ನನ್ನೊಬ್ಬನನ್ನೇ ಬಿಟ್ಟು,,,,,

4

ಅವಳು ಹೋಗಿಯೇ ಬಿಟ್ಟಳೆಂದರೆ ನಂಬುವುದೇ ಕಷ್ಟ
ದೇವರಿಗೂ ಅವಳೆಂದರೆ ಬಲು ಇಷ್ಟ

ತರಕಾರಿ ಮಾರುಕಟ್ಟೆಗೂ ಜೊತೆ ಜೊತೆಯಲಿ
ಆಗಿಲ್ಲ ಅವಳ ಮುಖದಲ್ಲಿ ಗಲಿಬಿಲಿ

ಊರೆಲ್ಲಾ ಸುತ್ತಲು ನಾನಿರಬೇಕು ಪಕ್ಕ
ರಸ್ತೆ ದಾಟುವಾಗ ನೋಡುವುದೇ ಇಲ್ಲ ಅಕ್ಕ ಪಕ್ಕ

ಜನ ಜಂಗುಳಿಯೆಂದರೆ ಮುಖ ಕಿವಿಚುತ್ತಾ
ಖುಷಿಯಿಂದ ಪ್ರಕ್ರುತಿ ಸೌಂದರ್ಯವ ಆಸ್ವಾದಿಸುತ್ತಾ

ನಡೆವಳೊಬ್ಬಳೇ ಬಿರುಗಾಳಿಯಂತೆ
ಎಲ್ಲಿ ಬಿದ್ದಾಳೆಂದು ನನಗವಳದೇ ಚಿಂತೆ

ಕೈಹಿಡಿದೇ ಕರೆದೊಯ್ಯಬೇಕು ಎಲ್ಲಿಗೂ
ಹೋಗಿಬಿಟ್ಟಳೇ ನನ್ನೊಬ್ಬನನ್ನೇ ಬಿಟ್ಟು ಕೊನೆಗೂ

ಕವನ

ಸೀತ ಆರ್. ಮೊರಬ್

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೀತ ಮೇಡಂ ಮಯೂರ ದಲ್ಲಿ ಹೆಚೆಸ್ವಿ ಕವನ ಇದೆ ನಿಮ್ಮ ಕವನ ಅದನ್ನು ಬಹಳ ಹೋಲುತ್ತೆ ತಪ್ಪು ತಿಳಿಯಬೇಡಿ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉಮೇಶ್...
ನನಗೆ ಬಹಳವಾಗಿ ಕಾಡಿದ ಸಾಲುಗಳು ಎಲ್ಲಿ ಓದಿದ್ದು ನೆನಪಿಲ್ಲ, ನನಗೆ (ನನ್ನ ಜೀವನಕ್ಕೆ) ತುಂಬಾ ಹತ್ತಿರವಾದ ಕವನ. ನಾನು ಬಿದ್ದು ಕಾಲುಮುರ್ಕೊಂಡಾಗಿನಿಂದ ನಮ್ಮನೆಯವರು ತುಂಬಾ ಕೇರ್ ತೊಗೊಳ್ತಾರ್ರೀ.
ಇದರಲ್ಲಿ ತಪ್ಪು ತಿಳಿಯೋದೇನು ಬಂತ್ರೀ?

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಿ ಹ್ಹಿ ಹ್ಹೀ...ಎಲ್ ಬಿದ್ರಿ................

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೈಸೂರಿನಲ್ಲಿ ರೀ ಗಣೇಶ ಟಾಕೀಸ್ ಎದ್ರುಗೆ.:-D

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.