ಬದುಕು: ವಯೋಮಾನಕ್ಕೆ ತಕ್ಕ ಹಾಗೆ ಬದಲಾಗುವ ವಿವರಣೆಗಳು

0

ಚಿಕ್ಕವಳಿದ್ದಾಗ
ಕಣ್ಣಿಗೆ ಕಂಡದ್ದೆಲ್ಲಾ ಸಿಕ್ಕರೆ ಅದೇ ಜೀವನ
ಎಂಟನೇ ತರಗತಿಯಲ್ಲಿ
ಮೊದಲು ಸ್ಕೂಲಿಗೆ ಹೋಗಿ ಎಸ್.ಎಸ್.ಎಲ್.ಸಿ ಮುಗಿಸಿದರೆ ಅದುವೇ ಜೀವನ
ಎಸ್.ಎಸ್.ಎಲ್.ಸಿ ಮುಗಿದ ಮೇಲೆ ಪಿಯುಸಿ ಮುಗಿಸಿದರೆ ಬದುಕು ನಡೆಯುತ್ತದೆ
ಪಿ.ಯು.ಸಿಯನಂತರ
ಇಂಜಿನಿಯರಿಂಗೇ ಜೀವನ
ವಿದ್ಯಾಭ್ಯಾಸದ ನಂತರ
ಕೆಲಸ ಸಿಕ್ಕು ಹೊಟ್ಟೆ ಬಟ್ಟೆಗೆ ಆದರೆ ಅದುವೇ ಬದುಕು
ಕೆಲಸ ಸಿಕ್ಕ ಮೇಲೆ
ಸ್ವಂತ ಮನೆ, ಮದುವೆ, ಮಕ್ಕಳು,ಕಾರು ಸಾಕು ಅದುವೇ ಜೀವನ
ಮದುವೆ,ಮಕ್ಕಳು,ಕಾರು, ಮನೆ ಎಲ್ಲಾವು ಆದಮೇಲೆ
ಬದುಕಿನಲ್ಲಿ ಹತ್ತು ಜನ ಸೈ ಎನ್ನುವಂತೆ ನಡೆಯುವುದಾದರೆ ಅದೇ ಜೀವನ
ಸೈ ಎನಿಸಿಕೊಂಡ ಮೇಲೆ
ಬದುಕಿನಲ್ಲಿ ಹತ್ತು ಜನಕ್ಕೆ ಮಾದರಿಯಾಗಿ ನಡೆಯುವುದಾದರೆ ಅದೇ ಜೀವನ
ಈಗ
ಬದುಕಿನ ಅರ್ಥ ತಿಳಿಯುವುದೇ ಜೀವನ ಅನ್ನಿಸುತ್ತಾ ಇದೆ

ಅದಕ್ಕಾಗಿಯೇ ನಮ್ಮ ಜೀವನದ ಗುರಿ ಎಂದೂ ಒಂದೆಡೆ ನಿಲ್ಲುವುದೇ ಇಲ್ಲ . ನಾವದನ್ನು ಬೆನ್ನಟ್ಟುತ್ತಿದ್ದಂತೆ ಅದೂ
ಮುಂದೆ ಓಡುತ್ತಿರ್ರುತ್ತದೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮನುಷ್ಯ ತನ್ನ ಗುರಿಯನ್ನು ಮುಂದಕ್ಕೆ ಹಾಕುತ್ತಾ ಸಾಗುವುದೇ ಜೀವನ.
ಇಲ್ಲವಾದರೆ ನಿಂತ ನೀರಾಗುತ್ತದೆ. ಕೊಳೆತ ಕುಂಬಳಕಾಯಿಯಾಗಿ ಬಿಡುತ್ತದೆ ಜೀವನ.
ಆದರೆ ಈ ಕ್ರಿಯೆಯನ್ನು, ಅತೃಪ್ತಿಯಿಂದಲೇ ಮಾಡುತ್ತಾ ಸಾಗಿದರೆ, ಅದು ಮಾನಸಿಕ ಶಾಂತಿಯನ್ನೂ, ನೆಮ್ಮದಿಯನ್ನೂ, ಆರೋಗ್ಯವನ್ನೂ ಕೆಡಿಸುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಬರೆದದ್ದು ನಿಜ
ಸಧ್ಯ ಅತೃಪ್ತಿ ಇಂದ ನನ್ನ ಜೀವನ ಸಾಗುತ್ತಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.