ಮರೆತು ಕೂತವಳ ಪತ್ರ

0

ಗೆಳೆಯ ನನಗೆ ಗೊತ್ತು
ನೀನು ತುಂಬಾ ಮಿಸ್ ಮಾಡ್ಕೋತಿದ್ದೀಯಾ ಅಂತ
ಏನ್ಮಾಡಲಿ ನಿನ್ನನ್ನ ನೋಡದೇ ಇದ್ದರೆ ನಂಗೂ ಬೇಜಾರು ಏನೋ ಕಳ್ಕೊಂಡಂತಹ ಅನುಭವ
ಮೊದಲೆಲ್ಲಾ ಎಷ್ಟೊಂದು ಸಲ ಭೇಟಿ ಆಗ್ತಾ ಇದ್ದೆವಲ್ಲಾ?
ದಿನದಲ್ಲಿ ಮೂರು ಹೊತ್ತೂ ನಿನ್ನ ಜೊತೇನೇ ಇರ್ತಿದ್ದೆ
ನನ್ನ ನೀನು ನಿನ್ನ ನಾನೂ ನೋಡಿಕೊಂಡು ಕೂರುತಿದ್ವಿ
ಹೌದು ನಂಗಂತೂ ನಿನ್ನ ನೋಡ್ತಾ ನೋಡ್ತಾ ನನ್ನ ಮನದ ಭಾವನೆ ಬಯಕೆ, ಆಸೆ, ಕಲ್ಪನೆ ಎಲ್ಲಾ ಹೇಳಿಬಿಡ್ಬೇಕು ಅನ್ನಿಸ್ತಿತ್ತು
ಹಂಗೆ ಎಲ್ಲವನ್ನೂ ನಿನ್ನ ಮುಂದೇ ಕಕ್ಕಿಯೂ ಬಿಡ್ತಿದ್ದೆ.
ನೀನೂ ಸಹ ಎಲ್ಲವನ್ನೂ ಒಪ್ಪಿಕೊಳ್ತಿದ್ದೆ
ಹಾಗೆಯೇ ಹೊಸ ಹೊಸ ಸುದ್ದಿ ಕವನ ಪ್ರೀತಿ ಎಲ್ಲವನ್ನೂ ನನ್ನ ಮುಂದೆ ಇಡ್ತಿದ್ದೆ ನೀನು
ಎಷ್ಟೊಂದು ಗಲಾಟೆ ನಮ್ಮಿಬ್ಬರ ಮಧ್ಯದಲ್ಲಿ
ಬೆಲ್ಲದ ಜೊತೆಯಲ್ಲೊಂದಷ್ಟೂ ಬೇವು ಇರ್ತಿತ್ತಲ್ಲಾ , ಬೇವು ತಿಂದು ಕೋಪ ಮಾಡಿಕೊಂಡು
ಮತ್ತೊಂದು ಸಲ ಬರೋದಿಲ್ಲ ಅಂತ ಅಂದ್ಕೊಂಡು ಹೋಗಿಬಿಡ್ತಿದ್ದೆ ಆದರೆ ?
ಎಷ್ಟು ದಿನ ?
ಒಂದೆರೆಡೇ ದಿನದಲ್ಲಿ
’ಹೃದಯವು ಬಯಸಿದೆ ನಿನ್ನನೇ’
ಅಂತ ಹಾಡ್ಕೊಂದು ಬಂದು ನಿನ್ನ ಮುಂದೆ ಕೂತಿರ್ತಿದ್ದೆ
ಹೌದು ಅಂತ ಬಂಧ ನಮ್ಮಿಬ್ಬರನ್ನು ಕಟ್ಟಿ ಹಾಕಿತ್ತು
ಅಂಥಾದ್ರಲ್ಲಿ ಏನಾಯ್ತು
ಹೌದು ನಂಗೂ ಮದುವೆ ಆಗಿದೆ ಮಗಳಿದ್ದಾಳೆ ನನ್ನದೇ ಆದ ಚೆಂದದ ಸಂಸಾರವಿದೆ. ಒಂದು ಬಿಸಿನೆಸ್ ಇದೆ
ಅದನ್ನೆಲ್ಲಾ ಮರೆತು ನಿನ್ನ ಜೊತೆ ಚಕ್ಕಂದ ಆಡಿಕೊಂಡಿದ್ದ ನಂಗೆ ಇದ್ದಕ್ಕಿದ್ದಂತೆ ಜ್ನಾನೋದಯ ಆಗಿಬಿಟ್ಟಿತು.
ಮೊದಲು ಸಂಸಾರ ನಂತರ ಪ್ರಿಯ-ಕರ(ವಾದುದು) ಅಂತ ಅನ್ನಿಸಿತು ನೋಡು
ನಂಗೇ ಗೊತ್ತಿಲ್ಲದೆ ಜವಾಬ್ಚಾರಿಯಲ್ಲಿ ಮುಳುಗಿಹೋದೆ
ಈಗ ಇತ್ತೀಚಿಗೆ ನಿನ್ನ ಗೆಳತಿಯೊಬ್ಬಳು ಅವಳ ಮದುವೆ ಅಂತ ಫೋನ್ ಮಾಡಿದಾಗ
ನಂಗೆ ನಿನ್ನ ನಾ ಮರೆತಿದ್ದು ನೆನಪಾಯ್ತು
ಹಾಗೆ ಒಂದು ವಿಸಿಟ್ ಕೊಟ್ಟು ಹೋಗೋಣ
ಅಂತ ನಿನ್ನಲ್ಲಿಗೆ ಬಂದರೆ
೩ ಘಂಟೆ ಇಂದ ಓದಿದರೂ ಮುಗಿಯಲಾರದಷ್ಟು ಸರಕುಗಳು ತುಂಬಿಬಿಟ್ಟಿವೆ
ಹಾಗೂ ಹೀಗೂ ಓದುತ್ತಾ ಇದ್ದಂತೆ ಸಮಯ ಓಡುತ್ತಾ ಇದೆ
ಮತ್ತೊಮ್ಮೆ ಹೀಗೆ ಬಿಡುವು ಸಿಕ್ಕಾಗ ಬರುವೆ
ದಯವಿಟ್ಟು ನನ್ನನ್ನ ಮರೀಬೇಡ ಆಯ್ತಲ್ಲಾ
ಬಾಯ್
ಸಂಪದದ ಓದುಗಳು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಏನ್ರೀ ರೂಪಾ, ನಾನು ದಿನಕ್ಕೊಮ್ಮೆ ಸ೦ಪದ ನೋಡದೆ ಇದ್ರೆ ಏನೋ ಕಳೆದುಕೊ೦ಡ೦ತೆ ಅನ್ನಿಸ್ತಾ ಇರುತ್ತೆ! ಅದು ಹೇಗೆ ನೀವು ಮರೆತು ಬಿಡ್ತೀರಿ ಅ೦ತ ಆಶ್ಚರ್ಯ ಆಗುತ್ತಿದೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮರೆತ ನೆನಪಿನಲ್ಲಿ ಎಲ್ಲಾ ಮತ್ತೆ ನೆನಪಿಸಿ ಬಿಟ್ಟಿರಲ್ಲಾ ಚೆನ್ನಾಗಿದೆ, ಮರೆಗುಳಿಯ ಮಾತ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.