ಯಾರಿಟ್ಟರೀ ಚುಕ್ಕಿ ? ಯಾಕಿಟ್ಟರೀ ಚುಕ್ಕಿ? .....(ಕ.ಕ.ಕ-೩)

4.666665

ಮೊದಲು ಚುಕ್ಕಿ ವಿಷಯ . ನಂತರ ಕಕಕ ವಿಷಯ.

ನನ್ನ ಸಹೋದ್ಯೋಗಿ ಸುದರ್ಶನ್ ( ಅವ್ನೂ ನನ್ನ ಹಾಗೇ ಕಂಪ್ಯೂಟರ್ ಪ್ರೊಗ್ರ್ಯಾಮರ್ ) ಗಣಕಯಂತ್ರದ ಮುಂದೆ ತೆರೆಯ ಮೇಲೆ ಕಣ್ಣು ಕೀಲಿಸಿ ಕುಳಿತಿದ್ದ. ಏನ್ರೀ ಸಮಾಚಾರ ? ಅಂದೆ.

ಅಲ್ಲಾ , ಈ ಫಾಕ್ಸ್ ಪ್ರೋ ಪ್ರೊಗ್ರಾಂ ನಲ್ಲಿ ಯಾಕೆ ಹೀಗೆ ಚುಕ್ಕೆ ಇಟ್ಟು ಕಮೆಂಟ್ ಔಟ್ ಮಾಡಿದ್ದಾರೇ ಅಂತ ... ತಲೆ ಕೆಡಿಸಿಕೊಳ್ತಾ ಇದ್ದೀನೀ... ಯಾರಿಟ್ಟರೀ ಚುಕ್ಕಿ ? ಯಾಕಿಟ್ಟರೀ ಚುಕ್ಕಿ? ..... ಅಂತ ... ಹ್ಹಿ ಹ್ಹಿ ಅಂತ ಹಲ್ಲು ಕಿರಿದ .

ವಿವರಣೆ....
ಯಾವದೇ ಕಂಪ್ಯುಟರ್ ಪ್ರೊಗ್ರಾಮಿನಲ್ಲಿ ಬರೆದ ಪ್ರೊಗ್ರಾಂನ ಭಾಗವನ್ನು ನಿಷ್ಕ್ರಿಯಗೊಳಿಸಲು ಆ ಭಾಗದ ಮೊದಲಲ್ಲಿ ಮತ್ತು ಕೊನೆಯಲ್ಲಿ ಕೆಲವು ಚಿಹ್ನೆಗಳನ್ನು ಇಡುತ್ತಾರೆ.
C ಪ್ರೊಗ್ರಾಂ ನಲ್ಲಿ ನಿಷ್ಕ್ರಿಯಗೊಳಿಸಿದ ಭಾಗದ ಪ್ರಾರಂಭವನ್ನು "/*" ಸೂಚಿಸಿದರೆ ಅಂತ್ಯವನ್ನು */
ಸೂಚಿಸುತ್ತದೆ.
ಫಾಕ್ಸ್ ಪ್ರೋ ಪ್ರೊಗ್ರಾಂ ನಲ್ಲಿ ವಾಕ್ಯಗಳ ಮೊದಲಲ್ಲಿ * ಇದ್ದರೆ ಆ ವಾಕ್ಯವು ನಿಷ್ಕ್ರಿಯವಾಗುವದು .
C++ ನಲ್ಲಿ -- ಉಪಯೋಗಿಸುವರು.
ಹೀಗೆಯೇ ಬೇರೇ ಬೇರೇ ಪ್ರೊಗ್ರಾಮ್ಮಿಂಗ್ ಭಾಷೆಗಳಲ್ಲಿ ಏನಾದರೊಂದು ವ್ಯವಸ್ಥೆ ಇರುವದು . ಪದ್ಧತಿ ಬೇರೆ ಇರಬಹುದು.

ಇಂಥ ವಾಕ್ಯ / ಭಾಗಗಳನ್ನು ಕಂಪ್ಯೂಟರ್ ಪರಿಗಣಿಸುವದೇ ಇಲ್ಲ .
ಈ ವ್ಯವಸ್ಥೆಯನ್ನು ಈ ಪ್ರೊಗ್ರಾಮ್ ನ ಉದ್ದೇಶ , ಬದಲಾವಣೆಯನ್ನು ಮಾಡಿದ್ದು ಏಕೆ ? ಮಾಡಿದವರು ಯಾರು? ಯಾವಾಗ? ಇತ್ಯಾದಿ ಟಿಪ್ಪಣಿ(comments)ಗಳನ್ನು ಬರೆಯಲು ಉಪಯೋಗಿಸುವರು. ಇದು ಪ್ರೊಗ್ರಾಂ ಅನ್ನು ನಂತರ ಅರ್ಥಮಾಡಿಕೊಳ್ಳಲು , ತಿದ್ದಲು , ಸುಧಾರಿಸಲು , ಬರದವನಿಗೂ ( ಅವನೂ ತಾನು ಮಾಡಿದ್ದನ್ನು ಎಲ್ಲ ಹೇಗೆ ನೆನಪಿನಲ್ಲಿಟ್ಟುಕೊಳ್ಳಲು ಸಾಧ್ಯ ? ಮರೆಯುತ್ತಾನೆ ಅಲ್ಲವೆ ?) ಇತರರಿಗೂ ಸಹಾಯಕವಾಗುತ್ತದೆ.

ಹೀಗೆ ಈ ಪ್ರೊಗ್ರಾಮ್ ನಲ್ಲಿ ಚುಕ್ಕೆಗಳನ್ನು ಇಟ್ಟು comment out ಮಾಡಿದ್ದರು. ಏಕೆ .. ಇತ್ಯಾದಿ ವಿವರ ಇರಲಿಲ್ಲ .ಈ ಪುಣ್ಯಾತ್ಮ ಅದನ್ನು ಅರ್ಥ ಮಾಡಿಕೊಳ್ಳಲು ಒದ್ದಾಡುತ್ತಿದ್ದ . 'ಯಾಕಿಟ್ಟರೀ ಚುಕ್ಕಿ...' ಸಿನೆಮಾ ಹಾಡನ್ನು ಎಂದು ಹಾಡುತ್ತ ತಲೆ ಚಚ್ಚಿಕೊಳ್ಳುತ್ತಿದ್ದ.

ಇಲ್ಲಿಗೆ 'ಕಕಕ'ದ ಅಂದರೆ ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆಯ ಮೂರನೇ ಭಾಗವು ಮುಗಿದುದು.

ಅಥs ತೃತೀಯೋ ಭಾಗಂ ಸಮಾಪ್ತಂ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.