ಹೀಗೊಂದು ದೆವ್ವದ ಕಥೆ - ಹೆದರಬೇಡಿ

4

ನಮ್ಮದು ವಟಾರದ ಮನೆ. ಅಕ್ಕಪಕ್ಕದಲ್ಲಿ ಇರುವವರೆಲ್ಲಾ ಚಿಕ್ಕಪ್ಪ ದೊಡ್ಡಪ್ಪಂದಿರು. ಎಲ್ಲರೂ ಓಡಾಡುವುದಕ್ಕೆ ಓಣಿ ಇದೆ. ಇಲ್ಲಿ ದೊಡ್ಡಪ್ಪ ಕಟ್ಟಿಗೆ ಹಾಕಿದ್ದಾರೆ. ನಾವೊಂದಿಷ್ಟು ಗಿಡಗಳನ್ನು ಹಾಕಿದ್ದೇವೆ. ಮುಂದೆ ದೊಡ್ಡ ಬಾವಿ ಇದೆ. ಹತ್ತಾರು ವರ್ಷಗಳ ಹಿಂದೆ ಇದರಲ್ಲಿ ಕೆಲವರು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮ್ಮ ಬದುಕಿದ್ದಾಗ, ನಮ್ಮಲ್ಲಿ ಚಂಡಿ ಸಾಕಿದೀವಿ. ಅದು ಬೀಳೆ ಸೀರೇ ಉಡ್ಕೊಂಡು ರಾತ್ರಿಯೆಲ್ಲಾ ಓಡಾಡುತ್ತೆ. ಹಾಗೇ ನಿಮ್ಮ ದೊಡ್ಡಪ್ಪ ಸಾಯುವಾಗ ಅವರ ಇನ್ನೂ ಆಸೆ ತೀರಲಿಲ್ಲ. ಅವರೂ ಓಡಾಡುವ ಸಾಧ್ಯತೆ ಇದೆ. ಬಾವಿಯಲ್ಲಿ ಬಿದ್ದಿರೋರು ದೆವ್ವಾ ಆಗಿರೋ ಅವಕಾಶಗಳು ಹೆಚ್ಚು. ಹಂಗೆಲ್ಲಾ ರಾತ್ರಿ ಹೊತ್ತು ಹೊರ ಹೋಗಬೇಡ ಅನ್ನುತ್ತಿದ್ದಳು.

ಇವನೆಲ್ಲಿ ಎದ್ದು ಹೋಗ್ತಾನೆ ಅಂತಾನೋ, ಅಥವಾ ಏನಾದರೂ ಹೆದರು ಬಿಟ್ಟರೆ ಅನ್ನುವುದಕ್ಕೆ ಅಮ್ಮ ನುಡಿದಿರಬೇಕು.  ರಾತ್ರಿ ಸಮಯ ಯಾವುದಾದರೂ ಪತ್ರಿಕೆ,ಪುಸ್ತಕ, ಬೇಜಾರು ಆಯ್ತೆಂದರೆ ಸಣ್ಣ ಧ್ವನಿಯಲ್ಲಿ ಸುಮಾರು ರಾತ್ರಿ 2ರವರೆಗೆ ಟಿವಿ ನೋಡೋ ಹವ್ಯಾಸವಾಗಿ ಬಿಟ್ಟಿದೆ. ಏನೂ ಇಲ್ಲಾ ಅಂದ್ರೆ ಯಾವುದಾದರೂ ವಿಷಯದ ಮೇಲೆ ರಾತ್ರಿಯಲ್ಲಿ ಬರೆಯುವುವ ಹವ್ಯಾಸ. ಈ ಸಮಯದಲ್ಲಿ ಮನೆಯೆಲ್ಲಾ ನಿಶ್ಯಬ್ದವಾಗಿರುತ್ತದೆ. ಇದ್ದಕ್ಕಿದ್ದಂತೆ ಓಣಿಯಲ್ಲಿ ಧಡಾ,ಧಡಾ ಅಂತಾ ಓಡಾಡುವ ಶಬ್ದ. ಆ ನಂತರ ಆ ಕಡೆಯಿಂದ ಈ ಕಡೆಗೆ ಓಡಿ ಹೋದಂತಾಗುವುದು. ಸ್ವಲ್ಪ ಹೊತ್ತು ಮತ್ತೆ ನಿಶ್ಯಬ್ದವಾದ ಮೇಲೆ. ಗಲ್,ಗಲ್ ಆಗ್ತಾ ಇತ್ತು. ಇತ್ತೀಚೆಗೆ ನನ್ನ ಹೆಂಡ್ತಿಗೆ ಹೇಳಿದೆ. ಏನು ಇದು ಅಂತಾ. ಹಂಗೆಲ್ಲಾ ಬಾಗಿಲು ತೆಗೆದು ಹೋಗಬೇಡ್ರಿ. ಯಾಕ್ ಬೇಕು ರಿಸ್ಕ್ ಅಂತಾ.

ಆದ್ರೆ ಕುತೂಹಲ ಅನ್ನುವುದು ಯಾರ ಅಪ್ಪನ ಮನೆಯದು.ಇದು ಏನೂಂತ ನೋಡಲೇಬೇಕು. ಕೆಲ ದಿನಗಳ ಹಿಂದೆ ಮತ್ತೆ ಇದೇ ಅನುಭವವಾಯ್ತು. ತಕ್ಷಣ ಹೊರಗಡೆ ದೀಪಹಾಕಿ ಬಾಗಿಲು ತೆಗದ್ರೆ ಯಾರೂ ಇಲ್ಲ. ಬಂದು ಒಳಕೂತೆ ಮತ್ತೆ ನಿಶ್ಯಬ್ದ. ಗಲ್,ಗಲ್ ಸೌಂಡ್. ಸ್ವಲ್ಪ ಮನಸಿಗೆ ಕಸಿವಿಯಾಯಿತು. ಇದು ಏನು ಅಂತಾ ನೋಡ್ಲೇ ಬೇಕಾಲ್ಲಾ ಅಂತಾ. ಮೊನ್ನೆ ರಾತ್ರಿ 12 ಆಗ್ತಿದ್ದಂಗೆ. ಬಾಗಿಲಿಗೆ ಚಿಲಕ ಹಾಕದೆ ಕಾಯ್ತಾ ಇದ್ದೆ. ಓಡಾಡುವ ಶಬ್ದ ಬಂತು. ಬಾಗಿಲು ತಕ್ಷಣ ತೆಗದರೆ, ಬಡ್ಡೀ ಮಗಂದು ಪಕ್ಕದ ಮನೆ ಹಸು ಗಿಡ, ಎಸೆದಿರೋ ತರಕಾರಿ ಸಿಪ್ಪೆ ತಿನ್ನೋಕೆ ಬಂದಿತ್ತು. ಸಮ್ನೆ ಒಳ ಬಂದೆ. ಮತ್ತೆ ಧಡಾ, ಧಡಾ ಅಂತಾ ಶಬ್ದ, ಬಾಗಿಲು ತೆಗೆದರೆ ಹೆಗ್ಗಣ ಧಿಡೀರ್ ಅಂತಾ ಬಂದರೆ ಹಸು ಓಡಿ ಹೋಗ್ತಾ ಇತ್ತು. ಹೊರಗಡೆ ಕತ್ತಲು ಇದ್ದುದರಿಂದ ಅದು ಕಟ್ಟಿಗೆ ಹಿಂದೆ ನಿಂತರೆ ಕಾಣ್ತಾನೇ ಇರ್ಲಿಲ್ಲ. ಓಹ್ ಅಂತು ಸಂಶೋಧನೆ ಮಾಡ್ದೆ ಅಂತಾ ಖುಷಿಯಾಗಿ ಒಳ ಬಂದು ಇದನ್ನು ಬೆಳಗ್ಗೆ ನನ್ನ ಹೆಂಡ್ತಿಗೆ ಹೇಳಬೇಕು ಅಂತಾ ಪುಸ್ತಕ ಓದುತ್ತಾ ಕೂತೆ.

ಆದರೆ ಗಲ್,ಗಲ್ ಶಬ್ದ ಮಾತ್ರ ಬರ್ತಾನೆ ಇತ್ತು. ಹೊರಗೆ ಹೋಗಿ ಎಲ್ಲಾ ನೋಡಿದ್ರೂ ಏನೂ ಇಲ್ಲ. ಕೊನೆಗೆ ಒಳ ಹೋಗಿ ನೋಡಿದ್ರೆ.  ನೀರಿನ ಫಿಲ್ಟರ್ ನ್ನ ಸ್ಟೂಲ್ ಮೇಲೆ ಇದೆ. ಅದರಿಂದ ಬೀಳೋ ಒಂದಂದು ಹನಿ ಮನೆಯೆಲ್ಲಾ ನೀರಾಗುತ್ತೆ ಅಂತಾ ಕಳಗೆ ಒಂದು ಖಾಲಿ ಪಾತ್ರೆ ಇಡುವುದು ಅಭ್ಯಾಸ. ನೀರು ಮೇಲಿಂದ ಪಾತ್ರೆಯೊಳಗೆ ಬಿದ್ದಾಗಲೆಲ್ಲಾ ಈ ರೀತಿ ಶಬ್ದ ಕೇಳಿಸ್ತಾ ಇತ್ತು. ಅಂತೂ ಒಂದು ಹಲವು ದಿನಗಳ ಭಯ ಮತ್ತು ಕುತೂಹಲಕ್ಕೆ ಅಂತ್ಯ ಸಿಕ್ಕಿತಲ್ಲಾ ಅಂತಾ ಖುಷಿಯಾದೆ. ಅವಳಿಗೂ ಹೇಳಿದೆ. ಹೌದಾ. ನಾನೂ ಹಂಗೇ ಅನ್ಕಂಡಿದ್ದೆ ಅಂದ್ಲು. 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (15 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನನಗೂ ಹೆದರಿಕೆ ಆಯ್ತಾದರೂ ನಿಮ್ಮ ಮಾತಿನಂತೆ ಹೆದರಲಿಲ್ಲ...! :) ನಿಮ್ಮ ಜಲ ಶೋಧಕದ ದುರಸ್ತಿ ಆಗಿದೆಯೇ ಇಲ್ಲವೇ? ಕಾಲಕ್ರಮೇಣ ನೀರ ಹನಿಗಳು ಇನ್ನೂ ಜೋರಾಗಿ ಬೀಳತೊಡಗಿದರೆ, ನಿಮ್ಮ ನೆರೆಮನೆಯವರೂ ಅರಿಯದೇ ದೆವ್ವ ಭೀತಿಗೆ ಪರಿಹಾರವಾಗಿ ಶಾಂತಿಮಾಡಿಸಲು ಮುಂದಾಗಬಹುದು! :) - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ್ಹ ಹ್ಹ ಹ್ಹ ಸುರೇಶ್, ಹೊಸಾ ನಲ್ಲಿ ಹಾಕಿಸಿದ್ದೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>> ಹೌದಾ. ನಾನೂ ಹಂಗೇ ಅನ್ಕಂಡಿದ್ದೆ ಅಂದ್ಲು. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಗಿದೆ...ಇದೇ ಥರಾ ಒಂದು ಲೇಖನ ಓ ಮನಸೇ ಪಾಕ್ಶಿಕದಲ್ಲಿ ಓದಿದ್ದೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕಥೆ ಓದಿ ನಾನೇನು ಹೆದರಲಿಲ್ಲ suresh nadig ಸರ್ ಆದರೂ ತುಂಬಾ ಚೆನ್ನಾಗಿದೆ. ಉತ್ತಮವಾಗಿದೆ ಕೂಡ ಧನ್ಯವಾದಗಳು. ವಸಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್ ರೀ ವಸಂತ್ ನೀವು... ಸಕ್ಕತ್ ಧೈರ್ಯ ನಿಮ್ಗೆ.... :) ಕೆಲವುಸಲ ಜೀರುಂಡೆ ಶಬ್ದ ಕೂಡ ನಿಶ್ಯಬ್ದ ಇರೋ ಸಮಯದಲ್ಲಿ ಗೆಜ್ಜೆ ಶಬ್ದದ ತರ ಕೇಳಿ ಹೆದರಿಸುತ್ತದೆ... ಒಂದ್ಸಾರಿ, ಇದನ್ನ ಕೇಳಿ, ಹೆದರಿಕೊಂಡು ನನ್ಗೂ ಹೆದರಿಸಿದ್ದರು ನಮ್ಮನೆ ಪಕ್ಕದ್ಮನೆಯವರು... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಸು೦ದರವಾದ ಕಥೆ ಮೋಹಿನಿ ಕಾಟ ಏನಾದ್ರೂ ಇದ್ಯೇನೋ ಅ೦ದ್ಕೊ೦ಡೆ. ನಮ್ಮನೆ ಹತ್ರ ಅ೦ದ್ರೆ ಹಳ್ಳೀಲಿ , ಒ೦ದು ಬಗೆಯ ಕೀಟ ಥೇಟ್ ಗೆಜ್ಜೆ ಥರಾನೇ ಶಬ್ದ ಮಾಡುತ್ತೆ ಮೊದ ಮೊದಲು ಅದನ್ನ ನೋಡಿ ಹೆದ್ರುಕೊ೦ಡಿದ್ದೆ / ಇನ್ನೊ೦ದು ವಿಚಿತ್ರ ಘಟನೆ ಕೇಳಿ ನಮ್ಮ ಮನೆಯ ಪಾಯಿಖಾನೆ ರಿಪೇರಿಯಾಗ್ತಾ ಇತ್ತು. ಒ೦ದೆರಡು ತಿ೦ಗಳು ಬಯಲಿಗೆ ಹೋಗಬೇಕಾದ ಸ೦ದರ್ಭ ಬೆಳ್ಳ೦ಬೆಳಗ್ಗೆ ಮನೆ ಬಿಡ್ತಾ ಇದ್ದೆ. ಸುಮಾರು ಐದು ಐದೂವರೆ ಅಷ್ಟೊತ್ತಿಗೆ ನನ್ನ ಕಲಶಯಾತ್ರೆ ಆರ೦ಭ. ಕೆರೆ ಕಟ್ಟೆಯ ಕೆಳಭಾಗ ’ಒಡ್ಡು’ ಅ೦ತಾರಲ್ಲ ಅಲ್ಲಿ ಒ೦ದಷ್ಟು ಬ೦ಡೆ ಕಲ್ಲುಗಳು ಗಿಡ ಗ೦ಟೆಗಳು ಇದಾವೆ, ಅಲ್ಲಿ ಕೆಲಸ ಆರ೦ಭಿಸ್ತಾ ಇದ್ದೆ ತಲೆ ಎತ್ತಿ ನೋಡಿದರೆ ಕೆರೆ ಕಟ್ಟೆ ಕಾಣುತ್ತೆ ಕಟ್ಟೆಯಾಚೆ ಇನ್ನೊ೦ದು ಊರಿದೆ. ಅಲ್ಲಿನ ಜನರು ನಮ್ಮೂರನ ಕಟ್ಟೆ ಮೇಲೇನೇ ಬರ್ಬೇಕು ಒ೦ದು ಉದ್ದನೆಯ ಆಕ್ರುತಿ ಕಟ್ಟೆಮೇಲೆ ಬರ್ತ ಇತ್ತು. ಮಸುಕು ಮಸುಕಾದ ಬೆಳಕು, ಸ್ವಲ್ಪ ಪರಿಚಿತ ಅಕೃತಿ ಅನ್ನಿಸ್ತಿತ್ತು ಆ ಕತ್ತಲಿನಲ್ಲಿಯೇ ಆಕೃತಿ ನನ್ನ ಕಡೆ ಮುಖ ಮಾಡಿತು ಮತ್ತು ಕೆರೆಯೊಳಗೆ ಜಿಗಿದುಬಿಡ್ತು ನಾನು ’ಓ ಬೆಳಗ್ಗೆ ಬೆಳಗ್ಗೆ ಸ್ನಾನಕ್ಕೆ ಬರೋರು’ ಅ೦ದುಕೊ೦ಡೆ ನನ್ನ ಕೆಲಸ ಮುಗಿಸಿಕೊ೦ಡು ಎದ್ದೆ. ಅವಾಗ ಹೊಳೆಯಿತ ಕೆರೆಯ್ಲ ನೀರಿಲ್ಲ ಅ೦ತ. ಆಮೇಲೆ ಆ ಪರಿಚಿತ ಆಕ್ರುತಿ ಸತ್ತು ನಾಕು ತಿ೦ಗಳಾಗಿತ್ತು ಅ೦ತ. ಮನೆ ಕಡೆ ಅದು ಹೇಗೆ ಹೆಜ್ಜೆ ಇಟ್ಟೆನೋ ಗೊತಿಲ್ಲ ಎರಡು ದಿನ ಪೂರ್ತ ಜ್ವರ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಯಭೀತ ಮನಸ್ಸು ದೆವ್ವಗಳನ್ನು ಕುರಿತು ಹೆದರುವುದು ಅಸಹಜವಲ್ಲ. ಕುತೂಹಲ ಮೂಡಿಸಿದ ಬರಹ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಮಾರು 6 ವರ್ಷದ ಹಿಂದೆ ನನಗೂ ಇದೇ ರೀತಿ ಅನುಭವ ಆಗಿತ್ತು. ಮಧ್ಯರಾತ್ರಿಯ ವೇಳೆ ರಾತ್ರಿ ಮಲಗಿದ್ದಾಗ ಕಿಟಕಿಯ ಪಕ್ಕದಲ್ಲಿ ಗೆಜ್ಜೆಯ ಶಬ್ಧವಾಗುತ್ತಿತ್ತು. ನಾನು ಹೆದರಿಕೆಯಿಂದ, ಅಯ್ಯೋ... ಮೋಹಿನಿ ಬಂದಿದೆ ಅಂತ ಕೂಗಿಕೊಂಡಿದ್ದೆ. ಅಪ್ಪ ಅಮ್ಮ ಏನೆಂದು ವಿಚಾರಿಸಿ ಹೊರಗೆ ಹೋಗಿ ನೋಡಿದರು. ಆದರೆ ಅಲ್ಲಿ ಏನೂ ಇರಲಿಲ್ಲ. ನಿನಗೆ ಯಾವ್ದೋ ಕನಸು ಬಿದ್ದಿರ್ಬೇಕು ಅಂತ ಹೇಳಿ ಹೋದರು. ಮಾರನೇ ದಿನವೂ ಅದೇ ರೀತಿ ಸದ್ದು ಕೇಳಿ ಬಂದಾಗ ಧೈರ್ಯ ಮಾಡಿ ಟಾರ್ಚ್ ಹಿಡಿದು ಹೊರಗೆ ಹೋದೆ. ಅಲ್ಲಿ ನೋಡಿದರೆ ಯಾರೋ ಸಾಕುನಾಯಿಯ ಕುತ್ತಿಗೆಗೆ ಗೆಜ್ಜೆ ಕಟ್ಟಿದ್ದಿರು. ಅದು ಊರೂರು ತಿರುಗುತ್ತ ನಮ್ಮ ಮನೆ ಹತ್ರನೂ ಬರ್ತಿತ್ತು. ಹಿಂದಿನ ದಿನ ನಾನು ಅದರ ಗೆಜ್ಜೆ ಶಬ್ಧಕ್ಕೆ ಕಿರುಚಿಕೊಂಡಾಗ ಓಡಿ ಹೋಗಿತ್ತು. ಅದಕ್ಕೇ ಅಪ್ಪ ಅಮ್ಮಂಗೆ ಕಂಡಿರಲಿಲ್ಲ. ಮಾರನೆಯ ದಿನ ಅವರಿಗೆ ನನ್ನ ಮೋಹಿನಿ ಶೋಧವನ್ನು ತಿಳಿಸಿದೆ. ಎಲ್ರೂ ನನ್ನ ಧೈರ್ಯವನ್ನು ಮೆಚ್ಚಿದ್ದೇ ಮೆಚ್ಚಿದ್ದು! ಕೊನೆಗೆ ಆ ನಾಯಿ ಯಾರ ಮನೇದು ಅಂತನೂ ಶೋಧ ಮಾಡಿದೆ. :-) -ಪ್ರಸನ್ನ.ಎಸ್.ಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.