ಮುಖ ನೋಡಿ ವ್ಯಕ್ತಿತ್ವ ಅಳೆದೆನೇ?

0

ಮೊನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಡುವಾಗ ರಾತ್ರಿ ಹತ್ತು ಘಂಟೆಯಾಗಿತು
ನಮ್ಮ ಮನೆಯಿಂದ ಇನ್ಸ್ಟಿಟ್ಯೂಟ್ ಸ್ವಲ್ಪ ದೂರ .
ಸ್ಕೂಟಿ ಸ್ಟಾರ್ಟ್ ಮಾಡಿ ಹೊರಡುತಿದ್ದಂತೆ ಸ್ವಲ್ಪ ದೂರದಲ್ಲಿ ಸ್ಕೂಟಿ ನಿಂತು ಬಿಟ್ಟಿತು
ನಂತರ ಏನು ಮಾಡಿದರೂ ಸ್ಟಾರ್ಟ್ ಆಗ್ತಾ ಇಲ್ಲ.
ಕೆಲವರು ನೋಡ್ಕೊಂಡು ಹೋಗ್ತಾ ಇದ್ದರೂನಾನೆ ಕರೀಲಿಲ್ಲ
ಒಬ್ಬ ವ್ಯಕ್ತಿ ಮುಂದೆ ಯಿಂದ ಬಂದ
ಒಳ್ಳೆ ರೌಡಿ ಇದ್ದ ಹಾಗೆ ಇದ್ದ ಉದ್ದುದ್ದ ಕೂದಲು, ದುರುಗುಟ್ಟಿಕೊಂಡು ನೋಡಿಕೊಂಡು ಹೋದ. ಕೆಂಪು ಕಣ್ಣು. ಸ್ವಲ್ಪ ಮಾಸಲೆನಿಸುವ ಬಟ್ಟೆ
ಸಣ್ಣಗೆ ಹೆದರಿಕೆ ಆಯ್ತು ನಮ್ಮ ಆಫೀಸ್ ಹುಡುಗನಿಗೆ ಫೋನಾ ಮಾಡೋಣ ಅಂತನ್ನಿಸಾತಾದರೂ ಪಾಪ ಯಾಕೆ ಅಂತ ಸುಮ್ಮನಾದೆ . ಸ್ವಲ್ಪ ಹೊತ್ತು ಕಿಕ್
ಮಾಡಿದೆ ಆದರೂ ಶುರು ಆಗಲಿಲ್ಲ.
ಅಷ್ಟರಲ್ಲಿ ಆ ವ್ಯಕ್ತಿ ಮತ್ತೆ ವಾಪಾಸ್ ಬಂದ ಒಂದೆರೆಡು ಬಾರಿ ನನ್ನ ಮುಂದೇನೆ ಓಡಾಡಿದ.
ನನಗನ್ನಿಸಿತು
ಇವತ್ತು ನಂಗೇನೋ ಕಾದಿದೆ
ಕೊರಳಲ್ಲಿ ಚಿನ್ನದ ಸರ, ಬೆನ್ನಲ್ಲಿ ಲ್ಯಾಪ್‍ಟಾಪ್, ಕೈಯ್ಯಲ್ಲಿದ್ದ ಉಂಗುರ ಭಯ ಆಗತೊಡಗಿತು. ಸ್ಕೂಟೀನ ಸ್ವಲ್ಪ ಮುಂದೆ ತಳ್ಳಿಕೊಂಡು ಹೋದರೆ ನಂಗೆ ಗೊತ್ತಿರೋರ ಮನೆ ಇದೆ ಆದರೆ ಅಲ್ಲೀವರೆಗೆ ತಳ್ಳಬೇಕಲ್ಲಾ ಎಂದುಕೊಂಡು ಹೇಗೋ ಕಷ್ತ ಪಟ್ಕೊಂಡು ತಳ್ತಾ ಇದ್ದೆ ಒಂದೊಂದ್ಸಲಕ್ಕೂ ಹಿಂದೆ ನೋಡ್ಕೊಂಡೂ ಎಲ್ಲಾದರೂ ಹಿಂದೆ ಯಿಂದ ಆಟ್ಯಾಕ್ ಮಾಡಿದರೆ ಅನ್ನೋ ಭಯ ಸ್ವಲ್ಪ ದೂರ ತಳ್ತಾ ಇದ್ನೇನೂ ಆಗಲೇ
ಆತ ನನ್ನ ಮುಂದೆ ಬಂದು ನಿಂತ್ಕೊಂಡ ."ಮೇಡಮ್ ನೀವು ರೂಪ ಮೇಡಮ್ ಅಲ್ವಾ" ಅಂದ. ಸ್ವಲ್ಪ ಸಮಾಧಾನವಾಯ್ತು. ಕುಡಿದಿದ್ದನೇನೋ ಅನ್ನಿಸ್ತಿತ್ತು.
ಆದರೂ ಯಾಕೆ ಅವನ ಹತ್ರ ಅಂದ್ಕೊಂಡು ಹೌದು ಅಂದೆ
"ನಾನು ಮೇಡಮ್ ರಾಜೇಶ್ ಬಿಟಿಎಮ್ ಲೇಔಟ್‌ನಲ್ಲಿ ನಿಮ್ಮ ಹತ್ರ ಕ್ಲಾಸ್‌ಗೆ ಬರ್ತಾ ಇದ್ನಲ್ಲವಾ? ಆಗ್ಲೇ ಕೇಳೋಣ ಅನ್ಕೊಂಡೆ ನೀವೇ ಅಲ್ವಾ ಹೌದಾ ಅಂತಾ ನೋಡ್ತಾ ಇದ್ದೆ"
ನಾನು ಮಾತುಗಳಿಗೆ ಹುಡುಕಾಡಿದೆ.
"ರಾಜೇಶ್ ಹೂ ಹೂ ನೆನಪಿಗೆ ಬಂತು"ಯಾವ ರಾಜೇಶಾನೂ ನೆನಪಿಗೆ ಬರಲಿಲ್ಲ ಸುಮ್ಮನೆ ಹೇಳಿದೆ
""ಸರೀರಿ ಮೇಡಮ್ ಸ್ಟಾರ್ಟ್ ಮಾಡಿಕೊಡ್ತೀನಿ " ಎಂದು ಸ್ಕೂಟಿ ತೆಗೆದುಕೊಂಡು ಬಲವಾಗಿ ಕಿಕ್ ಮಾಡಿ ಸ್ಟಾರ್ಟ್ ಮಾಡಿಕೊಟ್ಟ
ಮೇಡಮ್ ರಾತ್ರಿಯಾಗಿದೆ ಇಷ್ಟು ಹೊತ್ನಲ್ಲಿ ಒಬ್ಬೊಬ್ಬರೇ ಓಡಾಡ್ತಾ ಇದಿರಲ್ಲ ಮೇಡಮ್ . ಆದ್ರೂ ಹುಷಾರು ಮೇಡಮ್, ಹೇಳಿದ
"ಥ್ಯಾಂಕ್ಸ್ ಹೇಳಿದೆ ಇನ್ಸಿಟೂಟ್‍ಗೆ ಬಾ ಎಂದು ಹೇಳಿದೆ
ಮನೆಗೆ ಹೋಗುವಾಗ ನಾನ್ಯಾಕೆ ಅಷ್ಟೊಂದು ಕೀಳಾಗಿ ಯೋಚಿಸಿದೆ, ಮನುಷ್ಯ ಮನುಷ್ಯರ ಬಗ್ಗೆ ನಂಬಿಕೆ ಕಳೆದುಕೊಳ್ತಾ ಇದ್ದರೆ ಮುಂದೆ ಹೇಗೆ
ಆಗಲೆ ಜ್ನಾನದೇವ್ ಸಾರ್ ಬರೆದ ಲೇಖನದ ನೆನಪು ಬಂತು . ಅಂತಹ ಎಷ್ಟೋ ಲೇಖನಗಳನ್ನು ಓದಿದರೂ ನನ್ನ ಸ್ವಭಾವ ಚೇಂಜ್ ಆಗಲ್ಲ ಅಂತ ಅನ್ನಿಸಿ ಬೇಜಾರು ಆಯ್ತು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರೂಪ,

ನನ್ನ ಪ್ರಕಾರ ಇದರಲ್ಲಿ ನಿಮ್ಮ ತಪ್ಪೇನು ಇಲ್ಲ. ರಾತ್ರಿಯ ಹೊತ್ತು ಅದರಲ್ಲೂ ಹೆಣ್ಣು ಮಕ್ಕಳಿಗೆ ಇದೇ ರೀತಿಯ ಯೋಚನೆಗಳು ಬರುವುದು. ಹಿಂದೆ ’ರೇಖಾ ಹೆರೆಂಜಾಲ್" ಎನ್ನುವರೊಬ್ಬರು ಒಂದು ಲೇಖನವನ್ನು ಸಂಪದದಲ್ಲಿಯೇ ಬರೆದಿದ್ದರು. ಅದರಲ್ಲೂ ನಾನು ನನ್ನ ಪ್ರತಿಕ್ರಿಯೆಯನ್ನು ನೀಡಿದ್ದೆ.

ಅದೇ ಜಾಗದಲ್ಲಿ ನಾನೆ ಇದ್ದೆ ಎಂದಿಟ್ಟುಕೊಳ್ಳಿ. ಮೊದಲು ನಾನು ನಮ್ಮ ಹತ್ತಿರದವರಿಗೆ ದೂರವಾಣಿಯ ಮುಖೇನ ತಿಳಿಸಿ. ಅಲ್ಲೆ ಎಲ್ಲಾದರೂ ಗಾಡಿಯನ್ನು ನಿಲ್ಲಿಸಿ ಬಂದುಬಿಡುತ್ತಿದ್ದೆ (ಎಷ್ಟೋ ಸಲ ಹಾಗೆ ಮಾಡಿದ್ದೀನಿ). ಆಗ ಇದಕ್ಕೆಲ್ಲ ಅವಕಾಶವೇ ಇರುವುದಿಲ್ಲ. ಅಕಸ್ಮಾತ್ ಹೀಗೆ ಮಾಡಿಲ್ಲದಿದ್ದರೆ, ಕಚೇರಿಯ ಹುಡುಗನಿಗೆ ದೂರವಾಣಿಯ ಮೂಲಕ ಬರಹೇಳುತ್ತಿದ್ದೆ. ಆಗ ಈ ಸಮಸ್ಯೆ ಇರುವುದಿಲ್ಲ.

ಕಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಾಡಿಯನ್ನು ರಾತ್ರಿಯಲ್ಲಿ ಬಿಟ್ಟು ಬರಲು ಭಯವೂ ಆಗುತ್ತದೆಯಲ್ಲವೇ? ಸ್ಕೂಟೀನೆ ತಗೊಂಡು ಹೋದರೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ ಭಯವಿದ್ದರೆ ಅಲ್ಲಿ ಒಂದು ಕ್ಷಣವು ನಿಲ್ಲದೆ, ಗಾಡಿಯನ್ನು ತಳ್ಳಿಕೊಂಡು ಹೋಗಿ ನಿಮ್ಮ ಪರಿಚಯದವರ ಮನೆಯಲ್ಲಿ ಬಿಟ್ಟು ನಂತರ ಮನೆಗೆ ತಲುಪುವ ಏರ್ಪಾಡು ಮಾಡಿಕೊಳ್ಳಬೇಕು. ಇದು ನನ್ನ ಅನಿಸಿಕೆಯಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದರಲ್ಲಿ ನಿಮ್ಮ ಸ್ವಭಾವ ಚೇಂಜ್ ಮಾಡೋ ಪ್ರಶ್ನೆಯೇ ಇಲ್ಲ ರೂಪಕ್ಕ. ಬೇರೆ ಯಾರೇ ಆದರೂ ಅದನ್ನೇ ಯೋಚನೆ ಮಾಡತಿದ್ರು. ಹುಡುಗರಿದ್ದರೂ ಕೂಡ.

ಒಲುಮೆಯಿಂದ,
ಗಿರೀಶ ರಾಜನಾಳ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಫೈನಲ್ಲಿಯರ್ನಲ್ಲಿದ್ದಾಗ್ನಂಗೊಂದೀಥರದ್ದೇ ಅನುಭವ ಆಗಿತ್ತು, ಸ್ವಲ್ಪುಳ್ಟಾ ... ನಾನ್ನನ್ದೋಸ್ತ್ಮನೆಗ್ ಹೋಗ್ತಿದ್ದೆ ನಡ್ಕೊಂಡು. ಸ್ವಲ್ಪ ನಿರ್ಜನ್ವಾದ್ಜಾಗ, ಕತ್ಲೆ ಬೇರೆ ಇತ್ತು. ಪಾಪ ಯಾರೋ ಹುಡ್ಗಿ , ಹಳೇ ಕೈನೆಟಿಕ್ನ ತುಳ್ದೊದೀತಿದಾಳೆ. ಆ ಮುಂಡೇದ್ಕಮಕ್ಕಿಮಕಂತಿಲ್ಲ. ನಾನ್ಬೇರೇ ಮೂರ್ವಾರ ಶೇವ್ಮಾಡ್ದಲೇ ದಾಡಿ ಬಿಟ್ಟ್ಕೊಂಡಿರೋ ದ್ರಾಬೆ. ಕರೀ ಟೀಷರ್ಟು ವೋರ್ನೌಟ್ಜೀನ್ಸು. ನೋಡಿದ್ರೆ ವಾಂಟೆಡ್ಲಿಸ್ಟ್ನೋನನ್ನೋಹಾಗಿದ್ದೆ. ಆ ಹುಡ್ಗಿ ಮುಖ ನೋಡೋ ಹಾಗಿರ್ಲಿಲ್ಲ ಪಾಪ. /* priceless expression, ಒಳ್ಳೆ ಹಾರರ್ಫಿಲ್ಮಲ್ಲಿ ದಯ್ಯ ನೋಡ್ದಾಗಿನ್ಲುಕ್ಕು */ ಸರಿ ನಾನೂ ಒಂದಿಷ್ಟ್ವದ್ದೆ ,ಆ ದರಿದ್ರ ಕೈನೆಟಿಕ್ನಾ, ಏನೂ ರೆಸ್ಪಾನ್ಸ್ಕೊಡ್ಲಿಲ್ಲ . ಸರಿ ಇದು ತಳ್ಳೋ ಕೇಸೆ ಅಂತ ಮನೆ ಎಲ್ಲೀಂತ ಕೇಳ್ದೆ. ನನ್ದೋಸ್ತ್ಮನೆ ಹತ್ರಾನೇ ಇತ್ತು. ಸರಿ ತಳ್ಕೊಂಡ್ ಹೋದೆ. ಮನೆಗ್ಬಿಟ್ನಾನ್ನನ್ಫ್ರೆಂಡ್ಮನೆಗೆ ಹೋದೆ. ಅಲ್ಲಿ ನಮ್ ಗ್ಯಾಂಗ್ನಂಗೋಸ್ಕರ ಒಂದ್ಗಂಟೆಯಿಂದ ಕಾಯ್ತಿತ್ತು. ನನ್ತಂಗಿ ಈ ಇನ್ಸಿಡೆಂಟ್ಗೆ 'ನಾನೇನಾದ್ರು ಇದ್ದಿದ್ರೆ ನಿನ್ನೋಡಿ ಪೋಲೀಸ್ಪೋಲೀಸಂತ ಕೂಗ್ಕೋತಿದ್ದೆ 'ಅಂದಿದ್ಲು. :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

" ಕಪ್ಪಗಿದ್ದಿನಿ ಅಂತ ಕಳ್ಳ ಅನ್ನೊಬೇಡ .. ಬದುಕೋಕೆ ನಂಬಿಕೆ ಮುಖ್ಯ .. " ಅನ್ನೊ ದುನಿಯ ಪಿಚ್ಚರ್ ಡೈಲಾಗ್ ಜ್ಞಾಪಕಕ್ಕೆ ಬಂತು ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ರೂಪ,
ಅಂಥ ಸನ್ನಿವೇಶಗಳು ನಮ್ಮಲ್ಲಿ ಕೆಟ್ಟು ಯೋಚನೆಗಳನ್ನು ಮೂಡಿಸುತ್ತವೆ, ಯಾರುನ್ನ ನೋಡಿದ್ರು ಅನುಮಾನ ಬರುತ್ತೆ, ನನಗು ಅಂಥ ಅನುಭವವಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.