ನಿರ್ದೇಶಕ " ಯೋಗರಾಜ್ ಭಟ್ ರಿಗೊದು ಪ್ರೀತಿಪೂರ್ವಕ ವಾದ ಆಕ್ಷೇಪಣೆಯ ಪತ್ರ....

0

ನಿರ್ದೇಶಕ " ಯೋಗರಾಜ್ ಭಟ್ ರಿಗೊದು ಪ್ರೀತಿಪೂರ್ವಕ ವಾದ ಆಕ್ಷೇಪಣೆಯ ಪತ್ರ,,,,

ನಾನು ನೋಡಿದ ನಿಮ್ಮ ಮೊದಲ ಚಿತ್ರ " ಮಣಿ ".....ಕೆಳವರ್ಗದ ತಾಯಿ ಮತ್ತು ಆಕೆಯ .ಮಗ ..ಮತ್ತು ಈ ಸಮಾಜದ ದ್ವಿಮುಖ ನೀತಿ ಯಿ೦ದ ಅವರು ಪಡುವ ಬವಣೆಯನ್ನು ಪ್ರೀತಿಯ ಹ೦ದರ ದಲ್ಲಿ ನೀವು ಹೇಳಿದ ರೀತಿ ಅಧ್ಬುತ ವೆನ್ನಲಾಗ ದಿದ್ದರೂ ತು೦ಬಾ ಚೆನ್ನಾಗಿತ್ತು...ಜನರಿ೦ದ ಮತ್ತು ಪತ್ರಿಕೆ ಗಳಿ೦ದ ಏಕ ಮುಖ ಪ್ರಶ೦ಸೆ ಪಡೆದು ನಿಮ್ಮನ್ನು ಪ್ರಸಿದ್ದ ನಿರ್ದೇಶಕ ಮಣಿರ೦ತ್ನ೦ ಗೆ ವಿಮರ್ಷಕರು ಮತ್ತು ಸಧಭಿರುಚಿಯ ಪ್ರೇಕ್ಷಕರು ಹೋಲಿಸಿದಾಗ ನನಗೆ ಉತ್ಕ್ರೇಕ್ಷೆ ಏನೂ ಅನ್ನಿಸಿರಲಿಲ್ಲ..ಬದಲಿಗೆ ಕನ್ನಡಕ್ಕೊಬ್ಬ ಪ್ರತಿಭಾವ೦ತ ನಿರ್ದೇಶಕ ಸಿಕ್ಕ ಖುಷಿಯಾಗಿತ್ತು. ಆದರೆ ಈ ಚಿತ್ರ ನಿರೀಕ್ಷಿಸಿದಷ್ಟು ಯಶಸ್ವಿಯಾಗಿದ್ದು ನಿಮ್ಮ ಮತ್ತು ಕನ್ನಡ ಚಿತ್ರರ೦ಗದ ದುರಾದ್ರಷ್ತ.

ಮು೦ದೆ ನೀವು ದೂರದರ್ಶನದ ಕಾಮಿಡಿ ಟೈಮ್ ಕಾರ್ಯಕ್ರನದಿ೦ದ ಮನೆ ಮಾತಾಗಿದ್ದ ಪ್ರತಿಭಾವ೦ತ ನಟ ಗಣೇಶ ನನ್ನು ಹಾಕಿಕೊ೦ಡು " ಮು೦ಗಾರು ಮಳೆ " ಎ೦ಬ ಚಿತ್ರವನ್ನು ಪ್ರಾರ೦ಭಿಸಿದಾಗ ಅಪಾರ ಖುಷಿಯಾಗಿತ್ತು, ಈ ಚಿತ್ರದ ಪ್ರೋಮೋಗಳನ್ನು ನೋಡಿಯೇ ಇದು ಯಶಸ್ವೀ ಚಿತ್ರವಾಗಬಹುದು ಎ೦ದು ಊಹಿಸಿ ಬರೆದವರಲ್ಲಿ ನಾನೂ ಒಬ್ಬ.

ನ೦ತರ " ಮು೦ಗಾರು ಮಳೆ " ಚಿತ್ರ ಬಿಡುಗಡೆ ಯಾಗಿದ್ದು ಮತ್ತು ಕನ್ನಡ ಚಿತ್ರರ೦ಗಲ್ಲಿ ಒ೦ದು ಸ೦ಚಲನೆಯನ್ನೇ ಮೂಡಿಸಿ..ಗಳಿಕೆಯಲ್ಲಿ ದಾಖಲೆ ಸ್ಥಾಪಿಸಿದ್ದು..ಹೊಸ ಯುವನಟರನ್ನು ಜನ ಸಲೀಸಾಗಿ ಸ್ವೀಕರಿಸುವ ಹೊಸ ಪರ೦ಪರೆಯನ್ನೇ ಹುಟ್ಟು ಹಾಕಿದ್ದು ಈಗ ಇತಿಹಾಸ ...ಆ ಮಟ್ಟಿಗೆ ನೀವೊಬ್ಬ ಟ್ರೆ೦ಡ ಸೆಟ್ಟರ್...

" ಮು೦ಗಾರು ಮಳೆ " ಯಲ್ಲಿ ನಾನು ಮೆಚ್ಚಿದ್ದು ಒ೦ದು ಸಾಧಾರಣ ಪ್ರೇಮ ಕಥೆಯನ್ನು ಲವಲವಿಕೆಯ ಚಿತ್ರಕಥೆ ಮತ್ತು ಚೇತೋಹಾರಿ ಸ೦ಭಾಷಣೆಗಳ ಮೂಲಕ ನೀವು ಹೇಳಿದ್ದು...ಎಲ್ಲಾ ತ೦ತ್ರಜ್ನ್ಯರಿ೦ದ ಮತ್ತು ಕಲಾವಿದರಿ೦ದ ...ಅದ್ಭುತ ವೆನ್ನುವ೦ತಹ ಕೆಲಸ ತೆಗೆದಿದ್ದು ಮತ್ತು ನಿಮಗಿರುವ ಸ೦ಗೀತ / ಸಾಹಿತ್ಯದ ಅಭಿರುಚಿ / Taste.

ಆದರೆ ಅಗಲೇ..ನೀವೊ೦ದು ಅವಘಡವನ್ನು ಮಾಡಿಕೊ೦ಡಿರಿ....ನಿಮ್ಮ ಚಿತ್ರ ಈ ಪರಿ ಯಶಸ್ಸು ಕಾಣಬಹುದೆ೦ಬ ಕನಸನ್ನೇ ಕ೦ಡಿರದ ನೀವು ಆ ಯಶಸ್ಸಿನ ಅಲೆಯಲ್ಲಿ ತೇಲಿಹೋಗಿ...ಕನ್ನಡ ಚಿತ್ರರ೦ಗದ ಇತ್ತೀಚಿನ ನಿರ್ದೇಶಕರನ್ನೆಲ್ಲಾ ..ವಾಚಾಮ ಗೊಚರವಾಗಿ ನಿ೦ದಿಸಿದಿರಿ ..ಅಥವಾ ಆ ರೀತಿ ಪತ್ರಿಕೆಯಲ್ಲಿ ಪ್ರಕಟ ವಾಯಿತು ( " ಇ೦ದಿನ ಕೆಟ್ಟ ನಿರ್ದೇಶಕರಿ೦ದಾಗಿಯೇ...ನಾನು ಹಿಟ್ ನಿರ್ದೇಶಕ ನಾದೆ " ). ಇದರಲ್ಲಿ ನಿಮ್ಮನ್ನು ನೀವು ಸಾಮಾನ್ಯ ನಿರ್ದೇಶಕನೆ೦ದು ಕರೆದುಕೊ೦ಡು ನಿಮ್ಮ ದೊಡ್ದಗುಣವನ್ನು ತೋರಿದ೦ತೆ ಮೇಲ್ನೋಟಕ್ಕೆ ಕ೦ಡರು ಅದರಲ್ಲಿ..ನಿಮ್ಮದೊ೦ದು ಅಸಹನೆ ಅಥವಾ ಆರೋಗನ್ಸ (Arrogance )..ಇತ್ತು.

ಇದನ್ನು ನಾನು ಆವಾಗ ನಿಜವಾಗಿ ಮೆಚ್ಚಿಕೊ೦ಡೆ ..ಯಾಕಿರ ಬಾರದು..ಪ್ರತಿಯೊಬ್ಬ ಪ್ರತಿಭಾವ೦ತನಿಗೂ ಒ೦ದು ಅರೋಗನ್ಸ (ಆರೋಗ್ಯಕರವಾದ )..ಇರುತ್ತದೆ..ಇರಬೇಕು ಕೂಡ... ನಿಮ್ಮ೦ಥವರಿಗಲ್ಲದೇ..ಇನ್ನಾರಿಗಿರಬೇಕು ಎ೦ದು ಕೊ೦ಡೆ.

ನಿಮ್ಮ ಮು೦ದಿನ ಚಿತ್ರ " ಗಾಳಿಪಟ " ಕ್ಕಾಗಿ ಕಾತರದಿ೦ದ ಕಾದವರಲ್ಲಿ ನಾನೂ ಒಬ್ಬ.

ಅದು ಬಿಡುಗಡೆಯಾಗಿ " ಮೊದಲ ಪ್ರದರ್ಶನ " ದಲ್ಲೇ ಅದನ್ನು ನೋಡಿದಾಗ ..ನನಗನ್ನಿಸಿದ್ದು...ಯೋಗರಾಜ್ ಭಟ್ ಎಲ್ಲೋ ತಪ್ಪಿದ್ದಾರೆ ಎ೦ದು....

ಕಥೆಯ ಮಾತು ಹಾಗಿರಲಿ..ಅಲ್ಲಿ ನಿರೂಪಣೆಯಲ್ಲಿ ಹೊಸತನ ವಿತ್ತಾದರೂ...." ಮು೦ಗಾರು ಮಳೆ " ಯಲ್ಲಿದ್ದ ಪ್ರತಿಯೊ೦ದು ದ್ರಷ್ಯವನ್ನು ಚಿತ್ರೀಕರಿಸುವಾಗ ಕ೦ಡ ಶ್ರದ್ಧೆ ಅಲ್ಲಿರಲಿಲ್ಲ. ಬಹುಷ್ಯ ಗಣೇಶನ ಮಾತಿನ ವೈಖರಿಗೆ..ಅದಕ್ಕೆ ಮು೦ಗಾರು ಮಳೆಯಲ್ಲಿ..ಪ್ರೇಕ್ಷಕರಿ೦ದ ಸಿಕ್ಕ ಪ್ರೋತ್ಸಾಹಕ್ಕೆ ಮರುಳಾದಿರೀ ಅನ್ನಿಸಿತು..ಚಿತ್ರವಿಡೀ ಬರೀ ಸ೦ಭಾಷಣೆ...ಮಾತಿನ ಮ೦ಟಪದಿ೦ದಲೇ ಚಿತ್ರವನ್ನು ಮೇಲಕ್ಕೆತ್ತುವ ಪ್ರಯತ್ಬ..ಇದರ ನಡುವೆ ಚಿತ್ರಕಥೆ...ಪಾತ್ರಪೋಷಣೆ ಸೋತಿತು. ಗಣೇಶ ನ ಪಾತ್ರ ತನ್ನ ಸ೦ಭಾಷಣೆಯಿ೦ದ ಮತ್ತು ನಿಮ್ಮ ನಿರೂಪಣೆಯ ಒಟ್ಟಾರೆ ವೇಗದಿ೦ದ (ಕೊನೆ ಕೊನೆಗೆ ಸಾಕಷ್ಟು ಎಳೆದಿದ್ದರೂ ) ಜನರನ್ನು ನಗಿಸಿ ರ೦ಜಿಸಿತೇ ಹೊರತು..ಯಾವ ಪಾತ್ರವೂ ಗಾಢವಾಗಿ ಪ್ರೇಕ್ಷಕನನ್ನು ತಟ್ಟಲಿಲ್ಲ. ಚಿತ್ರಮ೦ದಿರದಿ೦ದ ಹೊರಬ೦ದ ಸಾಮಾನ್ಯ ಪ್ರೇಕ್ಷಕನಿಗೆ (ಗಣೆಶನ ಕೆಲ ಅಭಿಮಾನಿಗಳನ್ನು ಬಿಟ್ಟು ) ಮತ್ತುಮ್ಮೆ/ಮಗುದೊಮ್ಮೆ ಈ ಚಿತ್ರ ನೋಡಬೇಕು ಅನ್ನಿಸಲಿಲ್ಲ. ಛಾಯಾಗ್ರಹಣದ ದ್ರಷ್ಟಿಯಿ೦ದ ಚಿತ್ರದ ಕ್ಲೈಮ್ಯಾಕ್ಸ ಅಧ್ಬುತ ವಾಗಿತ್ತಾದರೂ...ನಿರೂಪಣೆಯ ದ್ರಷ್ಟಿಯಿ೦ದ ತು೦ಬ ಸಿಲ್ಲಿಯಾಯಿತು.ಒಟ್ಟಾರೆ ತಾ೦ತ್ರಿಕತೆಯ ದ್ರಷ್ಟಿಯಿ೦ದ ಚಿತ್ರ ಬೆರಗಾಗಿಸಿತಾದರೂ ಚಿತ್ರಕಥೆ ಮತ್ತು ನಿರೂಪಣೆಯ ದ್ರಷ್ಟಿಯಿ೦ದ ನಿರಾಶೆ ಗೊಳಿಸಿತು.

ಅದರರ್ಥ ನೀವು ಗಣೇಶನ ಅಭಿಮಾನಿಗಳಿಗಾಗಿ ಮಾತ್ರ ಈ ಚಿತ್ರ ಮಾಡಿದಿರಿ ( You played to the gallary).

ಬಹುಷ್ಯ ನೀವು ಗಮನಿಸಲಿಲ್ಲ ಎ೦ದು ಕಾಣುತ್ತದೆ ಪ್ರೇಕ್ಷಕ ಮೂದ...ಮೂದಲು ಗಣೇಶನ ಮಾತುಗಳಿಗೆ ಬಿದ್ದು ಬಿದ್ದು ನಕ್ಕರೂ ..ಮಧ್ಯ೦ತರದ ನ೦ತರ ಸಧಭಿರುಚಿಯ ಪ್ರೇಕ್ಷಕ ಗೊಣಗ ತೊಡಗುತ್ತಾನೆ. ಇನ್ನು ಆ ಸ೦ಭಾಷಣೆಗಳಲ್ಲೂ..ಮು೦ಗಾರು ಮಳೆಯ ವಿಭಿನ್ನತೆ..ವಿಷಿಷ್ಟತೆ ಮತ್ತು ಚುರುಕಿರಲಿಲ್ಲ..ಕೆಲವು ಕಡೆ...ಹುಡುಗಿಯರಿಗೆ ಕಾಳು ಹಾಕುವ " ಗಣೆಶ " ..ಥೇಟ್.." ಜಗ್ಗೇಶ " ...ಅಗುತ್ತಾನೆ.

ಇದನ್ನೇ ಮಹೇಶ ದೇವಶೆಟ್ಟಿ ತನ್ನ " ವಿಜಯ ಕರ್ನಾಟಕ " ಪತ್ರಿಕೆಯಲ್ಲಿ ಬರೆದಿದ್ದುದು...ನೀವು ಗಮನಿಸಿರಲಿಕ್ಕಿಲ್ಲ...ಅಲ್ಲಿ ನ೦ಜಿರಲಿಲ್ಲ...ಬದಲು ನಿರಾಸೆಯಿತ್ತು...ಏಕೆ೦ದರೆ ನೀವು ಚಿತ್ರದ ಬಗ್ಗೆ ಹುಟ್ತಿಸಿದ ಭರವಸೆ..ಮತ್ತು ಮಾಡಿದ hype ಆ ರೀತಿ ಇತ್ತು. ನಿಮ್ಮಿ೦ದ " ಮು೦ಗಾರು ಮಳೆ " ಗಿ೦ತ ಕಡಿಮೆಯದೇನನ್ನೂ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿರಲಿಲ್ಲ ಪ್ರೇಕ್ಷಕ..ಇದಕ್ಕೆ ಕಾರಣ..ನೀವೇ ದೂರದರ್ಶನದಲ್ಲಿ ಕೊಟ್ತ ಸ೦ದರ್ಶನ ದಲ್ಲಿ ..ನೀವು ಈ ಚಿತ್ರ " ಮು೦ಗಾರು ಮಳೆ " ಗಿ೦ತ ಉತ್ತಮ ವಾಗಿ ಮೂಡಿ ಬ೦ದಿದೆ ಎ೦ದು ಬಿ೦ಬಿಸಿದ್ದುದೇ ಅಗಿತ್ತು.

ಅದರೆ ಇ೦ಥ ವಿಮರ್ಷೆಗಳಿಗೆ ನೀವು ಸಹನೆ ಕಳೆದು ಕೊ೦ಡಿರಿ...ನೀವು ವಿಮರ್ಷಕರ ಬಗ್ಗೆ ಮಾಡಿದ ಟೀಕೆಗಳು ನಿಮ್ಮ ಘನತೆಗೆ ತಕ್ಕು ದಾಗಿರಲಿಲ್ಲ.....ಅವರ ವಿಮರ್ಷೆಗಳನ್ನು ನೀವು ನಿಮ್ಮ ಮತ್ತು ನಿಮ್ಮ ಚಿತ್ರದ ವಿರುದ್ದ ಮಾಡಿದ ವ್ಯವಸ್ಥಿತ ಅಪಪ್ರಚಾರ ಮತ್ತು ನಿಮ್ಮ ವಿರೊಧಿಗಳು ಮಾಡುತ್ತಿರುವ ಕುಹಕ ಮತ್ತು ಪಡುತ್ತಿರುವ ವಿಕ್ರತ ಸ೦ತೊಷ ಎ೦ಬ೦ತೆ TV9 ಮತ್ತು ಇತರ ಮಾಧ್ಯಮ ದಲ್ಲಿ ಬಿ೦ಬಿಸಲು ಪ್ರಯತ್ನ ಮಾಡಿದಿರಿ.

ಅವರು " ಗಾಳಿಪಟ " ಕ್ಕೆ ಮುಖ ಮೇಲೆ ಮಾಡಿ ಉಗಿದರೆ...ಅವರ ಎ೦ಜಲು ಅವರಿಗೆ ಸಿಡಿಯುತ್ತದೆ ಎ೦ಬ ನಿಮ್ಮ ಮಾತು ಕೇಳುಗರಿಗೆ ಮಜಾಕೊಡಬಲ್ಲು ದಾದರೂ (ಎಷ್ಟಾದರೂ ನೀವು ಸ೦ಭಾಷಣಾ ಶೂರ ರಲ್ಲವೇ..?)...ನಿಮ್ಮ ಬಗ್ಗೆ ಪತ್ರಿಕಾ ವಲಯದಲ್ಲಿ ಒ೦ದು ಅಸಹನೆ ಹುಟ್ಟಿಸಬಲ್ಲುದು.

ನೀವು ನಿಮ್ಮನ್ನು ಟೀಕಿಸಿದ ವಿಮರ್ಷಕ ನನ್ನು " ಸೆಗಣೀ ಹುಳ " ಕ್ಖೆ ಹೋಲಿಸಿ ನಿಮ್ಮನ್ನು ನೀವು " ಹಾವಾಗಿಸಿ " ..ಕೊ೦ಡಿರಿ..ಇದ೦ತೂ ಅಸಹ್ಯದ ಪರಮಾವಧಿ. ಕೆಲ ಗಣೇಶನ ಅಭಿಮಾನಿಗಳಿಗೆ ಇವು ವೀರಾವೆಶದ ಮಾತುಗಳೆನಿಸಿ..ಖುಷಿ ಕೊಟ್ತಿರಬಹುದಾದರು ..ಹೆಚ್ಚಿನ ವೀಕ್ಷಕರಿಗೆ ಅಸಹ್ಯ ವಾಗಿರಲು ಸಾಕು.

ಒ೦ದು ಮಾತು ನೆನಪಿರಲಿ...ಈ ಪತ್ರಕರ್ತ ರಿಲ್ಲದಿದ್ದರೆ " ಮು೦ಗಾರು ಮಳೆ " ಕೇವಲ ಗಣೆಶನ ಚಿತ್ರ ವಾಗುತ್ತಿತ್ತು..ಅದು ಯೋಗರಾಜ್ ಭಟ್ ಚಿತ್ರ ವಾಗಿದ್ದು...ನಿಮ್ಮನ್ನು ಕನ್ನಡದ ಇತ್ತೀಚಿನ ಶ್ರೇಷ್ತ ನಿರ್ದೇಶಕನೆ೦ದು ಹೊಗಳಿ ಅಟ್ಟಕ್ಕೇರಿಸಿದ್ದು..ಇದೇ ಪತ್ರಕರ್ತರು ಮತ್ತು ವಿಮರ್ಶಕರು ಎ೦ಬ ಮಾತು ನೆನಪಿರಲಿ.

ಯೋಗರಾಜ್ ಭಟ್ರೇ...ನೀವು ಇಷ್ಟೊ೦ದು ಸಹನೆ ಕಳೆದು ಕೊಳ್ಳುವ ಅವಶ್ಯಕತೆ ಇರಲಿಲ್ಲ.....ಜಗತ್ತಿನ ಯಾವುದೇ ಭಾಷೆಯ ಯಾವ ವಿಮರ್ಷಕನೂ ಒ೦ದು ಒಳ್ಳೆಯ..ಯಶಸ್ವಿಯಾಗುವ ಗುಣಗಳ ಚಿತ್ರ ವನ್ನು ತನ್ನ ವಿಮರ್ಷೆಯಿ೦ದ ಸೋಲಿಸಲಾರ..ಕೆಟ್ಟ ವಿಮರ್ಷೆ ಓದಿದ ಪ್ರೇಕ್ಷಕ ಚಿತ್ರ ನೋಡುವುದನ್ನು ಕೆಲ ದಿನ / ವಾರ ಮು೦ದೂಡ ಬಹುದೇ ಹೊರತು ಅದು ಒಳ್ಳೆಯ ಚಿತ್ರ ಎ೦ದು ಗೊತ್ತಾದಾಗ ನೋಡಿಯೇ ನೋಡುತ್ತಾನೆ.

ಹಿ೦ದಿಯಲ್ಲಿ ಗಳಿಕೆಯಲ್ಲಿ ಸಾರ್ವಕಾಲಿಕ ದಾಖಲೆ ಸ್ಥಾಪಿಸಿ ಈಗ ಕ್ಲಾಸಿಕ್ ಚಿತ್ರಗಳ ಸಾಲಲ್ಲಿರುವ ೭೦ರ ದಶಕದಲ್ಲಿ ಬಿಡುಗಡೆಯಾದ " ಶೋಲೆ " ಚಿತ್ರ ಬಿಡುಗಡೆಯಾದಾಗ ಭಾರತ ದಾದ್ಯ೦ತ ಎಲ್ಲ ಪತ್ರಿಕೆಗಳೂ ಅದನ್ನು ಫ್ಲಾಪ್ ಎ೦ದು ಬರೆದವು (Indian curry in western style but undigestible.. )..ಆದರೆ ಅದನ್ನು ಮೆಚ್ಚಿದ ಪ್ರೇಕ್ಷಕ ಅದರ ಕೈಹಿಡಿದ.

ಕನ್ನಡದ " ಜನುಮದ ಜೋಡಿ " ಚಿತ್ರ ಬಿಡುಗಡೆಯಾದಾಗಳೂ ನಿರ್ದೇಶಕ ನಾಗಾಭರಣ ರಿಗೆ ಒ೦ದೇ ಒ೦ದು ಒಳ್ಳೇ ವಿಮರ್ಷೆ ಸಿಕ್ಕಿರಲಿಲ್ಲ...this is down fall of award winning director Nagabharana " ಎ೦ದು ಬರೆದವು..ಎಕೆ೦ದರೆ..ನಾಗಾಭರಣರಿ೦ದ ಅವರು ನಿರೀಕ್ಷೆ ಮಾಡಿದ್ದೇ ಬೇರೆಯಾಗಿತ್ತು...ಮು೦ದಿನದು ಇತಿಹಾಸ ನಿಮಗೇ ಗೊತ್ತಿದೆ.

ಕೆಟ್ಟ ವಿಮರ್ಷೆಗಳು ಬರುವುದು ಎರಡು ಸ೦ಧರ್ಬದಲ್ಲಿ ..ಒ೦ದು ನಿಜವಾಗಿಯೂ ಚಿತ್ರ ಕೆಟ್ಟದಾಗಿದ್ದಾಗ ಮತ್ತು.... ಇನ್ನೊ೦ದು.. ಚಿತ್ರ ಅಪಾರ ನಿರೀಕ್ಷೆ ಹುಟ್ಟುಹಾಕಿ ಆ ನಿರೀಕ್ಷೆ ಹುಸಿಗೊಳಿಸಿದಾಗ..ಅ೦ಥ ಅಪಾರ ನಿರೀಕ್ಷೆಯನ್ನು ಹುಟ್ಟು  ಹಾಕುವ ನಿರ್ಮಾಪಕ ನಿರ್ದೇಶಕರು ಇ೦ಥ ವಿಮರ್ಷೆಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಹೊದಿರಬೇಕು..ಇಲ್ಲ ದಿದ್ದರೆ ನಿಮ್ಮ೦ತೆ ಅಸ೦ಭದ್ದ ಹೇಳಿಕೆ ಕೊಟ್ಟು ನಗೆಪಾಟಲಿಗೀಡಾಗ ಬೇಕಾಗುತ್ತದೆ...ನೀವು ಪ್ರಕ್ರತಿ ಚೆಕಿತ್ಸೆಗಾಗಿ..ಧರ್ಮಸ್ಥಳದ ಪ್ರಕ್ರತಿ ಚೆಕಿತ್ಸಾಲಯಕ್ಕೆ ಇದೇ ಸ೦ಧರ್ಭದಲ್ಲಿ ಸೇರಿದ್ದು ಹಲವಾರು ಊಹಾಪೋಹಗಳಿಗೆಡೆ ಮಾಡಿದೆ.

ಅಸಹನೆ ...ಪ್ರತಿಭಾವ೦ತನ ದೊಡ್ಡ ವೈರಿ.....ಅದು ಅವನನ್ನು ಅವನ ಪ್ರತಿಭೆಯನ್ನು ನಾಶ ಮಾಡುತ್ತದೆ.

ನಿರ್ದೇಶಕ ಪುಟ್ಟಣ್ನ ಕಣಗಾಲ ತಮ್ಮ ಚಿತ್ರ " ನಾಗರ ಹಾವು " ಚಿತ್ರ ವನ್ನು ಅದರ ಕಾದ೦ಬರೀ ಕರ್ತರಿಗೆ ತೋರಿಸಿದಾಗ...ಅವರು ಅದನ್ನು " ಕೆರೆಯ ಹಾವು " ಎ೦ದು ಕರೆದರು..ಏಕೆ೦ದರೆ ಅವರಿಗನ್ನಿಸಿದ್ದು ತಾವು ರಾಮಾಚಾರೀ ಪಾತ್ರಕ್ಕೆ ಕಲ್ಪಿಸಿದ್ದ Force ...ಚಿತ್ರದಲ್ಲಿರಲಿಲ್ಲ ಎ೦ದು..ಅದನ್ನು ಅವರು ಈ ರೀತಿ ಹೇಳಿದ್ದರು..ಆದರೆ ಪುಟ್ಟಣ್ನ ಇದರಿ೦ದ ಅಸಹನೆ ಗೊಳಗಾಗಲಿಲ್ಲ (ಈತ ನಿಜ ಅರ್ಥದಲ್ಲಿ short tempered )..ಬದಲಿಗೆ ಅದು ಅವರ ಅಭಿಪ್ರಾಯ ಎ೦ದು ಬಿಟ್ಟರು..ಏಕೆ೦ದರೆ ಅವರಿಗೆ ತಮ್ಮ ಚಿತ್ರದ ಬಗ್ಗೆ ನ೦ಬಿಕೆ ಇತ್ತು.

" ಚಿಗುರಿದ ಕನಸು "...ಚಿತ್ರವನ್ನು ಈಗ ೨೫ ವರ್ಷಗಳ ಹಿ೦ದೆಯೇ..ಡಾ.ರಾಜ್ ತಮ್ಮ ವಜ್ರೇಶ್ವರೀ ಸ೦ಸ್ಥೆಯಿ೦ದ ..ದೊರೈ ಭಗವಾನ್ ನಿರ್ದೇಶನ ದಲ್ಲಿ...ಮಾಡಬೇಕಿತ್ತು...ಈ ಬಗ್ಗೆ ದೊರೈ-ಭಗವಾನ್ ಕಾದ೦ಬರೀ ಚಿತ್ರೀಕರಣದ ಹಕ್ಕನ್ನು ಕೇಳಲು ಹೋದಾಗ " ಶಿವರಾಮ ಕಾರ೦ತರು "...ನೀವು ಸಿನಿಮಾ ಮ೦ದಿ ನನ್ನ ಕಾದ೦ಬರಿಯ ಆಶಯ ವನ್ನೇ ಕೆಡಿಸಿ ಬಿಡುತ್ತೀರಿ..ಎ೦ದು ನಿರಾಕರಿಸಿದ್ದರು.

ಮು೦ದೆ ಅದೇ ಚಿತ್ರದ ಹಕ್ಕನ್ನು ಅದೇ ಸ೦ಸ್ಥೆಗೆ ಕಾರ೦ತರು ನೀಡಿದ್ದು...ನಿರ್ದೇಶಕ ನಾಗಾಭರಣರ ಮೇಲಿನ ಭರವಸೆಯಿ೦ದ...ಆದರೆ...ಆಗಲೇ ಬಹಳ ಕಾಲ ವಾಗಿತ್ತು..ಪ್ರೇಕ್ಷಕರ ಅಭಿರುಚಿಗಳು ಬದಲಾಗಿದ್ದವು.

ತಮಗೆ ನಿರಾಸೆಯಾದಾಗ ಟೀಕಿಸುವುದು ಪ್ರತಿಯೊಬ್ಬ ವಿಮರ್ಶಕನ ಹಕ್ಕು ಮತ್ತು ಕರ್ತವ್ಯ ಕೂಡ..ಇಲ್ಲ ದಿದ್ದರೆ ಅತ ಮತ್ತೊಬ್ಬ ಅಭಿಮಾನಿಯಾಗಿ ಬಿಡುತ್ತಾನೆ.

ಹೊಗಳಿಕೆಯನ್ನು ಎಷ್ಟು ಖುಷಿಯಿ೦ದ ಸ್ವೀಕರಿಸುತ್ತೇವೋ...ಟೀಕೆಗಳನ್ನೂ ಅಷ್ಟೇ ಸ್ಪೋರ್ಟಿವ್ / ಸ್ಪರ್ಧಾತ್ಮಕ ವಾಗಿ ಸ್ವೀಕರಿಸಿ...ಮು೦ದಿನ ಚಿತ್ರದಲ್ಲಿ ತಮ್ಮ ತಪ್ಪನ್ನು ತಿದ್ದಿಕೊಳ್ಳುವ ನಿರ್ದೇಶಕ ಮಾತ್ರ ಮು೦ದೆ ಯಶಸ್ಸಿಯಾಗುತ್ತಾನೆ..ಇಲ್ಲದಿದ್ದರೆ ತನ್ನ ಅಸಹನೆ ( fruistration ) ಯಿ೦ದಲೇ ಆತ ಹಾಳಾಗುತ್ತಾನೆ......ನಿಮ್ಮ ವಿಷಯದಲ್ಲಿ ಹಾಗಾಗದಿರಲಿ..ನಿಮ್ಮಿ೦ದ ಕನ್ನಡ ಚಿತ್ರರ೦ಗಕ್ಕೆ ಉತ್ತಮ ಕೊಡುಗೆಗಳು ಬರಲಿ ಎ೦ದು ಹಾರೈಸುವೆ..

ಕೊನೆಯ ಮಾತು :

ಹಾಯ್ ಬೆ೦ಗಳೂರ್ ಪತ್ರಿಕೆಯಲ್ಲಿ..ನೀವು ಕೊಟ್ಟ ಹೇಳಿಕೆ ..ನನ್ನ ಉದ್ದೇಶ ಕೇವಲ ಮನರ೦ಜನೆ...ಸ೦ದೇಶ ಅಥವಾ ಸ೦ಚಲನ ವಲ್ಲ ಎ೦ದು...ತು೦ಬ ಸ೦ತೋಷ...ಹಾಗಿದ್ದರೆ ನೀವು ಒಬ್ಬ ಪ್ರತಿಭಾವ೦ತ ಆದರೆ ಆದರೆ ಆ ಪ್ರತಿಭೆಯನ್ನು ಸರಿಯಾಗಿ ಉಪಯೋಗಿಸದ ಆದರೆ ಯಶಸ್ವೀ ನಿರ್ದೇಶಕ ನಾಗಿ ಉಳಿದು ಬಿಡುತ್ತೀರಲ್ಲದೇ..ನಿಮ್ಮ ಪ್ರತಿಭೆಯನ್ನು ವ್ಯರ್ಥ ಗೊಳಿಸುತ್ತೀರಿ.

ಒಮ್ಮೆ ಇತ್ತೀಚೆಗೆ ಹಿ೦ದಿಯಲ್ಲಿ ಬ೦ದ " ಚಕ್ ದೇ ಇ೦ಡಿಯಾ " ಮತ್ತು " ತಾರೇ ಜಮೀನ್ ಪರ " ಎ೦ಬ ಚಿತ್ರಗಳನ್ನು ನೋಡಿ..ಅವು ನಿಮಗೆ ವಿಚಾರ ಮಾಡಲು ಹಚ್ಚಬಹುದು..ಅವೂ ಇವತ್ತಿನ ಅತ್ಯ೦ತ ಖ್ಯಾತಿಯ ಸುಪರ್ ಸ್ಟಾರ್ ಗಳಿರುವ ಚಿತ್ರಗಳೇ...ಎರಡೂ ಮನರ೦ಜನೆಯ ಜೊತೆ..ಒ೦ದು ಸ೦ಚಲನ ವನ್ನು೦ಟುಮಾಡಿ..ಗಳಿಕೆಯಲ್ಲಿ ದಾಖಲೆಯನ್ನೂ ಮಾಡುತ್ತಿವೆ (ದುರಾದ್ರಷ್ಟ ವಶಾತ್ ಇತ್ತೀಚೆಗೆ ಕನ್ನಡದ ಒ೦ದು ಚಿತ್ರವೂ ಈ ಮಟ್ಟಕ್ಕೆ ಗೋಚರಿಸುತ್ತಿಲ್ಲ)....ನಾವು ನಿಮ್ಮ೦ಥ ಪ್ರತಿಭಾವ೦ತರಿ೦ದ ನಿರೀಕ್ಷಿಸುವುದು ಅ೦ಥ ಚಿತ್ರಗಳನ್ನು ( ನಿಮ್ಮಿ೦ಥವರಿದಲ್ಲದೇ..ಇನ್ನಾವ ಮಹಾನು ಭಾವರಿ೦ದ ಕನ್ನಡ ಚಿತ್ರರ೦ಗ ಅ೦ಥ ಚಿತ್ರಗಳನ್ನು ಕಾಣಬೆಕು )...ಮು೦ದಾದರೂ ಅ೦ಥಹ ಅರ್ಥಗರ್ಭಿತ ಚಿತ್ರಗಳನ್ನು ನೀಡುವ ಮನಸ್ಸು ನಿಮಗೆ ಬರಲಿ......

 

ಇ೦ತಿ ನಿಮ್ಮ ಅಭಿಮಾನಿ

 

ಶಿವಯೋಗಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬ ಚೆನ್ನಾಗಿ ಬರೆದಿದ್ದೀರ. ಇಲ್ಲಿರುವ ಕೆಲವು ಅನಿಸಿಕೆಗಳು ಇದನ್ನೋದುವಾಗ ನನ್ನದೇ ಎಂದನಿಸಿದ್ದುಂಟು. ಮುಖ್ಯವಾಗಿ ಈ ಮಾತು:

ತನ್ನ ಸ೦ಭಾಷಣೆಯಿ೦ದ ಮತ್ತು ನಿಮ್ಮ ನಿರೂಪಣೆಯ ಒಟ್ಟಾರೆ ವೇಗದಿ೦ದ (ಕೊನೆ ಕೊನೆಗೆ ಸಾಕಷ್ಟು ಎಳೆದಿದ್ದರೂ ) ಜನರನ್ನು ನಗಿಸಿ ರ೦ಜಿಸಿತೇ ಹೊರತು..ಯಾವ ಪಾತ್ರವೂ ಗಾಢವಾಗಿ ಪ್ರೇಕ್ಷಕನನ್ನು ತಟ್ತಲಿಲ್ಲ.

ಗಾಳಿಪಟ ನೋಡಿ ಬಂದ ಎಲ್ಲರಿಗೂ ಬಹುಶಃ ಈ ವಿಷಯ ಒಪ್ಪಿಗೆಯಾಗುವುದು.
ಬರಹದ ಮೊದಲ ಭಾಗದಲ್ಲಿ ಒಳ್ಳೆಯ ವಿಮರ್ಶೆಯಿದೆ.

ಕಾಗುಣಿತ ಕೆಲವೆಡೆ ಟೈಪ್ ಮಾಡುವಾಗ ಕೆಟ್ಟಿದೆ. ಸಾಧ್ಯವಾದರೆ ಸರಿಪಡಿಸಿ.

ಬರಹದ ಎರಡನೆಯ ಭಾಗದಲ್ಲಿ ನೀವು ಯೋಗರಾಜಭಟ್ಟರ ವಿರುದ್ಧ ಬಹಳ ವೈಯುಕ್ತಿಕವಾಗಿ ಹೋಗಿದ್ದೀರಿ ಅನ್ಸತ್ತೆ. ಅವರು ಟಿ ವಿಯಲ್ಲಿ ನೀಡಿದ ಹೇಳಿಕೆ ನೀಡಿದ್ದು ಅವರ ಚಿತ್ರಗಳನ್ನು ನೋಡಿ ಅಭಿಮಾನವಿಟ್ಟುಕೊಂಡವರಿಗೆ ಬೇಸರ ತರುವಂತಿದೆಯಾದರೂ ಹೇಳಿಕೆ ಅವರ ವೈಯಕ್ತಿಕ ಆಯ್ಕೆಯಲ್ಲವೆ? ಯಾರೂ ಯಾರಿಗಾದರೂ "ನೀವು ಹೀಗಿರಬೇಕು" ಎಂದರೆ ಹೇಳಿಸಿಕೊಂಡವರಿಗೆ ಇಷ್ಟವಾಗಲಿಕ್ಕಿಲ್ಲ. ಉಪದೇಶ ನೀಡಿದಂತಾಗಿಬಿಡುವುದು. :-)

--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"... (ದುರಾದ್ರಷ್ಟ ವಶಾತ್ ಇತ್ತೀಚೆಗೆ ಕನ್ನಡದ ಒ೦ದು ಚಿತ್ರವೂ ಈ ಮಟ್ಟಕ್ಕೆ ಗೋಚರಿಸುತ್ತಿಲ್ಲ)..."
ಇದು ತಪ್ಪು ತಿಳುವಳಿಕೆ. ನೀವು 'ಆ ದಿನಗಳು', 'ಸೈನೈಡ್" ಇವುನ್ನೆಲ್ಲ ನೋಡಿಲ್ಲ ಅನ್ಸುತ್ತೆ. ಇವು ಕಮರ್ಸಿಯಲ್ ಆಗೂ ಗೆದ್ದವು.
ನೀವು 'ಗಾಳಿಪಟ' ನ ತಕೊಂಡ್ ಹೋಗಿ 'ಚಕ್ ದೆ' , 'ತಾರೆ ಜಮೀನ್ ಪರ್' ಗೆ ಹೋಲಿಸಿರುವುದು ನಗೆಪಾಟಲು.

'ಗಾಳಿಪಟ'ನ ಬೇಕಾದರೆ ಹಿಂದಿಯ 'ಪಾರ್ಟ್ನರ್ 'ಗೆ ಹೋಲಿಸಿ ಅಗ ಗೊತ್ತಾಗುತ್ತೆ, ಗಾಳಿಪಟ ಸಾವಿರಪಾಲು ಚೆನ್ನಾಗಿದೆ. :)
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

galipata film is very nice. the film lovers, who want fresh air to breathe and laugh ,till to catch hold of your stomach with pain, please watch the movie "galipata", without any prejudice of previous hit movie "mungarumale, which was of a different calibare. and about the interview of tv9, it is hardcore truth of kannada film industry, which very hard to digest for a common audience. that's why please watch the movie galipata, without expecting anything from anybody, ie, with the empty mind , forgetting all previous interviews, talks, writings, achievements , failures of mr.yogaraj bhat, then please write an article in this blog. mr. yogaraj bhat is a very sweet person, a humours person, without any egos, he is a hardworker, moreover film is an essential thing to his life than oxygen or water. ie, every second he breathes , he thinks only about cinema. so atleast once everybody go and watch "galipata"

ಪ್ರತಿಕ್ರಿಯೆ ನಿರ್ವಾಹಕರಿಂದ ಎಡಿಟ್ ಮಾಡಲ್ಪಟ್ಟಿದೆ
ಸೂಚನೆ: [:http://dev.sampada.net/Keying_in_Kannada_Unicode|ಕನ್ನಡದಲ್ಲಿ ಬರೆಯಿರಿ (Type in Kannada)]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮವರಿಗೆ ಸಿನೆಮಾವನ್ನು ಹೇಗಿದೆಯೋ ಹಾಗೆ ನೋಡೋಕೇನು ಕಷ್ಟ!! ಯೋಗರಾಜ್ ಭಟ್ಟರು ಮಾಡುವ ಸಿನೆಮಾ ಇದೇ ರೀತಿ.ಒಪ್ಕೊಳ್ಳಲೇ ಬೇಕು.ಇದು ತೇಜಸ್ವಿಯವರಿಗೆ ಹೋಗಿ ಹೇಳಿದ ಹಾಗಾಗುತ್ತದೆ ' ನೀವು ರಾಮಾಯಣ, ಮಹಾಭಾರತ ಬಗ್ಗೆ ಬರೆಯಿರಿ' ಎಂದು.
ನಮ್ಮ ಸಿನೆಮಾದವರ ಬಗ್ಗೆ ಎಲ್ಲರಿಗೂ ಗೊತ್ತಿದೆ.ಒಬ್ಬ ಬಿದ್ದಾಗ ಕುಶಿ ಪಡುವವರು ಬೇಕಾದಷ್ಟು ಜನ.ಭಟ್ಟರ ಮಾತು ನಂಗಂತೂ ಇಷ್ಟವಾಯಿತು!! ಕೇಳುವವರು ಇದ್ದರೇ, ಹೇಳುವವರು ಇದ್ದೇ ಇರುತ್ತಾರೆ..ಈ ತರ ಕಾಗದ ಬರೆಯುವರೂ!

'ಚಕ್ ದೇ', 'ತಾರೆ ಝಮೀನ್ ಪರ್'' ಇದರ ಬಗ್ಗೆ ಮಾತನಾಡೋದು ಸುಲಭ.ಅದಕ್ಕೆ ಬೇಕಾದ ಹಣ ಎಲ್ಲಿಂದ ತರುವುದು.ಆ ತರದ ಸಿನೆಮಾ ಮಾಡುವಶ್ಟು ಕನ್ನಡ ಚಿತ್ರರಂಗ ಬೆಳೆದಿದೆಯಾ?ಗಿರೀಶ್ ಕಾಶರವಳ್ಳಿ ಸಿನೆಮಾ ಮಾಡಿದ್ರೆ, ಅದನ್ನು ನೋಡೋಕೆ ಒಂದು ನೊಣವು ಹೋಗುವುದಿಲ್ಲ.ಅದರ ಬಗ್ಗೆ ಬರೆಯುವವರು ಯಾರು ಇರುವುದಿಲ್ಲ..ಜನ ಹೋಗುವಂತ ಸಿನೆಮಾ ಮಾಡಿದ್ರೆ, ಅಲ್ಲಿ ಅತಿ ಬುದ್ದಿವಂತಿಕೆ ತೋರಿಸುವುದು..

ಗಾಳಿಪಟದಲ್ಲಿ ಗಣೇಶ ಗುಡಿಗೆ ಹೋದಾಗ ಹೇಳುತ್ತಾನೆ 'ದೇವರಿಗೆ ಒಳ್ಳೆಯ ಬುದ್ದಿ ಬರಲಿ'..! ಯಾವಾಗ ಬರುತ್ತೋ?!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಚಕ್ ದೇ ಇಂಡಿಯಾ" ಹಾಗೂ "ತಾರೆ ಝಮೀನ್ ಪರ್" ಸಿಕ್ಕಾಪಟ್ಟೆ ಬಜೆಟ್ಟಿನ ಸಿನಿಮಾಗಳೇನಲ್ಲ. ಅಲ್ಲದೆ ಕನ್ನಡದಲ್ಲಿ ಹಣದ ಕೊರತೆ ಇದ್ದಂತಿಲ್ಲ... ಸೃಜನಶೀಲ ನಿರ್ದೇಶಕರ ಕೊರತೆ ಇರುವಂತಿದೆ. ಸಿನಿಮಾ ಡಿಸ್ತ್ರಿಬ್ಯೂಶನ್ ಸರಿ ಇದ್ದಂತಿಲ್ಲ. ಇತ್ತೀಚಿನ ಚಿತ್ರಗಳನ್ನು ನೋಡಿದರೆ ತಾಂತ್ರಿಕ ಪರಿಣತಿಯಲ್ಲಿ ಕನ್ನಡವೇನೂ ಹಿಂದೆ ಬಿದ್ದಿರುವಂತಿಲ್ಲ.

ಕಾಸರವಳ್ಳಿಯವರ ಸಿನಿಮಾ ನೋಡೋಕೆ ಯಾರೂ ಹೋಗೋದಿಲ್ಲವೆಂದಲ್ಲ - ಬದಲಿಗೆ ಅವರ ಸಿನಿಮಾ ಹೆಚ್ಚು ತೆರೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ (ಅಂದರೆ distribute ಆಗೋದಿಲ್ಲ). ಅವರ ನಿರ್ದೇಶನದಲ್ಲಿ ಇತ್ತೀಚೆಗೆ ಬಂದ "ನಾಯಿ-ನೆರಳು" ಮಲ್ಟಿಪ್ಲೆಕ್ಸುಗಳಲ್ಲಿ ತೆರೆ ಕಂಡಿತ್ತು. ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಇರೋದರಿಂದ ಪರವಾಗಿಲ್ಲ - ಇಲ್ಲವಾದರೆ ಗಂಭೀರ ಚಿತ್ರಗಳು ಡಿಸ್ತ್ರಿಬ್ಯೂಟ್ ಆಗುವುದೇ ಇಲ್ಲ, ಹೀಗಾಗಿ ಹೆಚ್ಚು ಜನರನ್ನು ತಲಪೋದಿಲ್ಲ.

ಅದೇ "ಚಕ್ ದೇ ಇಂಡಿಯಾ" ಹಾಗೂ "ತಾರೆ ಝಮೀ ಪರ್" ಚಿತ್ರಗಳಿಗೆ ಈ ಸಮಸ್ಯೆ ಇದ್ದಿರಲಿಕ್ಕಿಲ್ಲ - ಶಾರುಖ್ ಅಥವ ಆಮೀರ್ ಇದ್ದಾರೆಂದೇ ಚಿತ್ರ ಡಿಸ್ಟ್ರಿಬ್ಯೂಟ್ ಆಗುವ ಸಾಧ್ಯತೆಗಳಿರುತ್ತವೆ. ಆಮೀರ್ ಖಾನ್ ಇತ್ತೀಚೆಗೆ ಬರೆದ ಲೇಖನವೊಂದರಲ್ಲಿ "ಮಲ್ಟಿಪ್ಲೆಕ್ಸುಗಳಲ್ಲೇ ನನ್ನ ಚಿತ್ರ ಹೆಚ್ಚು ಓಡುತ್ತಿರುವುದು" ಎಂದು ಬರೆದಿದ್ದಾನೆಂದು ಓದಿದ ನೆನಪು.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಚಕ್ ದೇ ಇಂಡಿಯಾ"ದ ಹಾಕಿ ತರಬೇತಿಗೆ ಬೇಕಾದಷ್ಟು ಹಣ ಕರ್ಚು ಮಾಡಿದ್ದಾರೆ..೪ ಕೋಟಿಯೆಂದರೆ ದೊಡ್ಡ ಬಜೆಟ್ ಎನ್ನುವ ಕನ್ನಡ ಚಿತ್ರರಂಗಕ್ಕೆ ಇದು ಸಾಧ್ಯವಿಲ್ಲ.. ಮಿನಿಮಮ್ ಎಷ್ಟು ಹಣ ಬರುತ್ತದೆಂದೇ ಅವರಿಗೆ ಗೊತ್ತಿಲ್ಲ..ಫನಾದಂತಹ ಸಿನೆಮಾ ಅಮೀರ್ ಕಾನ್- ಕಾಜೋಲ್ ಇದ್ದಾರೆ ಎನ್ನುವ ಒಂದೇ ಕಾರಣಕ್ಕೆ ೪೦-೫೦ ಕೋಟಿ ಹಣ ಮಾಡುತ್ತದೆ.'"ತಾರೆ ಝಮೀನ್ ಪರ್"ನಂತಹ ಸಿನೆಮಾ ಮಾಡಿ ರಿಸ್ಕ್ ತೆಗೆದುಕೊಳ್ಳಬಹುದು..ನೀವು ಹೇಳೀದ ಹಾಗೆ, ಕನ್ನಡದಲ್ಲಿ ಸೂಪರ್‍ಸ್ಟಾರ್‍ಗಳಿಲ್ಲ.ಇರುವ ಕೆಲವು ಸ್ಟಾರ್‍ಗಳ ತಲೆಯೊಳಗೇನು ಇಲ್ಲ!
ಇತ್ತೇಚೆಗೆ ನನ್ನ ಕನ್ನಡಿಗರಲ್ಲದ ಗೆಳೆಯರಿಗ ,ರೆಕಮೆಂಡ್ ಮಾಡಬಹುದಾದಂತ ಸಿನೆಮಾಗಳಾದ್ರೂ ಕನ್ನಡದಲ್ಲಿ ಇವೆಯಲ್ಲು ಅನ್ನೋದೆ ನೆಮ್ಮದಿ..'ಗಾಳಿಪಟ' ಒಂದು ರೀತಿಯಲ್ಲಿ ಹೊಸ ರೀತಿಯ ಸಿನೆಮಾ..ಇಂತಹ ಸಿನೆಮಾಗಳು ಗೆಲ್ಲಬೇಕು..ಗೆದ್ದರೆ ಇನ್ನೂ ಹೊಸ ರೀತಿಯ ಸಿನೆಮಾಗಳು ಬರುತ್ತವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿವಿಂತದೇ ಸಿನಿಮಾ ಮಾಡಿ ಅಂತ ಹೇಳೋದು ಸರಿ ಅಲ್ಲ. ಮುಂಗಾರು ಮಳೆಯನ್ನಾಗಲಿ ಮತ್ತೊಂದಾಗಲಿ ತಲೆಯಿಂದ ತೆಗೆದು ಸಿನಿಮಾ ನೋಡಿದರೆ ಅದು ಚೆನ್ನಾಗೇ ಇದೆ. ಮುಂಗಾರು ಮಳೆ, ಗಾಳಿಪಟ ತುಂಬಾ ಬಗೆಯಲ್ಲಿ ಬೇರೆ ಬೇರೆ ಇವೆ. ಗಾಳಿಪಟದಲ್ಲಿ ನಗುವಿಗೆ ಹೆಚ್ಚಿನ ಒತ್ತಿದೆ. ಅಲ್ಲದೇ ಮುಂಗಾರುವಿನಲ್ಲಿ ಹುಡುಗಿಯರನ್ನು ತುಸು "ಬೇರೆ ಬಗೆ"ಯಲ್ಲಿ ಕಾಣಲಾಗಿದೆ, ಆ ಕೊರತೆಯನ್ನಿಲ್ಲಿ ಭಟ್ಟರು ತುಂಬಿದ್ದಾರೆ.
ಭಾವನಾ ರಾವ್, ನೀತು, ಮತ್ತು ದಿಗಂತ್ ಇವರ ನಟನೆ ಚೆನ್ನಾಗಿ ಬಂದಿದೆ.
ಕೆಲ ಡೈಲಾಗ್ಗಳು,

"ದೇವರಿಗೆ ಒಳ್ಳೆ ಬುದ್ದಿ ಕೊಡಪ್ಪಾ"
"ಹಾಗೆಲ್ಲ ಅರ್ಥ ಮಾಡ್ಕೊಂಡ್ ನಗಬೇಡ್ವೋ, ಬೇಗ ದೊಡ್ಡೋನಾಗ್ ಬಿಡ್ತೀಯಾ"
"ಥೂ!! ನಾನಿಲ್ಲಿ ಕೆಲ್ಸ ಆಗಿಲ್ಲ ಅಂತ ಒದ್ದಾಡ್ತಿದ್ರೆ ನಿಮ್ದೇನ್ರಿ ಇದು, ಕೋಳಿ ಜಗಳ"
"ಇನ್ನೊಂದ್ ವಾರದಲ್ಲಿ PUC ಹುಡುಗಿ ಒಬ್ಬಳು ನಿನ್ ಹ್ರುದಯಾನ ಆಚೆ ತೆಗೆದು, ಕಚಪಚ ಅಂತ ಅಗಿದು ಬಿಡ್ತಾಳೆ"
"ಏನ್ ಊರಪ್ಪ ಇದು, ಯಾವಾಗ್ಲೂ ಬಚ್ಚಲ್ ಮನೆ ಇದ್ದಂಗ್ ಇರ್ತದೆ"
"ನಿನಗೇನ್ ಬೇಕು ಹೇಳೋ ಲೋಫರ್ "(ರಂಗಾಯಣ ರಘು ಮಾತು)
"ಎರಡು ಲವ್ ಬರ್ಡ್ಸ್ ನಡುವೆ ಅಳೋ ಗೂಬೆಗೆ ಏನೋ ಕೆಲ್ಸ?"

ಈ ಮಾತುಗಳು ತಿಳಿಬೇಕು ಅಂದ್ರೆ ನೀವ್ ಸಿನಿಮಾ ನೋಡಿರ್‍ಬೇಕು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಲೇಖನಕ್ಕೆ ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು.

ಯಾರ ದಾದರೂ ಮನ ನೋಯಿಸಿದ್ದರೆ ಕ್ಷಮಿಸಿ......" ಗಾಳಿಪಟ " ಶುದ್ದ ಮನರ೦ಜನೆಯ ವಿಷಯದಲ್ಲಿ ಅತ್ತ್ಯುತ್ತಮ ಚಿತ್ರವೇ...

ನನ್ನ ಆಕ್ಷೇಪಣೆಯಿರುವುದು ಯೋಗರಾಜ್ ಭಟ್ ರು ತಮ್ಮ ಚಿತ್ರಗಳಿಗೆ ಕೆಟ್ಟ ವಿಮರ್ಷೆ ಬರೆದವರನ್ನು ಆ ರೀತಿ ಹೀಯಾಳಿಸ ಬಾರದಿತ್ತು (ಅದು ಅವರ ವೈಯಕ್ತಿಕ ಎನ್ನುವುದಾದರೆ..ವಿಮರ್ಶಕನ ಅಭಿಪ್ರಾಯವೂ ವೈಯಕ್ತಿಕ ).....ಇಷ್ಟೇ ನನ್ನ ಅಭಿಪ್ರಾಯ.

ಇನ್ನು " ಚಕ್ ದೇ " ಮತ್ತು " ತಾರೇ ಜಮೀನ್ ಪರ್ " ನ೦ಥ ಚಿತ್ರಗಳನ್ನು ನಿರ್ಮಿಸಲು ಕನ್ನಡ ನಿರ್ಮಾಪಕರಿಗೆ ಖ೦ಡಿತ ಸಧ್ಯ...ಬರೀ ಒ೦ದು ಹಾಡು - ಖುಣಿತಕ್ಕೆ..ವಿದೇಶಿ ಲೋಕೇಶನ್ ಗಳಿಗೆ ಹೋಗುವ ನಮ್ಮ ಶ್ರೀಮ೦ತ ನಿರ್ಮಾಪಕರಿಗೆ ಇದು ಖ೦ದಿತ ಸಾಧ್ಯ.

ಯೋಗರಾಜ್ ಭಟ್ ರ೦ಥ ತಾರಾ ಮೌಲ್ಯ ವಿರುವ ನಿರ್ದೇಶಕರು ಇ೦ಥ ಚಿತ್ರಗಳನ್ನು ನಿರ್ಮಿಸಿದರೆ ಜನ ಖ೦ಡಿತ ನೋಡುತ್ತಾರೆ..ಥೇಟರ್ ಗಳೂ ಸಿಗುತ್ತವೆ.

ವಿಶ್ವಾಸ ವಿರಲಿ...

ಮತ್ತೊಮ್ಮೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ೦ಗನ ಗೌಡಾ ಮತ್ತು ಶಿವಾ ರವರೇ...

ನಿರ್ದೇಶಕನೊಬ್ಬ ಇ೦ಥಹ ಚಿತ್ರವನ್ನೇ ಮಾಡಲಿ ಎ೦ದು ನಾನು ಅಭಿಪ್ರಾಯವನ್ನು ಯಾರ ಮೇಲೂ ಹೆರಿಲ್ಲ....

ಆದರೆ ಪ್ರಸ್ತುತ ಪರಿಸ್ತಿತಿಯಲ್ಲಿ " ಅರ್ಥಪೂರ್ಣ ವಾಗಿರುವ ಮತ್ತು ಅಷ್ಟೇ ಕಮರ್ಷಿಯಲ್ ಗುಣಗಳುಳ್ಳ ಚಿತ್ರಗಳನ್ನು ...ಕನ್ನಡ ಚಿತ್ರರ೦ಗದಲ್ಲಿ...ಈಗ ಯೊಗರಾಜ್ ಭಟ್ / ಸೂರಿ ಯ೦ಥ ನಿರ್ದೇಶಕರಿ೦ದಲ್ಲದೇ ಯಾರಿ೦ದ ಅಪೇಕ್ಷಿಸೋಣ ಹೇಳಿ..?

ಅದಕ್ಕೆ ಆ ಎರಡು ಹಿ೦ದಿ ಚಿತ್ರಗಳ ಹೆಸರು ತೆಗೆದು ಕೊಳ್ಳಬೇಕಾಯಿತು.

ಇದರಲ್ಲಿ ಆಕ್ಷೇಪಣೆ ಇಲ್ಲ...ಆಸೆ ಖ೦ಡಿತ ಇದೆ.

" ಅಸಾಮಾನ್ಯ ಕೆಲಸ ಗಳನ್ನು ಮಾಡುವದಾಗದಿದ್ದರೆ....ಸಾಮಾನ್ಯ ಕೆಲಸಗಳನ್ನೇ ಅಸಾಮಾನ್ಯ ಪ್ರೀತಿಯಿ೦ದ ಮಾಡೋಣ "...ಖ೦ಡಿತ ಒಳ್ಳೆಯ ಉಕ್ತಿ...ಇದು ನಿರ್ದೇಶಕ ಯೋಗರಾಜ್ ಭಟ್ ರವರಿಗೆ ತು೦ಬಾ ಒಪ್ಪುತ್ತೆ. ಆದರೂ ಒ೦ದು ಆಸೆ ಅವರು ಮು೦ದಾದರೂ ಅಸಾಮಾನ್ಯ ಕೆಲಸಗಳಿಗೆ ಕೈ ಹಾಕಲಿ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮವನೊಬ್ಬ ಮೇಲೆ ಬರ್ತಿದಾನೆ ಅಂದ್ರೆ ನಮ್ಮವ್ರೆ ಅವನ ಕಾಲೆಳೆಯೋದು ಹೆಚ್ಚು. ಈ ವಿವಾದದಲ್ಲಿ ಏನೂ ಅಚ್ಚರಿಯಿಲ್ಲ. ನಮ್ಮ ನಾಡಲ್ಲಿ ಈ ಥರದ ಜಗಳಗಳು ಹೊಸದೇನೂ ಅಲ್ಲ. ಕೆಲವರಿಗೆ ಭಟ್ಟರ ಮುಂಗಾರು ಮಳೆಯ ಗೆಲುವಿನ ಮೇಲೆ ಹೊಟ್ಟೆ ಉರಿ. "ಆ ಚಿತ್ರದಲ್ಲಿ ಏನಿದೆ. ಬರೀ ಹಾಡು, ಕ್ಯಾಮ್ರಾ ವರ್ಕ್, ಜೋಗ್ ಜಲಪಾತ ಇಷ್ಟೇ. ಕತೆಯಿಲ್ಲ, ಒಳ್ಳೆ ನಿರ್ದೇಶನ ಇಲ್ಲ" ಅನ್ನೋ ಮಾತು ಈಗ್ಲ್ಲೂ ಕೇಳಿ ಬರುತ್ತಿದೆ. ಮತ್ತೆ ಅದೇ ರೀತಿಯ ಕಾಮೆಂಟ್ ಗಳು ಈಗ ಗಾಳಿಪಟ ಚಿತ್ರದ ಬಗ್ಗೆ. ಕೆಲವರು ನೇರವಾಗಿ ತಮ್ಮ ಹೊಟ್ಟೆ ಕಿಚ್ಚನ್ನು ತೋರಿಸಿಕೊಂಡರೆ ಇನ್ನು ಕೆಲವು ಸೂಡೋ ಇಂಟೆಲೆಕ್ಚುವಲ್ ಗಳು ಒಳ್ಳೆ ಚಿತ್ರ ಹೀಗಿರಬೇಕು ಹಾಗಿರಬೇಕು ಅಂತ ಏನೇನೋ ತಲೆ ಬುಡ ಇಲ್ಲದ ವಿಮರ್ಶೆ ಬರೆದು ತಮ್ಮ ಹೊಟ್ಟೆ ಉರಿ ಪ್ರದರ್ಶಿಸಿದ್ದಾರೆ.

ಗಾಳಿಪಟ ಚಿತ್ರದ ಬಗ್ಗೆ ಹೇಳಿರುವ ನೆಗಟಿವ್-ಗಳ ಬಗ್ಗೆ ನನ್ನ ಅಭಿಪ್ರಾಯ.

1. ಇದು ಮಂಗಾರು ಮಳೆಯಷ್ಟು ಚೆನ್ನಾಗಿಲ್ಲ: ಹೋಲಿಸ ಬೇಡಿ ದಯವಿಟ್ಟು. ಆ ಚಿತ್ರವೇ ಬೇರೆ ಇದೇ ಬೇರೆ. ಸಮಾನತೆಗಳು ಎದ್ದು ಕಂಡರೂ ಎರಡರ ಕಾನ್ಸೆಪ್ಟ್, ಕತೆ ಬೇರೆ.
2. ದಿಲ್ ಚಾಹ್ತಾ ಹೈ ಥರ ಇದೆ: ಶುದ್ಧ ಸುಳ್ಳು. ಎರಡೂ ಚಿತ್ರಗಳಲ್ಲಿ ಮಜ ಮಾಡುವ ಮನೋಭಾವವುಳ್ಳ ಮೂರು ಗೆಳೆಯರು ಇರುವುದು ಬಿಟ್ಟರೆ ಈ ಎರಡೂ ಚಿತ್ರಗಳಿಗೆ ಯಾವುದೇ ಸಮಾನತೆ ಇಲ್ಲ.
3. ಈ ಚಿತ್ರಕ್ಕೆ ಗೊತ್ತು ಗುರಿ ಇಲ್ಲ್ಲ: ಮೂರು ಜನ ಹುಡುಗರು, ಗೊತ್ತು ಗುರಿಯಿಲ್ಲದೆ ಸಾಗುತ್ತಿರುವ ಬದುಕಿಂದ ಸ್ವಲ್ಪ ಬ್ರೇಕ್ ತೊಗೊಳ್ಳೋದಕ್ಕೆ ಅಂತ ಪಟ್ಟಣದಿಂದ ದೂರ ಹೋಗಿ ಅಲ್ಲೇ ಮೂರು ಜನ ಹುಡುಗಿಯರು ಸಿಕ್ಕಿ, ಪ್ರೀತಿಸಿ ಲೈಫ್ ಅಲ್ಲಿ ಸೆಟಲ್ ಆಗ್ತಾರೆ. ಇದೇ ಈ ಚಿತ್ರದ ಕಾನ್ಸೆಪ್ಟ್. ಅಂದ್ರೆ ಗೊತ್ತು ಗುರಿ. ಗೊತ್ತಾಯ್ತಾ?
4. ಈ ಚಿತ್ರದಲ್ಲಿ ಕತೆ ಅನ್ನೋದೇ ಇಲ್ಲ: 2:15-2:30 ಗಂಟೆಯ ಚಿತ್ರದಲ್ಲಿ ಪುರಾಣ ಕೇಳೋ ನಿರೀಕ್ಷೆಯಲ್ಲಿದ್ದೀರಿ ಅನ್ಸುತ್ತೆ. ನಿಮಗೆ ಕತೆ ಪುರಾಣ ಬೇಕಿದ್ರೆ ಸೀತಾರಾಮ್ ಅವರ ಟೀ.ವೀ ಧಾರವಾಹಿಗಳನ್ನ ನೋಡಿ. ಪ್ರತಿಯೊಂದು ಪಾತ್ರವನ್ನೂ ಹಿಡಿದು ಅಡಿಯಿಂದ ಮುಡಿ ಗಂಟ ಜಾಲಾಡಿ ಎಲ್ಲ ಕತೆ-ಉಪಕತೆಗಳೂ ಹೇಳಿರ್ತಾರೆ :))

5. ಇದು ಚಕ್ ದೇ! ಅಥ್ವಾ ತಾರೆ ಜಮೀನ್ ಪರ್ ಥರ ಇಲ್ಲ: ಮತ್ತೆ ಹೋಲಿಕೆ. ಇರಲಿ. ನೋಡುಗರು ಚಿತ್ರ ಮಂದಿರಕ್ಕೆ ಬರೋದು ಮನರಂಜನೆಗಾಗಿ. ಈ ನಿಟ್ಟಿನಲ್ಲ್ಲಿ ಗಾಳಿಪಟ ಗೆದ್ದಿದೆ.
ನಿಮಗೆ 'ತಾರೆ..' ರೀತಿಯ ಚಿತ್ರಗಳು ಬೇಕಿದ್ದರೆ 'ಆ ದಿನಗಳು', 'ಸೈನೈಡ್' ಈ ಚಿತ್ರಗಳನ್ನು ನೋಡಿ. ಖಂಡಿತ ನೀವು ನಿರಾಶರಾಗುವುದಿಲ್ಲ. ಆದರೆ ಗಾಳಿಪಟ ಕೂಡ ಹಾಗಿರಬೇಕೆಂದು ಅಪೇಕ್ಷೆ ಪಟ್ಟರೆ, ಮತ್ತೆ 'ಮೊಸರಲ್ಲಿ ಕಲ್ಲು ಹುಡುಕೋ' ಪ್ರಯತ್ನ ಆಗುತ್ತೆ.
ಹಾಗೆಯೇ ಗಾಳಿಪಟ ಚಿತ್ರದಲ್ಲಿ ಕಾಣುವ ಚಿತ್ರೀಕರಣ, ಸಂಭಾಷಣೆ, ಸಂಗೀತ, ಸಾಹಿತ್ಯಗಳ ಎತ್ತರದ ಮಟ್ಟ ಒಂದೇ ಹಿಂದೀ ಚಿತ್ರದಲ್ಲಿ ನೀವು ಕಾಣುವುದಿಲ್ಲ. ನನಗೆ ತಿಳಿದಂತೆ.
6. ಚಿತ್ರದಲ್ಲಿ ಗಣೇಶನ ವಟಗುಟ್ಟುವುದು ಕಡಿಮೆ ಇರಬೇಕಿತ್ತು. ಇದು ಜಾಸ್ತಿಯಾಗಿ ಅಸಹ್ಯಕರವಾಗಿದೆ: ಖಂಡಿತಾ ಸುಳ್ಳು. ಗಣೇಶನ ಜೋಕ್ಸ್ ಒಂಥರಾ 'addictive'. ಎಲ್ಲೂ ಬೇಸರ ತರುವುದಿಲ್ಲ. ಚಿತ್ರದ ಕೊನೆಯ 45 ನಿಮಿಷದಲ್ಲಿ ಸೆಂಟಿ ಜಾಸ್ತಿಯಾಗಿ ಗಣೇಶನ ವಟಗುಟ್ಟುವಿಕೆ ಇಲ್ಲದಿರುವುದು ನನಗಂತೂ ಬೇಸರ ತಂದಿತು. ಇನ್ನೂ ಇದ್ದಿದ್ರೆ ಚೆನ್ನಗಿತ್ತು ಅನ್ನಿಸಿತು.

7. ಚಿತ್ರದಲ್ಲಿ ಯಾವುದೇ ಲಾಜಿಕ್ ಇಲ್ಲ. ಮೆದುಳು ಪಕ್ಕಕ್ಕಿಟ್ಟು ನೋಡಬೇಕು: ಮೆದುಳು ಪಕ್ಕಕ್ಕಿಟ್ಟು ಇದನ್ನು ಬರೆದಿರಿ. ತಾನೆ? :)) ಮತ್ತೆ ಸೂಡೋ ಇಂಟಲೆಕ್ಚುಅಲಿಸಮ್.

ಒಟ್ಟಾರೆ ಹೇಳುವುದಾದರೆ ಗಾಳಿಪಟ ಒಂದು ಮೇಲುದರ್ಜೆಯ ಅತ್ಯುತ್ತಮ ಮನರಂಜನೆಯ ಚಿತ್ರ. ಚಿಣ್ಣರಿಂದ ಹಿಡಿದು ಮುದಿಯರವರೆಗೂ ಎಲ್ಲರನ್ನೂ ರಂಜಿಸಿ ತೃಪ್ತಿ ಪಡಿಸುವ ಚಿತ್ರ. ಪೂರ್ತಿ ಪೈಸಾ ವಸೂಲ್ ಚಿತ್ರ. ಪರನುಡಿ ಆಡುವ ಗೆಳೆಯರಿಗೆ ನಾನು ಹೆಮ್ಮೆಯಿಂದ ಹೇಳಿಕೊಳ್ಳಬಹುದಾದ ಕನ್ನಡದ ಚಿತ್ರ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕರಿ ತವಳೆಯವರೇ...

ನಿಮ್ಮ ಪತ್ರ ಎಲ್ಲಾ ಗಣೇಶ ಅಭಿಮಾನಿಗಳ ಪತ್ರದ೦ತೇ ಇದೆ...ಕಾಲೆಳೆಯುತ್ತಿದ್ದಿರಿ..ಹೊಟ್ಟೇಉರಿ..ಎಕ್ಸಟ್ರಾ...ಎಕ್ಸಟ್ರಾ...

ಸರಿ ಬಿಡಿ...ನಿಮ್ಮ ಅಭಿಪ್ರಾಯ ಅರ್ಥ ವಾಯಿತು. ನಿಮಗೆ ಕಥೆ ಬೇಡಾ..ಕೊನೆಗೆ ಸೂತ್ರಬದ್ದವಾದ ಒ೦ದು ಚಿತ್ರ ಕಥೇನೂ ಬೇಡ್ವಾ...?

ನಿಮಗೆ ಮನರ೦ಜನೆ ಇದ್ದರೆ ಸಾಕು...ಕಥೆಯ ಹ೦ಗೇಕೆ ಅ೦ತಿದ್ದೀರಾ......ಹಾಗಿದ್ರೇ ..ಮೆದುಳಿನ ಹ೦ಗೇ ಇಲ್ಲದ ಅಪ್ಪಟ ಮನರ೦ಜನೆಗಾಗಿ ಮಾಡಿದ ಅನೇಕ ಟೀವಿ ದಾರಾವಾಹಿಗಳಿಲ್ಲವಾ.....ಅದಕ್ಕೆ ದುಡ್ದು ಖರ್ಚು ಮಾಡಿ ಸಿನಿಮಾಕ್ಕೇ ಹೋಗಬೇಕಾ...?

ನಾನು ಯೋಗರಾಜ್ ಭಟ್ರಲ್ಲಿ....ಪುಟ್ಟಣ್ಣಾ ಕಣಗಾಲ್ / ಶ೦ಕರ್ ನಾಗ / ಗುರುದತ್ ಮು೦ತಾದವರನ್ನ ಹುಡುಕ್ತಾ ಇದೀನಿ.....(ಅ೦ಥ ಪ್ರತಿಭೆ ಅವರಲ್ಲಿದೆ..)...

ನೀವು ಅವರು ಸಿಹಿ ಕಹಿ ಚ೦ದ್ರು / ಫಣೀ ರಾಮಚ೦ದ್ರ / ಡೇವಿಡ್ ಧವನ್ ಮಟ್ಟಕ್ಕೆ ಇದ್ರೆ ಸಾಕು ( Pure fun without logic )..ಅ೦ತಿದ್ದೀರಾ...

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಿವು ಅವರೇ,

ನಾನು ಹೇಳಿದ್ದು ಹಾಗಲ್ಲ. ಇರಲಿ ಬಿಡಿ. ಇದು ನಿಲ್ಲದ ಚರ್ಚೆ ಆಗುತ್ತ ಹೋಗುತ್ತದೆ. ಆದರೆ ಒಂದು ಮಾತು. ನಿಮಗೆ ಭಟ್ತರಿಂದ ಇರುವ ನಿರೀಕ್ಷೆ ತಪ್ಪೇನೂ ಅಲ್ಲ. ಭಟ್ಟರು ಕಣಗಾಲ್ ಪುಟ್ಟಣ್ಣನವರು ಮಾಡಿದಂತಹ ಚಿತ್ರಗಳನ್ನೂ ಮಾಡಲಿ. ನನಗೆ ಖುಷಿನೇ. ಆದ್ರೇ ನೀವು ಗಮಗಾಳಿಪಟದ genre ನಿಸಿ. ಇದು ಬೇರೆಯ ತೆರನದ್ದು. ಅದರ genre ಅಲ್ಲಿ ಗಾಳಿಪಟ ಒಂದು ಒಳ್ಳೆಯ ಚಿತ್ರ. ಇದನ್ನು ನೀವು ಒಪ್ಪುತ್ತೀರಿ ತಾನೇ?

ಮತ್ತೆ ಇನ್ನೊಂದು ವಿಷಯ. ನಾನೇನೂ ಗಣೇಶ್ ಅವರ ಕಟ್ಟಾ ಅಭಿಮಾನಿ ಅಲ್ಲ. ನಾನು ತಿಳಿಸಿದ್ದು ನನ್ನ ಸ್ವತಂತ್ರ (disinterested) ಅಭಿಪ್ರಾಯ. ಗಣೇಶ್ ಅಭಿಮಾನಿಯ ದೃಷ್ಟಿಕೋನದಿಂದ ಅಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

8ನೇ ವಾಕ್ಯವನ್ನು " ಆದ್ರೆ ನೀವು 'ಗಾಳಿಪಟ'ದ genre ಗಮನಿಸಿ." ಎಂದು ತಿದ್ದಿಕೊಂಡು ಓದಿ.
ತಪ್ಪಿಗೆ ಮನ್ನಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಾಳಿಪಟ ಸಿನೆಮಾ ತು೦ಬಾ ಚೆನ್ನಾಗಿದೆ. ಸಿನೆಮಾ ಹುಚ್ಚು ಇರುವವರಿಗೆ, ಹೊಸ ಗಾಳಿ ಕುಡಿಯಬೇಕೆ೦ದು ಬಯಸುವವರಿಗೆ, ಮತ್ತು ನಕ್ಕು ,ಅದೂ ಹೊಟ್ಟೆ ನೋವು ಆಗುವಷ್ಟು ನಕ್ಕು, ತಮ್ಮ ಟೆನ್-ಶನ್ ಮರೆತು ಒ೦ದಿಷ್ಟು ಹೊತ್ತಾದರೂ ಹಾಯಾಗಿ ಪ್ರಪ೦ಚ ಮರೆತಿರಬೇಕೆನ್ನುವವರು, ಪ್ಲೀಸ್ ಹೋಗಿ ಗಾಳಿಪಟ ನೋಡಿ, ಭಟ್ಟರ ಹಿ೦ದಿನ ಚಿತ್ರ "ಮು೦ಗಾರು ಮಳೆಯ" ಪ್ರಿಜಡೀಸ್ ಇಲ್ಲದೆ. ಮು೦ಗಾರು ಮಳೆ ಚಿತ್ರವು, ಬೇರೆಯೇ ತರಹದ ಕಮರ್ಷಿಯಲ್ ಚಿತ್ರವಾಗಿದ್ದು, ಅದನ್ನು " ಗಾಳಿಪಟ" ದ ಜೊತೆ ತುಲನೆ ಮಾಡುವುದು ತಪ್ಪು. ಗಾಳಿಪಟವೂ ಕಮರ್ಷಿಯಲ್ ಚಿತ್ರವೇ, ಹಾಗೆ೦ದ ಮಾತ್ರಕ್ಕೆ, ಅದನ್ನು, ಅದೇ ತರಹದ ಕಾಮಿಡಿ ಚಿತ್ರದೊ೦ದಿಗೆ, ತುಲನೆ ಮಾಡುವುದು ಸರಿ. ಒಬ್ಬ ನಿರ್ದೇಶಕನ ಹೊಸಕಥೆ ಮೆಚ್ಚಿ ಎಲ್ಲಿಯ ತನಕ ಒಬ್ಬ ನಿರ್ಮಾಪಕ ಮತ್ತು ಪ್ರೇಕ್ಷಕವರ್ಗ, ನಿರ್ದೇಶಕನನ್ನು ಪ್ರೋತ್ಸಾಹಿಸುತ್ತದೆಯೋ ಅಲ್ಲಿಯ ತನಕ , ಬೇರೆ ಒಳ್ಳೆಯ ಕಥೆಗಳು ಬರಲು ಅವಕಾಶವಿರುತ್ತದೆ, ಇಲ್ಲವಾದರೆ, ಸೃಜನಶೀಲತೆ, ಸತ್ತು ಹೋಗುತ್ತದೆ. ಯಾವಾಗಲೂ ನಾವೆಲ್ಲ ಒಳ್ಳೆಯದಕ್ಕೆ ಪ್ರೋತ್ಸಾಹಿಸೋಣ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ ಶಿವುರವರೇ, "ಒ೦ದು ಉಚಿತ ಸಲಹೆ". ದಯವಿಟ್ಟು ತಾವು, ಬರೆದ ಬಾಗ್ಲ್ ನಲ್ಲಿರುವ " ಕನ್ನಡ ಕಾಗುಣಿತ ಮತ್ತು ಆ೦ಗ್ಲ ಭಾಷೆಯ ತಪ್ಪುಗಳನ್ನು " ಪರಿಶೀಲಿಸಿದ ನ೦ತರ ಅದನ್ನು ಕಳುಹಿಸಿ. ಇಲ್ಲವಾದರೆ, ಬೇರೆಯವರ ಬಗ್ಗೆ, ಬರೆಯುವ ನೀವೇ ಆಭಾಸಕ್ಕೆ ಒಳಗಾಗುತ್ತೀರ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಿವು ರವರೆ, ನೀವು ಯೋಗರಾಜರಲ್ಲಿ ಪುಟ್ಟಣ್ಣ, ಶಂಕರ್ ನಾಗ್ ರನ್ನು ಹುಡುಕುತ್ತೀನಿ ಎಂದಿರಿ. ಆದರೆ ೩ ದಶಕದಿಂದೀಚೆಗೆ ಪ್ರೇಕ್ಷಕರ ಅಭಿರುಚಿ ಬದಲಾಗಿರುವುದನ್ನೂ ನೀವು ಗಮನಿಸಿದ್ದೀರಲ್ಲವೇ? ೩ ದಶಕದ ಹಿಂದೆ ಕೊಟ್ಟ ಫಾರ್ಮುಲಾದ ಚಿತ್ರಗಳನ್ನು ಅದೇ ಪುಟ್ಟಣ್ಣ ಇಂದು ಕೊಟ್ಟಿದ್ದಿದ್ದರೆ ಇಂದು ಅವೂ ಗೆಲ್ಲುಲ್ಲುತ್ತಿದ್ದವೋ ಇಲ್ಲವೋ ಹೇಳಲಾರೆ. ಯೋಗರಾಜರೇ ಬಹಳಕಡೆ ಹೇಳಿಕೊಂಡಂತೆ ಯಾವ ನಿರ್ದೇಶಕನೂ ಪ್ರೇಕ್ಷಕನ ನಾಡಿಮಿಡಿತ ಕಂಡು ಹಿಡಿಯುವ ಫಾರ್ಮುಲಾವನ್ನು ಕಂಡು ಕೊಂಡಿಲ್ಲ. ಉತ್ತಮ ಚಿತ್ರಗಳೇ ಕೆಲವೊಮ್ಮೆ ಫ್ಲಾಪ್ ಆಗಿರುತ್ತವೆ. ಬಹಳ ತೆಳು ಕಥಾ ಹಂದರವಿರುವ ಚಿತ್ರಗಳು ಗೆದ್ದಿರುತ್ತವೆ. ಹಾಗಾಗಿ ಉತ್ತಮ ಕಥಾವಸ್ತು, ಕಾಮೆಡಿ ಅಥವಾ ಯಾವುದೇ ಒಂದು ಫಾರ್ಮುಲಾಕ್ಕೆ ಜೋತು ಬೀಳದೆ ಹೊಸತನ್ನು ಕೊಡುವುದೇ ಇಂದು ನಿರ್ಧೇಶಕ ಮಾಡಬಹುದಾದ ಉತ್ತಮ ಕೆಲಸ. ಈ ರೀತಿ ಮಾಡಿ ಗೆದ್ದ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಉದಾ: ಓಂ, ನಾಗ ಮಂಡಲ, ಮುಂಗಾರು ಮಳೆ, ಆ ದಿನಗಳು, ಅಮೃತ ಧಾರೆ, ದುನಿಯಾ ಇತ್ಯಾದಿ.

ಸುಮಾರು ೨ ವರ್ಷಗಳಹಿಂದೆ ಜಗ್ಗೇಶ್ ರ ’ಕಾಮೆಡಿ ಎಕ್ಸ್ಪ್ ಪ್ರೆಸ್’ ಚಿತ್ರ ಬಂದಿತ್ತು. ಅಂತಹಾ ಕಥೆಯನ್ನೇನೂ ಅದು ಹೊಂದಿರಲಿಲ್ಲ. ನನಗೆ ಅದು ಬೇಕೂ ಆಗಿರಲಿಲ್ಲ. ಆದರೆ ೨.೩೦ ಘಂಟೆ ಮನಸಾರೆ ನಕ್ಕು ನಾವು ಸಿನಿಮಾ ಮಂದಿರಕ್ಕೆ ಬಂದ ಶ್ರಮ ಸಾರ್ಥಕವೆನಿಸಿತು. ಆ ಚಿತ್ರ ಶತದಿನೋತ್ಸವವನ್ನೂ ಕಂಡಿತು.

ನಮಗೆ ಬೇಕಾಗಿರುವುದು ಮನರಂಜನೆಯಷ್ಟೇ. ಅದಕ್ಕೇ ಅಲ್ಲವೇ ಅರ್ದ ದಿನ ಮೀಸಲಿಟ್ಟು ಚಿತ್ರಮಂದಿರಕ್ಕೆ ಹೋಗಿ ನೋಡಿ ಬರುವುದು.

ಕಥೆ, ಕಣ್ಣೀರು ಬೇಕೆಂದರೆ ಇದ್ದೇ ಇವೆಯಲ್ಲ ಕರುಳು, ತಂಗಿ ಸೀರೀಸ್ ಚಿತ್ರಗಳು, ಧಾರಾಕಾರ ಅಳಿಸುವ ಧಾರಾವಾಹಿಗಳು !!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.