ಜಂಗಮನಾಗದೆ

3

 ಬದುಕ ಜಾತ್ರೆಯ ತುಂಬಾ

ಅದೆಷ್ಟು ಮುಖಗಳು

ಯಾವ ಮುಖವೂ 

ಭರವಸೆ ಆಗದೆ 

ಉಳಿದಿರುವಾಗ 

ಊರಿಂದೂರಿಗೆ 

ನೋವಿನಿಂದ ನೋವಿಗೆ 

ಚಿಂತನೆಗಳೊಂದಿಗೆ 

ಕನವರಿಕೆಗಳೊಂದಿಗೆ 

ನೆನಪುಗಳೊಂದಿಗೆ 

ಜೋಳಿಗೆ ಹಿಡಿದು 

ಎದೆಯ ರಾಗಗಳಿಗೆ 

ಕಾವ್ಯದ ಬಟ್ಟೆ 

ತೊಡಿಸುತ್ತ ಇರುವಾಗ 

ಜಗದ ಸಕಲರನ್ನೂ 

ಪ್ರೀತಿಸುವ 

ಎಲ್ಲ ಮತಗಳಲ್ಲೂ 

ಇನ್ನೂ ಮನುಷ್ಯತ್ವ 

ಹುಡುಕುತ್ತಿರುವಾಗ 

ನನ್ನದೇ ಹಾದಿಯಲ್ಲಿ 

ನಡೆಯುತ್ತಾ ಇರುವಾಗ 

ಕೊನೆಗೊಮ್ಮೆ ಸಾವಿನ 

ಮನೆಯ ಒಡಲಿಂದ 

ಬಿಟ್ಟು ಹೋದವರ 

ನೆನಪಲ್ಲಿರುವಾಗ 

ಇಲ್ಲಿರಲಾರೆ ಅಲ್ಲಿ 

ಹೋಗಲಾರೆ 

ಎಂಬ ಸಂದಿಗ್ಧದಲ್ಲಿರುವಾಗ

ಕೇಳದ ಯಾವುದೋ 

ಮುರಳೀ ಗಾನಕ್ಕೆ

ಕಿವಿಯಾಗುವವರೆಗೆ 

ಜಂಗಮನಾಗದೆ 

ಉಳಿವಿಲ್ಲ ನನಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರವಿಯವರೇ ಅದ್ಭುತ ಚಿಂತನೆಗಳು ಅಭಿನಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ನಾಗರತ್ನ ಮೇಡಂ. ಮೂರನೆಯ ಚರಣದಲ್ಲಿ " ಜಗದ ಸಕಲರನ್ನೂ ಪ್ರೀತಿಸುತ್ತಿರುವ" ಎಂದು ಬರೆದಿದ್ದರೆ ಸರಿಯಿತ್ತೆ? ನಿಮ್ಮ ಅಭಿಪ್ರಾಯ ತಿಳಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿಯವರೇ ನಿಜ ನಿವಂದುದು ಸರಿಯಾಗುತ್ತೆ ಅನ್ನಿಸುತ್ತೆ ತುಂಬಾ ಅರ್ಥ ಗರ್ಭಿತ ನಿಮ್ಮ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥ ಸಾರ್ ವಂದನೆಗಳು.ನನ್ನ ಯಾವ ಹೇಳಿಕೆ ಸರಿಯಾಗುತ್ತೆ ತಿಳಿಸಿ. ವಿಶ್ವಾಸದೊಂದಿಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕವನ ತುಂಬಾ ಚೆನ್ನಾಗಿದೆ.. ಮೂರನೆಯ ಚರಣ ಓದುವಾಗ "ವಸುದೈವ ಕುಟುಂಬಕಂ" ಎಂಬ ನುಡಿ ನೆನಪಾಯಿತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಪ್ರಶಸ್ತಿ ಅವರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಮ್ಮೊಮ್ಮೆ ನಾನೂ ಹೀಗೇ ಯೋಚಿಸುತ್ತೇನೆ.. ಅರ್ಥಗರ್ಭಿತ ಸು೦ದರ ಕವನ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಸಾರ್ ನಮನಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.