ಭಾರತದಲ್ಲಿ ಕ್ರಿಸ್ತ ಶಕದ ಬಳಕೆಯೇ ಏಕೆ ಮತ್ತು ಹೇಗೆ ಬಂದಿತು

3

ಮೊನ್ನೆ  ಒಂದು ಚರ್ಚೆಯಲ್ಲಿ  ದೇವ ದೂತ ಏಸು ಕ್ರಿಸ್ತರು ಶಂಕರಾಚಾರ್ಯರಲ್ಲಿ  ವೇದ ಮಂತ್ರ ಗಳನ್ನು ಕಲಿತರು ಎಂಬುದು ಟಿವಿಯಲ್ಲಿ ಬರುತ್ತಿತ್ತು. ಒಮ್ಮೆಗೆ ಹೌದಲ್ಲವಾ ಭಾರತದ ಇತಿಹಾಸ ಎಷ್ಟು ಹಳೆಯದು ಎಂದು ಅನ್ನಿಸಿಒಂದು ರೀತಿಯ ಉನ್ನತ ಭಾವ ಮೂಡುತ್ತಿದ್ದಂತೆಯೇ ಏಕೋ  ಕ್ರಿಸ್ತಶಕವೇ ಹೇಗೆ ಬಳಕೆಯಲ್ಲಿ ಬಂತು  ಎಂಬ ಪ್ರಶ್ನೆ ಮೂಡಿತು

ನಮ್ಮ ಯಾವುದೇ ಇತಿಹಾಸದ ಪಠ್ಯವನ್ನು ತೆಗೆದುಕೊಂಡರೂ , ಪುರಾಣದ ( ಮಹಾಭಾರತದ ಕಾಲವನ್ನು ಹೇಳಲು ಸಹಾ ಕ್ರಿಸ್ತ ಪೂರ್‍ವ ೩೦೦೦ ದ ಮುಂಚೆ ಎಂದೇ ಹೇಳುತ್ತಾರೆ) ಏಕೆ  ಕ್ರಿಸ್ತನ ಶಕೆಯನ್ನೇ ರೆಫರೆನ್ಸ್ ಆಗಿ ತೆಗೆದುಕೊಳ್ಳಲಾಗುತ್ತಿದೆ

ನಮ್ಮಲ್ಲಿ ಶಾಲಿವಾಹನ ಶಕೆ ಅಥವ ವಿಕ್ರಮ ಶಕೆ ಈ ರೀತಿಯ ಶಕೆಗಳೂ ಇವೆ. ಇವುಗಳೇಕೆ ಪ್ರಚಲಿತವಿಲ್ಲ

ಬ್ರಿಟಿಷರ ಕಾಲದ ಕೊಡುಗೆ ಎಂದುಕೊಂಡು ಸುಮ್ಮನಾಗುವ ಎಂದರೆ ಮನಸು ಕೇಳುತ್ತಿಲ್ಲ. ವಿವರವಾದ ಉತ್ತರವನ್ನು ಬಯಸುತ್ತಿದ್ದೇನೆ

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

>>>ಬ್ರಿಟಿಷರ ಕಾಲದ ಕೊಡುಗೆ ಎಂದುಕೊಂಡು ಇರಬಹುದು ಅನ್ನಿಸುತ್ತದೆ.... ಆದರೂ ಇತಿಹಾಸ ತಜ್ನರ ಉತ್ತರಕ್ಕಗಿ ಕಾಯುವ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂರ್ಯಮ ಮುಳುಗದ ಸಾಮ್ರಾಜ್ಯ ಕಟ್ಟಿದ್ದವರು, ಬ್ರಿಟೀಷರು. 18-19ನೇ ಶತಮಾನಗಳಲ್ಲಿ ದೊಡ್ಡಣ್ಣ, ಆ ಸಾಮ್ರಾಜ್ಯ. ಜಾಗತಿಕ ವ್ಯವಹಾರದ ಪರಿಕಲ್ಪನೆಯೂ ಆ ಕಾಲದಲ್ಲೇ ಹುಟ್ಟಿ ಬೆಳೆದಿದ್ದು. ಆ ಕಾಲಘಟ್ಟದಲ್ಲಿ, ಭಾರತದ ಪಂಚಾಗ ನಮ್ಮಲ್ಲಿನ ಆಂತರಿಕ ಕೌಟುಂಬಿಕ, ಸಾಮಾಜಿಕ ’ಮಹೂರ್ತ’ಗಳಿಗಷ್ಟೇ ಸೀಮಿತವಾಗಿತ್ತು. ಅಂತಾರಾಷ್ಟ್ರೀಯ ರಾಜತಾಂತ್ರಿಕ ಹಾಗೂ ವ್ಯಾಹರಿಕ ವಹಿವಾಟುಗಳ “ಸ್ವಾತಂತ್ರ್ಯದ” ನಮಗಿರಲಿಲ್ಲ. ಅದು ಬರುವ ಹೊತ್ತಿಗೆ ಕ್ರಿಸ್ತ ಶಕೆ, ಜಾಗತಿಕ Standard ಆಗಿ ಬದಲಾಗಲಾರದಷ್ಟು ಭದ್ರವಾಗಿಹೋಗಿತ್ತು. ಬಿಡಿ, ಅದು ಎಂದೋ ಆಗಿಹೋದ ಸಂಗತಿ. ಆದರೆ ದಿನ ನಿತ್ಯದ ಕಾಲಮಾನ ವ್ಯವಹಾರದ ಸಂಬಂಧದಲ್ಲಿ, ನಾವು ಇಂದಿಗೂ ಸಹ ಭೌಗೋಳಿಕ ಅಸಂಗತವೊಂದನ್ನು ಅಚ್ಚುಕಟ್ಟಾಗಿ ಪರಿಪಾಲಿಸುತ್ತಿದ್ದೇವೆ. ಅದು ನಮಗೆ ಗೊತ್ತು ಕೂಡಾ ಇಲ್ಲ! ಈ ಪಾಶ್ಚಾತ್ಯ ಪದ್ಧತಿಯಂತೆ ಪ್ರಪಂಚದ ಯಾವುದೇ ದೇಶದಲ್ಲೂ ‘ಹಗಲು’ ಆರಂಭವಾಗುವುದು ನಟ್ಟಿರುಳಿನ ಮಧ್ಯದಲ್ಲಿ! ರಾತ್ರಿ ಹನ್ನೆರಡು ಗಂಟೆ ರಾತ್ರಿಯಿಂದ ಮರು ದಿನದ ಕ್ಷಣಗಣನೆ ಅರಂಭವಾಗುತ್ತದೆ. ರೇಖಾಂಶದ ಲೆಕ್ಕದಂತೆ ಪೂರ್ವ-ಪಶ್ಚಿಮವಾಗಿ ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ಸಮಯವಿರುತ್ತದೆನ್ನುವ ಲೆಕ್ಕಾಚಾರ, ಅದ್ಭುತ ವೈಜ್ಞಾನಿಕ ಅಳವಡನೆಯೇ ಹೌದು. ಆದರೆ ಯಾವುದೇ ಪ್ರದೇಶದಲ್ಲಾಗಲಿ, ರಾತ್ರಿ 12 ಗಂಟೆಯನ್ನು 0000 Hrs ಎಂದೇಕೆ ಇಟ್ಟುಕೊಳ್ಳಬೇಕು?ಅದರ ಬದಲು, ಬೆಳಗ್ಗಿನ 6 ಗಂಟೆಯನ್ನು ಹಾಗೆ ಪರಿಗಣಿಸಿದರಾಗದೇ? ಹಾಗೆ ಮಾಡುವುದರಿಂದ, ನಮ್ಮ ಆರ್ಯಭಟ್ಟ, ಧೃಗ್ಗಣಿತ, ಸಿದ್ದಾಂತ ಪಂಚಾಂಗಗಳಿಗಲ್ಲದಿದ್ದರೂ,ಸೂರ್ಯೋದಯದ ಲೋಕಾನುಭವದ ನೈಸರ್ಗಿಕ ವಿದ್ಯಮಾನಕ್ಕಾದರೂ ಬೆಲೆಕೊಟ್ಟಂತಗುವುದಿಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಈ ಪಾಶ್ಚಾತ್ಯ ಪದ್ಧತಿಯಂತೆ ಪ್ರಪಂಚದ ಯಾವುದೇ ದೇಶದಲ್ಲೂ ‘ಹಗಲು’ ಆರಂಭವಾಗುವುದು ನಟ್ಟಿರುಳಿನ ಮಧ್ಯದಲ್ಲಿ! . . ." ನಿಮ್ಮ ಮಾತು ಸರಿಯಾಗಿದೆ! ಅದು, ನಾವು ಕೊಂಚವೂ ಯೋಚಿಸದೇ ಬಳಸುವ, 'mid-east' ಪದವನ್ನು ನೆನಪಿಸಿತು. ಇದು ಇನ್ನೊಂದು ಭೌಗೋಳಿಕ ಅಸಾಂಗತ್ಯ. ಯಾವ ಪ್ರದೇಶವನ್ನು ನಾವು mid-east ಅಥವಾ ಮಧ್ಯ-ಪ್ರಾಚ್ಯ ಎನ್ನುತ್ತೇವೋ ಅದು ನಮ್ಮ ಪಶ್ಚಿಮದಲ್ಲಿದೆ! ಅಥವಾ ನಮ್ಮ ಸಮಾಧಾನಕ್ಕೆ, ಭೂಮಿ ದುಂಡಾಗಿರುವುದರಿಂದ, ಪೂರ್ವಕ್ಕೆ ಚಲಿಸುತ್ತಾ ಹೋದರೆ ಪ್ರಪಂಚದ ಯಾವ ಜಾಗವನ್ನು ಬೇಕಾದರೂ ತಲುಪಬಹುದು ಎಂಬ ಅನುಸಂಧಾನದ ಮೇಲೆ ಮಧ್ಯ-ಪ್ರಾಚ್ಯವನ್ನು ಒಪ್ಪಿಕೊಳ್ಳಬಹುದೇನೊ! ‘ಧರಣಿಮಂಡಲ ಮಧ್ಯ’ದೊಳಗಿಂದ, ಪ್ರಭು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.