ಕಾಲಕ್ಕೆ ಸರಿದ ಥ್ರಿಲ್ಲಿಂಗ್ ಘಟನೆಗಳು....

4.5

ತ್ತೆ ಬಂದಿದೆ ಹೊಸ ವರುಷ. ಎಷ್ಟು ಬೇಗ ವರ್ಷ ಕಳೆದು ಹೋಯಿತಲ್ಲಾ ಎಂದು ಹೇಳುವುದು ಸಾಮಾನ್ಯವೇ. ಇನ್ನು ಮುಂದಿನ ವರ್ಷ ಏನೇನು ಮಾಡಬೇಕೆಂಬುದರ ಬಗ್ಗೆ ಯೋಚಿಸುವುದು ಸಾಮಾನ್ಯವೇ ಆದರೆ ಆ ಯೋಜನೆ ಕಾರ್ಯಗಳು ಕೈಗೂಡಿವೆಯೇ? ಎಂದು ಯೋಚಿಸಿದರೆ ಹೆಚ್ಚಿನ ಯೋಜನೆಗಳಿಗೆ 'ಇಲ್ಲ' ಎಂಬ ಉತ್ತರವೇ ಲಭಿಸುತ್ತದೆ. ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳುವುದಾದೆ ಈ ವರ್ಷ ಹಲವಾರು ಅನುಭವಗಳನ್ನು ನೀಡಿದೆ. 2010 ಜನವರಿಯಲ್ಲಿ ನನ್ನ ಕವನ ಸಂಕಲನ ಬಿಡುಗಡೆಗೊಳಿಸುವ ಮೂಲಕ ಹೊಸ ವರುಷಕ್ಕೆ ಭರ್ಜರಿ ಆರಂಭ ನೀಡಿದ್ದೆ. ನಂತರ ಕಾಲದೊಂದಿಗೆ ಸಿಹಿ ಕಹಿ ಘಟನೆಗಳು ಘಟಿಸಿ ಹೋದವು.


ಕೆಲವೊಂದು ಘಟನೆಗಳು ಮನಸ್ಸಲ್ಲಿ ಮಾಸದೆ ಉಳಿದಿವೆ. ಕೆಲವೊಂದು ಜೀವನದಲ್ಲಿ ಮೊದಲಸಲ ಎನ್ನುವವು. ಇನ್ನು ಕೆಲವು ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿದ್ದೆ ಎಂದು ಅನಿಸುವಂತವುಗಳು.


ಇವುಗಳಲ್ಲಿ ಕೆಲವು ಥ್ರಿಲ್ಲಿಂಗ್ ಅಂತಾ ಅನಿಸುವ ಕೆಲವು ಘಟನೆಗಳೂ ಇವೆ.


 


ಅವುಗಳು...


1.ಸಿಗ್ನಲ್ ಜಂಪ್ ಮಾಡಿದ್ದು (ಪೋಲಿಸ್ ಕಣ್ತಪ್ಪಿಸಿ)


2. ಟ್ರಾಫಿಕ್ ಜಾಮ್್ನಲ್ಲಿ ಒದ್ದಾಡಿ ಸುಸ್ತಾದಾಗ ಫ್ಲ್ಲಾಟ್್ಫಾರಂನಲ್ಲಿ ಗಾಡಿ ಓಡಿಸಿಕೊಂಡು ಬಂದದ್ದು (ಇನ್ಯಾರೋ ಫ್ಲಾಟ್್ಫಾರಂ ಮೇಲೆ ಗಾಡಿ ಓಡಿಸಿದ್ರೆ ನಂಗೆ ಕೋಪ ಬರುತ್ತೆ)


3. ನಂದಿಬೆಟ್ಟದ 'ಡೇಂಜರ್್' ಎಂದು ಬರೆದಿರುವ ಪ್ರದೇಶದಲ್ಲಿ ಹೋಗಿ ಫೋಟೋ ತೆಗೆಸಿಕೊಂಡದ್ದು ( ಭಯ ಆದ್ರೂ ಚಾಲೆಂಜ್ ಹಾಕಿದ ಕಾರಣ ಮಾತ್ರ ಅಲ್ಲಿಗೆ ಹೋದದ್ದು)


4. ನಮ್ಮ ರೂಮಿಗೆ ಇಲಿ ಬಂದಾಗ ಪಕ್ಕದ ರೂಮ್್ಗೆ ಇಲಿಯನ್ನು ಓಡಿಸಿ ಗಡದ್ದಾಗಿ ನಿದ್ದೆ ಮಾಡಿದ್ದು.


5. ನೀರು ಕಂಡರೆ ಭಯ. ಅಂತದರಲ್ಲಿ ಪೆಡಲ್ ತುಳಿಯುತ್ತಾ ಬೋಟಿಂಗ್ ಮಾಡಿದ್ದು.


6.ಮೊದಲ ಬಾರಿ ನೂಡಲ್ಸ್  (ರುಚಿಕರವಾಗಿ) ತಯಾರಿಸಿದ್ದು.


7. ಫ್ರೆಂಡ್್ನಿಂದ ಮ್ಯೂಸಿಕಲ್ ಕಾರ್ (ಆಟಿಕೆ) ಗಿಫ್ಟ್ ಪಡೆದುಕೊಂಡದ್ದು.


8. ಕನ್ನಡ ಪುಸ್ತಕಗಳನ್ನು ಓದುವ ಮೂಲಕ ನನ್ನ ಕನ್ನಡ ಜ್ಞಾನ ಹೆಚ್ಚಿಸಿಕೊಂಡದ್ದು.


9. ಹಲವಾರು ಮಹಿಳೆಯರ ಸಂದರ್ಶನ ನಡೆಸುವ ಮೂಲಕ ಅನುಭವ ಹೆಚ್ಚಿಸಿಕೊಂಡದ್ದು.


10. ಜಾರಿ ಬಿದ್ದು ಕಾಲು ಗಾಯ ಮಾಡಿಕೊಂಡಾಗ, ಕಷ್ಟ ಎನಿಸಿದರೂ ರೂಮ್್ಮೇಟ್ಸ್ ಜೊತೆಗೆ ಸೇರಿ ನಕ್ಕಿದ್ದು.


11.ಸಿಕ್ಕಾಪಟ್ಟೆ ಖರ್ಚು ಮಾಡಿ ಕೊನೆಗೆ ನನ್ನನ್ನು ನಾನೇ ಬೈದುಕೊಂಡದ್ದು.


  


ಮುಂದಿನ ವರ್ಷದ ರೆಸಲ್ಯೂಷನ್...


1. ಚಾಕ್ಲೇಟ್್ಗೆ ಗುಡ್ ಬೈ ಹೇಳ್ಬೇಕು.


2. ಜಾಸ್ತಿ ಪುಸ್ತಕ ಓದ್ಬೇಕು, ಇನ್ನೂ ಚೆನ್ನಾಗಿ ಬರೆಯಲು ಕಲಿಬೇಕು.


3.ಸಿಟ್ಟು ಕಡಿಮೆ ಮಾಡಿಕೊಳ್ಬೇಕು.


4.ಖರ್ಚು ಕಡಿಮೆ ಮಾಡ್ಬೇಕು.


5. ಮಕ್ಕಳಾಟಿಕೆ ನಿಲ್ಲಿಸಿ ಲೈಫ್್ನಲ್ಲಿ ಸೀರಿಯಸ್ಸ್ ಆಗ್ಬೇಕು. (ಆಗ್ತೇನೋ ಇಲ್ವೋ ಎಂಬುದು ಸಂಶಯ)


 


ಸದ್ಯಕ್ಕೆ ಇಷ್ಟೇನೆ....ಇದರಲ್ಲಿ ಯಾವುದೆಲ್ಲಾ ಕಾರ್ಯ ನೆರವೇರಿದೆ ಎಂಬುದನ್ನು ಮುಂದಿನ ವರ್ಷ ಡಿಸೆಂಬರ್್ನಲ್ಲಿ ಹೇಳುತ್ತೇನೆ.


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಶ್ಮಿಯವರೇ ನಿಮ್ಮೆಲ್ಲ ಯೋಜನೆಗಳು ಈಡೇರಲಿ, ಬರುವ ನವವರುಷ ಮನೆ ಮನಗಳಲಿ ಹರುಷ ತರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ಲಾಟ್‌ಫಾರಂ ಅಂದ್ರೆ, ಫುಟ್‌ಪಾತಾ? ಚೆನ್ನಾಗಿವೆ, ನಿಮ್ಮ ಯೋಚನೆ ಹಾಗು ಯೋಜನೆಗಳು.. ಹಾರ್ದಿಕ ಶುಭಾಶಯಗಳು.. ನಿಮ್ಮೊಲವಿನ. ಸತ್ಯ ..:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿಯವರೇ..ನೆನ್ನೆ ನೆನ್ನೆಗೆ, ನಾಳೆ ನಾಳೆಗೆ, ಇಂದು ಮಾತ್ರ ನಮ್ಮದು ಅದನ್ನು ಸಂತೋಷವಾಗಿ ಕಳೆಯೋಣ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುಡ್ :-) ಹಾಗಾದ್ರೆ ಚಾಕ್ಲೇಟ್ ಕಾಸು ಉಳೀತು.. ;-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊಸ ವರ್ಷದಲ್ಲಿ ಯೋಜನೆ ಹಾಕಿಕೊಳ್ಳುವ ಕ್ರಮ ಸ್ವಾಗತಾರ್ಹ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾ ಓಕೆ ಆದ್ರೆ ಚಾಕ್ಲೇಟ್ ಗೆ ಗುಡ್ ಬೈ ಹೇಳೋ ನಿರ್ಧಾರ ಯಾಕೆ???
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಶ್ಮಿಯವರೆ, ಹೊಸವರುಷಕ್ಕೆ ನಿಮ್ಮ ಯೋಜನೆ ಚೆನ್ನಾಗಿದೆ, ಕಾರ್ಯಗತವಾಗಲಿ, ಜೊತೆಗೆ ಎಲ್ಲದರಲ್ಲೂ ನಿಮಗೆ ಶುಭವಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.