tvsrinivas41 ರವರ ಬ್ಲಾಗ್

ಪತ್ರ ಬರೆಯುವ ಬಗೆ

ನನ್ನ ಸ್ನೇಹಿತರೊಬ್ಬರಿಗೆ ನಾನು ಇ-ಅಂಚೆ ಕಳುಹಿಸಿದ್ದೆ. ಅದರಲ್ಲಿ ಮಾಮೂಲಾಗಿ ಇಂತಿ ನಮಸ್ಕಾರಗಳು ಅಂತ ಕೊನೆಯಲ್ಲಿ ಬರೆದಿದ್ದೆ. ಅದಕ್ಕೆ ಅವರು ಇದೇನು ಹೀಗೆ ಬರೆದಿದ್ದೀರಿ. ಹೀಗೆ ಬರೆಯುವ ವಾಡಿಕೆ ಇದೆಯಾ ಅಂತ ಕೇಳಿದರು. ಆಗ ನನಗನ್ನಿಸಿದ್ದು, ಇ-ಮೈಲ್ ಉಪಯೋಗಿಸುವ ಮೂಲಕ ಮೊದಲಿನ ಹಾಗೆ ಪತ್ರ ಬರೆಯುವುದನ್ನು ಸಾರಾಸಗಟಾಗಿ ಈಗೀಗ ಮರೆಯುತ್ತಿದ್ದೇವೆ. ಅದರ ಬಗ್ಗೆ ಸ್ವಲ್ಪ ನೆನಪು ಮಾಡಿಕೊಳ್ಲೋಣ ಅಂದುಕೊಂಡೆ. ಹಾಗೇ ಇದನ್ನೇ ಇಂದಿನ ನನ್ನ ಡೈರಿಯಲ್ಲಿ ಬರೆಯೋಣ ಅಂತಲೂ ನಿರ್ಧರಿಸಿದೆ. ನೀವೂ ಒಮ್ಮೆ ನೋಡಿ. ನಾನು ಎಡವಿರುವ ಕಡೆ ತಿದ್ದಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.9 (17 votes)
To prevent automated spam submissions leave this field empty.

ಮುಂಬೈ ಕನ್ನಡಿಗನ ದಿನಚರಿ

ಕಳೆದ ಮಂಗಳವಾರ ಮತ್ತು ಭಾನುವಾರದ ಮಳೆಯ ಆರ್ಭಟದಿಂದ ತತ್ತರಿಸಿದ್ದ ಜನರ ದೈನಂದಿನ ಕೆಲಸ ಕಾರ್ಯಗಳು ಇಂದಿಗೆ ಸಾಮಾನ್ಯ ಸ್ಥಿತಿಗೆ ಬಂದಿತು. ಅದು ಹೇಗೆ ಇಂದೇ ಸಾಮಾನ್ಯ ಸ್ಥಿತಿಗೆ ಬಂದಿತು ಅಂತ ಹೇಳ್ತೀರಿ ಅಂತ ನೀವು ಕೇಳಬಹುದು. ಇಂದು ಲೋಕಲ್ ಟ್ರೈನಿನಲ್ಲಿ ತುಂಬಾ ಜನಸಂದಣಿ ಇತ್ತು. ಮತ್ತು ನನ್ನ ಸ್ನೇಹಿತನೊಬ್ಬನ ಜೇಬಿಗೆ ಕತ್ತರಿ ಬಿದ್ದಿತ್ತು. ಪ್ರತಿದಿನ ಟ್ರೈನ್ ಹತ್ತುವಾಗ, ಹತ್ತಿದ ಮೇಲೆ, ಇಳಿಯುವಾಗ ತುಂಬಾ ಕಷ್ಟ ಕೋಟಲೆಗಳನ್ನು ಅನುಭವಿಸುತ್ತೀವಿ. ನನಗೇನೋ ಅದು ಆಭ್ಯಾಸವಾಗಿ ಹೋಗಿದೆ. ಆದರೆ ಹೊಸಬರಿಗೆ ಇಲ್ಲಿಯವರೆವಿಗೆ ಇದ್ದ ಧೈರ್ಯವೆಲ್ಲಾ ಕಳೆದು ತಮ್ಮ ತಮ್ಮ ಊರುಗಳಿಗೆ ಮರಳೋಣ ಅಥವಾ ಕೆಲಸವೇ ಬಿಟ್ಟುಬಿಡೋಣ ಅಥವಾ ಆತ್ಮಹತ್ಯೆ (!) ಮಾಡಿಕೊಳ್ಳೋಣ ಎನ್ನುವಷ್ಟು ಬೇಸರವಾಗುತ್ತದೆ. ಅದೇ ಕೆಲವರಿಗೆ ಹಾಗೇನೂ ಅನ್ನಿಸುವುದಿಲ್ಲ. ಅವರು ವಿ.ಐ.ಪಿ. ಏನೋ ಅನ್ನುವಂತೆ ಅವರಿಗೆ ಕುಳಿತುಕೊಳ್ಳಲು ಸ್ಥಾನ ಸಿಕ್ಕುವುದು, ಒಳಗೆ ಹೋಗಲು ಅನುವಾಗುವುದು. ಅದು ಹೇಗೆ ಎನ್ನುವುದು ನನಗೆ ಚಿದಂಬರ ರಹಸ್ಯದಂತಾಗಿತ್ತು. ಇಂದು ಅದನ್ನು ಹತ್ತಿರದಿಂದ ಅನುಭವಿಸಿದೆ. ಅವರು ಅನುಸರಿಸುವ 3 ಅತ್ಯಂತ ಮುಖ್ಯ ಅಂಶವನ್ನು ಅನುಸರಿಸುವರು. ಒಂದು - ತಲೆಗೆ ಚೆನ್ನಾಗಿ ಎಣ್ಣೆ ಹಚ್ಚಿರುವರು. ಆದೂ ಜಿಗುಟು ಜಿಗುಟಾಗಿರುವ ಹರಳೆಣ್ಣೆ. ಅವರು ಹತ್ತಿರ ಬಂದರೇ ಎಲ್ಲರೂ ದೂರ ಸರಿಯುವರು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮುಂಬೈನ ಲೋಕಲ್ ಟ್ರೈನ್

ಮುಂಬಯಿನ ಲೋಕಲ್ ಟ್ರೈನ್ ಗಳಲ್ಲಿ ಪ್ರಯಾಣ ಮಾಡಿ ಪಡೆಯುವ ಅನುಭವ ಎಲ್ಲರೂ ಕಲಿಯಲೇಬೇಕಾದಂತಹ ಇನ್ನೊಂದು ಪಾಠವನ್ನು ಕಲಿಸುವಂತದ್ದು. ಇದರ ಅನುಭವ ಕವನ ರೂಪದಲ್ಲಿ ನನ್ನಿಂದ ನಿರೂಪಿಸಲ್ಪಟ್ಟಿತ್ತು. ಅದನ್ನು ಈ ಕೆಳಗೆ ಇರಿಸಿರುವೆ. ಇನ್ನೂ ಹೆಚ್ಚಿನ ಸ್ವಾರಸ್ಯಕರ ಮಾಹಿತಿಯನ್ನು ಕೆಳಗೆ ತಿಳಿಸಲು ಪ್ರಯತ್ನಿಸಿದ್ದೇನೆ. ಕವನವನ್ನೂ ಕೆಳಗೆ ಸೇರಿಸಿರುವೆ, ಓದಿ. ಈ ಹಿಂದೆಯೇ ಹೇಳಿರುವಂತೆ ಮುಂಬಯಿ ಒಂದು ದ್ವೀಪ. ಎಲ್ಲ ಕಡೆಯೂ ನೀರು ಸುತ್ತುವರಿದು ಭೂಮಿಯ ಭಾಗ ಬಹಳ ಕಡಿಮೆ. ಹಾಗಾಗಿ ವಸತಿಗಾಗಿ ಸಿಗುವ ಜಾಗ ಬಹಳ ಕಡಿಮೆ. ಅಲ್ಲದೇ ಇದು ದೇಶದ ವಾಣಿಜ್ಯ ರಾಜಧಾನಿಯಾಗಿ ಇಲ್ಲಿ ವ್ಯಾಪಾರ ಮತ್ತು ವ್ಯವಹಾರಕ್ಕಾಗಿ ಬರುವ ಜನರು ಬಹಳ. ದಿನಂಪ್ರತಿ ಒಂದು ಕೋಟಿಗೂ ಮಿಕ್ಕ ಜನರ ಸಂದಣಿ ಇದ್ದೇ ಇರುತ್ತದೆ. ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಿಬರಲು ಲೋಕಲ್ ಟ್ರೈನ್ ಗಳನ್ನೇ ನಂಬುವುದು ಬಹಳವಾಗಿ ಇದು ಬಹಳ ಅತ್ಯವಶ್ಯಕವಾದ ಸಾರಿಗೆಯಾಗಿದೆ. ಒಂದು ಸಾವಿರ ಜನರನ್ನು ಹೊತ್ತೊಯ್ಯಲು ಅವಕಾಶವಿರುವ ಒಂದು ಗಾಡಿಗೆ ೫೦೦೦ ದಿಂದ ೬೦೦೦ ಜನರವರೆಗೂ ಹೊತ್ತೊಯ್ಯಬೇಕಾಗುತ್ತದೆ. ಅದರಲ್ಲಿ ಅಷ್ಟು ಸಾಮರ್ಥ್ಯವಂತೂ ಇದ್ದಂತಿದೆ. ಅದೂ ಕೂಡ, ಬೆಳಗ್ಗೆ ೩.೪೫ ಕ್ಕೆ ಪ್ರಾರಂಭವಾಗುವ ಸೇವೆ, ರಾತ್ರಿ ೨ ಘಂಟೆಗಳವರೆಗೂ ನಿರಂತರ ಸಾಗುತ್ತಲೇ ಇರುವಂತದ್ದುು. ಜನದಟ್ಟಣೆಯ ಸಮಯವಾದ ಬೆಳಗ್ಗೆ ೬ರಿಂದ ರಾತ್ರಿ ೧೧ ರವರೆಗೆ ಮೂರು ನಿಮಿಷಗಳ ಅಂತರದಲ್ಲಿ ಒಂದೊಂದು ಗಾಡಿಗಳು ಒಂದರ ಹಿಂದೊಂದರಂತೆ ಬಿಡುವಿಲ್ಲದೇ ಅಡ್ಡಾಡುತ್ತಲೇ ಇರುತ್ತವೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಕರಾಳದಿನ

ಓದುಗರೇ, ನೋಡಿ ಒಂದು ಮಳೆ ಹೇಗೆ ಇಡೀ ನಗರವನ್ನು ಮತ್ತು ಅಲ್ಲಿರುವ ೧ ಕೋಟಿಗೂ ಮಿಕ್ಕ ಜನಗಳನ್ನು ನಿರ್ವಿಣ್ಣರನ್ನಾಗಿ ಮಾಡಿ ಹುಲುಮಾನವ ಎಂಬ ಮಾತನ್ನು ಹೇಗೆ ಸ್ಪಷ್ಟೀಕರಿಸಿತು ಅಂತ. ಒಂದೇ ಏಟಿಗೆ ನರಕದರ್ಶನ. ನಿಸರ್ಗ ತನ್ನ ವಿಶ್ವರೂಪವನ್ನು ತೋರಿಸಿದೆ. ನಾನು ನಿಮ್ಮ ಮುಂದೆ ಇಡುತ್ತಿರುವ ಸತ್ಯ - ನಾನು ಕಂಡದ್ದು, ಅನುಭವಿಸಿದ್ದು. ಈ ಸಮಯಕ್ಕೆ ತಕ್ಕನಾದ ಒಂದು ಹಿಂದಿ ಹಾಡು - ರೋಜ್ ಶಾಮ್ ಆತೀ ಥಿ ಮಗರ್ ಓ ವೈಸಾ ನ ಥಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ವೇದಾಂತ ಸಾರಗಳು

ಎನ್ ಬಾಲಸುಬ್ರಹ್ಮಣ್ಯ ಅವರು ಬರೆದಿರೋ 'ವೇದಾಂತ ಸಾರಗಳು' ಎನ್ನುವ ಪುಸ್ತಕದಿಂದ ಆಯ್ದ ಭಾಗಗಳನ್ನು ನಿಮ್ಮ ಮುಂದೆ ಇರಿಸುತ್ತಿದ್ದೇನೆ ೧೬ನೇ ಶತಮಾನದ ಸದಾನಂದರು ವೇದಂತದ ಸಾರಗಳ ಬಗ್ಗೆ ಬರೆಯುತ್ತಾ ಮಾನವನು ಮಾಡಬೇಕಾದ ಕರ್ಮಗಳ ಬಗ್ಗೆ ಹೀಗೆ ತಿಳಿಸಿದ್ದಾರೆ. ಮಾನವರು ಮಾಡಬೇಕಾದ ಕರ್ಮಗಳನ್ನು ವಿಹಿತ (ಮಾಡಬೇಕಾದದ್ದು) ಮತ್ತು ನಿಷಿದ್ಧ (ಮಾಡಬಾರದ್ದು) ಎಂದು ವಿಭಾಗಿಸಬಹುದು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

Pages

Subscribe to RSS - tvsrinivas41 ರವರ ಬ್ಲಾಗ್