ಮತ್ತೆ ಬರುವನೇ ಸಖ...

4.5

ಹಸಿರು ಹಸಿರಾಗಿ ನವಿರು ನವಿರಾಗಿ ಕಾಡಿದೆ ನೆನಪು,
ಸಖಿ, ನೆನಪೂ....ಅವನ ನೆನಪು...

ಸಖಿ ನೀ ಹೇಳೇ, ನನ್ನಿನಿಯ ಬರುವನೇ ಮತ್ತೆ,
ನನ್ನ ಮೌನದ ಮೋರೆಯ ಕೇಳಿ.
ಅಗಲಿಕೆಯ ವೇದನೆಯ ಸಹಿಸಲಾರೆನು ಗೆಳತಿ,
ಇದನು ಅರಿಯಲಾರದೆ ಇರುವನೇ ನನ್ನೀ ಸಖ.

ಜೊತೆಯಾಗಿ ಕಳೆದ ಮಧುರ ಕ್ಷಣಗಳು ನೆನಪಾಗುತಿದೆ,
ಮನಸು ಇನಿಯನ ಆಸರೆಯ ಬಯಸುತಿದೆ, ಗೆಳತಿ.
ಗೆಳೆಯನ ಬರುವಿಕೆಗೆ ಪರಿತಪಿಸಿದೆ ಮನ,
ಮತ್ತೆ ಬರುವನೇ ನಾನಿರುವಲ್ಲಿಗೆ, ಸಖಿ ನೀ ಹೇಳೇ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಬಹಳ ಸೊಗಸಾಗಿ ಬರೆದಿದ್ದೀರ ಕವನವನ್ನು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.