಸಂಪದ ಓದ್ತಾ ಇರಿ. ಬರೆ ಸಂಪದ ಅಲ್ಲ ಅದರಾಚೆಗೂ ಓದ್ತಿರಿ. ಮತ್ತೆ ಭಾವನೆಗಳು ತುಂಬಿಕೊಂಡವೆ ಅನ್ಸಿದ್ರೆ ಬರೀರಿ. ಮಾದೇಶ್ವರ ಒಳ್ಳೆದು ಮಾಡ್ಲಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನದೂ ಖಾಲಿಯಾಯ್ತು. :)
ರಾತ್ರಿಯವರೆಗೆ ಗುಡ್ ಬೈ..
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿ, ಈ ಕಾಮೆಂಟ್ ಓದಿ ಏನೂ ಭಾವನೆ ಮೂಡುತ್ತಿಲ್ಲ. ನಾಳೆ ಬೆಳಿಗ್ಗೆ ಟ್ರೈ ಮಾಡಿ ನೋಡುವ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ,
"ಭಾವನೆಗಳು ಖಾಲಿಯಾದವು" ಎಂದುಬಿಟ್ಟರೆ ಓದುವವರು ಏನು ಬೇಕಾದರೂ ತಿಳಿದುಕೊಳ್ಳಬಹುದು. ಗುಡ್ ಬೈ ಎಂದು ಬರೆಯಲೂ ಒಂದು ಪ್ರಬಲ ಭಾವನೆಯೇ ಇದ್ದಿರಬೇಕಲ್ಲವೆ?
ಯಾಕೆ? ಏನಾಯ್ತು 'ಗುಡ್ ಬೈ' ಅನ್ನೋ ಅಂಥಾದ್ದು? :-)

ಮನಸ್ಸಿನಲ್ಲಿ ನೂರೆಂಟು ವಿಷಯಗಳಿಟ್ಟುಕೊಂಡೂ ನನಗೆ ಬರೆಯಲಾಗುತ್ತಿಲ್ಲ. ಭಾವನೆಗಳು ಖಾಲಿ ಎಂದು ಅದನ್ನೇ ಬರೆದಿಟ್ಟ ನೀವೇ ಉತ್ತಮ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರೆಯಲು ಏನೂ ಭಾವನೆಗಳೇ ಇಲ್ಲ ಹರಿ,
ಪದಗಳಿಗಾಗಿ ತಡಕಾಡುತ್ತಿದ್ದೇನೆ...ಇನ್ನು ಮುಂದೆ ಬರೆಯಲು ನನ್ನಿಂದ ಸಾಧ್ಯವಾಗುವುದಿಲ್ಲ ಎಂಬ ಭಾವನೆ ನನ್ನಲ್ಲಿ ಗಟ್ಟಿಯಾಗಿದೆ. ಅದಕ್ಕೆ ಈ ತೀರ್ಮಾನ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮೀ... ನಿವೇನೊ ಗುಡ ಬೈ ಅ೦ದು ಬಿಟ್ಟ್ರಿ...
ಆದರೆ ಅದು ಅದೆಷ್ಟೋ ಸ್ನೇಹಿತರಿಗೆ "ಬ್ಯಾಡ ಬೈ" ಅನ್ನೊ ಭಾವನೆ ಬಿಟ್ಟು ಹೋಗಿದೆ.

ಗೋವಿ೦ದ ಪೈ ಅವರು ನೆಲೆಸಿರುವ ಉರಲ್ಲಿ ಇದ್ದು ನೀವು ಹೀಗೆ ಹೇಳಬಾರದು.
ನಿಮ್ಮಗೇನಾದರು ಕಹಿಯಾದ ಅನುಭವ ಆಗಿದ್ರೆ ನಮ್ಮೊ೦ದಿಗೆ ಹ೦ಚಿಕೊಳ್ಳಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವನೆಗಳೇ ಹಾಗೆ
ಖಾಲಿಯಾದಂತೆ ತೋರಿ
ಒಳಗೇ ಮಾಡುವುವು ಪಿತೂರಿ
ಬತ್ತಿದಂತೆ ಭಾಸವಾಗಿ
ಸುತ್ತಿಸುತ್ತಿ ಹೊಡೆಯುವುವು ಗಿರಕಿ
ಬಿಕ್ಕಿ ಬಿಕ್ಕಿ ಅಳುವ ಕಂದನ ನೋಡಿ
ಮುತ್ತಿಕ್ಕಿ ಎಚ್ಚೆತ್ತು ಕೊಳ್ಳುವುವು
ಇನ್ನೆಲ್ಲಿ ಬಂತು ಭಾವನೆಗೆ ಸಾವು ?

ರಶ್ಮಿ,
ಈಗ ಹೇಳಿ, ನಿಮ್ಮ ಮುಂದೆ ಒಂದು ಪುಟ್ಟ ಮಗು ಬೆತ್ತಲು ನಿಂತಿದೆ, ಕಣ್ಣಲ್ಲಿ ನೀರತುಂಬಿ ಅಳುತ್ತಿದೆ,ಹಸಿವಿನಿಂದ ಅಳುತ್ತಿರುವ ಆ ಕಂದನ ನೋಡಿದರೆ ನಿಮ್ಮಲಿ ಯಾವ ಭಾವನೆಯೂ ಉಕ್ಕುವುದೇ ಇಲ್ಲವೇ?
ಅಷ್ಟು ಸುಲಭವಾಗಿ ಭಾವನೆಗಳು ಬತ್ತುವುದಿಲ್ಲ. ಅದೇನೂ ಮಳೆಗಾಲದಲ್ಲಿ ಮಾತ್ರ ತುಂಬುವ ಹೊಂಡದ ನೀರಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ ಯವರೆ ಇಷ್ಟು ಬೇಗ ಈ ನಿರ್ಧಾರಕ್ಕೆ ಬರುವುದಾ...!!!!!
ಪುನಃ ಯೋಚಿಸಿ..
ಎನಾದರು ಗೀಚುವ ಎಂದೆನಿಸದೇ...??? :(

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ

ಸ್ವಲ್ಪ ದಿನ ಆರಾಮಾಗಿ ಓದ್ತಾ ಇರಿ , ಆಮೇಲೆ ಬರೆಯೋ ಮನಸು ಬಂದೆ ಬರುತ್ತೆ :)

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ,
ನಾನು ನಿಮ್ಮದೇ ಮಾತುಗಳಲ್ಲಿ ನಿಮ್ಮನ್ನು ಕಟ್ಟಿ ಹಾಕಿ ಮತ್ತೆ ಇತ್ತಕಡೆ ಎಳೆಯುವ ಪ್ರಯತ್ನ ಮಾಡುತ್ತಿದ್ದೇನೆ.

>>ಪ್ರೀತಿಯ ಸಂಪದಿಗರೇ..<<

ನಾವೆಲ್ಲಾ ನಿಮ್ಮ ಪ್ರೀತಿಯವರು ಅನ್ನುವುದು ಖುಷಿ ಕೊಡುವ ವಿಚಾರ.
ಅದೇ ಪ್ರೀತಿಯಿಂದ ನನ್ನ ಮಾತುಗಳಿಗೆ ಕಿವಿಕೊಡಿ.

>>ಸದ್ಯ ನನಗೆ ಬರೆಯಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ನನ್ನ ಭಾವನೆಗಳೇ ಖಾಲಿಯಾಗಿದೆ. ಭಾವನೆಗಳೇ ಇಲ್ಲದಿರುವಾಗ
ಬರೆಯಲು ಹೇಗೆ ಸಾಧ್ಯ? <<

ಭಾವನೆಗಳು ಇಲ್ಲದಾಗ ಬರೆಯಲು ಆಗದಿದ್ದರೆ, ಸಂಪದಕ್ಕೆ ದಿನಾ ಭೇಟಿ ಕೊಟ್ಟು ಓದುವ ಕೆಲಸ ಮಾಡಿ. ಸಂಪದದಲ್ಲಿ ಎಲ್ಲರೂ ಬರೆಯಲೇ ಬೇಕು, ಬರೆಯಲಾಗದವರು ಬಿಟ್ಟು ಹೋಗಬೆಕೆಂಬ ನಿಯಮವೇನೂ ಇಲ್ಲ. ಲೇಖನ/ಬರಹಗಳನ್ನು ಓದಿ ನಿಮಗನಿಸಿದ ಪ್ರತಿಕ್ರಿಯೆ ನೀಡಿ. ಎಂದೋ ಒಂದು ದಿನ ಯಾರದೋ ಬರಹ ನಿಮಗೆ ಸ್ಪೂರ್ತಿ ನೀಡಬಹುದು. ನಿಮ್ಮ ಭಾವನೆಗಳ ಬತ್ತಳಿಕೆ ಮತ್ತೆ ತುಂಬಿಕೊಳ್ಳಬಹುದು.

>>ಎನಿದ್ದರೂ ಸಂಪದದೊಂದಿಗಿನ ನಂಟು ಇದ್ದೇ ಇರುವುದು.. <<

ಇದು ಗುಡ್ ಬೈ ಗೆ ತದ್ವಿರುದ್ಧವಾದ ಮಾತು. ಸಂಪದಕ್ಕೆ ಗುಡ್ ಬೈ ಹೇಳಿ, ಆ ಮೇಲೆ ನಂಟು ಇದ್ದೇ ಇರುವುದು ಅಂತೀರಾ...
ನಿಮ್ಮ ಮನದಲ್ಲಿ ಭಾವನೆಗಳು ಇವೆ. ಆದರೆ ಅಲ್ಲಿ ಗೊಂದಲವೂ ಇದೆ. ಭಾವನೆಗಳ ತಿಕ್ಕಾಟ ಇದೆ.
ಕಾಲವೇ ಇದಕ್ಕೆ ಉಪಶಮನ ನೀಡಬಹುದು.

>>ಹೆಚ್ಚಿಗೇನು ಹೇಳುವುದಿಲ್ಲ<<

ಇದು ಯಾವುದೋ ಕಾರಣದಿಂದ ನಿಮ್ಮ ಮನ ನೊಂದಿದೆ ಎನ್ನುವುದನ್ನು ಸೂಚಿಸುತ್ತಿದೆ. ಅದು ಸಂಪದದಿಂದ ಅಲ್ಲವೆಂದೂ ಅರಿವಾಗುತ್ತಿದೆ. ನಿಮಗೆ ಒಂದೋ ಸಮಯದ ಅಭಾವ ಇರಬಹುದು. ಇಲ್ಲವಾದಲ್ಲಿ ನಿಮ್ಮ ವೃತ್ತಿ ಜೀವನದಲ್ಲಿನ ಸಮಸ್ಯೆಗಳಿರಬಹುದು.
ಆ ನೋವನ್ನು ಮರೆಮಾಡುವ ಶಕ್ತಿ ನಿಮ್ಮಲ್ಲಿ ಹುಟ್ಟಿಕೊಳ್ಳಲಿ.

>>ಅಕ್ಕರೆಯಿಂದ<<

ಅಕ್ಕರೆಯಿಂದ ಅಂತೀರಾ... ಆ ಅಕ್ಕರೆ ಇದೆಯಾದಲ್ಲಿ...ಎರಡು ದಿನ ಸುಮ್ಮನೇ ಕೂತು ಸಂಪದದ ಬಗ್ಗೆ ಯೋಚಿಸಿ ನೋಡಿ. ಅದು ನೀವು ಬೇಡವೆಂದರೂ ನಿಮ್ಮನ್ನು ವಾಪಸು ಸೆಳೆಯುತ್ತದೆ.

ಇನ್ನು ಕೊನೆಯದಾಗಿ...

"ಗುಡ್ ಬೈ" ಇದರ ಮೂಲ ಅರ್ಥ "ಮೇ ಗಾಡ್ ಬೀ ವಿದ್ ಯು" ಅಂತ ನಾನು ಕೇಳಿದ್ದೆ.
ನಾನು ಅದನ್ನೇ ಹೇಳುತ್ತೇನೆ. ನಿಮ್ಮೊಂದಿಗೆ ಆ ದೇವರು ಸದಾ ಇರಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Please ,
Good bye is not a good word......
So...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ ಬೇಸಿಗೆ ಕಾಲ ನೀರಿಗೆ ಬರಗಾಲ.
ಮುಂದಿದೆ ಮಳೆಗಾಲ.
ಆಮೇಲೆ ನೀರಿಗಿಲ್ಲ ತಾಪತ್ರಯ.
ಭಾವನೆಗಳೆಂದೂ ಬತ್ತುವುದಿಲ್ಲ
ನೀರಿನಂತೆ.ಕ್ಷಣಿಕ ಹಿನ್ನಡೆಯಷ್ಟೇ
ಬರಲಿ ಮಳೆಗಾಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.