ಹೀಗೂ ಒಂದು ಮತ ಯಾಚನೆ!

0

ಮತದಾರರಿಗೆ ಹಲವಾರು ಭರವಸೆಗಳನ್ನು ನೀಡಿ, ತಗ್ಗಿ ಬಗ್ಗಿ ಮತಯಾಚಿಸುವ ಗೋಸುಂಬೆ ರಾಜಕಾರಣಿಗಳನ್ನು ನೋಡಿದ್ದೇವೆ.
ಮತಯಾಚನೆ ವೇಳೆ ಕೂಡಾ ಒಬ್ಬರನ್ನೊಬ್ಬರು ಅನುಕರಿಸುವ (ಕಾಪಿ ಹೊಡೆಯುವ) ಜಾಯಮಾನದ ರಾಜಕಾರಣಿಗಳ ಬಗ್ಗೆ ಗೆಳೆಯ ಹೇಳಿದ ಒಂದು ಹಾಸ್ಯ ನಿಮ್ಮ ಮುಂದಿಡುತ್ತಿದ್ದೇನೆ.

ಚುನಾವಣೆಗೆ ಕುಮಾರನ್ ತನ್ನ ಪತ್ನಿಯನ್ನು ಕಣಕ್ಕಿಳಿಸಿದ. ಕುಮಾರನ್ ಪತ್ನಿಯೊಂದಿಗೆ ಬಾಲುವಿನ ಅಮ್ಮ ಹಾಗೂ ಸುಕುವಿನ ಸಹೋದರಿ ಕೂಡಾ ಕಣದಲ್ಲಿದ್ದರು (ಇದು ಮಹಿಳಾ ಮೀಸಲಾತಿ ಸೀಟು :) )

ಬಾಲು ಮತಯಾಚನೆ ವೇಳೆ ಹೇಳಿದ: ನನ್ನ ಅಮ್ಮ ನಿಮ್ಮೆಲ್ಲರ ಅಮ್ಮ. ಹಾಗಾಗಿ ನನ್ನ ಅಮ್ಮನಿಗೇ ಓಟು ನೀಡಿ.

ಸುಕು: ಇವಳು ನನ್ನ ಸಹೋದರಿ ಮಾತ್ರವಲ್ಲ ಈ ಸಮಸ್ತ ಜನರ ಸಹೋದರಿ ಅದಕ್ಕಾಗಿ ನಿಮ್ಮ ಮತವನ್ನು ನನ್ನ ಸಹೋದರಿಗೆ ನೀಡಿ.

ಕುಮಾರನ್ ಅದೇ ರೀತಿಯನ್ನು ಅನುಸರಿಸಿ ಹೇಳಿದ: ಪ್ರೀತಿಯ ಮತ ಬಾಂಧವರೇ...ಇವಳು ನನ್ನ ಹೆಂಡತಿ ಮಾತ್ರವಲ್ಲ ನಿಮ್ಮೆಲ್ಲರ ಹೆಂಡತಿ. ಇವಳಿಗೆ ನಿಮ್ಮ ಮತ ನೀಡಿ. !!!!

ನೋಡಿದಿರಾ...ಕಾಪಿ ಹೊಡೆಯುವುದು ಅಂದರೆ ಹೀಗೆ...

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ :-D.
ಅನ್ನಕ್ಕೂ ಅಮೆದ್ಯಕ್ಕೂ ವ್ಯತ್ಯಾಸ ಗೊತ್ತಿಲ್ಲದೆ ಇರೊರೆಲ್ಲ ಹೀಗೆ ಹೇಳೋದೇನೋ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿ,
ಮೆಚ್ಚಿದ್ದು ನಾ ನಿಮ್ಮ ಈ ಬರಹವನ್ನಲ್ಲ.
ನೀವು ಮತ್ತೆ ಸಂಪದದದಲ್ಲಿ ಬರೆದಿರಲ್ಲಾ ಅದನ್ನು.
http://sampada.net/blog/rashmipai/20/04/2009/19370

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.