rooparajiv ರವರ ಬ್ಲಾಗ್

ಕನಸುಗಳನ್ನು ಕಾಣುವುದ ಕಲಿತೆ

ವಯಸ್ಸು ೧೬-೧೭ ಇರಬೇಕು.  ಅವನ ಕಣ್ಣಲ್ಲಿ ಅದೇನೋ ಜಗತ್ತನ್ನೇ ಗೆಲ್ಲಬಲ್ಲನೆಂಬ ಅದಮ್ಯವಾದ ಆತ್ಮ ವಿಶ್ವಾಸ, ಹಳೇ ಡ್ರೆಸ್, ಕೆದರಿದ ಕೂದಲು. ಕೆಲಸ ಹುಡುಕಿಕೊಂಡು ಬಂದಿದ್ದ.  ಇವನ ಕೈಯಲ್ಲಿ ಎಂತಹ ಕೆಲಸ ಮಾಡಿಸುವುದು, ಇನ್ನೂ ೧೮ ತುಂಬಿಲ್ಲ.  ಕಾನೂನಿನ ಪ್ರಕಾರ ಅಪರಾಧವಾಗಬಹುದೇನೋ ಎನ್ನುವುದು ನನ್ನ ಚಿಂತೆ.  ಅವನಾದರೋ ‘ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ ಮೇಡಮ್. ದಯವಿಟ್ಟು ನನಗೊಂದು ಕೆಲಸ ಕೊಡಿ, ಎಸ್ ಎಸ್ ಎಲ್ ಸಿ ೮೦% ನಲ್ಲಿ ಪಾಸಾಗಿದ್ದೀನಿ, ತಂದೆ ತೀರಿ ಹೋದರು, ಮನೆಯಲ್ಲಿ ಬಹಳ ಕಷ್ಟ, ನಾನೇ ಮೊದಲ ಮಗ, ಮುಂದೆ ಓದಲು ಸಾಧ್ಯವಾಗುತ್ತಿಲ್ಲ’ ಎಂದೆಲ್ಲಾ ಹೇಳುತ್ತಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಡುತಿದೆ ಬದುಕು!

ನನಗೇನು ಬೇಕು? ಏನೂ ಗೊತ್ತಾಗ್ತಿಲ್ಲ.  ವಯಸ್ಸಾಗಿಬಿಡ್ತಾ? ಛೇ! ಈಗಿನ್ನೂ ನನ್ನ ವಯಸ್ಸಿನವರು ಮದುವೆಯಾಗುತ್ತಿರುವಾಗ, ನನಗ್ಯಾಕೆ ಹೀಗೆ ಅನ್ನಿಸುತ್ತೆ? ನೋಡುವವರಿಗೆ ಸುಖೀ ಕುಟುಂಬ, ಪ್ರೀತಿಸಿ ಮದುವೆಯಾದ ಗಂಡ, ಮುದ್ದಾದ ೨ ಮಕ್ಕಳು, ಕೈತುಂಬಾ ಹಣ ತರುವ ಕೆಲಸ, ಚೆಂದದ ಸ್ವಂತ ಮನೆ, ಎರಡೆರಡು ಕಾರು ಇನ್ನೇನು ಬೇಕು? ಎನ್ನುವವರಿಗೆ ನಾನೊಂದು ಪ್ರಶ್ನಾರ್ಥಕ, ಅರ್ಥವಾಗದವಳಂತೆ ಕಾಣುತ್ತೇನೆ. ಇಷ್ಟೇನೇ ಬದುಕು? ಮದುವೆಯಾಗಿ ನಾನೇನು ಸಾಧಿಸಿದೆ? ನನಗೀಗಲೇ ಪ್ರೀತಿ, ಮದುವೆ ಬೇಡ ಎಂದವಳ ಬೆನ್ನ ಹಿಂದೆ ೩-೪ ವರ್ಷ ಕಾಡಿ, ಬೇಡಿ, ಪ್ರೀತಿಸಿ ಮದುವೆಯಾದವ ನನ್ನನ್ನು ಮರೆತೇಹೋದನೇ? ಅವನಿಗೆ ತನ್ನ ಯಶಸ್ವೀ ಬದುಕೆಂದರೆ ಬರೇ ಹಣ ಸಂಪಾದನೆ ಅಥವಾ ಕೀರ್ತಿ ಸಂಪಾದನೆಯೇ ಮುಖ್ಯವಾಗಿ ಕಾಣುತ್ತಿದೆಯೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಮ್ಮಾ ನಾ ಚಾಮಿ ಆಗಬೇಕು!

ನನ್ನ ಮಗ ಈಗಾಗಲೇ ಸಂಪದದಲ್ಲಿ ಕಥೆಯೊಂದನ್ನು ಬರೆದಿದ್ದಾನೆ.  ನಾನೀಗ ಇಲ್ಲಿ ಬರೆಯುವ ಸಾಹಸ ಮಾಡುತ್ತಿದ್ದೇನೆ.  

ನಿನ್ನೆ ನನ್ನ ಚಿಕ್ಕ ಮಗನ ಹುಟ್ಟಿದ ದಿವಸ. ಅವನ ಪ್ರಶ್ನೆಗಳು ಹೀಗೆ ಶುರುವಾಯಿತು.  ಅಮ್ಮಾ, ನನಗೆಷ್ಟು ಹ್ಯಾಪಿ ಬರ್ತ್ ಡೇ ಆಯಿತು, ನಾನು ‘೪ ವರ್ಷ ಕಂದ’.  ಅಣ್ಣನಿಗೆ? ‘೮’ , ಅಮ್ಮನಿಗೆ, ಅಪ್ಪನಿಗೆ, ತಾತನಿಗೆ ಮನೆಯವರೆಲ್ಲರದೂ ಕೇಳಿ ಆಯಿತು. ಇದ್ದಕಿದ್ದಂತೆ ಅವನ ಗಮನ ಗೋಡೆಯ ಮೇಲಿದ್ದ ಗಣಪತಿಯತ್ತ ಹೋಯಿತು, ಅಮ್ಮಾ ಆ ಚಾಮಿಗೆ ಎಷ್ಟು ವಯಸ್ಸು?! ನನಗೆ ಸ್ವಲ್ಪ ಗಾಬರಿ.  ನಾನು ಯೋಚಿಸಿ ‘೧೦೦೦ ವರ್ಷ’ ಅಂದೆ.  

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to RSS - rooparajiv ರವರ ಬ್ಲಾಗ್