ನಾವು ಬಹಳ ಉದಾರಿಗಳು

4

ನಮ್ಮ ಜನ, ಕನ್ನಡಿಗರು, ಬಹಳ ಉದಾರಿಗಳು - ಸೊಕ್ಕಿದವರಿಗೆ ಸೊಲ್ಲಾಪುರ ಕೊಟ್ಟೆವು, ಅರಿವಿಲ್ಲದೋರಿಗೆ ಆದೋನಿ ಕೊಟ್ಟೆವು,  ಹೊಲಸುಮಾಡುವವರಿಗೆ ಹೊಸೂರು ಕೊಟ್ಟೆವು, ಕಾಡುವವರಿಗೆ ಕಾಸರಗೋಡು ಕೊಟ್ಟೆವು ... ಮನೆಗೆ ಬಂದವರಿಗೆ ಮನೆ ಬಿಟ್ಟುಕೊಟ್ಟು, ನಾವು ಬೀದಿಯಲ್ಲಿ ನಿಂತರು, ನಾವಷ್ಟೇ ನಿಲ್ಲದೇ ನಮ್ಮನ್ನು ನಂಬಿದವರನ್ನೂ ಬೀದಿಯಲ್ಲಿ ನಿಲ್ಲಿಸಿದೆವು ... :(
ನಾವು ಬಹಳ ಉದಾರಿಗಳು - ಮನೆ ಮುಂದೆ ಬಂದು ನಿಂತವರನ್ನು ಒಳಗೆ ಕರೆದು, ನಾವು ಹೊರಗೆ ಉಳಿಯುವೆವು.  ಮೈ ಮೇಲಿನ ಬಟ್ಟೆ ಅವರಿಗೆ ಕೊಟ್ಟು ಬೆತ್ತಲೆ ನಿಲ್ಲುವವರು

ನಮ್ಮ ಜನ, ಕನ್ನಡಿಗರು, ಬಹಳ ಉದಾರಿಗಳು - ಸೊಕ್ಕಿದವರಿಗೆ ಸೊಲ್ಲಾಪುರ ಕೊಟ್ಟೆವು, ಅರಿವಿಲ್ಲದೋರಿಗೆ ಆದೋನಿ ಕೊಟ್ಟೆವು,  ಹೊಲಸುಮಾಡುವವರಿಗೆ ಹೊಸೂರು ಕೊಟ್ಟೆವು, ಕಾಡುವವರಿಗೆ ಕಾಸರಗೋಡು ಕೊಟ್ಟೆವು ... ಮನೆಗೆ ಬಂದವರಿಗೆ ಮನೆ ಬಿಟ್ಟುಕೊಟ್ಟು, ನಾವು ಬೀದಿಯಲ್ಲಿ ನಿಂತೆವು, ನಾವಷ್ಟೇ ನಿಲ್ಲದೇ ನಮ್ಮನ್ನು ನಂಬಿದವರನ್ನೂ ಬೀದಿಯಲ್ಲಿ ನಿಲ್ಲಿಸಿದೆವು ... :(

ನಾವು ಬಹಳ ಉದಾರಿಗಳು - ಮನೆ ಮುಂದೆ ಬಂದು ನಿಂತವರನ್ನು ಒಳಗೆ ಕರೆದು, ನಾವು ಹೊರಗೆ ಉಳಿಯುವೆವು.  ಮೈ ಮೇಲಿನ ಬಟ್ಟೆ ಅವರಿಗೆ ಕೊಟ್ಟು ಬೆತ್ತಲೆ ನಿಲ್ಲುವವರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮ್ಮ ಹೇಡಿತನಕ್ಕೆ ನಾವಿಟ್ಟುಕೊಂಡ ಸುಂದರವಾದ ಹೆಸರು "ಉದಾರವಾದಿತನ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ದಿನಗಳ ನಂತರ ಸಂಪದದಲ್ಲಿ ಕಾಣಿಸಿದ್ದೀರ ಸರ್ , ಮರುಸ್ವಾಗತ , ಹೇಗಿದ್ದಿರಾ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ತೆ ಮಿಶ್ರಿಕೋಟಿಯವರೇ. ಈಗೊಂದು ಎರಡು ವರ್ಷಗಳಿಂದ ಬರಹ ಪುಸ್ತಕದ ಮುಖ ನೋಡೋಕ್ಕೇ ಆಗಿಲ್ಲ - ವಿಪರೀತ ಕೆಲಸ - ಏನೇನೋ ತೊಂದರೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರ್ವಾಗಿಲ್ಲ ಕಣ್ರೀ ಶ್ರೀನಿವಾಸ್, ಕನ್ನಡಿಗರನ್ನು ಚೆನ್ನಾಗಿ ಅರ್ಥ ಮಾಡ್ಕೊಂಡಿದ್ದೀರಿ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೆಟ್ಟಮೇಲೆ ಬುದ್ದಿ ಬಂತು ಅಂತ ನಮ್ಮನ್ನ ನೋಡಿ ಮಾಡಿದ್ದಾರಾ...? ಅಥವಾ ಇನ್ನೂ ಬಂದಿಲ್ದೇ, ಹೋಪ್ಲೆಸ್ ಗಳಿಗೆ ಹೊಗೆನಕಲ್ ಬಿಟ್ಟುಕೊಡ್ತಿವಾ ನೋಡ್ಬೇಕು... :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಂಡಿತಾ.. ಸಂಶಯವೆ ಬೇಡ... ಆದರೆ ಹೋಪ್‍ಲೆಸ್ ಯಾರು ? ಅವರಾ ನಾವಾ ಎಂಬುದೇ ಸಂಶಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ತಾವಿಶ್ರೀ. ಹೇಗಿದ್ದೀರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಹೌದು ನಾವು ಉದಾರಿಗಳು ನಿಮ್ಮನ್ನು ಪ್ರಗತಿಪಥದತ್ತ ಕೊಂಡೊಯ್ಯುತ್ತಿರುವುದು ನಾವು ನಿಮಗೆ ಬಿಟ್ಟುಕೊಟ್ಟ ದಾರಿಗಳು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಈ ’ಉದಾರೀತನ’ದಿ೦ದಲೇ ಇವತ್ತು ಕರ್ನಾಟಕ ಹರಿದು ಹ೦ಚಿ ಹೋಗಿದೆ ಮು೦ದೆ ಕೆಜಿಫ್, ಬೆಳಗಾವಿ, ಮುಳಬಾಗಿಲು, ಗಡಿ ಪ್ರದೇಶದಲ್ಲಿರೋ ಸಣ್ಣ ಸಣ್ಣ ಊರುಗಳು , ಜಿಲ್ಲೆಗಳು ಎಲ್ಲವೂ ಹ೦ಚಿ ಹೋಗ್ತಾವೆ. ಫಲವತ್ತಾದ ಭೂಮಿ ಇದೆ ಅ೦ತ ಗೊತ್ತಾದ್ರೆ ಸಾಕು ನೆರೆ ರಾಜ್ಯದ ಕಣ್ಣು ಅದರ ಮೇಲಿರುತ್ತೆ. ಹೇಡಿತನವೋ. ನಿರ್ಲಕ್ಷ್ಯವೋ ಬೇಜವಾಬ್ದಾರಿಯೋ ಗೊತ್ತಿಲ್ಲ ಅ೦ತು ನಮ್ಮನ್ನು ನ೦ಬಿದವರನ್ನು ಬೀದಿಗೆ ನಿಲ್ಲಿಸಿದ್ದೀವಿ ಅನ್ನೋ ಮಾತ೦ತೂ ನಿಜ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಉದಾರೀತನದ ಶುರುವಾತ್ ಬೆಂಗಳೂರಿನಿಂದಲೇ ಆಗಿದೆಯೇನೋ ಅನ್ನಿಸುತ್ತಿದೆ.ಹೌದಂತೀರೋ ಇಲ್ವೋ......? ನಮ್ಮ ತಾಳ್ಮೆಯನ್ನೇ ಬೇರೆಯವರು ದೌರ್ಬಲ್ಯವೆಂದುಕೊಂಡಿದ್ದಾರೋ ಹೇಗೆ.....?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉದಾರಿತನ ನಮ್ಮ ಹಳ್ಲಿಗಳಿಂದ ಪ್ರಾರಂಭವಾಗಿ, ಬೆಂಗಳೂರಿಗೆ ಬರುವ ಹೊತ್ತಿಗೆ ಇದು ಉದಾರಿತನವಲ್ಲ ಪೆದ್ದುತನವೆಂದು ತಿಳಿದು, ಇಲ್ಲಿ ಕೊನೆಗೊಳ್ಲುವ ಸಾಧ್ಯತೆ ಕಾಣ್ತಾಇದೆ... ಇದು ನನ್ನ ವಯಕ್ತಿಕ ಅನಿಸಿಕೆ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಗಡಿ ಭಾಗದಲ್ಲಿರುವ ಅನೇಕ ಜನ ಕನ್ನಡಿಗರು, ಗಡಿಯಾಚೆಗಿನ ಭಾಷೆಯನ್ನು ಕಲಿತು ಕನ್ನಡವನ್ನೇ ಮರೆತುಬಿಡುತ್ತಿದ್ದಾರೆ.ಅವರಿಗೆ ಕನ್ನಡದ ಬಗ್ಗೆ ಕರ್ನಾಟಕದ ಬಗ್ಗೆ ತಿಳಿ ಹೇಳುವುದು ಹೇಗೆ.ಇದರಿ೦ದ ನೆರೆ ರಾಜ್ಯದವರಿಗೆ ತಮ್ಮ ಭಾಶ್ಃಕರು ಹೆಚ್ಚಾಗಿರುವ೦ತೆ ಕಾಣುತ್ತಾರೆ ಮತ್ತು ನಿಜವೂ ಹೌದು.ಮುಳಬಾಗಿಲು ಕೆಜಿಫ್,ಚಳ್ಳಕೆರೆ,ಬೆಳಗಾವಿ ಕಡೆಯಲ್ಲಿ ತೆಲುಗು ತಮಿಳು ಮರಾಠಿಯದ್ದೇ ಪ್ರಾಬಲ್ಯ.ಗಡಿಯಾಚೆಗಿನ ಜನ ತಮ್ಮ ಅ೦ಗಡಿ ಮು೦ಗಟ್ಟುಗಳನ್ನು ನಮ್ಮ ರಾಜ್ಯದಲ್ಲಿ ತೆರೆಯುತ್ತಾರೆ ಅವರೊಡನೆ ಸ೦ಭಾಷಿಸಲು ನಮ್ಮವರು ಅವರ ಭಾಷೆಯನ್ನೇ ಕಲಿಯುತ್ತಾರೆ ಮು೦ದೆ ಅದೇ ಮನೆಯ ಭಾಷೆಯಾಗುತ್ತಿರುವುದು ಶೋಚನೀಯ. ಗಡಿ ಭಾಗದ ಹಳ್ಳಿಗಳಲ್ಲಿ ಕನ್ನಡವು ಇಲ್ಲವೇ ಇಲ್ಲ.ಹೀಗಾಗಿ ನೆರೆ ರಾಜ್ಯದವರು ನಮ್ಮ ಮೇಲೆ ಸವಾರಿ ಮಾಡುತ್ತಿದ್ದರೆ ಮು೦ದೊ೦ದು ದಿನ ಭಾಷೆಯ ಆಧಾರದ ಮೇಲೆ ಗಡಿ ಜಿಲ್ಲೆಗಳನ್ನು ಕಬಳಿಸುವುದು ಸತ್ಯ ಕೊನೆಗೆ ಉಳಿಯುವುದು ಚಿತ್ರಾನ್ನವಾದ ಬೆ೦ಗಳೂರು,ಮೈಸೂರು,ಹಾಸನ ಮಧ್ಯ ಕರ್ನಾಟಕ ಜಿಲ್ಲೆಗಳು ಮಾತ್ರ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.