ನಾನು ಮಾಡಿದ್ದು ತಪ್ಪಾಗಿತ್ತಾ?

0

ನೆನ್ನೆ ಆಕೆ ಬಂದಿದ್ದಳು.ಸರಿಯಾಗಿ ಎರೆಡು ವರ್ಷದ ನಂತರ ಆ ಕಹಿ ನೆನಪು ಮನದಿಂದ ಮಾಸುತ್ತಿದ್ದಂತೆ ಹಸಿ ಮಾಡಲು.
"ಏನ್ ಮೇಡಮ್ ನಾವಿನ್ನೂ ಎಪ್ಪ ಬದುಕೋದು. ನನ್ಮಗ ಇದ್ರಾದ್ರೂ ನಲ್ಲ ಇರ್ತಿತ್ತು . ನಮ್ಮನ್ನಾದರ್"ಊ ನೋಡ್ಕೋತಿದ್ದ
ಈಗ ಕಾಸ್ ಇಲ್ಲೆ ಎನ್ನ ಪಣ್ರುದು" ತಮಿಳ್ ಮಿಶ್ರಿತ ಕನ್ನಡ ಅವಳದು
ಅವಳ ಮಗನ ಹೆಸರು ಕೇಳುತ್ತಿದ್ದಂತೆ ಪಾಪ ಪ್ರಜ್ನೆ ಮತ್ತೆ ನನ್ನೊಳಗೆ ಕಾಡತೊಡಗಿತು.ಅವಳಿಗೆ ಎರೆಡು ಸಾವಿರ ಕೊಟ್ಟು ಕಳಿಸಿದೆ
ಅದು ಆಗಿದ್ದು ಹೀಗೆ.
ಅವಳ ಮಗ ಪಳನಿ ಒಬ್ಬ ಹಣ್ಣು ಮಾರೋನು. ಒಮ್ಮೆ ಹಣ್ಣು ತಗೋಳೋಕೆ ಅಂತ ಗಾಡಿ ಹತ್ರ ನಿಂತಿದ್ದ ಅವನ್ನ ಮಾತಾಡಿಸಿದೆ
ಅವನು ಹೊಸೂರಿಂದ ಬಂದವನು . ಹಂಗೆ ಮಾತಾಡ್ತಾ ಕೆಲವು ವಿಷಯ್ಗಳು ತಿಳಿದವು
ಅವನಿಗೆ ಓದೋಕೆ ತುಂಬಾ ಆಸೆ ಇತ್ತು . ಪಿಯುಸಿವರೆಗೆ ಓದಿ ಫಸ್ಟ್ ಕ್ಲಾಸ್ ತೆಗೆದುಕೊಂಡಿದ್ದ. ಆದರೆ ಮನೆಲಿ ಅವನ ಅಪ್ಪ
ಮುಂದೆ ಓದೋದೇನೂ ಬೇಡ ಅಂತ ಹೇಳಿದ್ದರು ಆದ್ದರಿಂದ ಅವನು ಗಾಡಿಯಲ್ಲಿ ಹಣ್ಣು ಮಾರೋ ಕೆಲಸ ಮಾಡ್ತಿದ್ದ.
ಅವನಿಗೆ ಈ ಕೆಲ್ಸ ಇಷ್ಟ ಇರಲಿಲ್ಲ . ನೋಡೋಕೆ ಚುರುಕು ಅಂತ ಅನ್ನಿಸಿತು. ಜೊತೆಗೆಅನುಕಂಪವೂ ಉಂಟಾಯ್ತು
ನಮ್ಮಲ್ಲಿ ಬಾ ಬಂದು ಕಂಪ್ಯೂಟರ್ ಹಾಗು ಇಂಗ್ಲೀಷ್ ಫ್ರೀ ಆಗಿ ಕಲಿತುಕೋ ಎಂದು ಹೇಳಿದ್ದೆ . ನಂತರ ಅವನ್ ಅಪ್ಪ ಬಂದು ಹಾರಾಡಿದ
ನನ್ನಮಗನಿಗೆ ತಲೆ ಕೆಡಿಸಿದ್ದೀರಾ ಎಂದೆಲ್ಲಾ ಅಂದ ಕೊನೆಗೂ ಅವನ ಮನ ಒಲಿಸಿ ಪಳನಿ ನಮ್ಮಲ್ಲಿಗೆ ಬರಲಾರಂಭಿಸಿದ
ಹಾಗೆ ಮೂರು ತಿಂಗಳಲ್ಲಿ ಕಂಪ್ಯೂಟರ್ ಬೇಸಿಕ್ಸ್ ಹಾಗು ತಕ್ಕ ಮಟ್ಟಿಗೆ ಇಂಗ್ಲೀಷ್ ಕಲಿತ. ಪರೀಕ್ಷೆಯನ್ನು ತೆಗೆದುಕೊಂಡು
ಚೆನ್ನಾಗಿ ಸ್ಕೋರ್ ಮಾಡಿದ.
ನಂತರ ಅವನಿಗೆ ಒಂದು ಒಳ್ಳೇ ಕೆಲಸ ಕೊಡಿಸಲು ಯೋಚಿಸಿದ ನಾನು ನನಗೆ ಪರಿಚಯವಿದ್ದ ಕೋರಮಂಗಲದ
ಕಂಪೆನಿಯಲ್ಲಿ ಇಂಟರ್ವ್ಯೂ ಅಟೆಂಡ್ ಮಾಡಲು ಹೇಳಿದೆ. ಮನೆಯಲ್ಲಿ ಅಪ್ಪ ಒಪ್ಪುತ್ತಾ ಇಲ್ಲ್ಲ ಎಂದ. ಆದರೂ ಹೋಗಲು ಹೇಳಿದೆ
ನಂತರ ಅವನಿಗೆ ಕೆಲ್ಸ ಸಿಕ್ಕಿತು ಎಂದೂ ತಿಳಿಯಿತು.
ಅದಾದ ನಂತರ ಯಾವುದೇ ವಿಷಯ ಗೊತ್ತಾಗಲಿಲ್ಲ. ನಾನೂಬೇರೆ ಕೆಲ್ಸದಲ್ಲಿ ಬ್ಯುಸಿ ಇದ್ದೆ
ಅದಾಗಿ ಸುಮಾರು ಹದಿನೈದು ದಿನಗಳಾದವೇನೋ . ಒಮ್ಮೆ ಅವನ ಅಪ್ಪ ಅಮ್ಮ ಮನೆ ಮುಂದೆ ಬಂದು ಗಲಾಟೆ ಮಾಡಲಾರಂಭಿಸಿದರು
ಅವರ ಮಗ ರೋಡ್ ಆಕ್ಸಿಡೆಂಟ್‍ನಲ್ಲಿ ತೀರಿಕೊಂಡಿದ್ದನಂತೆ.
ನನಗೂ ದಿಗ್ಭ್ರಮೆಯಾಯ್ತು. ಆದರೆ ಅದಕ್ಕಿಂತ ಹೆಚ್ಚು ಬೇಜಾರಾಗಿದ್ದು ಆ ಹುಡುಗ ಸತ್ತಿದ್ದು ನನ್ನಿಂದ ಎಂದು ಡೈರೆಕ್ಟ್ ಆಗಿ ಹೇಳಿದ್ದು
ಸುಮಾರು ಹೊತ್ತಿನ ತನಕ ಅವರಿಬ್ಬರು ಮನೆಯಲ್ಲಿಕುಳಿತು ನನ್ನನ್ನ ಚುಚ್ಚಿ ಚುಚಿಇ ಮಾತಾಡುತ್ತಿದ್ದರು. ಅವನನ್ನು ಮುಂದೆ ಓದಲು ತಲೆ ಕೆಡಿಸಿ ಅವನ ಸಾವಿಗೆ ನಾನೆ ಕಾರಣವಾದೆ ಎಂದು ಅತ್ತರು
ಕೊನೆಗೆ ನೋಡಲಾರದೆ ನಮ್ಮನೆಯವರು ಹದಿನೈದು ಸಾವಿರ ಕೊಟ್ಟರು. ಆ ತಾಯಿ ಹೋಗುವಾಗ ನನಗೆ ಶಾಪ ಹಾಕಿ
ಹೋದಳು
ಇದು ನನಗೆ ಬೇಕಿತ್ತಾ ಎಂದು ನನನ್ನು ನಾನೆ ಪ್ರಶ್ನಿಸಿಕೊಂಡೆ . ಎಲ್ಲರೂ ಬೈದರು
ಅತೀ ಒಳ್ಳೇತನ ಅತೀ ಕೆಟ್ಟದ್ದ್ದಂತೆ
ಆ ನೆನಪಿನ ನೆರಳಿನಿಂದ ಹೊರಬರುತ್ತಿದ್ದಂತೆ ಮತ್ತೆ ಅದು ನನ್ನತ್ತ ಚಾಚಿಕೊಂಡಿತಲ್ಲ
ಆಗಾಗ ನನಗೆ ಅನ್ನಿಸುತ್ತೆ ನಾನು ಮಾಡಿದ್ದು ತಪ್ಪಾ?
ಆಗೆಲ್ಲಾ ಒಂಥರ ಅಂತರ್ಮುಖಿ ಆಗುತ್ತೇನೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮಸ್ಕಾರ ರೂಪ ಅವರೆ

ನೀವು ಒಳ್ಳೆಯದನ್ನೇ ಮಾಡಲು ಪ್ರಯತ್ನಿಸಿದಿರಿ. ನೊಂದುಕೊಳ್ಳಬೇಡಿ. ಆದರೆ ನಿಮ್ಮ ಯಜಮಾನರು ಅವರಿಗೆ ೧೫ ಸಾವಿರ ಏಕೆ ಕೊಟ್ಟರು ? ನೀವೀಗ ಮತ್ತೆ ೨೦೦೦ ಕೊಟ್ಟಿದ್ದೀರಿ. ಅವರು ಹೀಗೇ ಬಂದು ಬಂದು, ನಿಮ್ಮನ್ನು emotional blackmail ಮಾಡುತ್ತಲೇ ಇದ್ದರೆ, ನೀವೂ ದುಡ್ಡು ಕೊಡುತ್ತಲೇ ಇರುತ್ತೀರಾ ? ನನಗೆ ಅರ್ಥವಾಗಲಿಲ್ಲ.....

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬದುಕಲು ಕಷ್ಟ ಎಂದಾಗ ಇನ್ನೇನು ಮಾಡುವುದು. ಅದರಿಂದಾದರೂ ಸ್ವಲ್ಪ ಸಹಾಯವಾಗುತ್ತದೆ ಏನೋ ಎಂಬ ಆಸೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರು ಇದನ್ನೇ ಬದುಕುವ ದಾರಿ ಮಾಡಿಕೊಂಡು ಬಿಟ್ಟರೆ, ನಿಮಗೆ ಕಷ್ಟವಾಗತ್ತೇಂತ ನನ್ನ ಅಭಿಪ್ರಾಯ !! ಯಾರ ಜೀವನಕ್ಕೂ/ಜೀವಕ್ಕೂ, ಯಾರೂ ಜವಾಬ್ದಾರರಾಗಲು ಸಾಧ್ಯವಿಲ್ಲ ಅಲ್ಲ್ವೇ ?

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬದುಕಲು ಕಷ್ಟ ಎ೦ದವರಿಗೆ...
ಬದುಕುವ ದಾರಿ ತೋರಿದರೆ ಚೆ೦ದ..
ಹಣ ಕೊಡುವುದು ಯಾವತ್ತೂ ದಾರಿಯಾಗುವುದಿಲ್ಲ..
ಸುಮ್ಮನೆ ಸಲಹೆ ಕೊಡುವುದು ಎ೦ದು ಅರ್ಥವಲ್ಲ..
ನಿಮ್ಮ ಒಳ್ಳೆಯ ಸ್ವಭಾವ / ಭಾವುಕತೆ ಅರ್ಥವಾಗುತ್ತದೆ..
ಆದರೆ..ಅದಕ್ಕಿ೦ತ ಹೆಚ್ಚ್ಚಾಗಿ ಬೇಕಾಗಿರುವುದು..
ಅವರನ್ನು ಮೋಟಿವೇಟ್ ಮಾಡುವುದು...
ಇದು ನನ್ನ ಅನಸಿಕೆ ಮಾತ್ರ...

ಅನ೦ತ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸಲಹೆಗೆ ಧನ್ಯವಾದಗಳು
ಮುಂದೆ ಅವರು ಮತ್ತೆ ಬಂದಾಗ ಬೇರೆ ರೀತಿಯಲ್ಲಿ ಸಾಗ ಹಾಕಲು ಪ್ರಯತ್ನಿಸುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪ ಅವರೇ,
ಖಂಡಿತ ನಿಮ್ಮಿಂದ ತಪ್ಪಾಗಿಲ್ಲ. ಆ ಹುಡುಗನಿಗೆ ತನ್ನ ಮೈ ಮೇಲೆ ಎಚ್ಚರಿಕೆ ಇಲ್ಲದೆ ರಸ್ತೆ ಅಪಘಾತಕ್ಕೊಳಗಾದರೆ, ಅದಕ್ಕೆ ನೀವು ಹೇಗೆ ಕಾರಣ? ತರಕಾರಿ ಗಾಡೀನ ಯಾವುದಾದರೂ ಲಾರಿ ಹೊಡೆದಿದ್ದರೆ ಅವನು ಸಾಯ್ತಾ ಇರಲಿಲ್ವ? 'ರೆ"ಗಳಿಗೆ ಕೊನೆಯೇ ಇಲ್ಲ. ನಿಮ್ಮ ಉದ್ದೇಶ ಅವನಿಗೆ ಒಳ್ಳೆಯದು ಆಗಲಿ ಅಂತಿತ್ತು. ಆಗಲಿಲ್ಲ ಆದರೆ ಅದಕ್ಕೆ ನೀವು ಕಾರಣವಲ್ಲ. ನೀವು ಈ ರೀತಿ ಹಣ ಕೊಡುವುದು ಸರಿಯಲ್ಲ.

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಅಲ್ಲಿ ಕೆಲಸಕ್ಕೆ ಕಳಿಸದಿದ್ದರೆ ಅವನು ಬದುಕುತ್ತಿದ್ದನಂತೆ ಇದು ಅವರ ಅಳಲು.
ನನಗೂ ಮಗನನ್ನು ಕಳೆದುಕೊಂಡಿರುವ ಅವರನ್ನು ನೋಡಿದರೆ ಒಮ್ಮೊಮ್ಮೆ ಬೇಜಾರಾಗುತ್ತದೆ
ಆದರೆ ಹಣಕ್ಕಾಗಿ ಅವರು ಹಪಹಪಿಸುವುದು ನೋಡಿದರೆ ಜಿಗುಪ್ಸೆ ಆಗುತ್ತದೆ
ಧನ್ಯವಾದಗಳು ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪಾ,
ನೀವು ಮಾಡಿದ್ದು ತಪ್ಪಾ ಒಪ್ಪಾ ಅನ್ನುವುದಕ್ಕೆ ನಿಮ್ಮ ಮನಸ್ಸು ಕೊಡುವ ಉತ್ತರವೇ ನಮ್ಮೆಲ್ಲರ ಉತ್ತರಕ್ಕಿಂತ ಶ್ರೇಷ್ಟವಾದುದು.
ಸ್ವತಃ ಅನುಭವಿಸದೇ ಕೊಡುವ ಸಮಜಾಯಿಷಿಗಳು ಸಾಂತ್ವನಕ್ಕಾಗಿ ಅಷ್ಟೇ. ಅದರಿಂದ ನಿಮ್ಮ ಮನದಲ್ಲಿರುವ ಭಾವನೆಗಳನ್ನು ಬದಲಾಯಿಸುವುದು ಕಷ್ಟ ಸಾಧ್ಯ.
ಇನ್ನು ಆತನ ತಾಯಿ ನಿಮ್ಮನ್ನು ಈ ರೀತಿ ಸತಾಯಿಸುತ್ತಾ ಇರುವುದು ನಿಮ್ಮ ಮನದಲ್ಲಡಗಿರುವ ಆ ಅಪರಾಧೀ ಮನೋಭಾವದ ಪ್ರಯೋಜನ ಪಡೆಯುದಕ್ಕಾಗಿ ಅಷ್ಟೇ. ಒಂದು ದಿನ ನೀವು ಕೈಲಾಗೋಲ್ಲ ಅಂತ ಹೇಳಿದರೆ ಎಲ್ಲಾ ಮುಗಿಯುತ್ತದೆ. ಅಷ್ಟೆ. ಈ "ಇನ್ನು ನನ್ನ ಕೈಲಾಗೋಲ್ಲ" ಅನ್ನುವ ಮಾತನ್ನು ಮೊದಲು ನೀವು ನಿಮಗೇ ಹೇಳಿಕೊಳ್ಳಬೇಕು. ನಿಮ್ಮನ್ನು ನೀವು ನಂಬಿಸಿದ ದಿನ ಅವರನ್ನೂ ನಂಬಿಸಬಹುದು.
ಜೀವನದಲ್ಲಿ ಮುಂದುವರಿಯುತ್ತಾ ಇರಬೇಕು. ಶುಭಮಸ್ತು.

(ಇವು ನನ್ನ ಅನಿಸಿಕೆಗಳಷ್ಟೇ... ಇತರ ಪ್ರತಿಕ್ರಿಯೆಗಳನ್ನು ಓದಿ ನೀಡಿದ ಪ್ರತಿಕ್ರಿಯೆಯಲ್ಲ....)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಸಲ ಹೇಳಲು ಪ್ರಯತ್ನಿಸುತ್ತೇನೆ
ಪ್ರತಿಕ್ರಿಯೆಗಾಗಿ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪ,

ಒಳ್ಳೆಯ ಕೆಲಸಕ್ಕೆ ನೂರಾರು ಅಡಚಣೆಗಳು ಎಂಬುದಕ್ಕೆ ಇದೊಂದೇ ಸಾಕು. ನೀವು ಒಳ್ಳೆಯ ಉದ್ದೇಶಗಳನಿಟ್ಟುಕೊಂಡು ಮಾಡಿದ್ದೀರಿ. ಅದಕ್ಕಾಗಿ ಪಶ್ಚಾತ್ತಾಪ ಪಡಬೇಕಾಗಿಲ್ಲ. ಅವನ ಆಯಸ್ಸು ಇಷ್ಟೆ ಅಂತ ಇರಬೇಕಾದರೆ, ನಿಮ್ಮಿಂದ ಉಳಿಸಲು ಹೇಗೆ ಸಾಧ್ಯ. ಅವನ ಸಾವಿಗೆ ಈ ಕಾರಣ ಒಂದು ನೆಪ ಅಷ್ಟೆ. ಇದು ನನ್ನ ಅನಿಸಿಕೆ ರೂಪ. ಆದರೆ ನೀವು ದುಡ್ಡು ಕೊಡುತ್ತಿರುವುದು ಮಾತ್ರ ತಪ್ಪು. ದಯವಿಟ್ಟು ನಿಲ್ಲಿಸಿ. ನೀವು ಇಷ್ಟೆಲ್ಲ ಮಾಡುತ್ತಿರುವಾಗ ಮನಸ್ಸನ್ನು ಸ್ವಲ್ಪ ಗಟ್ಟಿಮಾಡಕೊಳ್ಳಬೇಕು. ಅದು ನಿಮಗೆ ಸಹಾಯ ಮಾಡುತ್ತದೆ.

ಹೀಗೆ ಆಯಿತು ಅಂತ ಮುಂದುವರೆಯುವುದನ್ನು ಬಿಟ್ಟು ಬಿಡಬೇಡಿ. ದಯವಿಟ್ಟು ಮುಂದುವರೆಸಿ.

ಕಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರ್‍ಊಪ ಅವರೆ, ನಿಮ್ಮ ಒಳ್ಳೆತನದ ದುರುಪಯೋಗ ತೊಗೊಳ್ಳೋಕ್ಕೆ ಬಿಡಬೇಡ್ರಿ. ಮೊದಲು ನಿಮ್ಮ ಸುಳ್ಳು ಅಪರಾಧಿ ಪ್ರಜ್ನೆಯನ್ನ ಮನಸ್ಸಿನಿಂದ ಕಿತ್ತಿ ಹಾಕಿ. ನಂತರ ಹೀಗೆ ಬ್ಲಾಕ್ಮೆಲ್ ಮಾಡೊ ಜನರಿಗೆ ಸರಿಯಾಗಿ ಬೈದು ಬುದ್ದಿ ಕಲಿಸಿರಿ. ನೆನಪಿರಲಿ: ಬೈದು ಬುದ್ದಿ ಕಲಿಸಿರಿ, ಎಲ್ಲಾ ಕೆಲಸಗಳೂ ಮೆತ್ತಗೆ ಮಾತಾಡಿ ಆಗೊದಿಲ್ಲಾ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು
ಶಿಲ್ಪಾ ಅವರೆ
ನೀವು ಹೇಳಿದ್ದು ಸರಿ
ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪ,
ನೀವು ಆ ಹುಡಗನ ಅಪ್ಪ ಅಮ್ಮನಿಗೆ ಮಾಡಿದ ತಪ್ಪಾದರೂ ಏನು? ಆ ಹುಡುಗನಿಗಾಗಿ ಮರುಗಿದ್ದು ತಪ್ಪಾ? ಅವನಿಗೆ ಸಹಾಯ ಮಾಡಿದ್ದು ತಪ್ಪಾ? ಅವನ ಸಾವಿಗೂ ನಿಮಗೂ ಸಂಬಂಧವಾದರೂ ಏನು? ಏಕಾಗಿ ಹೀಗೆ ಅಪರಾಧಿ ಪ್ರಜ್ಞೆ ತಾಳಿದ್ದೀರಿ? ನನಗಂತೂ ಆಹುಡುಗನ ಅಪ್ಪ ಅಮ್ಮನ ಮೇಲೆ ಕೆಂಡಾಮಂಡಲ ಕೋಪ ಬರುತ್ತಿದೆ.ನೀವು ಮತ್ತು ನಿಮ್ಮ ಎಜಮಾನರು ಕೊಟ್ಟ ೧೭ ಸಾವಿರ ರೂಪಾಯಿಯಿಂದ ಆ ಹುಡುಗ ಮತ್ತೆ ಹುಟ್ಟಿಬಂದನೇ? ನನಗೊಂದು ಅನುಮಾನ. ಆ ಹುಡುಗ ಅಪಘಾತದಲ್ಲಿ ಸತ್ತಿದ್ದು ನಿಜವೇ? ಅದಕ್ಕೆ ನಿಮಗೆ ಪುರಾವೆ ಸಿಕ್ಕಿದೆಯೇ? ಒಂದು ವೇಳೆ ಸತ್ತಿದ್ದರೂ ನೀವಂತೂ ಆ ಘಟನೆಗೆ ಕಾರಣರಲ್ಲ. ಆ ತಂದೆ ತಾಯಿ ನಿಮಗೆ ಇಮೋಶನಲ್ ಬ್ಲಾಕ್ ಮೈಲ್ ಮಾಡುತ್ತಿದ್ದಾರೆಂದೇ ನನ್ನ ಬಲವಾದ ಅನಿಸಿಕೆ. ಮೊದಲು ಆ ವ್ಯಕ್ತಿಗಳ ಮೇಲೆ ಪೋಲೀಸರಲ್ಲಿ ದೂರು ದಾಖಲಿಸಿ.
ಅಯ್ಯೋ ಎನ್ನಬೇಕಾದರೂ ಯೋಚಿಸುವ ಕಾಲ ಬಂದಿದೆ. ಹುಶಾರು!

ಸಾರ್
ನಿಮ್ಮ ಕಳಕಳಿಯ ಕಾಳಜಿಗೆ ನನ್ನಿ
ಆ ಹುಡುಗ ಸತ್ತಿದ್ದು ನಿಜ
ಅವನ ಸಾವು ನಂಗೆ ತುಂಬಾ ಬೇಸರ ತಂತು
ತುಂಬಾ ಚುರುಕು ಹುಡುಗ ಅವನು.

ಪೋಲೀಸರಿಗೆ ದೂರು ದಾಖಲಿಸೋಕೆ ಮನಸು ಬರ್ತಾ ಇಲ್ಲ ಪಾಪ ಬಡವರು ಅಲ್ವಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪಕ್ಕ, ಆಗದ್ ಆಗೋತು...ಅದ್ನೇ ಯೋಚ್ನೆ ಮಾಡ್ಕತೆ ಕುತ್ಕಂಡ ಯೆಂತ ಪ್ರಯೋಜ್ನ. ಇಂಗ್ಲಿಶ್ ಅಲ್ಲಿ ಹೇಳ್ತ್ವಲಿ, ಲೆಟ್ ಅಸ್ ಮೂವ್ ಆನ್ ಇನ್ ಲೈಫ್, ಹಾಂಗೆ, ಮುಂದ್ ಯೆಂತ ಮಾಡ ಹೇಳಿ ವಿಚಾರ ಮಾಡಿ ಆತಾ... ಈ ವಿಷ್ಯ ಇಷ್ಟಕ್ಕೆ ಬಿತ್ಬುಡಿ ಅಕ್ಕಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನು ಮಾಡ್ಲಿಕಾಗಲ್ಲ ಶಿವರಾಮ್
ನಾನೂ ಬಿಟ್ಬ್ವಿಟ್ಟೆ.

ಅಂದಹಾಗೆ ಇದು ಮಲೆನಾಡ ಕರ್ನಾಟಕದ ಭಾಶೆ ಅಲ್ಲವೇ?
ಹೋದ ಸಲ ಶೃಂಗೇರಿಗೆ ಹೋದಾಗ
ಅಲ್ಲಿ ಟ್ಯಾಕ್ಸಿ ಡ್ರೈವರ್ ಹೀಗೆ ಮಾತಾಡಿದ
"ನಾವು ಇಲ್ಲಿಂದ ಸಿರಿಮನೆ ಫಾಲ್ಸ್‌ ನೋಡಿ ನಂತರ ಕಿಗ್ಗಕ್ಕೆ ಹೋಗಿ ಅಲ್ಲಿಂದ ಕೂಡ್ಲೆ ಹೊರಟು ಬಿಡುವ ಮತ್ತೆ ಅಲ್ಲಿ ಸೂರ್ಯಾಸ್ತಕ್ಕೆ ಹೋಗಲಿಕ್ಕುಂಟು, ಮತ್ತೆ ತಡವಾದರೆ ನೋಡ್ಲಿಕ್ಕಾಗುವುದಿಲ್ಲ"
ನಮಗಂತೂ ಈ ವಾಕ್ಯ ಅವನು ಹೇಳಿದ ರೀತಿ ತುಂಬಾ ಇಷ್ಟವಾಯ್ತು
ಈಗ್ಲೂ ಆ ವಾಕ್ಯಾನ ನಮ್ಮನೇಲಿ ನಮ್ಮ ಯಜಮಾನರು ಹೇಳ್ತಾ ಇರ್ತಾರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.