ಈಗಷ್ಟೆ ನೋಡಿದ್ದು!

0
ಏನೋ ಕೆಲಸದ ನಿಮಿತ್ತ ಆ ದಾರಿಯಲ್ಲಿ ನಡೆದು ಸಾಗುತ್ತಿದ್ದೆ. ದೂರದಲ್ಲಿ ಜನರಗುಂಪೊಂದು ಸೇರಿರುವುದು ನನ್ನ ಕಣ್ಣಿಗೆ ಬಿತ್ತು. ಅದರ ಹತ್ತಿರ ಸಾಗುತ್ತಿದ್ದಂತೆ "ಕನ್ನಡ ವಿರೋಧಿಗಳಿಗೆ ಧಿಕ್ಕಾರ,ಕನ್ನಡ ವಿರೋಧಿ ವರ್ತಕರಿಗೆ ಧಿಕ್ಕಾರ,ಕನ್ನಡ ವಿರೊಧಿ ಕಂಪನಿಗಳಿಗೆ ಧಿಕ್ಕಾರ" ಎನ್ನುತ್ತಿರುವುದು ಸ್ಪಷ್ಟವಾಗಿ ಕೇಳುತ್ತಿತ್ತು. ಆ ಗುಂಪು ಸೇರಿರುವುದು hutch ಆಫಿಸ್ ನ ಎದಿರು, ಅದರ ಬಾಗಿಲು ಮುಚ್ಹಿತ್ತು ಅನ್ನುವುದಕ್ಕಿಂತ ಮುಚ್ಹಿಸಿದ್ದರು ಎನ್ನಬಹುದು. ಇದು hutch ಅವರ ವಿರುದ್ಧ ಎಂಬುದು ಎಲ್ಲರಿಗೂ ಅರ್ಥವಾಗುತ್ತಿತ್ತು. ನಾನು'ಪವನಜ' ಅವರ 'ಹಚ್ ಅವರ ಹುಚ್ಹು ಬಿಡಿಸಿ' ಲೇಖನವನ್ನು ಸ್ವಲ್ಪ ಓದಿದ್ದರಿಂದ ತಲವಾರ್ ಅವರು ಕ್ಷಮೆ ಕೇಳಬೇಕೆಂದು ಹೇಳಿ ಸ್ಟ್ರೈಕ್ ಮಾಡುತ್ತಿರಬೇಕು ಅಂದುಕೊಂಡೆ. ಆದರೂ ಅಲ್ಲಿ ನೆರೆದವರು ಏನೆನ್ನಬಹುದು ಎಂಬುದನ್ನು ತಿಳಿಯಲು ಪಕ್ಕದಲ್ಲಿ ನಿಂತವರಲ್ಲಿ ಏನಕ್ಕಾಗಿ ಇಲ್ಲಿ ಸ್ಟ್ರ್ರೈಕ್ ನಡೀತಿದೆ ಅಂತ ಕೇಳಿದೆ. ಆಗ ಆತ "mam i dont know kannada" ಎಂದು ಕೊಂಕಿನ ಇಂಗ್ಲಿಷಿನಲ್ಲಿ ಹೇಳಿದ. ಇಲ್ಲಿ ಸೇರಿರುವವರಲ್ಲಿ, ಒಂದಿಷ್ಟು ಜನ ಧಿಕ್ಕರಿಸುತ್ತಿದ್ದವರ ಹೊರತಾಗಿ ಕನ್ನಡವರನ್ನು ಹುಡುಕುವುದೇ ಕಷ್ಟವಾಗಿತ್ತು. ಇದು ಕನ್ನಡನೆಲದಲ್ಲಿ ಕನ್ನಡವಿರೋಧಿ ನೀತಿಯ ವಿರುದ್ದ ವಿರೋಧಿಸುತ್ತಿದ್ದಲ್ಲಿ ನನಗೆ ಕಂಡ ದ್ರುಶ್ಯ . ಇದು ಕನ್ನಡನೆಲದಲ್ಲಿ ಕಾಣುವ ಕನ್ನಡದ ಸ್ಥಿತಿ. ವಿಪರ್ಯಾಸವೆಂದರೆ ಕನ್ನಡಿಗರೇ ನಾವು ಕನ್ನಡದವರೆಂದು ಹೇಳಿಕೊಳ್ಳಲು ಇಷ್ಟಪಡದಿರುವುದು. (ನನಗೆ ಈಗೂ ತಿಳಿದಿಲ್ಲ ತಲವಾರ್ ಅವರು ಏನೆಂದಿದ್ದಾರೆ ಎಂಬುದು... ಏಕೆಂದರೆ ಪವನಜ ಅವರ ಲೇಖನದ ಜೊತೆಗೆ attach ಮಾಡಿರೋ ಫೇಜ್ display ಆಗ್ತಾ ಇಲ್ಲಾ)
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ತಲವಾರ್ ಅವರು ಜಯನಗರದ ಹಚ್ ಅಂಗಡಿಯ ಮುಖ್ಯಸ್ಥರು. ಅವರ ಹಚ್ ಅಂಗಡಿಗೆ ಹೋದ ಕನ್ನಡಿಗರೊಬ್ಬರನ್ನು ಇಂಗ್ಲೀಶ್‌ನಲ್ಲಿ ಮಾತನಾಡಿ ಇಲ್ಲದಿದ್ದಲ್ಲಿ ಇಲ್ಲಿಂದ ಹೊರಗೆ ಹೋಗಿ ಎಂದು ಅವರು ಹೇಳಿದ್ದರು. ಅದೇಕೋ thatskannadaದಲ್ಲಿಯ ಆ ಲಿಂಕ್ ಕೆಲಸ ಮಾಡುತ್ತಿಲ್ಲ. ನಾನು ಆ ತಾಣದ ಸಂಪಾದಕರಾದ ಶಾಮಸುಂದರರಿಗೆ ಈ ಬಗ್ಗೆ ತಿಳಿಸಿಯೂ ಇದ್ದೇನೆ. ಲೇಖನ ಏನಾಯಿತೋ ಗೊತ್ತಿಲ್ಲ. ನೀವು ಕನ್ನಡದ ಕೆಲವು ಚರ್ಚಾವೇದಿಕೆಗಳಾದ groups.yahoo.com/groups/ekannadiga, kahale, kannada2, ಇತ್ಯಾದಿಗಳಲ್ಲಿ ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಳ್ಳಬಹುದು. ಸಿಗೋಣ, ಪವನಜ ----------- Think globally, Act locally
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[:http://www.kannadapr...|ಇದನ್ನೋದಿ]. ಸಂಧಾನವಾಗಲೇ ಏರ್ಪಟ್ಟಿದೆ :) -- "ಹೊಸ ಚಿಗುರು, ಹಳೆ ಬೇರು"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡ ಬರದೇ ಇರುವವರು, ಗೊತ್ತಿದ್ದರೂ ಕನ್ನಡ ಮಾತಾಡದಿರುವರು ಹಾಗು ಕರ್ನಾಟಕದಲ್ಲಿದ್ದೂ ಕನ್ನಡ ಕಲಿಯದೇ ಪೊಗರು ತೋರಿಸುವುವರು ಹಲವು ಮಂದಿ ಕರ್ನಾಟಕದಲ್ಲಿ.. ಇದೇ ಸಮಯದಲ್ಲಿ ಈಗ್ಗೆ ಸುಮಾರು ೧ - ೧ ೧/೨ ವರ್ಷ ಕೆಳಗೆ usenet ನಲ್ಲಿ soc.culture.indian.karnataka ಗುಂಪಿನಲ್ಲಾದ ವಾದಗಳನ್ನೂ ಅದರಲ್ಲಿ ಪವನಜ ಹಾಗು ಇತರು ಅನುಭವಿಸಿದ ಮಜವನನ್ನು ನೆನೆಪಿಸಿಕೊಳ್ಳಬಹುದು..ಒಬ್ಬ ವ್ಯಕ್ತಿ ಬೆಂಗಳೂರು ಕನ್ನಡಿಗರದ್ದೇ ಅಲ್ಲ ಎಂದು ವಾದಿಸುತ್ತಿದ್ದ ಅಲ್ಲಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು. ನೆನಪಿದೆ. ಒಬ್ಬ ತಮಿಳ ಬೆಂಗಳೂರು ನಮ್ಮದು ಎಂದು ವಾದಿಸುತ್ತಿದ್ದ. ಒಂದು ಸಲವಂತೂ "ನಾವು ನಿಮಗೆ ಬೆಂಗಳೂರು ಕೊಟ್ಟೆವು, ಭಾಷೆ ಕೊಟ್ಟೆವು, ಸಂಸ್ಕೃತಿ ಕೊಟ್ಟೆವು" ಎಂದು ಬರೆದಿದ್ದ. ಅದಕ್ಕೆ ಒಬ್ಬ ಕನ್ನಡಿಗ "ಹೌದು. ಅದಕ್ಕೆ ಈಗ ನಿಮಗೆ ಅವು ಯಾವುವೂ ಇಲ್ಲ" ಎಂದು ಉತ್ತರಿಸಿದ್ದ. ಸಿಗೋಣ, ಪವನಜ ----------- Think globally, Act locally
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪವನಜರವರೆ, ಅವರು ಯಾರೊ ಏನೊ ಮಹಾನುಭಾವರು ಚಿಂದಿಯಾಗಿ ಉತ್ತರ ನೀಡಿದ್ದಾರೆ!

ಅಂತೂ, ಸಿಂಚನ ಭಟ್ಟರು ಪ್ರಸ್ತಾಪಿಸಿರುವಂತ ವಿಷಯ ಕನ್ನಡಪರರಿಗೆ ವಿಜಯ ತಂದಿದ್ದು, ತಲವಾರನ್ನು ಕೂಡ ಕರ್ನಟಕದಿಂದ ಹೊರಹಾಕಿ ಈ ರೀತಿ ಸಣ್ಣ-ಪುಟ್ಟ ಕನ್ನಡ ಚಳವಳಿಗಳಿಗೆ ನಾಂದಿ ಹಾಡಿದೆ. ಆದರೆ ಇದೇ ರೀತಿ ಇನ್ನು ಲಕ್ಷಾಂತರ ಘಟನೆಗಳು ನೆಡೆಯುತ್ತಲೆ ಇವೆ, ಎಲ್ಲಾರು ಶಶಾಂಕ್'ರ ರೀತಿ ಧ್ವನಿ ಎತ್ತಿ ಪ್ರತಿಭಟಿಸಬೇಕು.

- ಅಪ್ಪಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.