savithru ರವರ ಬ್ಲಾಗ್

ಸಂಪದ ಮೊಬೈಲ್ ಸೈಟ್ ಬಗ್ಗೆ

ನನ್ ಮೊಬೈಲ್ನಿಂದ ಸಂಪದದ ಮೊಬೈಲ್ ಸೈಟ್ ಹೀಗೆ ಕಾಣ್ತಾ ಇದೆ. ಕೆಲವು ತಿಂಗಳಿಗಳಿಂದ ಈ ಸೈಟನ್ನು ಗಮನಿಸುತ್ತಿರುವ ನನಗೆ... ಹಳೆಯ ಪ್ರಾಬ್ಲಮ್ಗಳಾವೂ ಬಗೆಹರಿದಂತೆ ಕಾಣಲಿಲ್ಲ. ಈಗಲೂ ಹೊಸ ಬರಹ ಸೇರಿಸೋ ಕೊಂಡಿ ಕಾಣಲಿಲ್ಲ. ಪ್ರತಿಕ್ರಿಯೆ ಬಾಗದಲ್ಲಿ ಯಾವ. ಲೇಖನಕ್ಕೆ ಈ ಪ್ರತಿಕ್ರಿಯೆ ಅನ್ನೋದನ್ನ. ಅಲ್ಲೇ ತೋರಿಸಕ್ಕೆ ಬರಹದ ತಲೆಬರಹವೂ ಇದ್ರೆ ಚೆನ್ನ. ನನಗಂತೂ... ಮೊಬೈಲ್ ವರ್ಶನ್ಗಿಂತ ಸ್ಟ್ಯಾಂಡರ್ಡ ವರ್ಶನ್ ಸರಳವಾಗಿ, ಲೈಟಾಗಿ ಕಾಣುತ್ತೆ. ಅಂದಹಾಗೆ... ಸ್ಟ್ಯಾಂಡರ್ಡ್ ವರ್ಶನ್ ನಲ್ಲಿ ಈಗ ಹೊಸ ಬರಹ ಸೇರಿಸಬಹುದು. ಮುಂಚೆ disable rich tex ಅನ್ನೋ ಕೊಂಡಿ ಕೆಲ್ಸ ಮಾಡ್ತಇರ್ಲಿಲ್ಲ.ಇದು ತೊಂದರೆ ಕೊಡ್ತಇತ್ತು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕನ್ನಡವನ್ನು ಅನ್ಡ್ರಾಯ್ಡ್ ಮೊಬೈಲ್ನಲ್ಲಿ ಹೇಗೆ ಓದೋದು ಮತ್ತು ಬರಿಯೋದು.

ಸೂಪರ್.. ಕೊನೆಗೂ ಸಂಪದದಲ್ಲಿ ಮೊಬೈಲ್ನಿಂದ ನೇರವಾಗಿ ಬರಿತಾ ಇದೀನಿ.  ಅಂದ್ರೆ ಸಂಪದದಲ್ಲಿ ನನ್ನ ಮೊಬೈಲ್ ಬ್ಲಾಗಿಂಗ್ ಶುರು. ವಿಶಯ ಏನು ಬರಿಬೇಕು ಅಂತ ಯೋಚುಸ್ತಾ ಇದ್ದಾಗ.. ಕನ್ನನಡವನ್ನ ಮೊಬೈಲ್ನಲ್ಲ್ಲಿ  ಹೇಗೆ  ಓದೋದು ಮತ್ತು ಬರಿಯೋದು ಅನ್ನೋದರ ಬಗ್ಗೇನೆ ಬರಿಯೋಣ ಅಂತ ಈ ಬರಹ. .............. ನಾನು ಅಂಡ್ರಾಯ್ಡ ಮೊಬೈಲ್ ಬಳಸಕ್ಕೆ ಶುರು  ಮಾಡಿ ಸುಮಾರು  ಒಂದೆರಡು ತಿಂಗಳುಗಳೆ ಆಯ್ತು..   ನನ್  ಮೊಬೈಲ್ ತಗೊಂಡ ಮೊದಮೊದಲು ಹುಡಕಿದ್ದೇ ಕನ್ನಡ ಹೇಗೆ ಬರಿಯೋದು , ಓದೋದು ಅಂತ. ಒಪೆರ ಮಿನಿ ಬ್ರವ್ಸರ್ನಲ್ಲಿ 'ಮಾತ್ರ' ಕನ್ನಡ ಹೇಗೆ 'ಓದೋದು' ಅಂತ ಗೊತ್ತಾದ್ರೂ  … ಹೇಗೆ  'ಬರಿಯೋದು' ಅಂತ ಮಾತ್ರ ಗೊತ್ತಾಗಿರ್ಲಿಲ್ಲ. ಇನ್ ಫ್ಯಾಕ್ಟ್ , ಆಂಡ್ರಾಯ್ಡ್ ನಲ್ಲಿ ಕನ್ನಡದ ಯುನಿಕೋಡ್ ಫಾಂಟ್ ಸಪೋರ್ಟ ಇರಲೇ  ಇಲ್ಲ.  ಈಗ್ಲೂ ಇಲ್ಲ. ಎರಡು ಮುಖ್ಯ ಕಾರಣಗಳಿಂದ ಕನ್ನಡವನ್ನು ಅನ್ಡ್ರಾಯ್ಡ್ ಮೊಬೈಲ್ಗಳಲ್ಲಿ ಓದಕ್ಕೆ ಆಗಲ್ಲ. 1. ಈ ಮೊಬೈಲ್ಗಳಲ್ಲಿ ಕನ್ನಡ ಫಾಂಟ್ ಗಳಿರಲ್ಲ. 2. ಮತ್ತು ಈ ಮೊಬೈಲ್ಗಳಲ್ಲಿ complex font rendering capability ಇರಲ್ಲ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (9 votes)
To prevent automated spam submissions leave this field empty.

ಆಂಡ್ರಾಯ್ಡ್ ನಲ್ಲಿ ಕನ್ನಡ.. ಸಂಪದದಲ್ಲಿನ ತೊಂದರೆ ಬಗೆಹರಿಸಿ.

ಕೆಲ ತಿಂಗಳ ಹಿಂದೆ ಒಂದು ಆಂಡ್ರಾಯ್ಡ್ ಮೊಬೈಲ್ ತಗೊಂಡೆ. ತಗೊಂಡ ಮೊದಲ ದಿನವೇ ನನಗೆ ಕೆಲವು ಆಶ್ಚರ್ಯಗಳು ಕಾದಿದ್ವು! ಅವುಗಳಲ್ಲಿ ಒಂದು ಕನ್ನಡವನ್ನು ನನ್ನ ( ಅರ್ಥಾತ್ ಆಂಡ್ರಾಯ್ಡ್) ಮೊಬೈಲ್ನಲ್ಲಿ ಓದಕ್ಕೇ ಆಗಲಿ ಅತ್ವ ಬರಿಯಕ್ಕೇ ಆಗಲಿ ಆಗಲ್ಲ ಅನ್ನುವುದು. 


ಅಂದಿನಿಂದ ಕನ್ನಡವನ್ನು ಆಂಡ್ರಾಯ್ಡ್ ನಲ್ಲಿ ನೋಡಕ್ಕೆ ಅತ್ವ ಬರಿಯಕ್ಕೇ ಯಾಕೆ ಆಗ್ತಾ ಇಲ್ಲ, ಮತ್ತು ಕನ್ನಡವನ್ನು ಆಂಡ್ರಾಯ್ಡ್ ನಲ್ಲಿ ತರುವ ಯಾವ್ಯಾವ್ ಪ್ರಯತ್ನಗಳು ನಡಿತಾ ಇದವೆ ಅನ್ನೋ ಬಗ್ಗೆ ದಿನವೂ ಒಂದು ಕಣ್ಣಿಟ್ಟಿರುತ್ತಿದ್ದೆ. ಕೆಲ ವಾರಗಳ ಹಿಂದೆ  ಒಂದು ಅಪ್ಲಿಕೇಶನ್ ಕಣ್ಣಿಗೆ ಬಿತ್ತು ಮತ್ತು ಅವತ್ತಿಂದ ನಾನು ಕನ್ನಡವನ್ನು ನನ್ನ ಮೊಬೈಲ್ನಲ್ಲಿ ಓದ್ತಾ ಇದೀನಿ ಜೊತೆಗೆ ಕನ್ನಡದಲ್ಲೇ ಕಾಮೆಣ್ಟ್ ಹಾಕ್ತಾ ಇದೀನಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

"ಗಣ"ಪ್ಪನ "ಗಳಾ"ಟೆ.

ಹಿನ್ನಲೆ:

  ಕೆಲ ದಿನಗಳ ಹಿಂದೆ ಒಂದು ಚರ್ಚೆಯಲ್ಲಿ ಭಾಗವಹಿಸಿದ್ದೆ. "ಗಣೇಶ" ಅನ್ನುವಲ್ಲಿ "ಗಣ" ಅನ್ನೋ ಪದವು ಕನ್ನಡದ ಬಹುವಚನ ಪ್ರತ್ಯಯವಾದ "ಗಳು" / "ಗಳ" ಅನ್ನೋ ಪದದಿಂದಲೇ  ಆಗಿದೆ. ಕನ್ನಡದಲ್ಲಿನ "ಗಳ" / ಗಣ ಪದವೇ ಸಂಸ್ಕೃತಕ್ಕೆ ಹೋಗಿ ನನ್ತರ "ಗಣೇಶ" ಅನ್ನೋ ಅನ್ನೋ ಪದ ಹುಟ್ಟಲು ಕಾರಣವಾಗಿದೆ ಅನ್ನುವಲ್ಲಿಂದ ಚರ್ಚೆ ಆರಂಭವಾಗಿತ್ತು.
 

ನಂತರ ಕೆಲವರು "ಗಳ" ಅನ್ನುವುದು ಒಂದು ಪ್ರತ್ಯಯ ಅಷ್ಟೆ ಮತ್ತು ಪ್ರತ್ಯಯಗಳಿಗೆ ಸ್ವತ ಅರ್ಥ ಇರೋಲ್ಲ.. ಹಾಗಾಗಿ "ಗಳ" ಅನ್ನೋ ಪದಕ್ಕೆ ಕನ್ನಡದಲ್ಲಿ ಅರ್ಥ ಇರಲು ಸಾಧ್ಯವೇ ಇಲ್ಲ, ಹಾಗಾಗಿ ಗಳ/ಗಣ ಅನ್ನುವುದು ಸಂಸ್ಕೃತವೇ ಅನ್ನುವ ವಾದ ಮುಂದಿಟ್ಟರು.
 

ನಾನೂ ಈ ಚರ್ಚೆಯಲ್ಲಿ ಭಾಗವಹಿಸಿದ ಕಾರಣ , ಕೆಲ ಪ್ರಶ್ನೆಗಳಿಗೆ ಉತ್ತರಿಸುವ ಜವಬ್ಧಾರಿ ನನ್ನ ಹೆಗಲ ಮೇಲೇರಿತ್ತು. ಅಲ್ಲದೆ ಒಂದು ಬ್ಲಾಗ್ ಬರೀದೆ ತುಂಬಾ  ದಿನಗಳಾದ ಕಾರಣ ನಾನೂ ಬರೀತೀನಿ ಅಂತ ಒಪ್ಪಿಕೊಂಡಿದ್ದೆ. ಅದಕ್ಕಾಗಿ ಈ ಬರಹ.
 ............................................................
 

ಅಲ್ಲಿನ ಕೆಲವು ಮುಖ್ಯ ಪ್ರಶ್ನೆಗಳು.

೧. ಗಳ ಅನ್ನುವುದು ಒಂದು "ಅರೆಪದ". 
೨. ಕನ್ನಡಲ್ಲಿಯೂ ಸಂಸ್ಕೃತದಂತೆ, ಪ್ರತ್ಯಯಗಳಿಗೆ ಸ್ವತಹ ಅರ್ಥ ಇರುವುದಿಲ್ಲ. ಬೇರೆ ಪದಗಳ  ಜೊತೆ ಸೇರಿ ಅವು ಅರ್ಥ ಕೊಡುತ್ತವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಂಸ್ಕೃತಿ - ಕನ್ನಡತೆ - Culture

ನಾನು ಅಗೊಮ್ಮೆ ಈಗೊಮ್ಮೆ ಸಂಸ್ಕೃತಿ ,ಹಿಂದೂ ಧರ್ಮ ಇತ್ಯಾದಿಗಳ ಬಗ್ಗೆ ನೆಟ್ ನಲ್ಲಿ , ವಿಕಿಯಲ್ಲಿ ನೋಡ್ತಾ ಇರ್ತೀನಿ. ನಾನು ಗಮನಿಸಿದಂತೆ ನಮ್ಮ ಹಲವರಿಗೆ ಈ ಸಂಸ್ಕೃತಿ ,ಹಿಂದೂ ಧರ್ಮ ಇವುಗಳ ಬಗ್ಗೆ ತಿಳಿವಳಿಕೆ ತುಂಬಾ ಸೀಮಿತ.  ವೈದಿಕ ಮತವಶ್ಟೇ ಹಿಂದೂ ಧರ್ಮ ಅನ್ತ ತಿಳಿದುಕೊಂಡೆ ವಿಕಿಯಲ್ಲಿ ಬರಹವಿದೆ. ಅಲ್ಲಿ ವೈದಿಕ ಮತ ಗ್ರಂಥಗಳು ಇಡೀ ಎಲ್ಲ ಹಿನ್ದುಗಳಿಗೆ ಆದರ್ಶ ಅನ್ನೋ ರೀತಿಯ ವ್ಯಾಖ್ಯಾನ ಕಂಡು ಅವರ ಬಗ್ಗೆ ಮರುಕ ಉಂಟಾಗಿದೆ.


 


ಇಲ್ಲಿಯೂ ಸಂಪದದಲ್ಲಿಯೂ ಅನೇಕ ಬಾರಿ ನೋಡಿದ್ದೇನೆ ವೈದಿಕದೊಳಗಣ ೪ ವರ್ಣಗಳ ಒಳಗೆ ಎಲ್ಲ ಹಿನ್ಧೂಗಳನ್ನು ಬಲಾತ್ಕಾರವಾಗಿ FIT ಮಾಡುವ ಪ್ರತಿಕ್ರಿಯೆಗಳೂ ಆಗಾಗ ಕಾಣ್ತ ಇರ್ತವೆ. ಎಲ್ಲರೂ ಈ ವರ್ಣಾಶ್ರಮ ಧರ್ಮದೊಳಗೆ ಬರ್ತಾರೆ, ಪಾಲಿಸುತ್ತಾರೆ ಅನ್ನೋ ಅವಿವೇಕ.


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - savithru ರವರ ಬ್ಲಾಗ್