ಮನುಷ್ಯ ದೇವರ ಸೃಷ್ಟಿ ಅಲ್ಲ

0

ಜೇನ್ ಪಾಲ್ ಸಾರ್ತ್ರ್ ಫ್ರಾನ್ಸಿನಲ್ಲಿ ಹುಟ್ಟಿದ್ದು . ಅವನೊಬ್ಬ ತತ್ವಜ್ಞಾನಿ , ವಿಚಾರವಾದಿ , ಕಾದಂಬರಿಕಾರ , ನಾಟಕಕಾರ , ಸಾಹಿತ್ಯ ವಿಮರ್ಶಕ, ಜೀವನ ಚರಿತ್ರಕಾರ , ಪ್ರಬಂಧಕಾರ , ಪತ್ರಕರ್ತ , ಮಾರ್ಕ್ಸವಾದಿ , ಪ್ರಮುಖ ರಾಜಕಾರಣಿ , ಮತ್ತು ಫ್ರೆಂಚ್ ಅಸ್ತಿತ್ವವಾದದ ಜನಕ.

ಅವನು ಪ್ರತಿಪಾದಿಸಿದ ಅಸ್ತಿತ್ವವಾದದ ತಿರುಳು ಹೀಗಿದೆ-
ಮನುಷ್ಯ ದೇವರ ಸೃಷ್ಟಿ ಅಲ್ಲ; ಮನುಷ್ಯ ಮೊದಲೇ ಏನೋ ಆಗಿ ಹುಟ್ಟಿರುವದಿಲ್ಲ .ಮೊದಲು ಬರೇ ಇರುತ್ತಾನೆ ನಂತರ ತನ್ನ ಸ್ವತಂತ್ರ ನಿಶ್ಚಯ ಮತ್ತು ಆಯ್ಕೆ ಗಳ ಮೂಲಕ ಏನೋ ಆಗುತ್ತಾನೆ. ಯಾವ ವ್ಯಕ್ತಿಗೂ ಪೂರ್ವ ನಿಶ್ಚಿತ ಗುಣದೋಷಗಳಿಲ್ಲ. ಅವುಗಳಿಗೆ ಪರಿಸರ ಕಾರಣವೆಂಬ ವಾದದಲ್ಲೂ ಹುರುಳಿಲ್ಲ. ನಿಜವೆಂದರೆ ಅದಕ್ಕೆಲ್ಲಾ ಆ ಮನುಷ್ಯನೇ ಸ್ವತ: ಹೊಣೆಗಾರ. ತಾನು ಏನಾಗಬೇಕೆಂದು ನಿಶ್ಚಯಿಸುವ ಹೊಣೆ ಸಂಪೂರ್‍ಣ ಅವನಿಗೇ ಸೇರಿದ್ದು. ನಿಶ್ಚಯಗಳಿಗೆ , ಆಯ್ಕೆಗೆ ಬೇಕಾದ ಸ್ವಾತಂತ್ರ್ಯ ಕೂಡ ಅವನೊಳಗೇ ಇದೆ. .

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮನುಷ್ಯ ಬರೇ ಇರುತ್ತಾನೆ = ಹೀಗಂದ್ರೆ ಏನರ್ಥ ಸಾರ್.

ದೇವರನ್ನು ಸೃಷ್ಟಿಸಿದವೆನೇ ಮಾನವ. ಮಾನವನನ್ನು ಸೃಷ್ಟಿಸಿದವ ದೇವನಲ್ಲ. ಏಕೆಂದರೆ ದೇವ ಯಾರು ಎನ್ನುವುದೇ ತಿಳಿದಿಲ್ಲ. ಹಾಗೆ ತಿಳಿದವರು (ಮೋಸಸ್, ಏಸು, ಪೈಗಂಬರ್, ಶಂಕರ, ರಾಮಕೃಷ್ಣ, ವಿವೇಕಾನಂದ ಇತ್ಯಾದಿ) ಅದು ಏನೆಂದು ತಿಳಿಸಲಿಲ್ಲ. ಅದು ಅನುಭವ ವೇದ್ಯ ಮಾತ್ರವಂತೆ.

ಮಾನವನಿಗೆ ಮೊದಲು ಏನು? = ಎನ್ನುವುದರ ಬಗ್ಗೆ ಇಸ್ಮಾಯಿಲರ ಒಂದು ಬರವಣಿಗೆ ನೋಡಿದ್ದೀರಲ್ಲ. ಬಹಳ ಚೆನ್ನಾಗಿದೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
[:http://asraya.net]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನುಷ್ಯ ಬರೇ ಇರುತ್ತಾನೆ ಎಂಬುದು ಬಹುಶ: 'just exists' ಎಂಬುವುದರ ಅಷ್ಟು ಸರಿಯಲ್ಲದ ಅನುವಾದ ಇರಬಹುದು . ಅದಕ್ಕೇ ಅದನ್ನು existentialism - ಅಸ್ತಿತ್ವವಾದ ಅಂದಿರಬಹುದು . ಈ exist ಪದವನ್ನು ಉಳಿಸಿಕೊಳ್ಳಲು ಈ ರೀತಿ ಅನುವಾದ ಮಾಡಿರಬಹುದು . ( ಇದು ಕೀನ್ ಎಂಬ ನಾಟಕದ ಅನುವಾದ ಪುಸ್ತಕದಿಂದ ಆಯ್ದ ಸಾಲುಗಳು - ಚಿಂತನಯೋಗ್ಯ ಎನಿಸಿದ್ದರಿಂದ ಮತ್ತು existentialism ಬಗ್ಗೆ ಕೊಂಚವಾದರೂ ಇತರರಿಗೆ ತಿಳಿಯಲಿ ಸಂಪದಕ್ಕೆ ಕಳಿಸಿದ್ದೆ.)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.