ಸಮಯ ಅನ್ನುವ ಬಕರಾ...

5
 ತಪ್ಪು ಮಾಡೋನು ನಾನೇ ಗೆಲುವನರಸೋನು ನಾನೇ
ಕಡೆಗೆ ಸೋಲುವವನು ನಾನೇ ಅದಕೆ ಕಾರಣ ಮಾತ್ರ ಸಮಯ
ಅದಕೆ ನಾನನ್ನುವೆನು ಟೈಮ್ ಸರಿಯಿಲ್ಲ ಮಾರಾಯ
ಸೋತಿದಕ್ಕೊಬ್ಬನ ಮೇಲೆ ಗೂಬೆ ಕೂರಿಸಬೇಕು
ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

ಜನ ಬದಲಾಗುವುದು ಮನ ಬದಲಾಗುವುದು
ಯೋಚನೆ ಬದಲಾಗುವುದು ಚಿಂತನೆ ಬದಲಾಗುವುದು
ದೊಡ್ದವರೆನ್ನುತ್ತಾರೆ ಕಾಲ ಬದಲಾಯಿತು ಮಾರಾಯ
ಸಮಯ ತಮ್ಮ ಪಾಡಿಗೆ ತಾನು ಮುನ್ನಡೆಯುತ್ತದೆ
ತಮ್ಮಲ್ಲಿನ ಕುಸಿತಕೆ ಗೂಬೆ ಕೂರಿಸಲು
ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

ನಿನ್ನದೇ ಮಕ್ಕಳಿಗೆ ನೀ ಹೇಳಿ ಕೊಡಲಿಲ್ಲ ನೀ ಕಲಿಸಿ ಕೊಡಲಿಲ್ಲ
ದಾರಿ ತಪ್ಪಿಸಿದವ ನೀನು ವಿಷವ ಬಿತ್ತಿದವ ನೀನು
ನಿನ್ನ ಮಕ್ಕಳ ನೋಡಿ ನೀನಂತೀಯ ಕಾಲ ಕೆಟ್ಟು ಹೋಯಿತು ಮಾರಾಯ
ಕೆಡೋಕೆ ಅದೇನು ನೀನು ಹುಳಿ ಹಿಂಡಿದ ಹಾಲೇ ಅಥವಾ ನಿನ್ನ ತಲೆಯೇ ?
ತಾನೇ ಕೆಡಿಸಿದ ಜನ ಮಾನಸಕೆ ಗೂಬೆ ಕೂರಿಸಲು ಬೇಕೊಬ್ಬ ಬಕರಾ 
ಅದೋ ಸಿಕ್ಕಿತಲ್ಲ ಸಮಯ ಅನ್ನೋ ಬಕರಾ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಭಯ೦ಕರ ಮಾರಾಯ್ರೇ... ಎಷ್ಟು ನಿಜವಲ್ಲವೇ ಸಮಯ ಅನ್ನೋದು ಬಕರಾ! ಎನ್ನುವುದು!! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರ್ಷ, ಒಳ್ಳೆಯ ಚಿಂತನೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್.. ತುಂಬಾ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಮಯ ನಿರ್ದೋಷಿಯೆಂದು ಸಾಬೀತು ಪಡಿಸಿಬಿಟ್ಟರಿ.... ಸ್ಪೃಹಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತನ್ನಷ್ಟಕ್ಕೆ ತಾನೇ ಯಾವ ಏಳು ಬಿಳು ನೋಡದೆ ಯಾವ ವಶೀಲಿ ಇಲ್ಲದೆ ನಡೆಯುವದೊಂದೇ ಅದಕ್ಕೇ ಸಮಯಕ್ಕೆ ತೆಕ್ಕೆ ಬೀಳುವುದು ಚೆಂದದ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಲಿಮಠರೆ, ನೂರಕ್ಕೆ ನೂರು ಸತ್ಯವಾದ ಸಾಲುಗಳು!