tvsrinivas41 ರವರ ಬ್ಲಾಗ್

೧೯ ಆಗಸ್ಟ್ ೨೦೦೫

ನಿನ್ನೆಯ ದಿನ ವರಮಹಾಲಕ್ಷಿ ವ್ರತ, ರಕ್ಷಾ ಬಂಧನ ಮತ್ತು ಯಜುರುಪಾಕರ್ಮ. ಮುಂಬೈನಲ್ಲಿ ರಕ್ಷಾ ಬಂಧನಕ್ಕಾಗಿ ಇಂದು ಶನಿವಾರ ರಜೆ ಘೋಷಿಸಿದ್ದಾರೆ. ಆದರೇ ರಜೆ ಇರಲಿ ಇಲ್ಲದಿರಲಿ ಮುಂಬೈವಾಸಿಗಳು ಹಬ್ಬವನ್ನಂತೂ ಆಚರಿಸಿಯೇ ಆಚರಿಸುತ್ತಾರೆ. ಶುಕ್ರವಾರ ರಕ್ಷಾಬಂಧನವಾದ್ದರಿಂದ ಅಂದು ರಜೆ ಇಲ್ಲದಿದ್ದರೂ ಹೆಚ್ಚಿನ ಜನರು ಕಛೇರಿ ಕಾರ್ಯಾಲಯಗಳಿಗೆ ರಜೆ ಹಾಕಿದ್ದರು. ಬೆಳಗ್ಗೆ ಕೆಲಸಕ್ಕೆಂದು ಹೊರಟಾಗ ಲೋಕಲ್ ಟ್ರಿನ್ ನಲ್ಲಿ ಸಾಮಾನ್ಯದ ಜನಜಂಗುಳಿ ಇರಲೇ ಇಲ್ಲ. ಎಲ್ಲೆಲ್ಲೂ ಸ್ಮಶಾನದ ವಾತಾವರಣ. ಇದೇನಪ್ಪ ನಾನು ಗೊತ್ತಿಲ್ಲದೇ ರಜೆಯ ದಿನ ಬ್ಯಾಂಕಿಗೆ ಹೋಗುತ್ತಿದ್ದೇನಾ ಅಂತ ಸ್ವಲ್ಪ ಯೋಚಿಸುವಂತಾಯ್ತು. ಸ್ನೇಹಿತರುಗಳನ್ನು ಕಂಡ ಮೇಲೆ ಆ ಸಂಶಯ ನಿವಾರಣೆ ಆಯ್ತು. ಗಂಡಸರು ತಮ್ಮ ತಮ್ಮ ಅಕ್ಕ ತಂಗಿಯರ ಮನೆಗೆ ರಾಖಿಯನ್ನು ಕಟ್ಟಿಸಿಕೊಳ್ಳಲು ಹೋಗುವರು. ಹೋಗುವಾಗ ತಮ್ಮ ಸಂಸಾರ ಸಮೇತರಾಗಿ ಹೋಗುವರು. ಆದ್ದರಿಂದ ಬೆಳಗ್ಗೆ ಅಷ್ಟು ಬೇಗ ಜನಜಂಗುಳಿ ಇರಲಿಲ್ಲ. ಈ ವಿಷಯ ನನಗೆ ಸಂಜೆ ಮನೆಗೆ ಮರುಳುವ ಸಮಯದಲ್ಲಿ ಅರಿವಾಯಿತು. ಸಂಜೆ ಬರುವಾಗ ಎಲ್ಲೆಲ್ಲಿ ನೋಡಿದರೂ ಮಕ್ಕಳ ಅರಚಾಟ ಕಿರುಚಾಟ. ಪುಟ್ಟ ಪುಟ್ಟ ಮಕ್ಕಳ ದಂಡೇ ಎಲ್ಲೆಲ್ಲಿಯೂ ಕಾಣುತ್ತಿತ್ತು. ಲೋಕಲ್ ಒಳಗೆ ಮಕ್ಕಳೊಡನೆ ತಂದೆ ತಾಯಿಗಳು ಬಂದರೆ ಇದ್ದ ಪ್ರಯಾಣಿಕರೆಲ್ಲಾ ಎದ್ದು ನಿಲ್ಲಬೇಕಾಯ್ತು. ಪಾಪ ಮಕ್ಕಳನ್ನು ಎತ್ತಿಕೊಂಡ ತಾಯಿಯನ್ನು ನಿಲ್ಲಲು ಬಿಡುವುದೇ - ಕೂತುಕೊಳ್ಳಲು ಜಾಗ ಕೊಡಬೇಕು. ಲೋಕಲ್ ಚರ್ಚ್ ಗೇಟ್ ನಿಂದ ದಾದರಿಗೆ ಬರುವುದರೊಳಗೆ ಮುಂದೆ ಬರುವ ಮಗು ತಾಯಂದಿರುಗಳಿಗೆ ಕೂತುಕೊಳ್ಳಲಲ್ಲ, ನಿಲ್ಲಲೇ ಸ್ಥಳವಿಲ್ಲ. ಆದರೂ ಇಲ್ಲಿಯ ಜನರು ಸ್ವಲ್ಪ ಬೇಜಾರಿಲ್ಲದೇ, ಇರುಸು ಮುರುಸುಗಳಿಲ್ಲದೇ ಅವರುಗಳಿಗೆ ಹೇಗೋ ಜಾಗ ಮಾಡಿಕೊಡುವರು. ಅವರುಗಳೂ ಅಷ್ಟೇ, ಹೆಂಗಸರ ಕಂಪಾರ್ಟ್ ಮೆಂಟ್ ಬಿಟ್ಟು ಗಂಡಸರ ಕಂಪಾರ್ಟ್ ಮೆಂಟಿಗೇ ಬರುವರು. ಇದಕ್ಕೆ ಕಾರಣವೇನೆಂದರೆ, ಮೊದಲನೆಯದಾಗಿ, ಗಂಡಸರು ತಮ್ಮೊಂದಿಗಿರುವುದು, ಎರಡನೆಯದಾಗಿ, ಇದು ಸುರಕ್ಷಿತ ಸ್ಥಳ. (ಹೆಂಗಸರ ಡಬ್ಬಿಯಲ್ಲೇ ಕಳ್ಳತನಗಳು ಜಾಸ್ತಿ ಆಗುವುದು). ಮತ್ತು ಮೂರನೆಯದಾಗಿ ಹೆಚ್ಚಿನದಾಗಿ ಮಾನವಂತಿಕೆ ತೋರುವುದು ಇಲ್ಲಿಯೇ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬರಹ ಕ್ರಾಂತಿ!

ನಾನು ಕೆಲಸ ಮಾಡುವ ನನ್ನ ಬ್ಯಾಂಕಿನ ವಿಭಾಗದಲ್ಲಿ ಸಿಸ್ಟಂ ಅಡ್ಮಿನಿಸ್ಟ್ರೇಟರ್ ತುಂಬಾ ಶಿಸ್ತಿನ ಮನುಷ್ಯ. ನಮ್ಮಲ್ಲಿರುವುದು ಲ್ಯಾನ್ ಸಿಸ್ಟಂ. ಸುಮಾರು ೬೫ ಪಿಸಿ ಗಳಿದ್ದು ಎಲ್ಲವೂ ಸ್ತ್ಯಾಂಡ್ ಅಲೋನ್ ಮತ್ತು ನೋಡ್ ಗಳಾಗಿಯೂ ಕೆಲಸ ಮಾಡುವವು. ನಮ್ಮ ಮೇಲಧಿಕಾರಿಗಳು ಅವನಿಗೆ ತಿಳಿಸಿದಂತೆ ಯಾವ ಪಿಸಿ ಗಳಲ್ಲೂ ಆಟಗಳಿರುವಂತಿಲ್ಲ. ಕೆಲಸದ ವಿಷಯ ಬಿಟ್ಟು ಬೇರೆ ಏನನ್ನೂ ಮಾಡದಂತೆ ಮಾಡಿಹರು. ಇಂಗ್ಲೀಷ್ ಮತ್ತು ಹಿಂದಿಯ ತಂತ್ರಾಂಶಗಳನ್ನು ಮಾತ್ರವೇ ಏರಿಸಿರುವುದು. ನಾನು ಬಹಳ ದಿನಗಳಿಂದ ಬರಹ ವನ್ನು ಏರಿಸಲು ಕೇಳಿಕೊಳ್ಳುತ್ತಿದ್ದೆ. ಆದರೇಕೋ ಅವರುಗಳು ನನ್ನ ಕರೆಗೆ ಮಾನ್ಯತೆಯನ್ನೇ ಕೊಟ್ಟಿರಲಿಲ್ಲ. ನಮ್ಮಲ್ಲಿರುವ ಸರ್ವರ್ ನಲ್ಲಿನ ಓಎಸ್ ಲಿನಕ್ಸ್ ಮತ್ತು ಪಿಸಿ ಗಳಲ್ಲಿ ವಿಂಡೋಸ್ ಎಕ್ಸ್ ಪಿ. ಸರ್ವರ್ ನಲ್ಲಿ ಹಿಂದಿಗಾಗಿ ಆಕೃತಿ ಎಂಬ ತಂತ್ರಾಂಶವನ್ನು ಏರಿಸಿದ್ದಾರೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕಳಚಿ ಕೊಂಡಿದ್ದ ಕೊಂಡಿ

ಕಾಲವು ಬದಲಾಗುತ್ತಿರುತ್ತಿದ್ದಂತೆ ನಾವು ಹೊಸ ಹೊಸ ಜನಗಳ ಪರಿಚಯ ಮಾಡಿಕೊಳ್ಳುತ್ತಿರುತ್ತೇವೆ ಹಾಗೆ ಹೊಸ ಸಂಬಂಧಗಳನ್ನೂ ಜೋಡಿಸಿಕೊಳ್ಳುತ್ತಿರುತ್ತೇವೆ. ಕೇವಲ ಹತ್ತಿರದ ಸಂಬಂಧಿಗಳ ಸಂಬಂಧಗಳು ಮಾತ್ರ ಚಿರಂತನವಾಗಿ ನಮ್ಮೊಡನೆ ಇರುತ್ತದೆ. ಮೊದಲ ಸಲ ಶಾಲೆಗೆ ಹೋದಾಗ ಸ್ನೇಹಿತರಾದವರು ನಮ್ಮ ಸಂಬಂಧಿಗಳಂತೆಯೇ ಅಂದುಕೊಳ್ಳುತ್ತೇವೆ. ನಮ್ಮ ಮನೆಯಲ್ಲಿ ನಡೆಯುವುದನ್ನೆಲ್ಲಾ ಹಂಚಿಕೊಳ್ಳುತ್ತೇವೆ. ಯಾವುದನ್ನೂ ಮುಚ್ಚಟೆ ಮಾಡುವುದಿಲ್ಲ. ಅದೇ ಸ್ವಲ್ಪ ವರುಷಗಳ ತರುವಾಯ ಶಾಲೆ ಬದಲಾಗುವ ಸಾಧ್ಯತೆ ಇರುವಂತೆ ಸ್ನೇಹಿತರುಗಳು ಬದಲಾಗುತ್ತಾರೆ. ಸ್ವಲ್ಪ ಸ್ವಲ್ಪವಾಗಿ ನಾವು ಮನೆಯ ವಿಷಯಗಳನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಮುಂದೆ ಕಾಲೇಜುಗಳಲ್ಲಿ ಬರುವ ಸ್ನೇಹಿತರುಗಳೊಂದಿಗೆ ಚಿಕ್ಕ ವಯಸ್ಸಿನಲ್ಲಿ ಮನೆಯ ವಿಷಯಗಳನ್ನು ಹಂಚಿಕೊಂಡಷ್ಟು, ಎಲ್ಲ ವಿಷಯಗಳನ್ನೂ ಅಷ್ಟಾಗಿ ಹಂಚಿಕೊಳ್ಳುವುದಿಲ್ಲ. ಹೀಗೆ ಕಾಲಕ್ರಮೇಣ ನಮ್ಮ ಬಾಳಿನಲ್ಲಿ ಎಷ್ಟೋ ಸ್ನೇಹಿತರು ಬರುವರು ಹೋಗುವರು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬೀದಿ ಬದಿಯಲ್ಲಿರುವವರು

ಊರು ಅಂದ ಮೇಲೆ ಹೊಲಗೇರಿ ಇರಲೇಬೇಕು ಅನ್ನುವುದು ನಾಣ್ನುಡಿ (ನಾಡು ನುಡಿ). ಆದರೆ ಈಗ ಎಲ್ಲೆಲ್ಲಿಯೂ ಬೀದಿ ಬದಿಯಲ್ಲಿ ವಾಸ ಮಾಡುವವರು ಜಾಸ್ತಿ ಆಗ್ತಿದ್ದಾರೆ. ಎಷ್ಟೇ ಕ್ಷಾಮ, ಪ್ರಳಯ ಮತ್ತಿತರೇ ನೈಸರ್ಗಿಕ ಪ್ರಕೋಪಗಳು ಆಗುತ್ತಿದ್ದರೂ ಇವರುಗಳ ಸಾವು ಜಾಸ್ತಿ ಆಗುತ್ತಿದ್ದರೂ ಮತ್ತೆ ಮತ್ತೆ ಇವರ ಸಂಖ್ಯೆ ಹೆಚ್ಚಾಗುತ್ತಿದೆ. ಇವರು ಜೀವನಕ್ಕೆ ಎಷ್ಟೇ ಕಷ್ಟಪಟ್ಟರೂ ಜೀವನ ನಡೆಸುವುದು ದುಸ್ತರವಾಗುತ್ತಿದೆ. ಹಾಗೇ ಆಚೀಚೆಯ ಆಕರ್ಷಣೆಯೂ ಇವರುಗಳನ್ನು ಸೆಳೆಯುತ್ತಿದೆ. ಇದರಿಂದಾಗಿ ಕಳ್ಳತನಗಳು, ದರೋಡೆಗಳು, ಕೊಲೆ ಸುಲಿಗೆಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಕಾರಣವೇನಿರಬಹುದು? ಇವರ ಸಂಖ್ಯೆಯ ಹೆಚ್ಚಳ ತಡೆಯಲಾಗದೇ? ಹಾಗಿದ್ದರೆ ಏನು ಉಪಾಯ ಮಾಡಬೇಕು?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬೃಂದಾವನ ಅಂದರೆ ಏನು?

ನ್ನ ಬ್ಲಾಗ್ ನಲ್ಲಿ ಇಂದು ಏನು ಬರೆಯುವುದು ಎಂದು ಯೋಚಿಸುತ್ತಿದ್ದೆ. ಆಗ ನನ್ನ ಸ್ನೇಹಿತರೊಬ್ಬರು ಇಂದು ಬೃಂದಾವನಕ್ಕೆ (ಇದು ಇಲ್ಲಿಯ ಒಂದು ಹೊಟೆಲ್ ) ಹೋಗಿ ಬರುವ ಅಂದರು. ಆಗ ಯೋಚಿಸಿದೆ - ಈ ಬೃಂದಾವನ ಅಂದರೆ ಏನು? ಇದು ಕಾಬಾ, ದರ್ಗಾ, ಸಮಾಧಿ, ಗದ್ದುಗೆಗಳಂತೆಯೇ, ಅಲ್ಲವೇ. ಇದರ ಬಗ್ಗೆ ನನ್ನ ಅನಿಸಿಕೆ ಹೀಗಿದೆ. ನೋಡಿ, ಓದಿ, ತಪ್ಪುಗಳನ್ನು ತಿಳಿಸಿ, ನಾನೂ ತಿಳಿಯುವುದು ಬಹಳಷ್ಟಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - tvsrinivas41 ರವರ ಬ್ಲಾಗ್