ಮಳೆಯ ನೆಪದಲ್ಲಿ ನನ್ನೊಳಗಿನ ರೂಪ ಬಂದಿದ್ದಳು

4

ಮೊನ್ನೆ ರಾತ್ರಿ ಜಿಟ ಪಟಿ ಮಳೆ ಶುರುವಾಯ್ತು. ಒಂಥರಾ ಒಳ್ಳೇ ವೆದರ್. ಕೂಲ್ ಆಗಿ ತುಂಬಾ ಹಿತ ಆಗ್ತಿತ್ತು
"ಮೇಡಮ್ ಮಳೆ ಬರ್ತಿದೆ ಹೇಗೆ ಹೋಗ್ತೀರಾ . ಮಳೆ ನಿಂತ ಮೇಲೆ ಹೋಗಿ" ಎಂದ ರವಿ.
ಮಳೆ ಧಾರಾಕಾರವಾಗಿ ಏನೂ ಸುರೀತಿರಲಿಲ್ಲ . ಹನಿ ಹನಿ ಮಳೆಯಲ್ಲಿ ತೋಯುವ ಆಸೆ ನಂಗೆ
ಅವನ ಮಾತು ಕೇಳದೆ ಸ್ಕೂಟಿ ಶುರು ಮಾಡಿ ಹೊರಟೆ.
ಸಣ್ಣಗೆ ಮಳೇ . ಇನ್ನೇನೋ ಜೋರಾಗಿ ಮಳೆ ಬರುತ್ತದೆ ಏನೋ ಎಂಬಂತೆ ಹೆದರಿಸುತ್ತಿರುವ ಗುಡುಗು ಗುಮ್ಮ . ಇದ್ದಕಿದ್ದಂತೆ ತಾನೂ ಸುಗಂಧಿ ಎಂದು ತೋರಿಸುತ್ತಿರುವ
ಮಣ್ಣು. ಮಳೆ ಬರ್ತಾ ಇದೆ ಎಂದು ತಲೆಯ ಮೇಲೆ ಬಟ್ಟೆಯನ್ನೋ ಕೊಡೆಯನ್ನೋ ಹಿಡಿದು ಓಡುತ್ತಿರುವ ಜನರು. ನೋಡುತ್ತಿದ್ದಂತೆ ಬಾಲ್ಯ ದಿನಗಳು ಕಾಲೇಜು ದಿನಗಳ ನೆನಪು ಬಂದಿತು
ಸ್ಕೂಟಿಯನ್ನು ಬೇಕೆಂತಲೇ ನಿಧಾನವಾಗಿ ಡ್ರೈವ್ ಮಾಡುತ್ತಿದ್ದೆ.
ಚಿಕ್ಕೋಳಿದ್ದಾಗ ಮಳೆ ಬಂತೆಂದರೆ ಅದನ್ನು ನೋಡುವುದೇ ಒಂದು ಸಂತಸ
ನೀರಿನಲ್ಲಿ ದಪ ದಪ್ ಎಂದ ಬೀಳುತ್ತಿದ್ದ ಮಳೆಹನಿಗಳು, ಅವುಗಳಿಂದ ಮೂಡುತ್ತಿದ್ದ ದೀಪಗಳು ಮಳೆಯಲ್ಲಿ ಬೇಕೆಂತಲೇ ನೆಂದು ಅಮ್ಮನ ಹತ್ತಿರ ಬೈಸಿಕೊಳ್ಳುತ್ತಿದ್ದೆವು
ಮಳೆ ಹೇಗೆ ಬೀಳುತ್ತದೆ ಎಂಬ ಕುತೂಹಲದ ಕಣ್ಣಿನ ಜೊತೆಗೆ ಹಾಡುಗಳು ಅಂತ್ಯಾಕ್ಷರಿ
ಅಮ್ಮ ನಮಗಾಗಿ ಮಾಡಿಕೊಟ್ಟ ಬಿಸಿ ಬಿಸಿ ಬಜ್ಜಿ ಮೆಲ್ಲುತ್ತಾ ಬೇಸರ ಕಳೆಯಲೆಂದು ಚೌಕಾಬಾರ, ಹಾವು ಏಣಿ ಆಟ , ಅಳುಗೂಳಿ ಮಣೆ ಆಡುತ್ತಿದ್ದೆವು, ಇವೆಲ್ಲಾ ಬೋರ್ ಆದರೆ ಹುಡುಗ ಹುಡುಗಿ ಊರು ಸಿನಿಮಾ
ಎಂಬ ಆಟ ಆಡುತ್ತಿದ್ದೆವು, ಅಥವ ಪದ ಕಂಡು ಹಿಡಿಯುವ ಆಟ ಆಡುತ್ತಿದ್ದೆವು
ಒಟ್ಟಿನಲ್ಲಿ ಬಾಲ್ಯದಲ್ಲಿಯ ಮಳೆಯ ನೆನಪುಗಳು ಒಂಥರ ಮುದ್ದು ಮುದ್ದು
ಕಾಲೇಜಿನಲ್ಲಿ ಮಳೆ ಬಂತೆಂದರೆ ನಮ್ಮ ಯಾತ್ರೆ ಶುರುವಾಗುತ್ತಿತ್ತು.
ಈಸ್ಟ್ ಎಂಡ್ ನಿಂದ ಜಯನಗರ ೪ ನೇ ಬ್ಲಾಕ್ ವರೆಗೆ ಸುಮ್ಮನೆ ನಡೀತಾ ಇದ್ವಿ . ಪ್ರಪಂಚದೆಲ್ಲೆಡೆ ನಡೆಯುವ ವಿದ್ಯಾಮಾನಗಳು ನಮಗೆ ಸಂಬಂಧ ಪಟ್ಟಿದ್ದಲ್ಲವೇನ್/ಒ
ಎಂಬಷ್ಟರ ಮಟ್ಟಿಗೆ
ದಾರಿಯಲ್ಲಿ ಚುರುಮುರಿ ಸಿಕ್ಕರೆ ಚುರುಮುರಿ ತಿನ್ನುತ್ತಾ ಹನಿ ಹನಿ ಮಳೆಯಲ್ಲಿ ನಲಿದಾಡುತ್ತಾ ಒಮ್ಮೊಮ್ಮೆ ಖುಷಿಯಲ್ಲಿ ಕುಣಿದಾಡುತ್ತಾ
ಬನ್ನಿ ಬೇಕರಿಯಲ್ಲಿ ಆಲೂ ಬನ್ ತಿನ್ನ್ಸುತ್ತಾ ರಸ್ತೆ ಸವಿಸುತ್ತಿದ್ದೆವು. ಮಳೇ ಹೆಚ್ಚಾದಷ್ಟು ಸಂತೋಷ ಜಾಸ್ತಿಯಾಗುತ್ತಿತ್ತು.
ಕಾಲೆಜಿನ ದಿನಗಳಲ್ಲಿ ಮಳೆಯ ನೆನಪು ಮನ ಮೋಹಕವಾಗಿತ್ತು
ಕಾಲೇಜಿನ ದಿನಗಳಾದ ಮೇಲೆ ಈ ರೀತಿಯ ಸಂತಸ ನಾನು ಕೆಲಸಮಾಡುತ್ತಿದ್ದ ಕಡೆಯಲ್ಲಾಗಿತ್ತು.
ಟೆರೇಸಿನ ಮೇಲೆ ನಿಂತು ಖುಷಿಯಿಂದ ಕುಣಿದದ್ದು ನಮ್ಮ ಹೆಡ್ ಬಂದು ನಿಂತಿದ್ದೂ ತಿಳಿಯದೆ ಕೊನೆಗೆ ಬೈಸಿಕೊಂಡಿದ್ದೆವು.
ಅದೇ ಕಡೆ ನಂತರ ಮಳೆಯನ್ನು ಸಂತಸ ದಿಂದ ಬರಮಾಡಿಕೊಳ್ಳಲಿಲ್ಲ
ಇಂದು ಮಳೆ ಬಂತಲ್ಲ ಇವತ್ತ್ ಹೋಗೋದಿಕ್ಕಾಗಲ್ಲ. ಇವತ್ತು ಸ್ಟೂಡೆಂಟ್ಸ್ ಬರೊದಿಲ್ಲ ಇವತ್ತು ವಿಚಾರಣೆಗೆ ಬರೋದಿಲ್ಲ ಹೀಗೇ ಮಳೆಗೆ ನನ್ನಿಂದ ಬೇಸರದ ಸ್ವಾಗತವೇ ಸಿಕ್ಕಿದ್ದು
ಆದರೆ ಮೊನ್ನೆ ಹಾಗಿರಲಿಲ್ಲ ಮಳೆಯನ್ನು ಎಂಜಾಯ್ ಮಾಡ್ತಿದ್ದೆ ಒಮ್ಮೆ ನಾನು ಮದುವೆಯಾದವಳು ಮಗುವಿದೆ ಎಂಬುದನ್ನೂ ಮರೆತಿದ್ದೆ. ನಮ್ಮನೆಗೆ ಹೋಗುವ ದಾರಿಯಲ್ಲಿ ಹೊರಗಡೆ ದೋಸೆ ಮಾಡುತ್ತಾರೆ. ಅಲ್ಲಿ ನಿಂತು ದೋಸೆ ಕೊಂಡು ತಿನ್ನುತ್ತಾ ಮಳೆಯನ್ನು ಸವಿಯುತ್ತಿದ್ದೆ. ಸ್ವಲ್ಪ್ ಹೊತ್ತು ನಾನು ಒರಿಜಿನಲ್ ರೂಪ ಆಗಿದ್ದೆ.
ಅಷ್ಟ್ರಲ್ಲಿ ಮೊಬೈಲ್ ಬಾರಿಸಿತು
ಅಮ್ಮನ ದನಿ
"ರೂಪ ಬೇಗ ಬಾರೆ ಮಗು ಅಳ್ತಾ ಇದೆ, ಎಷ್ಟು ಹೊತ್ತು . ಏನ್ಮಾಡ್ತಾ ಇದ್ದೀಯಾ?"
ರೂಪ ಮಾಯವಾದಳು. ಮಗುವಿನ ತಾಯಿ ಎಚ್ಚೆತ್ತಳು.
ಸ್ಕೂಟಿ ಸ್ಟಾರ್ಟ್ ಮಾಡಿಕೊಂಡು ವೇಗವಾಗಿ ಹೊರಟೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.