ಉಬುಂಟು ನಲ್ಲಿ ನನ್ನ ಮೊದಲ ಬ್ಲಾಗು!

0

ಇದು ಲಿನಕ್ಸ್ (ಉಬುಂಟು)  ಉಪಯೋಗಿಸಿ ಬರೆದ ಮೊದಲ ಬ್ಲಾಗು. :)

ಇನ್ಸ್ಟಾಲ್ ಮಾಡೋದು , ಬಳಸೋದಂತೂ ತುಂಬ ಸರಳ.

>ವಿಸ್ಟಾದಲ್ಲಿ ಲಾಗಿನ್ ಆದೆ
>ಉಬುಂಟು CD ಹಾಕಿದೆ.
>೩ ಆಯ್ಕೆಗಳು ಬಂದವು
>ವಿಂಡೋಸ್ ಒಳಗೆನೆ ಉಬುಂಟು ಇನ್ಸ್ಟಾಲ್ ಮಾಡೋ (೨ ನೆ) ಆಯ್ಕೆ ಯನ್ನು ತೆಗೆದುಕೊಂಡೆ
>>ಹುಷಾರಾಗಿ ಇನ್ಸ್ಟಾಲ್ ಮಾಡೋಕ್ಕೆ  D ಡ್ರೈವ್ ಅನ್ನು ( ವಿಸ್ಟಾ C ನಲ್ಲಿದೆ) ಆಯ್ಕೆ ಮಾಡಿದೆ.
> >10GB ಡೀಫಾಲ್ಟ್  ಗಾತ್ರ ಇತ್ತು. ಅದನ್ನು ಹಾಗೆ ಬಿಟ್ಟೆ.
>>ಉಳಿದಂತೆ username ಮತ್ತು ಪಾಸ್ವರ್ಡ್ ಜಾಗಗಳಲ್ಲಿ ಅವನ್ನು ಕೊಟ್ಟೆ.
>ಉಳಿದಂತೆ next next  ಅನ್ಕೊತಾ ಹೋದೆ  :)

>ಇದೆಲ್ಲ ಆದಮೇಲೆ restart ಮಾಡಕ್ಕೆ ಕೇಳ್ತು. CD ತೆಗೆದು restart ಮಾಡಿದೆ.
>ವಿಸ್ಟಾ ಮತ್ತು ಉಬುಂಟು ಆಯ್ಜೆ ಮಾಡಲು ಎರಡು ಆಯ್ಕೆ ತೋರಿಸ್ತು. ಉಬುಂಟು ಆಯ್ಕೆ ಮಾಡಿದೆ.
>ನಂತರ ತಾನೆ ತಾನಾಗಿ ಉಬುಂಟು ಸ್ಥಾಪನೆ ಆಯ್ತು.

ಆದರೆ ಸಂಪದದಲ್ಲಿ ಏನೂ ಕಾಂತ ಇಲ್ಲ.....ಕನ್ನಡ ನಾಪತ್ತೆ!!! :(

ಈ ಉಬುಂಟು ೮.೧೦ ನಲ್ಲಿ ಕನ್ನಡ ಫಾಂಟ್ಸ್ ಇಲ್ಲ. ಸಂಪದ ಸರಿಯಾಗಿ ಕಾಣುತ್ತ ಇರಲಿಲ್ಲ.   
ನಂತರ ಗೂಗಲಿಸಿದಾಗ ವಿಕಿ ನಲ್ಲಿ ಕನ್ನಡ ಫಾಂಟ್ ಇನ್ಸ್ಟಾಲ್ ಮಾಡಕ್ಕೆ ಲಿಂಕ್ ಸಿಕ್ತು.

>ಟರ್ಮಿನಲ್ ಓಪನ್ ಮಾಡಿಕೊಂಡು ಅಲ್ಲಿಂದ ಈ ಕೋಡ್ ಟೈಪ್ ಮಾಡಿದೆ.

sudo apt-get install ttf-kannada-fonts

ಕನ್ನಡ ಫಾಂಟ್ಸ್ ಡೌನ್ಲೋಡ್ ಆದವು.

ಈಗ ಸಂಪದ ಓಪನ್ ಮಾಡಿದೆ. ಸುಪರ್!... ಕನ್ನಡ ಓದಲು ಸಾಧ್ಯವಾಯ್ತು.

ಸರಿ ಒಮ್ಮೆ ಓದು ಬ್ಲಾಗ್ ಬರೀಬೇಕೆನಿಸಿತು. googlekannada.com ನಿಂದ ಕನ್ನಡ ಟೈಪ್ ಮಾಡಿ ಸಂಪದದಲ್ಲಿ  ಪೇಸ್ಟ್  ಮಾಡ್ತಾ ಇದ್ದೀನಿ .

ನನ್ನ ಈ ಬಗೆಗಿನ ಚರ್ಚೆಗೆ / ಸಂದೇಶಕ್ಕೆ ಸ್ಪಂದಿಸಿ ಹೆಚ್ಚಿನ ವಿವರಣೆ ಕೊಟ್ಟ ಎಲ್ಲರಿಗೂ ನನ್ನ ವಂದನೆಗಳು.

ಲಿನಕ್ಸ್ ನಂತ ಓಪನ್ ಸೋರ್ಸ್ OS ಬಳಸಲು / ಉತ್ತೇಜಿಸಲು ನಿಂತಿರುವ ಎಲ್ಲ ಸಂಪದಿಗರಿಗೆ ಈ ಬ್ಲಾಗ್ ಅರ್ಪಣೆ.

ಜೈ ಉಬುಂಟು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಭಿನಂದನೆಗಳು.
ಹಾಗೆಯೇ scim, scim-m17 ಮತ್ತು m17n-db ಅನುಸ್ಥಾಪನೆ ಮಾಡಿಕೊಳ್ಳಿ.ಆಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಧೀಂದ್ರ ಅವ್ರೆ

ನಿಮ್ಮ ಸಲಹೆಗೆ ನನ್ನೀ. ಶ್ರುತಿಯವರಿಗೂ ಸಹಾ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಧೀಂದ್ರ ಹೇಳಿದಂತೆ scim, scim-m17n, scim-db ಹಾಕಿಕೊಳ್ಳಿ
ಅಥವಾ Language support ನಲ್ಲಿ ಕನ್ನಡ ಸೆಲೆಕ್ಟ್ ಮಾಡಿಕೊಳ್ಳಿ. ನೇರವಾಗಿ ಬರೆಯಬಹುದು.
ಉಬುಂಟು ಜೊತೆಗಿನ ನಿಮ್ಮ ನಂಟು ಮುಂದುವರೆಯಲಿ. ನಿಮ್ಮ ಅನುಭವಗಳನ್ನು ಸಂಪದದಲ್ಲಿ ಹಂಚಿಕೊಳ್ಳಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಲಿನಕ್ಸ್ ನಲ್ಲಿ ಇನ್ನೂ ಹೆಚ್ಚು ಪ್ರಯತ್ನಿಸಲು ಹೆಚ್ಚಿನ ಮಾಹಿತಿಗೆ ಶಿವು ಅವರ ಲಿನಕ್ಸಾಯಣ ನೋಡಿ.
http://sampada.net/%E0%B2%AC%E0%B3%8D%E0%B2%B2%E0%B2%BE%E0%B2%97%E0%B3%8....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.