ಕನ್ನಡ ಮತ್ತು ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್!

0

ಅನುಪ್ ಕುಮಾರ್ ಅವರ ಈ ಬ್ಲಾಗು.
ನನಗೆ ನನ್ನ ಹಳೆಯ ಅನುಭವವನ್ನು ಇಲ್ಲಿ ಬರೆಯುವಂತೆ ಮಾಡಿತು!

ಪೀಠಿಕೆ ::

ನನ್ನ ಪಾಸ್ಪೋರ್ಟ್ ನಲ್ಲಿ ಕನ್ನಡದ ಸಹಿ ಇದೆ. ಪ್ಯಾನ್ ಕಾರ್ಡ್ ನಲ್ಲೂ ಕನ್ನಡದ ಸಹಿ ಇದೆ. ನನ್ನ ಎಲ್ಲ ಬ್ಯಾಂಕ್ ಗಳ ಉಳಿತಾಯ ಖಾತೆ ಗಳಲ್ಲೂ ಕನ್ನಡ ದ ಸಹಿ ಇದೆ.

ವಿಷಯ ::

ಒಮ್ಮೆ ಸ್ಟ್ಯಾಂಡರ್ಡ್ ಚಾರ್ಟೆಡ್ ಬ್ಯಾಂಕ್ ನ ಒಬ್ಳು ಕನ್ಯಾ ಮಣಿ ಹಿಂದೆ ಬಿದ್ದು ಕ್ರೆಡಿಟ್ ಕಾರ್ಡ್ (ಆ ತರ ಒಂದು ಕಾರ್ಡ್ ..ರೆಡಿ ಲೋನ್ ಸೌಲಭ್ಯ ಇರೋ ಒಂದು ಕಾರ್ಡ್ ) ತಗಳಕ್ಕೆ ಒತ್ತಾಯ ಮಾಡ್ತಾ ಇದ್ಲು. ಅವ್ಳು ತಿಂಗಳಾನುಗಟ್ಟಲೆ ಸತಾಯಿಸೋದು ನೋಡಿ ...ಪಾಪ ಅಂದುಕೊಂಡು ... ಅದರಲ್ಲಿನ ಕೆಲವು ಫೀಚರ್ಸ್ ಗೆ ಮರುಳಾಗಿ ಒಪ್ಪಿಕೊಂಡೆ. ಡಾಕ್ಯುಮೆಂಟ್ಸ್ ಸಹಾ ಕೊಟ್ಟೆ....ಕನ್ನಡದಲ್ಲಿ ರುಜು ಹಾಕಿ.

ನನ್ನ ಮಕ್ಳು !.... ಇಂಗ್ಲೀಶಿನಾಗಿ ಸಹಿ ಹಾಕಕ್ಕೆ ಹೇಳಿ ಕಳಿಸಿದ್ರು!. ಆಗಲ್ಲ ಅಂದಿದ್ದಕ್ಕೆ "ನಾನು ಬ್ಯಾಂಕಿನ ಎಲ್ಲ ನೀತಿ ನಿಯಮಗಳಿಗೆ ಒಪ್ಪಿಕೊಂಡಿದ್ದೇನೆ , ಅದನ್ನು ಇಂಗ್ಲೀಶ್ ಬಲ್ಲವರಿಂದ ಓದಿ ತಿಳ್ಕೊಂಡಿದ್ದೇನೆ" ಅನ್ನೋ ಅರ್ಥ ಬರೋ ರೀತಿಯ ಒಂದು ಡಿಕ್ಲರೇಶನ್ ಫಾರ್ಮ್ ಗೆ ಸಹಿ ಮಾಡಕ್ಕೆ ಒತ್ತಾಯ ಮಾಡಿದ್ರು. ನನ್ನ ಮತ್ತು ಅಲ್ಲಿನ ಬ್ರಾಂಚ್ ಮ್ಯಾನೇಜರ್ ಜೊತೆ ಸಣ್ಣ ಪುಟ್ಟ ವಾದಾತಗಳು / ಚರ್ಚೆಗಳು ನಡೆದವು.

ಕೊನೆಗೆ ನಾನು ಆ ಫಾರ್ಮ್ ಗೆ ಸಹಿ ಹಾಕಲ್ಲ... ನಿಮ್ಮ ಬ್ಯಾಂಕ್ ಸಹವಾಸವೇ ಬೇಡ ಅಂದೇ. ವಿಷಯ ಮುಗೀತು!

ಪಾಪ ಆ ಹುಡುಗಿ ಒಂದು ತಿಂಗಳಿಗೂ ಹೆಚ್ಚು ನನ್ನ ಹಿಂದೆ ಬಿದ್ದು ಆಕೆ ಸಮಯ ಅಲ್ಲದೆ ನನ್ನ ಹೊತ್ತನ್ನೂ ಹಾಳು ಮಾಡಿದಳು.

ಕನ್ನಡದ ಸಹೀನೆ ಒಪ್ಪೋಲ್ಲ.... ಅಂತಾದ್ರಾಗೆ ಕನ್ನಡದಲ್ಲಿ ವಿಷಯ ಬರೆದರೆ ಒಪ್ಕೊತಾರಾ?!

ಸವಿತೃ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹಾಗೆ ನೋಡಿದ್ರೆ ಸಹಿಗೆ ಭಾಷೆಯಿದೆಯೇ? ಅದು ಒಂದು pattern ಅಲ್ಲವೇ?
*ಅಶೋಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುಱುಱಾಜ
www.kannadaguru.blogspot.com

ಅದೆಲ್ಲಾ ಬ್ಯಾ೦ಕಿನವರ ನಾಟಕ ಸರ್,ಅವರಿಗೆ ಕನ್ನಡದ ಬಗ್ಗೆ ತಾತ್ಸಾರ ಅಷ್ಟೇ,ನಮ್ಮ ಮಾಜಿ ಪ್ರಧಾನಿ ಪಿ.ವಿ ನರಸಿ೦ಹರಾವ್ ಸಹಿ ಮಾಡುತಿದ್ದಿದ್ದೇ, ತೆಲುಗಿನಲ್ಲಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗಾದ ಅನುಭವ ಕೇಳಿ ಖೇದವಾಯಿತು.

>>ಕೊನೆಗೆ ನಾನು ಆ ಫಾರ್ಮ್ ಗೆ ಸಹಿ ಹಾಕಲ್ಲ... ನಿಮ್ಮ ಬ್ಯಾಂಕ್ ಸಹವಾಸವೇ ಬೇಡ ಅಂದೇ. ವಿಷಯ ಮುಗೀತು!
ಕ್ಷಮಿಸಿ, ನೀವು ಇಲ್ಲಿ ಗಡಿಬಿಡಿ ಮಾಡಿದಿರೇನೋ ಎ೦ದು ಅನ್ನಿಸುತ್ತಿದೆ.. ಸ್ನೇಹಿತರನ್ನು ಅಥವಾ ಉನ್ನತ ಅಧಿಕಾರಿಯನ್ನು ಸ೦ಪರ್ಕಿಸಿ ಗೆಲ್ಲಬಹುದಾಗಿತ್ತು ಎ೦ದು ಅನಿಸಲಿಲ್ಲವಾ ?

ಯುಗದ ಕವಿ ಗು೦ಡಪ್ಪನವರ ಓ೦ದು ಸಾಲು ಯಾಕೋ ನೆನಪಾಗುತ್ತಿದೆ..

ಫಲವೆನು ಹೆಣಗಾಡಿ ಹೋರಾಡಿ ಧರೆಯೊಳಗೆ
ಸಲಿಸದೂ೦ದನುಮೊ೦ದನು೦ ದೈವ ಬಿಡದು
ಹೊಲಸೆಲ್ಲವೆಲ್ಲಪಾಳ್, ಬಾಳ್ಗೆ ತಳಹದಿಯಿಲ್ಲ
ಗಲಿಬಿಲಿಯಿದೆನಬೇಡ - ಮ೦ಕುತಿಮ್ಮ

ಮರಳಿ ಯತ್ನವ ಮಾಡುವಿರೆ೦ದು ಆಶಿಸುವೆ..

ಧನ್ಯವಾದ,
ರಘು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.