ಹೆ ಹೆ ನಾನೂ ಹಾಡಿಯೇ ಬಿಟ್ಟೆ

3

ನಾನು ಜನರೆದುರು  ಹಾಡಿ  ಸುಮಾರು ವರ್ಷಗಳೇ ಆಗಿರಬಹುದು. ಬಹುಷ: ಹತ್ತು ವರ್ಷಗಳಾಗಿರಬಹುದೇನೋ .ಈಗಲೂ ಮಗಳಿಗೆ ಜೋ ಜೋ ಹಾಡುವುದು , ಒಬ್ಬಳೇ    ಇದ್ದಾಗ ಅಥವ ಪತಿರಾಯ ತಲೆನೋವು ಸಾಕು ಎನ್ನುವವರೆಗೆ ಸಿನಿಮಾ ಹಾಡು ಹಾಡುವುದು ಇಷ್ಟೇ .  

ಹೀಗೆ ಹೋದ ತಿಂಗಳು ನನ್ನ ಭಾವನ ಮಗಳ ಸಮಾರಂಭಕ್ಜೆ ಹೋಗಿದ್ದೆವು ಹೊಸೂರಿನ ಜಕ್ಕಸಮುದ್ರ ಎಂಬ ಊರದು .ಎಲ್ಲರೂ ಮೂಲತ:  ಕನ್ನಡಿಗರೇ ಆದರೆ ತಮಿಳು ಮಿಶ್ರಿತ ಭಾಷೆ. ಅವರ ಕನ್ನಡವೇ ಬೇರೆ. ಸಮಾರಂಭ ಮುಗಿಸಿ ಅಲ್ಲಿಯೇ ಸಮೀಪದಲ್ಲಿ ಇದ್ದ ೮೦ ವರ್ಷ ಹಳೆಯದಾದ ರಾಘವೇಂದ್ರ ಗುಡಿಗೆ ಭೇಟಿ ಕೊಟ್ಟೆವು. 

ಪೂಜೆ ಶುರುವಾಗುವವರೆಗೂ  ಅಲ್ಲಿಯೆ ಇದ್ದ ಒಂದಷ್ಟು ಮಂದಿ ಹಾಡಲು ಶುರು ಮಾಡಿದರು. ಎಲ್ಲವೂ ಕೀರ್ತನೆಗಳು. ನಾನು ಕಲಿತಿದ್ದವೇ . ಹಾಗಾಗಿ ಅವರ ಹಾಡುಗಳಿಗೆ ಸುಮ್ಮನೇ ಬಾಯಿ ಆಡಿಸುತ್ತಿದ್ದೆ. ಪಾಪ ಪುರೋಹಿತರು ಚೆನ್ನಾಗಿ ಹಾಡುತ್ತಾಳೆ ಎಂದುಕೊಂಡರೇನೋ

"ನೀನೂ ಒಂದು ಹಾಡು ಹಾಡಮ್ಮಾ "ಎಂದರು

ನಾನು ಕಕ್ಕಾಬಿಕ್ಕಿ

"ಇಲ್ಲ ನನಗೆ ಬರೋದಿಲ್ಲ" ಎಂದೆ

"ಪರವಾಗಿಲ್ಲ ಹಾಡಿ ಆವಾಗಿಂದ ನೀವೂ ತಾಳ ಹಾಕುತ್ತಿದ್ದಿರಿ "ಅಂದರು ಮತ್ತೊಬ್ಬ ಮುತ್ತೈದೆ

ಅವರಿಗೇನು ಗೊತ್ತು ನಾನೂ ಸಿನಿಮಾ ಹಾಡುಗಳಿಗೂ ತಾಳ ಹಾಕುತೇನೆ ಅಂತ

"ಹೆ ಹೆ " ಎಂದೆ

ಯಾವ ದೇವರ ಹಾಡೂ ನೆನಪಿಗೆ ಬರುತ್ತಿಲ್ಲ. ಮನೆಯಲ್ಲಾದರೆ ನನ್ನದೇ ರಾಗ ನನ್ನದೇ ತಾಳ ಹಾಡಿದರೂ, ಕಿರುಚಿದರೂ ಕೇಳೋರಿಲ್ಲ. ಆದರೆ ಇಲ್ಲಿ?

ಎದುರಿಗೆ ನನ್ನ ವಾರಗಿತ್ತಿ. ಮರ್ಯಾದೆ ಪ್ರಶ್ನೆ . ಪಕ್ಕದಲ್ಲಿ ಪತಿರಾಯ  . ಅಷ್ಟೂ ಬರೋದಿಲ್ವಾ ಎನ್ನುವಂತೆ ನೋಡುತ್ತಿದ್ದಾರೆ. ಅಕ್ಕ ಪಕ್ಕದಲ್ಲಿ  ನೆಂಟರು. ಮರ್ಯಾದೆ ಉಳಿಸಿಕೊಳ್ಲಲೇ ಬೇಕಿತ್ತು

ಯಾರೋ ಭಾಗ್ಯಾದ ಲಕ್ಷಿ ಬಾರಮ್ಮ ಹಾಡಿ ಬಿಡಮ್ಮ 

ಎಂದರು

ತಕ್ಷಣ ಆದ್ವಾನ್ ಲಕ್ಷ್ಮಿದೇವಿ ನೆನಪಿಗೆ ಬಂದರು

ಅದ್ಯಾವುದೋ ಚಿತ್ರದಲ್ಲಿ ಹಾಡಿದ್ದು

ಭಾಗ್ಯಾದಾ ಲಕ್ಷ್ಮಿ ಬಾರಮ್ಮಾ ನಮ್ಮೊಮ್ಮಾ

ಸೌಭಾಗ್ಯ್ದದ ಲಕ್ಷ್ಮಿ ಬಾರಮ್ಮ

ಎಂದು ಶುರು ಮಾಡಿಯೇ ಬಿಟ್ಟೆ ಅದು ಹಿಂದೂಸ್ಥಾನಿ ಸಂಗೀತ ಶೈಲಿ ಅನ್ನಿಸುತ್ತೆ

ನಂತರದ  ಚರಣ ಹಾಡಬೇಕು

ಏನು ಮಾಡಿದರೂ ಆ ರಾಗದಲ್ಲಿ ಹಾಡು ನೆನಪಿಗೆ ಬರಲಿಲ್ಲ

ನಂತರ ಹೊರಳಿದ್ದು

ಪಕ್ಕಾ ಕರ್ನಾಟಕ ಶೈಲಿಯಲ್ಲಿ 

"ಸಕ್ಕರೆ ತುಪ್ಪ ಕಾಲುವೆ ಹರಿಸಿ ಶುಕ್ರವಾರದ ಪೂಜೆಯ ವೇಳೆಗೆ" ಎಂದು ಬದಲಾಯಿಸಿ ಮುಂದುವರೆದೆ

ಎಲ್ಲರೂ ತಬ್ಬಿಬ್ಬು ಯಾವ ಚರಣವೋ ಯಾವದೋ ಒಂದೂ ಆರ್ಡರ್ ಇಲ್ಲದಂತೆ ನೆನಪಿಗೆ ಬಂದಂತೆ ಹಾಡುತ್ತಿದ್ದೆ

ಹಾಗೆ  ಸ್ವಲ್ಪ ಹೊತ್ತಾದ ಮೇಲೆ 

ನಂತರದ  ಚರಣ ನೆನಪಿಗೆ ಬರಲಿಲ್ಲ

ಆಗಲೇ ನೆನಪಾದದ್ದು ಅನಂತನಾಗ್ . ನೋಡಿ ಸ್ವಾಮಿ ನಾವಿರೋದೆ ಹೀಗೆ  ಚಿತ್ರದ್ದು

"ಅತ್ತಿತ್ತಲುಗದೆ ಭಕ್ತರ ಮನೆಯಲಿ"

"ನಿತ್ಯ ಮಹೋತ್ಸವ ನಿತ್ಯ ಸುಂಮಂಗಲ"

ಎಂದು ಶುರು ಮಾಡಿ  ಮುಗಿಸಿಯೇ ಬಿಟ್ಟೆ

ಸುತ್ತಲಿದ್ದವರ ಮುಖ ನೋಡಲು ಹಿಂಜರಿಕೆ

ಮೊದಲಿಗೆ ನೋಡಿದು ವಾರಗಿತ್ತಿಯ ಮುಖ. ಮೊಗದಲ್ಲಿ ನಗು ಇತ್ತು ಅದೇನು ಛೇಡಿಕೆಯ ನಗೂನ ಅಥವ ಗೊತ್ತಾಗಲಿಲ್ಲ

ನಂತರ ನೋಡಿದ್ದು ಪುರೋಹಿತರನ್ನ

"ಚೆನ್ನಾಗಿ ಹಾಡಿದೆಯಮ್ಮ ಕಂಠ ಚೆನ್ನಾಗಿದೆ. ಎಲ್ಲಾ ರಾಗಾನೂ ಮಿಕ್ಸ್ ಮಾಡಿ ಹಾಡಿದ್ದು ಬೇಕಂತಾನೆ ತಾನೆ ? " ಎಂದರು

ಇಲ್ಲ ನಂಗೆ ನೆನಪಿಗೆ ಬಂದಿದ್ದು ಹಾಡಿದ್ದು ಅನ್ನೋಕಾಗತ್ತಾ?   ಹಾಗೆಲ್ಲಾ ಹೇಳಿದರೆ ಮರ್ಯಾದೆ ? ಹೌದು ಎಂಬಂತೆ ತಲೆ ಆಡಿಸಿದೆ

ಎಲ್ಲರೂ ಮಾತಾಡಿಸಿ ಹೋದರು

ಯಾರೋ "ಬೆಂಗಳೂರವರು  ಡಿಫರೆಂಟ್ ಅಂತ ತೋರಿಸಿಕೊಳ್ಳೋಕೆ ಹೀಗೆ ಹಾಡಿದ್ದಾಳೆ" ಎಂದರಂತೆ

ಅವರೆಲ್ಲರ ಮುಂದೆ ಅದುಮಿಟ್ಟಿದ್ದ ನಗು ಕಾರಿನಲ್ಲಿ ಕೂತಾಗ ಬುಗ್ಗೆ ಉಕ್ಕಿತು. ಮನೆಗೆ ಬಂದು ಅಮ್ಮನ ಬಳಿ ಹೇಳಿ ನಕ್ಕಿದ್ದೇ ನಕ್ಕಿದ್ದು

ಇಂತಹ ಸಂಧಿಗ್ದ ಸ್ಥಿತಿ ಬರಬಾರದು ಅಂತ ಇತ್ತೀಚಿಗೆ ದೇವರ ಹಾಡನ್ನೆಲ್ಲಾ ಕಲೀತಾ ಇದ್ದೇನೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಕತ್ತಾಗಿದೆ ನಿಮ್ಮ ಅನುಭವ.. congrats ನಿಮ್ಮ ಪ್ರಯತ್ನಕ್ಕೆ, ಸಕ್ಸಸ್‌ಗಾಗಿ.. ಹ..ಹ.. :-) ಬಹಳ ಚೆನ್ನಾಗಿದೆ. ಹಾಗೆ ಈಗ ನಡೆಯುತ್ತಿರೋ ತಯಾರಿಗೆ, ಶುಭ ಹಾರೈಕೆಗಳು.. ಚೆನ್ನಾಗಿ ಕಲಿತುಕೊಳ್ಳಿ.. ನಮ್ಮ ಮನೆಗೆ ಪೂಜೆ ಇದ್ದಾಗ ನಿಮ್ಮನ್ನೆ ಕರೆಯುವ.. :-) ನಿಮ್ಮೊಲವಿನ, ಸತ್ಯ.. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನುಭವಾನಾ ಅದು ಉಸಿರು ಗಟ್ಟಿಸಿಬಿಟ್ಟಿತ್ತು. >>ಚೆನ್ನಾಗಿ ಕಲಿತುಕೊಳ್ಳಿ.. ನಮ್ಮ ಮನೆಗೆ ಪೂಜೆ ಇದ್ದಾಗ ನಿಮ್ಮನ್ನೆ ಕರೆಯುವ.. :-) ಖಂಡಿತಾ ಬರ್ತೀನಿ. ಹಾಡು ಕೇಳೋಕೆ ನೀವು ತಯಾರಿರಬೇಕು ಅಷ್ಟೇ :) ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಕ್ಕೂ ನಕ್ಕೂ ಸುಸ್ತು ರೂಪಾರವರೇ ಚೆನ್ನಾಗಿದೆ ನಿಮ್ಮ ಅಪರೂಪದ ಕಛೇರಿ ಈ ಲೇಖನವನ್ನು ಅವರ್ಯಾರೂ ಓದೋಲ್ಲ ತಾನೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರ್ಯಾರೂ ಓದೊಲ್ಲ ಯಾಕೆಂದರೆ ಅವರ್ಯಾರಿಗೂ ಕನ್ನಡ ಬರೋದಿಲ್ಲ ಅದಕ್ಕೆ ಇಷ್ಟೊಂದು ಧೈರ್ಯ ಧನ್ಯವಾದಗಳು ಗೋಪಿನಾಥ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಮ್ಮಿಲನಕ್ಕೆ ಇನ್ನೊಬ್ಬರು ಹಾಡುಗಾರರ ಸೇರ್ಪಡೆಯಾಯ್ತು, ಹರೀಶ್ ಬರಕೊಳ್ಳಿ ಹೆಸರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಮು೦ದಿನ ಸಮ್ಮೇಳನದಲ್ಲಿ ಶ್ರೀಮತಿ ಗೋಪೀನಾಥರ ಜೊತೆಗೆ ಇನ್ನೊಬ್ಬ ಹಾಡುಗಾರ್ತಿ ರೂಪ ಮೇಡ೦ ರೆಡಿಯಾಗಿ ಓಹ್ ಸಿದ್ಧವಾಗಿ :) (ಶ್ರೀ ಕೃಷ್ಣ ಸ೦ಧಾನ ನಗೆ ನಾಟಕ ನೋಡ್ತಾ ಇದ್ದೆ) ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರೀಶ್ ಹಾಸ್ಯ ಗಾಯನಕ್ಕೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಏನಾದ್ರೂ ಸರಿ. ಮೇಡ೦ ಪುಟ್ಟಿ ಕೈಯಲ್ಲೂ ಒ೦ದು ಹಾಡು ಹಾಡಿಸಿ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪಾ ಅವರೇ, ತಮಿಳ್ಗನ್ನಡಿಗರಿಗೆ ಸಕತ್ ಟೋಪಿ ಹಾಕಿದ್ರಲ್ಲ ದಿಫ್ರ್ರೆಂಟ್ ಆದ ರಾಗಮಾಲಿಕೆ ಹಾಡಿ ;) ಸಂಪದ ಸಮ್ಮಿಲನದಲ್ಲಿ ಇದು ಚಾಲೂ ಆಗಲ್ಲ. ಈಗ್ಲಿಂದ ತಯಾರಿ ಶುರು ಮಾಡ್ಕೊಳಿ :) 'ಆತ್ಮೀಯ' ಹರಿ ಅವರೇ, <ಶ್ರೀ ಕೃಷ್ಣ ಸ೦ಧಾನ ನಗೆ ನಾಟಕ ನೋಡ್ತಾ ಇದ್ದೆ> ಆ ನಾಟಕ ನಾನೂ ಹೋದ ಸರ್ತಿ ಭಾರತಕ್ಕೆ ಬಂದಾಗ ನೋಡಿದ್ದೇ. ನಕ್ಕೂ ನಕ್ಕೂ ಪಕ್ಕೆ ನೋವು ಹಿಡಿದಿತ್ತು. ಇಲ್ಲಿಗ್ ತಂದು ಇನ್ನೊಂದ್ಸಲ ನಿಧಾನಕ್ಕ್ ನೋಡ್ಕೊಳೋಣ ಅಂದ್ರೆ ನನ್ ತಂಗಿ ಕೊಡಲಿಲ್ಲ. ಬೇರೆ ಕಾಪಿ ಸಿಕ್ರೆ ತೆಗೆದಿಡ್ತೀನಿ, ಮುಂದಿನ ಸರ್ತಿ ತೊಗೊಂಡು ಹೋಗು ಅಂದ್ಲು :( ಶಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂ೦..ರೂಪಾಜಿ, ಅ೦ತು ನೀವು ಹಾಡಿಬಿಟ್ರೀ.. ಅಲ್ವಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಕೊನೆಗೂ ಹಾಡಿಯೇ ಬಿಟ್ಟೇ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊನೆಗೂ ನೀವು ಹಾಡಿಯೇ ಬಿಟ್ರಲ್ಲಾ೦ತ ನಮಗೂ ತು೦ಬಾ ಖುಷಿಯಾಗ್ತಿದೆ. ಮು೦ದಿನ ಸ೦ಮಿಲನದಲ್ಲಿ ಹಾಡಲಿದ್ದೀರಿ ಅ೦ತ ಇನ್ನೂ ಜಾಸ್ತಿ ಖುಷಿಯಾಗ್ತಿದೆ ಕಣ್ರೀ ರೂಪಾಜಿ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪಾ, ಇದನ್ನ ಓದಿನೇ ಇಷ್ಟೊಂದು ನಗು ಬರ್ತಿದೆ. ಅಲ್ಲಿಯೇ ಇದ್ದಿದ್ದರೆ ರೂಪಾ ಹಾಡುತ್ತಿರುವುದು ಅಂತ ಮರೆತು, ನಾನಂತೂ ಜೋರಾಗಿಯೇ ನಗುತ್ತಿದ್ದೆ. ಕಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಅವರಿಗೇನು ಗೊತ್ತು ನಾನೂ ಸಿನಿಮಾ ಹಾಡುಗಳಿಗೂ ತಾಳ ಹಾಕುತೇನೆ ಅಂತ<< "ರೂಪಾ ಅವರೇ, ನೀವೂ ನನ ಥರಾನೇ" ನನಗೂ ರೇಡಿಯೋದಲ್ಲಾಗಲೀ, ಯಾರಾದರೂ ಹಾಡುತ್ತಿದ್ದಾಗಲಾಗಲೀ ಬಾಯಿ ಅಲುಗಾಡಿಸುವುದು ಅಭ್ಯಾಸ. ನನಗೆ ಗೊತ್ತಿರುವ ಹಾಡನ್ನು ಹಾಡುತ್ತಿದ್ದಾರೆಂದರೆ ಮಹದಾನಂದ. ತಾಳ ಹಾಕುವ ಅಭ್ಯಾಸ. ಹಾಗೆ 'ಗಣೇಶನ ಮದುವೆ' ಸಿನಿಮಾದ ರಮೇಶ್ ಭಟ್ ಅವರ ಡೈಲಾಗ್ ನೆನಪಿಗೆ ಬಂತು. ಅದಕ್ಕೆ ಖುಷಿಯಿಂದ ಹೀಗೆ ಬರೆದೆ. ಬೇಸರಿಸಬೇಡಿರಿ. ವಂದನೆಗಳು. ಅಂಬಿಕಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೊ ಹೊ! ನಾನೂ ಕೇಳಬೇಕಲ್ಲಾ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದರಿಂದ ಕಲಿತ ನೀತಿ ಪಾಠ: ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ, ಯಾರಾದರೂ ಹಾಡುತ್ತಿರುವಾಗ "ಸುಮ್ಮನೇ ಬಾಯಿ ಆಡಿಸಬಾರದು... ತಾಳ ಹಾಕಬಾರದು...". ಹಾಗೊಂದು ವೇಳೆ ಮಾಡಿದರೂ, ಅದು ಯಾರ ಕಣ್ಣಿಗೂ ಬೀಳದಂತೆ ಜಾಗ್ರತೆವಹಿಸಬೇಕು. :) - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ನನ್ನಂತ ಹುಡುಗ್ರು ಹಾಡಿದ್ದಿದ್ರೆ, ಹಿಂದೂಸ್ಥಾನಿ, ಕರ್ನಾಟಕ, ಫಿಲ್ಮ್, ಪಾಪ್, ರಾಕ್, ಜಾಝ್.. ಜೊತೆಗೆ ಲಿರಿಕ್ಸಿನಲ್ಲಿ "ಎದುರು ಮನೆ ಹುಡುಗಿ ಬಾರಮ್ಮಾ" ಕೂಡ ಸೇರಿಕೊಳ್ತಾ ಇತ್ತೇನೋ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>ಹೆ ಹೆ ನಾನೂ ಹಾಡಿಯೇ ಬಿಟ್ಟೆ < ಭಾssರಿ ಆತ್ಲಾ ಮತ್ತ !!...:-)) ಮುಂದಿನ ಹಾಡಿನ ಧ್ವನಿ ಸುರುಳಿ ಬೇಕು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.